ಸೋಂದಾ ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಮಠ

ಸೋಂದಾ :- ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಮಠ,ಸೋಂದಾ ಇಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಉತ್ಸವದ ಆಚರಣೆ ಬಹಳ ವಿಷೇಶವಾಗಿ ಆಚರಿಸಲಾಗುತ್ತಿದೆ.ದಿನಾಂಕ : 08.10.2016 ರಂದು ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನೆ ಕೂಡಾ ಜರುಗಿತು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾದ ಶ್ರೀ ಸಂಜಯ ಪಾಟೀಲ, ಡಾ.ವಿರೂಪಾಕ್ಷ ಜಿ,ಹುಬ್ಬಳ್ಳಿ ಜೈನ ಸಮಾಜದ ಅಧ್ಯಕ್ಷರಾದ ಶ್ರೀ ಅಜಿತ ದಿನಕರ, ದಾವಣಗೆರೆ ಜೈನ ಸಮಾಜದ ಅಧ್ಯಕ್ಷರಾದ ಶ್ರೀ ಅಜಿತ ಬೇತೂರ, ಶ್ರೀ ಮಹಾವೀರ ಕುಂದೂರ,ಶ್ರೀ ಶ್ರೇಣಿಕರಾಜ ರಾಜಾಮನೆ, ಶ್ರೀ ಅಭಯಕುಮಾರ ಸೂಜಿ, ಸುನಿಲ್ ಕುಮಾರ್ ಡಿ. ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು.