ಜ್ಞಾನದೀಪಿಕೆಗಳು- 14 / 11-09-2021 / ಜ್ವಾಲಾಮಾಲನ್ಯೂಸ್ / 2021

ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಕಂಬದಹಳ್ಳಿ : ಒಂದು ಜೈನಕೇಂದ್ರ ಮತ್ತು ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ.

ಡಾ.ಪದ್ಮಿನಿ ನಾಗರಾಜು.

ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.

ಆತ್ಮಿಯರೇ ನಮಸ್ಕಾರ, ಜೈನ ಗ್ರಂಥಗಳನ್ನು ನಾವು ಈ ಸರಣಿ ಕಾರ್ಯಕ್ರಮದಲ್ಲಿ ಹೀಗಾಗಲೇ ಬಹಳ ದಿನಗಳಿಂದ ಪ್ರಸಾರ ಮಾಡುತ್ತಿದ್ದೇವೆ. ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಪ್ರಾರಂಭವಾಗಿರುವ  ಸರಣಿಕಾರ್ಯಕ್ರಮ ಜ್ಞಾನ ದೀಪಿಕೆಗಳು ಈ ಕಾರ್ಯಕ್ರಮದಲ್ಲಿ ತಮಗೆ ಮತ್ತೇರಡು ಕೃತಿಗಳನ್ನು ಪರಿಚಯ ಮಾಡತ್ತಿದ್ದೇನೆ.

ಈ ದಿನ ಪ್ರಾಚೀನ ಕೃತಿಯ ಬಗ್ಗೆ ಮಾತನಾಡುತ್ತಿರುವುದು ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ, ಈ ಕೃತಿ ಬಹಳಷ್ಟು ಜನ ಜೈನರ ಮನೆಯಲ್ಲಿ ಇರುವಂತಹ ಕೃತಿ. ಈ ಕೃತಿಯನ್ನು ಬರೆದಿರುವಂತವರು ಹೀರಲಾಲ್ ಚಂದ್ರ ಜೈನ್ ರವರು. ಅನೇಕ ಜನ ಸಂಶೋದನೆಗೆ ಈ ಗ್ರಂಥವನ್ನು ಬಳಸಿಕೊಂಡಿದ್ದಾರೆ, ಇದನ್ನು ಕನ್ನಡಕ್ಕೆ ತಂದಂತವರು ನಮ್ಮ ನಾಡಿನ ಪ್ರತಿಷ್ಠಿತ ವಿದ್ವಾಂಸರು ಮಿರ್ಜೆ ಅಣ್ಣರಾಯ್ ರವರು.

ಮತ್ತೊಂದು ಮಹತ್ವದ ಕೃತಿ ಕಂಬದಹಳ್ಳಿ : ಒಂದು ಜೈನಕೇಂದ್ರ, ಈ ಕೃತಿಯನ್ನು ನಾಡಿನ ಪ್ರತಿಷ್ಠಿತ ಶಾಸನ ಶಾಸ್ತ್ರಜ್ಞಾರಾದಂರಹ ಸೀತರಾಂ ಜಾಗಿರ್ದಾರ್ ಸರ್ ರವರು ಬರೆದಿರುವಂತಹ ಒಂದು ಕಿರು ಹೊತ್ತಿಗೆ.

ಮೊದಲಿಗೆ ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ ಎನ್ನುವಂತಹ ಈ ಕೃತಿಯನ್ನು ಗಮನಿಸಿದಾಗ ಮೂಲ ಲೇಖಕರಾದಂತವರು ಡಾ|| ಹೀರಲಾಲ್ ಜೈನ್ ರವರು ಇದರ ಬಗ್ಗೆ ಆನಾ ಉಪದ್ಯಾಯ್ ಅವರು ಮುನ್ನುಡಿ ಬರೆಯುತ್ತ ಒಂದು ಮಾತನ್ನು ಹೇಳುತ್ತಾರೆ,  ಭಾರತೀಯ ಸಂಸ್ಕೃತಿಗೆ ಧರ್ಮ ದರ್ಶನ ಸಾಹಿತ್ಯ ಮತ್ತು ಕಲೆ ಇವು ಪ್ರಮುಖ ಅಂಗಗಳಾಗಿವೆ, ಈ ಚರುತುರ್ಮುಖಗಳಲ್ಲಿಯೂ ನಮ್ಮ ಸಂಸ್ಕೃತಿಯಲ್ಲಿಯೂ ಅತ್ಯಂತ ಪ್ರಾಚೀನ ಕಾಲದಿಂದಲ್ಲೂ ವಿಕಾಸಗೊಳ್ಳುತ್ತ ಬಂದಿದೆ, ಪರಿಪೂರ್ಣತೆಯನ್ನ ಸಾಗಿದೆ ನಮ್ಮ ದೇಶ ವಿಸ್ತಾರವಾದುದು ಈ ಒಂದು ದರ್ಶನದಲ್ಲಿ ವೈವಿದ್ಯತೆ ಸಾಕಷ್ಟಿದೆ, ಇವೇಲ್ಲವುಗಳ ಸಮಗ್ರ ವಿಕಾಸ ಸರ್ವೋಧಯ ಭಾವ ಸಮನ್ವಯ ದೃಷ್ಟಿಗಳಿಂದ ಭಾರತೀಯ ಸಂಸ್ಕೃತಿ ರೂಪುಗೊಂಡಿದೆ. ಇಂತಹ ವಿಶಾಲವಾದ ಸಂಸ್ಕೃತಿಗೆ ಜೈನ ಧರ್ಮದ ಕೂಡುಗೆ ಏನ್ನು ಎನ್ನುವುದನ್ನು ಸೂಚನೆ ಕೊಡುವಂತಹದ್ದು ಈ ಕೃತಿ ಎನ್ನುವುದನ್ನು ಹೇಳುತ್ತಾರೆ.

ಡಾ|| ಹೀರಲಾಲ್ ಜೈನ್ ಅವರ ಪರಿಚಯ ಭಾರತೀಯ ವಿದ್ವಾಂಸರಿಗೆ ಇದೇ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಳಸ್ಪರ್ಶಿಯಾಗಿ ಅಭ್ಯಾಸ ಮಾಡಿ ಸಂಶೋದನೆ ಮಾಡಿರುವಂತವರು ಸಂಸ್ಕೃತ ಸಾಹಿತ್ಯ ಮತ್ತು ಪ್ರಾಚೀನ ಭಾರತೀಯ ಇತಿಹಾಸಗಳ ಬಗ್ಗೆ ಅವರ ಅಭ್ಯಾಸ ಬಹುದೊಡ್ಡದಾಗಿದೆ. ಜೈನ ಧರ್ಮದ ಜೈನ ವಾಗ್ಮಿಯದ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ, ಅಪಬ್ರಂಶ ಸಾಹಿತ್ಯದ ಉದ್ಧಾರ ಕೂಡ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ್ದು. ಅಂತಹ ಒಬ್ಬ ಲೇಖಕರ ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ ಮಿರ್ಜೆ ಅಣ್ಣರಾಯರು ಕನ್ನಡಕ್ಕೆ ತರುತ್ತಾರೆ. ಈ ಕೃತಿಯನ್ನು ಪ್ರಕಾಶನ ಮಾಡಿರುವಂತಹದ್ದು ಸೋಲ್ಲಾಪುರದಲ್ಲಿ 1981ರಲ್ಲಿ ಲಾಲ್ ಚಂದ್ ಹಿರಾ ಚಂದ್ ದೋಶಿ ಅನ್ನುವಂತಹ ಜೈನ ಸಂಸ್ಕೃತಿ ಸಂರಕ್ಷಕ ಸಂಘ ಸೋಲ್ಲಾಪುರ 1981ರಲ್ಲಿ ಈ ಕೃತಿಯನ್ನು ಪ್ರಕಟಮಾಡುತ್ತಾರೆ. ಅವಾಗ ಈ ಕೃತಿಯ ಬೆಲೆ 20ರೂಗಳು.

ಇದೇ ರೀತಿ ಕನ್ನಡಕ್ಕೆ ಸಮರ್ಥವಾಗಿ ತಂದಂತವರು ಮಿರ್ಜೆ ಅಣ್ಣರಾಯರು ಶಿಕ್ಷಕರು ಹಿರಿಯ ಸಾಹಿತಿಗಳು ಹಾಗಿದರು ಅದರಲ್ಲೂ 8 ಕಾದಂಬರಿಗಳನ್ನು

ಬರೆದಿದ್ದಾರೆ. ನಿಸರ್ಗ ಕಾದಂಬರಿಯತ್ತು ಕನ್ನಡದ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವಂತಹದ್ದು. ಮೂರು ಕಥಾಸಂಕಲನವನ್ನು ಬರೆದಿದ್ದಾರೆ, ವಿಮರ್ಷ ಕೃತಿ, ವ್ಯಕ್ತಿ ಚಿತ್ರ, ಮಕ್ಕಳ ಚಿತ್ರ ಇವೇಲ್ಲವೂ ಕೂಡ ಸಾಹಿತ್ಯ ಸೇವೆಯಲ್ಲಿ ಅಡಗಿವೆ. ಸ್ವತಂತ್ರವಾಗಿ 900 ಪುಟಗಳ ಜೈನ ಧರ್ಮ ಅನ್ನುವಂತಹ ಕೃತಿಯನ್ನು ಬರೆದಿದ್ದಾರೆ. ಮರಾಠಿ ಮತ್ತು ಹಿಂದಿ ಭಾಷೆ ಪ್ರೌಡತ್ವವನ್ನು ಹೊಂದಿರುವಂತವರು ಈ ಒಂದು ಕೃತಿಯನ್ನು ಅವರು ಕನ್ನಡಕ್ಕೆ ತಂದಿರುವಂತಹ ಕೆಲಸವನ್ನು ಮಾಡಿದ್ದಾರೆ.

ಜೈನ ಧರ್ಮದ ಉದಯ ಮತ್ತು ವಿಕಾಸದ ಬಗ್ಗೆ, ಜೈನ ಸಾಹಿತ್ಯದ ಬಗ್ಗೆ, ಜೈನ ದರ್ಶನ, ಜೈನ ಕಲೆ, ಜೈನ ಗುಹೆಗಳು, ಜೈನ ಬಸದಿಗಳು, ಜೈನ ಮೂರ್ತಿ ಕಲೆ, ಜೈನ ಚಿತ್ರ ಕಲೆ ಹೀಗೆ ಬಹಳಷ್ಟು ವಿವರಣೆಗಳನ್ನು ಚಿತ್ರ ಸಹಿತವಾಗಿ ಈ ಕೃತಿ ಕೊಡುತ್ತದೆ. ಸುಮಾರು 600 ಪುಟಗಳ ಬೃಹತ್ ಕೃತಿಯನ್ನು ಕನ್ನಡಕ್ಕೆ ತಂದಂತವರು ಮಿರ್ಜೆ ಅಣ್ಣರಾಯರು.

ಮತ್ತೊಂದು ಕೃತಿ ಕಂಬದಹಳ್ಳಿ ಒಂದು ಜೈನಕೇಂದ್ರ, ಈ ಕೃತಿಯನ್ನು ಬರೆದಂತವರು ಸೀತರಾಮ್ ಜಾಗಿರ್ದಾರ್ ರವರು ಅತಮಬ್ಬೆ ಪ್ರಕಾಶನ ಚಿತ್ರ ಭಾನು ರಸ್ತೆ ಕುವೆಂಪು ನಗರ ಮೈಸೂರು ಈ ಕೃತಿಯನ್ನು ಪ್ರಕಟ ಮಾಡಿದಂತವರು. ಈ ಕೃತಿ 1999ರಲ್ಲಿ ಪ್ರಕಟವಾಯಿತು ಅವಾಗ 35 ರೂಪಾಯಿಗಳು.

ಸೀತರಾಮ್ ಜಾಗಿರ್ದಾರ್ ರವರು ಹಳೆಯ ಶಾಸನಗಳನ್ನ ಪ್ರಾಚೀನ ಶಾಸ್ತ್ರಗಳನ್ನ ಓದುವುದರಲ್ಲಿ ಬಹಳ ಪ್ರವೀಣರು, ವಾಸ್ತುಶಿಲ್ಪದ ಪರಿಚಯವುಅವರಿಗೆ ಇತ್ತು. ಕನ್ನಡ ಅಧ್ಯಾಯನ ಸಂಸ್ಥೆ ಮೈಸೂರಿನಲ್ಲಿ ಶಾಸನ ವಿಭಾಗದಲ್ಲಿ ನಿಷ್ಠೇ ಇಂದ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದರು.

ಈ ಕಿರು ಹೊತ್ತಿಗೆ ಅನೇಕ ಸಂಶೋದಕರಿಗೆ ದಾರಿ ದೀಪವಾಗಿದೆ, ಕಂಬದಳ್ಳಿಯ ಮಠವನ್ನು ಭಾನು ಕೀರ್ತಿ ಭಟ್ಟಾರಕರು ಬಹಳಷ್ಟು ಮಟ್ಟಿಗೆ ಅಭಿವೃದ್ಧಿಯನ್ನು ಮಾಡಿದ್ದಾರೆ. ಶಾಲೆಗಳನ್ನು ತೇರೆದಿದ್ದಾರೆ ಮಠವನ್ನು ಸ್ಥಾಪನೆ ಮಾಡಿ ಉಳಿಸುವಂತಹ ಕೆಲಸವನ್ನು ಮಾಡುತ್ತಾ ಇದ್ದಾರೆ.

ಹಾಗಾಗಿ ಕಂಬದಹಳ್ಳಿ ಒಂದು ಜೈನಕೇಂದ್ರ ಬಗ್ಗೆ ಗಮನಹರಿಸಿದಂತವರು ಮೊಟ್ಟಮೊದಲಿಗೆ ಚಾರು ಕೀರ್ತಿ ಪಟ್ಟಾಚಾರ್ಯರು ಈ ಕೃತಿಯಲ್ಲಿ ಅನೇಕ ವಿಷಯಗಳು ಮತ್ತು  ಚಿತ್ರಗಳಿವೇ ಹಾಗು ಶೀತಿಲಾವಸ್ತೆ ಹೇಗೆ ಪಡೆಯುತ್ತಾ ಇತ್ತು ಅನ್ನುವುದರ ಬಗ್ಗೆ ಈ ಕೃತಿ ಗಮನ ಸೇಳೆಯುತ್ತದೆ. ಮತ್ತು ಮಾನಸ್ತಂಭದ ವಿಶೇಷತೆಯನ್ನು ಹೇಳುತ್ತದೆ. ಸೀತರಾಮ್ ಜಾಗಿರ್ದಾರ್ ರವರು ಬೆಳಕು ಚೆಲ್ಲುವಂತಹ ಕೆಲಸವನ್ನು ಈ ಗ್ರಂಥದ ಮೂಲಕ ಮಾಡಿದರು. ಈ ಕೃತಿಯನ್ನು ಓದಿದ ಮೇಲೆ ಈ ಕ್ಷೇತ್ರಕ್ಕೆ ಹೊಗಿದಂತಹ ಸಂದರ್ಭದಲ್ಲಿ ಅ ಕ್ಷೇತ್ರದ ಮಹತ್ವ ಅರಿವಿಗೆ ಬರುತ್ತದೆ. ಪಂಚ ಕೂಟ ಬಸದಿ 1975 ಕ್ಕೂ ಮುಂಚೆ ಇತ್ತು ಎಂಬುವುದನ್ನು ಅಲ್ಲಿನ ಶಾಸನ ತಿಳಿಸುತ್ತದೆ ಎಂದು ಸೀತರಾಮ್ ಜಾಗಿರ್ದಾರ್ ರವರು ಈ ಕೃತಿಯಲ್ಲಿ ತಿಳಿಸಿದ್ದಾರೆ.

ಈ ಎರಡು ಕೃತಿಗಳು ಕೂಡ ಬಹಳ ಮಹತ್ವದು ಈ ಎರಡು ಕೃತಿಗಳನ್ನು ಓದುವುದರ ಮೂಲಕ ನಮ್ಮ ಜ್ಞಾನದ ದಾಹವನ್ನು ತೀರಿಸಿಕೊಳ್ಳ ಬೇಕು, ನಮ್ಮ ಅನುಭವಗಳನ್ನ ವಿಸ್ತರಿಸಿಕೊಳ್ಳುವುದಕ್ಕೆ ಈ ಅಕ್ಷರ ಸಂಸ್ಕೃತಿ ಸದಾ ನಮ್ಮ ಜೊತೆ ಇರುವುದನ್ನ ಜ್ಞಾಪಿಸಿಕೋಳ್ಳುತ್ತ ಮತ್ತೊಂದು ಸರಣಿ ಕಾರ್ಯಕ್ರಮದಲ್ಲಿ ಮುಂದಿನವಾರ ಮತ್ತೆ ಬೇಟಿಯಾಗುತ್ತೇನೆ ನಮಸ್ಕಾರ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್