ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಸ್ತೋತ್ರಮಂಜರಿ ಮತ್ತು ಕಾರ್ತಿಕೇಯಾನುಪ್ರೇಕ್ಷೆ.
ಡಾ.ಪದ್ಮಿನಿ ನಾಗರಾಜು.
ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.
ಆತ್ಮಿಯರೇ ನಮಸ್ಕಾರ, ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಪ್ರತಿವಾರ ಪ್ರಕಟವಾಗುತ್ತಿರುವಂತಹ ಸರಣಿಕಾರ್ಯಕ್ರಮ ಜ್ಞಾನ ದೀಪಿಕೆಗಳು ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಸ್ವಾಗತ.
ಈ ದಿನ ನಾನು ತಮಗೆ ಪರಿಚಯ ಮಾಡಿಕೊಡುತ್ತಿರುವಂತಹ ಎರಡು ಕೃತಿಗಳಲ್ಲಿ ಸ್ವಾಮಿ ಕಾರ್ತಿಕೇಯರ ಕಾರ್ತಿಕೇಯಾನುಪ್ರೇಕ್ಷೆ ಎನ್ನುವಂತಹ ಒಂದು ಮಹತ್ವದ ಕೃತಿ. ಮತ್ತೊಂದು ಸ್ತೋತ್ರಮಂಜರಿ ಎನ್ನುವಂತಹ ಪುಟ್ಟ ಕೃತಿಯನ್ನು ನಾನು ಇಂದು ಪರಿಚಯ ಮಾಡಿಕೊಡುತ್ತಾ ಇದ್ದೀನಿ.
ಅನುಪ್ರೇಕ್ಷೆಗಳ ಬಗ್ಗೆ ಕನ್ನಡದಲ್ಲಿ ಪ್ರಾಕೃತದಲ್ಲಿ ಸಂಸ್ಕೃತದಲ್ಲಿ ಅನೇಕ ಕೃತಿಗಳು ಹೀಗಾಗಲೆ ಬಂದಿರುವುದು ನಮಗೆ ಗೊತ್ತಿದೆ. ಈ ರೀತಿ ಬಂದಿರುವಂತಹ ಕೃತಿಗಳಲ್ಲಿ ಕಾರ್ತಿಕೇಯಾನುಪ್ರೇಕ್ಷೆ ಎನ್ನುವ ಕೃತಿ ಅತ್ಯಂತ ಮಹತ್ವದ ಕೃತಿ. ಈ ಕೃತಿಯನ್ನು ಮೂಲವಾಗಿ ಬರೆದಿರುವಂತವರು ಸ್ವಾಮಿ ಕಾರ್ತಿಕೇಯ ವಿರಚಿತ ಕಾರ್ತಿಕೇಯಾನುಪ್ರೇಕ್ಷೆ, ಅನುವಾದ ಮಾಡಿರುವವರು ಎಂ.ಬಿ ಪಾಟೀಲ್.
ಡಾ|| ಎಂ.ಬಿ ಪಾಟೀಲ್ ರವರು ಈ ಗ್ರಂಥವನ್ನು 1992ರಲ್ಲಿ ಪ್ರಕಟ ಮಾಡಿದರು. ಈ ಕೃತಿ ದಿಗಂಬರ ಜೈನ ಟ್ರಸ್ಟ್ 141 ರಂಗಸ್ವಾಮಿ ಗುಡಿ ಬೀದಿ ಬೆಂಗಳೂರು ಇಲ್ಲಿ ಈ ಕೃತಿ ದೊರಕುತ್ತದೆ ಮತ್ತು ರಾಯಪ್ಪ ಚೆನ್ನಪ್ಪ ಪಡಲುಸಲಗಿ ವಿಜಾಪುರ ಜಿಲ್ಲೆಯಲ್ಲಿ ದೊರಕುತ್ತದೆ. ಈ ಕೃತಿಯನ್ನು ಹಿಂದಿಗೆ ತಂದಂತವರು ಜಯಚಂದ್ರ ಜೀ ಚಾಬಡ ಜೈಪುರದವರು. ನಂತರ ಕನ್ನಡಕ್ಕೆ ಅನುವಾದ ಮಾಡಿದಂತವರು ಎಂ.ಬಿ ಪಾಟೀಲ್ ರವರು ಆದರೆ ಈ ಕೃತಿಯನ್ನು ಪ್ರಕಾಶನ ಮಾಡಿದಂತವರು ದಿಗಂಬರ ಜೈನ್ ಟ್ರಸ್ಟ್ ಆಧ್ಯಾತ್ಮನ ಪ್ರಕಾಶನ ಸಂಸ್ಥೆ ಬೆಂಗಳೂರು ಇವರು ಈ ಕೃತಿ ಪ್ರಮುಖವಾಗಿ ಅನುಪ್ರೇಕ್ಷೆಗಳ ಬಗ್ಗೆ ಮಾತನಾಡುತ್ತದೆ ಅನ್ನುವಂತಹದನ್ನ ಗಮನಿಸ ಬೇಕು.
ದ್ವಾದಶ ಅನುಪ್ರೇಕ್ಷೆಗಳು ಜೈನ ಸಾಹಿತ್ಯಗಳಿಗಲ್ಲದೆ ಭಾರತೀಯ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ಕೊಟ್ಟಿರುವಂತಹದ್ದು. ಈ ಕೃತಿಯಲ್ಲಿ 12 ಅನುಪ್ರೇಕ್ಷೆಗಳನ್ನ 489 ಗಾಥೆಗಳಲ್ಲಿ ಹೇಳಿದ್ದಾರೆ, ಈ ಕೃತಿಗೆ ಕುಂದ ಕುಂದಾಚಾರ್ಯರು 90 ಗಾಥೆಗಳಲ್ಲಿ ರಚಿಸಿದಂತಹ ಭಾರಸ ಅಣ್ಣುವೆಕ್ಕ ಎನ್ನುವಂತಹ ಕೃತಿ ರಚನೆಮಾಡುವುದಕ್ಕೆ ಉಹಿಸುತ್ತಾರೆ. ಕುಂದ ಕುಂದಾಚಾರ್ಯರು ಕ್ರಿ.ಪೂ.ದಲ್ಲಿ ಹಾಗಿ ಹೋಗಿದರೆ, ಸ್ವಾಮಿ ಕಾರ್ತಿಕೇಯ ಮುನಿಗಳು ಕ್ರಿ.ಶ. ಪ್ರಥಮ ಶತಾಬ್ದಿಯಲ್ಲಿ ಹಾಗಿದರು. ಸ್ವಾಮಿ ಕಾರ್ತಿಕೇಯ ಮುನಿಗಳು ಕುಂದ ಕುಂದಾಚಾರ್ಯರ ಭಾರಸ ಅಣ್ಣುವೆಕ್ಕವನ್ನು ಆಧರಿಸುವಂತೆ ಮುಂಬರುವ ಎಲ್ಲರೂ ಅದೆ ರೀತಿ ಆಧರಿಸಿ ಕೃತಿಯನ್ನು ಬರೆದರು.
ಅನುಪ್ರೇಕ್ಷೆ ಎಂದರೆ ಒಂದು ವಿಷಯದ ಬಗ್ಗೆ ಪದೇ ಪದೇ ಚಿಂತನೆ ಮಾಡುವುದಕ್ಕೆ ಅನುಪ್ರೇಕ್ಷೆಎನ್ನುತ್ತಾರೆ. ಈ ರೀತಿಯ ಅನುಪ್ರೇಕ್ಷೆಯನ್ನು ಇಟ್ಟುಕೊಂಡು ಗ್ರಂಥದ ಮೂಲ ಭಾಷೆ ಪ್ರಕೃತದಲ್ಲಿದ್ದು ಅನಂತರದಲ್ಲಿ ಕನ್ನಡದಲ್ಲಿ ಬಂದಿರುವಂತಹದ್ದು. ಹಾಗಾಗಿ ಇಂತಹ ಕಾರ್ತಿಕೇಯಾನುಪ್ರೇಕ್ಷೆಯನ್ನು ದಯವಿಟ್ಟು ಓದುವುದರ
ಮೂಲಕ ನಾವು ಇದನ್ನು ಅರ್ಥಮಾಡಿಕೊಳ್ಳ ಬೇಕು.
ಇನ್ನೊಂದು ಪುಸ್ತಕ ಸ್ತೋತ್ರಮಂಜರಿ ಎನ್ನುವಂತಹ ಕೃತಿ, ಈ ಕೃತಿಯನ್ನು ಅನುವಾದ ಮಾಡಿರುವಂತವರು ಎಂ ಪಿ ಜೈನೇಂದ್ರ ರವರು. ಪ್ರಕಾಶನ ಮಾಡಿದಂತವರು ಅರ್ಹಸಿದ್ದಾಂಥ ಪ್ರಕಾಶನ ನಂದಿ ಕೋಲಾರ ಜಿಲ್ಲೆಯವರು, ಈ ಕೃತಿ 12 ರೂಪಾಯಿಗೆ ಸಿಗುತ್ತಿತ್ತು. 1977 ರಲ್ಲಿ ಪ್ರಕಟಗೊಂಡಂತಹದ್ದು, ಪದ್ಮಾವತಿ ಜೈನೇಂದ್ರ ಅರ್ಹಸಿದ್ದಾಂಥ ಪ್ರಕಾಶನ ದಿಂದ. ಸಲಹೆಗಾರರಾಗಿ ಸುಬ್ಬಯ್ಯ ಶಾಸ್ತ್ರಿಗಳು, ಪದ್ಮನಾಭ ಶರ್ಮ, ಜಿ ಬ್ರಹ್ಮಪ್ಪ ರವರು ಹಾಗಿದರು. ಬೂವನ ಹಳ್ಳಿ ಶರ್ಮರವರು ಒಂದು ಮೆಚ್ಚುಗೆಯ ನುಡಿಯನ್ನು ಬರೆಯುತ್ತ ಜೈನ ಧರ್ಮವನ್ನು ಪ್ರಚಾರಮಾಡುವ ಉದ್ದೇಶದಿಂದ ಶ್ರೀಮತಿ ಪದ್ಮಾವತಿ ಜೈನೇಂದ್ರರವರು ಸಹಾಸಿಗಳು ಈ ಸಿದ್ದಾಂತ ಗ್ರಂಥಗಳು ಎಲ್ಲರಿಗೂ ಅರ್ಥವಾಗಲ್ಲಿ ಎಂದು ಹೇಳಿ ಮಾನತುಂಗಾ ಚಾರ್ಯರುಗಳ ಸ್ತೋತ್ರಗಳಿರಬಹುದು, ಭಕ್ತಾಂಬರ ಸ್ತೋತ್ರಗಳಿರಬಹುದು, ಶ್ರೀ ಸಿದ್ದಸೇನ ದಿವಾಕರರ ಸ್ತೋತ್ರಗಳಿರಬಹುದು ಹಾಗೂ ಮೊದಲಾದವರ ಮಹಾನ್ ಅಚಾರ್ಯರ ಸ್ತೋತ್ರ ರಚನೆಗಳನ್ನು ಭಕ್ತಿ ಇಂದ ಶ್ರದ್ದೆ ಇಂದ ಮಾಡುವುದರಿಂದ ಭಕ್ತಿ ಹುಟ್ಟುತ್ತದೆ. ಭಕ್ತಿ ಇಂದ ಸ್ತೋತ್ರ ಪಠಣೆ ಮಾಡುವುದರ ಮೂಲಕ ಶ್ರೀ ಮಾನ ತುಂಗಾಚಾರ್ಯರು ತಮಗೆ ತೊಡಿಸಿದಂತಹ ಶುಂಕಲಗಳನ್ನೆ ಕಳಚಿಕೊಂಡರು. ಅಂತಹ ಪವಿತ್ರ ಸ್ತೋತ್ರವನ್ನು ಪಠಣೆ ಮಾಡುವುದು ಶ್ರಾವಕ ಶ್ರಾವಕಿಯರಿಗೆ ಹಾಗ ಬೇಕು. ಅದು ಬಹಳ ತಿಳಿಗನ್ನಡದಲ್ಲಿ ಇದರೆ ಇನ್ನೂ ಅರ್ಥವಾಗುತ್ತದೆ ಎನ್ನುವ ಕಾರಣಕ್ಕೆ ಕೆಲವು ಸ್ತೋತ್ರಗಳನ್ನ ಸರಳ ಕನ್ನಡಕ್ಕೆ ಭಾಷಾಂತರಮಾಡಿರುವುದನ್ನ ಶ್ರೀಯುತ ಜೈನೇಂದ್ರರವರು ಮಾಡಿದ್ದಾರೆ. ಈ ಕೃತಿ ಕೂಡ ಬಹಳ ಮಹತ್ವದ ಕೃತಿ, ಈ ಕೃತಿ ಸಿಗುವ ಸಾಧ್ಯತೆಗಳು ಇಲ್ಲಾ ಈ ರೀತಿಯ ಕೃತಿ ಸ್ತೋತ್ರಮಂಜರಿ ಎನ್ನುವಂತಹದ್ದು.
ಬಹಳ ಪ್ರಮುಖವಾಗಿ ಈ ಎರಡು ಕೃತಿಗಳು ಗ್ರಂಥಾಲಯಗಳಲ್ಲಿ ಇರಬಹುದು ಮತ್ತು ಬಸದಿಗಳಲ್ಲಿ ಇರಬಹುದು ಅಲ್ಲಿ ಓದುವುದರ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳ ಬೇಕು. ನಮ್ಮಲ್ಲಿ ನಾಲ್ಕು ದಾನಗಳಲ್ಲಿ ಪುಸ್ತಕ ದಾನ ಎನ್ನುವುದು ಇದೆ ಎನ್ನುವುದಕ್ಕಿಂತ ಹೆಚ್ಚಾಗಿ ಎಷ್ಟು ಜನ ಓದುತ್ತೀವಿ ಎನ್ನುವುದು ಬಹಳ ಮುಖ್ಯ. ಓದುವ ಪ್ರಕ್ರಿಯೆ ನಮ್ಮಲಿ ಜೊತೆಯಾಗಲ್ಲಿ ಅನ್ನುವ ಕಾರಣಕ್ಕೆ ಈ ಒಂದು ಸರಣಿ ಕಾರ್ಯಕ್ರಮ ಮಾಡುತ್ತಿದ್ದೇವೆ. ದಯವಿಟ್ಟು ಈ ಗ್ರಂಥಗಳಲ್ಲಿರುವ ಜೈನ ತತ್ವಗಳನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆ ನಮ್ಮದಾಗಲ್ಲಿ ಎಂದು ಹೇಳುತ್ತಾ ಮತ್ತೊಂದು ಸರಣಿ ಮೂಲಕ ಮುಂದಿನ ವಾರ ಮತ್ತೆ ಭೇಟಿಯಾಗೋಣ ನಮಸ್ಕಾರ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














