ಜ್ಞಾನದೀಪಿಕೆಗಳು – 15 / 17-09-2021 / ಜ್ವಾಲಾಮಾಲನ್ಯೂಸ್ / 2021

ಈ ದಿನದ ಜ್ಞಾನದೀಪಿಕೆ ಕಾರ್ಯಕ್ರಮದಲ್ಲಿ ಪರಿಚಯಿಸುತ್ತಿರುವ ಪುಸ್ತಕ

  1. ಜೀವಂತರ ಚರಿತ್ರೆ
  2. ಡಾ|| ಡಿ. ವೀರೇಂದ್ರ ಹೆಗ್ಗಡೆಯವರು

ಮೊದಲನೆಯದಾಗಿ ಜೀವಂತರ ಕೃತಿ  ಬಹಳ ಮುಖ್ಯವಾಗಿ ಭಾಸ್ಕರ ಕವಿ ಬರೆದಂತಹ ಕೃತಿ. ಅವರ ಕಾಲದ ಬಗ್ಗೆ ಬಹಳಷ್ಟು ಗೊಂದಲಗಳಿವೆ. ಆದರೆ ಈ ಕೃತಿ ಬಹಳ ಅಮೂಲ್ಯವಾದ ಕೃತಿ ಕಾವ್ಯ ಧರ್ಮ ಮತ್ತು ಧರ್ಮ ಇವೆರಡರ ದೃಷ್ಟಿಯಿಂದಲೂ ಕೂಡ  ಇದು ವೈಶಿಷ್ಟ್ಯಪೂರ್ಣವಾದಂಡಹುದು.  ಮಹಾವೀರ ಸ್ವಾಮಿ ಈ ಕೃತಿಯ ಮುಖ್ಯ ಪಾತ್ರ. ಈ ಸ್ವಾಮಿಯ ಸನ್ನಿದಾನದಲ್ಲಿದ್ದ ಗೌತಮ ಗಣಧರರಿಂದ ಜೈನ ಧರ್ಮಕ್ಕೆ  ಜೀವಂತರ ಚರಿತ್ರೆ ಪ್ರಕಟ ಆಗುತ್ತದೆ.  ಕೇವಲ ಜೈನ ಮತದ ದೃಷ್ಠಿಯಿಂದ ಮಾತ್ರವಲ್ಲ ಕನ್ನಡ ಸಾಹಿತ್ಯದ ದೃಷ್ಠಿಯಿಂದಲೂ ಅದ್ಬುತವಾದಂತಹ ಕೃತಿ  ಅನೇಕ ಗುಣಗಳನ್ನು ಒಳಗೊಂಡಿರುವಂತಹ ಕೃತಿ ಮತ್ತು ತೀರ್ಥಂಕರರು ಚಕ್ರವರ್ತಿಗಳು ಇಂತಹ ಅನೇಕ ಕೃತಿಗಳನ್ನು ನಾವು ಕೇಳಿದ್ದೇವೆ. ಇಂತಹ ಕಥೆ ಜನಸಾಮಾನ್ಯರಲ್ಲಿ ಅತಿ ಮುಖ್ಯವಾದದ್ದು. ಈ ಕೃತಿಯನ್ನು ಭಾಮಿನಿ ಷಟ್ಪದಿಯಲ್ಲಿ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯನ್ನು ಬರೆದಂತಹವರು ನಮ್ಮ ಡಾ|| ಬಿ.ಎಸ್ ಕುಲಕರ್ಣಿಯವರು  ಧಾರವಾಡ ಯುನಿವರ್ಸಿಟಿಯಲ್ಲಿ ಇದ್ದಂತಹವರು. ಬಹಳ ಮುಖ್ಯವಾದಂತಹ ಲೇಖಕರುಗಳಲ್ಲಿ ಅವರೂ ಸಹ ಒಬ್ಬರು. ಇದನ್ನು ತಂದಿರುವಂತಹರು ಧಾರವಾಡ ವಿಶ್ವವಿದ್ಯಾನಿಲಯವು ಪ್ರಕಟಗೊಳಿಸಿ ಹಳೆ ಗನ್ನಡದ ಕಾವ್ಯಗಳನ್ನು ಪ್ರಕಟ ಮಾಡುವಂತಹ ಸಂದರ್ಭಗಳಲ್ಲಿ ಈ ಕೃತಿಯನ್ನು ಪ್ರಕಟ ಮಾಡಿದ್ದಾರೆ. ಇದಕ್ಕೆ ಪ್ರಧಾನ ಸಂಪಾದಕರು ಶ್ರೀ ಆರ್. ಸಿ ಹಿರೇಮಠ್ ರವರು . ಪ್ರಥಮ ಮುದ್ರಣಗೊಂಡಿದ್ದು 1970 ರಲ್ಲಿ ಮತ್ತು ಇದರ ಬೆಲೆ ಆಗಿನ ದಿನಗಳಲ್ಲಿ 7 ರೂ.ಗಳು ಇತ್ತು. ಈ ಕೃತಿಯನ್ನು ಭಾಸ್ಕರ ಕವಿಯವರು ಪೆನಗೊಂಡಯ್ಯ ಶಾಂತಿನಾಥ ಬಸದಿಯಲ್ಲಿ 1345 ರಲ್ಲಿ ಬರೆದಿರಬೇಕು ಎನ್ನುವ ಊಹೆಗಳಿವೆ.

      ಮತ್ತೆ ಮುಂದಿನಕೃತಿ ನಮಗೆಲ್ಲರಿಗೂ ಚಿರಪರಿಚಿತರಾದಂತಹ ಧರ್ಮಸ್ಥಳದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಎನ್ನುವಂತಹ ಕೃತಿ. ಧರ್ಮಸ್ಥಳ ನಮಗೆಲ್ಲರಿಗೂ ಗೊತ್ತಿದೆ ಜೈನ, ಶೈವ, ವೈಶ್ಣವ ಧರ್ಮಗಳ ಸಂಗಮ ಇಲ್ಲಿ ಕಾಲರಾಹು, ಕಾಳಕಾಯಿ ಕುಮಾರಸ್ವಾಮಿ ಎನ್ನುವಂತಹ ಧರ್ಮದೇವತೆಗಳನ್ನು ಮತ್ತೆ ಅಣ್ಣಪ್ಪಸ್ವಾಮಿಯವರು ಕ್ಷೇತ್ರಪಾಲಶೈವ ದೇವಾಲಯದಲ್ಲಿ ವೈಷ್ಣವ ಅರ್ಚಕರೂ ಜೈನ ಮತಾವಲಂಭಿಗಳು ಹೀಗೆ ಒಂದು ಸಾಮರಸ್ಯವನ್ನು ಸಾರುವ ಕ್ಷೇತ್ರ ಧರ್ಮಸ್ಥಳ ಎಂದರೆ ತಪ್ಪಾಗುವುದಿಲ್ಲ. ಧರ್ಮಸ್ಥಳದ ಆಡಳಿತದಲ್ಲಿ 21 ನೆಯವರು ಶ್ರೀ ವೀರೇಂದ್ರ ಹೆಗ್ಗಡೆಯವರು. ಇವರು ತಮ್ಮ 20ನೇ ವಯಸ್ಸಿಗೆ ಈ ಪದವಿಯನ್ನು ಪಡೆಯುವಂತಹ ಅನಿವಾರ್ಯತೆಯನ್ನು ಪಡೆಯಬೇಕಾದ ಸಂದರ್ಭ ಬಂದಾಗ ಅವರು ಬಹಳ ಚಿಕ್ಕವರಿದ್ದಾಗ ಅವರ ತಾಯಿ ಶ್ರೀಮತಿ ರತ್ನಮ್ಮ ಹೆಗ್ಗಡೆಯವರು ಅವರನ್ನು ಬಹಳಷ್ಟು ತಿದ್ದಿ ತೀಡಿ ಅವರ ನಡವಳಿಕೆ , ಮಾತುಗಳು ಮತ್ತು ಗುರುಹಿರಿಯರಿಗೆ ಕೊಡುವಂತಹ ಗೌರವವನ್ನು ಅವರು ತಿಳಿಸಿಕೊಟ್ಟರು ಎನ್ನುವಂತಹುದ್ದು. ಅಲ್ಲಿಂದ ಹೆಗ್ಗಡೆಯವರು ಇಲ್ಲಿಯವರೆಗೂ ಯಾವುದೇ ಚ್ಯುತಿಯಾಗದ  ರೀತಿಯಲ್ಲಿ ತಮ್ಮ ಕೆಲಸಗಳನ್ನು ರೂಢಿಸಿಕೊಂಡು ಬಂದಿದ್ದು ಈಗ ಅವರ ಪತ್ನಿಯಾದ ಶ್ರೀಮತಿ   ಹೇಮಾವತಿ ಹೆಗ್ಗಡೆಯವರು ಮತ್ತು ಅವರ ತಮ್ಮಂದಿರ ಸಹಕಾರದಿಂದ ಇಲ್ಲಿಯವರೆಗೂ ಅವರು ನಡೆದು ಹಾಗೂ ಬೆಳೆದು ಬಂದಿದ್ದಾರೆ. 

ಈ ಕೃತಿಯನ್ನು ಬರೆದ ಸಂಪತ್ ಕುಮಾರ್ ರವರು ಉಜಿರೆಯ ಕಾಲೇಜಿನಲ್ಲಿ ಕನ್ನಡದ ಅಧ್ಯಾಪಕರಾಗಿ ಕನ್ನಡಕ್ಕೆ ಸಂಬಂಧಪಟ್ಟ ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶೇಷ ಒಲವು  ತೋರುತ್ತಿದ್ದರು ಮತ್ತು ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕರಾಗಿ ವಿಮರ್ಶಕ ರಾಗಿ ಹಾಗೂ ಸಹ ಸಂಪಾದಕರಾಗಿ ಕೆಲಸ ಮಾಡಿರುವಂತಹುದು. ಇವರು ಧರ್ಮಸ್ಥಳದ  ಮಂಜುನಾಥೇಶ್ವರ ಕಾಲೇಜಿನಲ್ಲಿ ಕಳೆದ 21 ವರ್ಷಗಳಿಂದಲೂ  ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ

ಕೃತಿಯಲ್ಲಿ ಅವರು ಹೆಗ್ಗಡೆಯವರನ್ನು ಮತ್ತು ಅವರ ಕಾರ್ಯ ವೈಖರಿಯನ್ನು ಚಿತ್ರ ಪಟ ಗಳ ಮೂಲಕ ಹಾಗೂ  ಮಾಡುತ್ತಿರುವ ಸಮಾಜ ಮುಖಿ ಹಾಗೂ ಮಾನವ ಮುಖಿ ಕೆಲಸಗಳನ್ನು ಶ್ಲಾಘಿಸಿ ಬರೆದಿದ್ದಾರೆ. ಹೆಗ್ಗಡೆಯವರಿಂದ ನಡೆಯುತ್ತಿರುವ ಸಾಮೂಹಿಕ ಮದುವೆಗಳು, ವಿದ್ಯಾಭ್ಯಾಸ, ಹಣಕಾಸು, ಅನ್ನದಾಸೋಹ, ಜಾತ್ರಾ ಮಹೋತ್ಸವ , ಮಹಿಳೆಯರ ಪರ ಕೆಲಸಗಳು , ಹೀಗೆ ಹಲವಾರು ಕಾರ್ಯಗಳನ್ನು ಗುರುತಿಸಿ ಅದರ ಬಗ್ಗೆ ಕೂಲಂಕುಷವಾಗಿ ಬರೆದಿದ್ದಾರೆ.  ಆದ್ದರಿಂದ ಈ ಕೃತಿಯನ್ನು ಓದಿದರೆ ಅವರ ಕಾರ್ಯದ ಹಾದಿಯನ್ನು ನೋಡಿದರೆ ಮೈ ರೋಮಾಂಚನ ವಾಗುವುದರಲ್ಲಿ ತಪ್ಪೇನಿಲ್ಲ. ಮತ್ತೆ ಮುಂದಿನವಾರ ಭೇಟಿಯಾಗುತ್ತೇನೆ ನಮಸ್ಕಾರ.