ಭದ್ರಗಿರಿ / ಕ್ಷೇತ್ರ ಪರಿಚಯ- 21 / ಬಾಗಲಕೋಟೆ ಜಿಲ್ಲೆ. / jwalamalanews / 2021

ಅತ್ಯಂತ ಪ್ರಾಚೀನ ಕಾಲದಲ್ಲಿ ಜೈನ ಧರ್ಮದ ಸುವರ್ಣ ಯುಗದ ಸಂದರ್ಭದಲ್ಲಿ  ಅನೇಕ ಬಸದಿಗಳು ಗುಹೆಗಳು ವೈಭವದಿಂದ ಮೆರೆದ ಪುರಾತನ ಇತಿಹಾಸವನ್ನು ಹೊಂದಿದ ಒಂದು ಪುಣ್ಯಭೂಮಿ. ಈ ಭೂಮಿಯಲ್ಲಿ ಇಂದಿಗೂ ಆಚಾರ್ಯರುಗಳು, ಮಿನಿಗಳು ತಮ್ಮ ತಪಸ್ಸಿಗಾಗಿ ಉಪಯೋಗಿಸಿದ ಗುಫಾಗಳು ಈಗಲೂ ನೀವಿಲ್ಲಿ  ಕಾಣಬಹುದು ಇಲ್ಲಿನ ಸ್ಥಳೀಯ ಇತಿಹಾಸಕಾರರ ಪ್ರಕಾರ ಇಲ್ಲಿ ಭದ್ರಾಬಾಹು ಮುನಿಗಳು ದಕ್ಷಿಣ ವಿಹಾರದ ಸಂದರ್ಭದಲ್ಲಿ ಇಲ್ಲಿ ಕೂಡ ತಂಗಿ ಈ ಪ್ರಶಾಂತ ವಾತಾವರಣದಲ್ಲಿ ತಪಸ್ಸನ್ನು ಆಚರಿಸಿದರು ಎನ್ನಲಾಗುತ್ತದೆ.

ಅವರಷ್ಟೇ ಅಲ್ಲದೇ ಸಮುದ್ರ ಭದ್ರರು ಹಾಗೂ ಶಾಂತಿ ಸಾಗರು ಮುನಿ ಮಹಾರಾಜರು ಕೂಡ  ಇಲ್ಲಿ ತಪಸ್ಸನ್ನು ಆಚರಿಸಿದ್ದಾರೆ.  ನಂತರದ ದಿನಗಳಲ್ಲಿ ಆ ಒಂದು ವೈಭವವನ್ನು ಕಳೆದುಕೊಂಡು  ಒಂದು ಗುಡ್ಡ ಗಾಡು ಪ್ರದೇಶವಾಗುತ್ತದೆ.  ಆದರೆ ಮತ್ತೆ ಇಲ್ಲಿ  ಧರ್ಮ ಜಾಗೃತಿ ಬಸದಿಗಳು ಹಸಿರುವನಗಳು ಎಲ್ಲವೈ ತಲೆ ಎತ್ತುತ್ತದೆ. ಇದಕ್ಕೆ ಮುಖ್ಯ ಕಾರಣ ಕರ್ತರು  ಪರಮಪೂಜ್ಯ ಮುನಿಶ್ರೀ  108 ಕುಲರತ್ನ ಭೂಷಣ ಮುನಿಮಹಾರಾಜರು ಇವರು ಇಲ್ಲಿಗೆ ಚಾತುರ್ಮಾಸಕ್ಕೆ ಬಂದಾಗ ಇಲ್ಲಿ ಅವರಿಗೆ ಭೂಮಿಯಲ್ಲಿ ಸಿಕ್ಕ ಮೂರ್ತಿಗಳಿಗಾಗಿ ಹಾಗೂ ಅನೇಕ ನವ ಮೂರ್ತಿಗಳಿಗಾಗಿ  ಬಸದಿಗಳ ಪ್ರತಿಷ್ಠಾಪನೆಯನ್ನು ಸುತ್ತಲಿನ ಧರ್ಮಬಂಧುಗಳ ಸಹಾಯದಿಂದ ಮಾಡುತ್ತಾರೆ. ಸುಂದರ ಉದ್ಯಾನವನಗಳನ್ನು ಕೂಡ ಬೆಳೆಸುತ್ತಾರೆ. ಈ ಸ್ಥಳಕ್ಕೆ ಭದ್ರಗಿರಿಯೆಂದು ಹೆಸರು ಇಡುತ್ತಾರೆ. ಚಕ್ರವರ್ತಿ ಸೂಲಿಬೆಲೆಯವರು ಕೂಡ ತಮ್ಮ ಯುವ ಬ್ರಿಗೇಡ್ ಯುವಕರೊಂದಿಗೆ ಇಲ್ಲಿನ ಹಸಿರು ಪರಿಸರಕ್ಕಾಗಿ  ಶ್ರಮದಾನ ಮಾಡಿಹೋಗಿದ್ದಾರೆ. ಇದು ಬಾಗಲಕೋಟೆ ಜಿಲ್ಲೆಯ ಭದ್ರಗಿರಿ ಕೋಟೆಯ ಕಥೆ. ಈ ಕ್ಷೇತ್ರವನ್ನೊಮ್ಮೆ ನೋಡಿ.

ಬಸದಿಯ ಆವರಣದಲ್ಲಿ 24 ತೀರ್ಥಂಕರರ ಮಾನಸ್ಥಂಭವಿದೆ. ಭಗವಾನ್ ಶ್ರೀ ಆದಿನಾಥರ ಜಿನಮಂದಿರ ಶ್ರೀ ಪಾರ್ಶ್ವನಾಥ ಭಗವಂತರು ಮುನಿ ಸೂರತ ತೀರ್ಥಂಕರರು  ಇಲ್ಲಿ ಪ್ರತಿಷ್ಠಾಪಿತವಾಗಿದ್ದು ಉತ್ತರ ಭಾರತದ ಯಾತ್ರೆಯಲ್ಲಿ ಮುನಿವರ್ಯರಿಗೆ ದೊರೆತ ಮೂರ್ತಿಗಳೊಂದಿಗೆ ಕೂಡ ಇದರೊಂದಿಗೆ  ಪ್ರತಿಷ್ಠಾಪಿಸಲಾಗಿದೆ. ಮೊದಲ ತೀರ್ಥಂಕರರಾದ ವೃಷಭ ನಾಥರು ಹಾಗೂ ಕೊನೆಯ ತೀರ್ಥಂಕರರಾದ ಮಹಾವೀರ ಭಗವಂತರು ಸೇರಿ ಒಂದು ಬಿಂಬವನ್ನು ಇಲ್ಲಿ ಬೃಹದಾಕಾರವಾಗಿ  ನಿರ್ಮಿಸಲಾಗಿದೆ, ಇಲ್ಲಿ ಆಕರ್ಷನೀಯವಾದಂತಹ ಮತ್ತೊಂದು ಸ್ಥಳ ಜಲಮಂದಿರದ ರಮಣೀಯ ದೃಶ್ಯವನ್ನು ನೀವೀಗ ನೋಡುತ್ತಿದ್ದೀರಿ.