ಇಂದಿನ ಸಂಚಿಕೆಯಲ್ಲಿ ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ತಮ್ಮ 90ನೇ ವರ್ಷದ ವಯಸ್ಸಿನಲ್ಲಿಯೂ ಕೂಡ ಅವರ ಬರವಣಿಗೆ ಹೀಗೆಯೇ ಮುಂದುವರಿದು ಈ ಬಾರಿಯ ಹುಟ್ಟುಹಬ್ಬದ ದಿನದಂದು ಕೂಡ ಮೂರು ಪುಸ್ತಕಗಳು ಅವರಿಂದ ಹೊರಹೊಮ್ಮಿತು. ಇಂತಹ ಶ್ರೇಷ್ಠ ಸಾಹಿತಿಗಳೊಂದಿಗೆ ನಮ್ಮ ಈ ಸಂಚಿಕೆಯ ಸಂವಾದ . ಸಾಹಿತ್ಯ ,ಕಲೆ , ನಾಟಕ , ಪ್ರವಾಸ ಕಥನ ಇತ್ಯಾದಿ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಭಾವಿನಿ ಎಂಬ ಕಾವ್ಯನಾಮದಿಂದ ಸುಪ್ರಸಿದ್ದರಾದ ಶ್ರೀಮತಿ ಶಾಂತಮ್ಮನವರು ನಡೆದಾಡುವ ವಿಶ್ವಕೋಶವಿದ್ದಂತೆ. ಸಾಹಿತ್ಯ ಸಂವಾದದಲ್ಲಿ ತೊಡಗಿದಾಗ ಅವರ ಕೃತಿಗಳ ವಿಮರ್ಶೆ ಗರಿಗೆದರಿದಾಗ ಉತ್ಸಾಹ ಲವಲವಿಕೆ ಬೆರಗಾಗಿಸುತ್ತದೆ. ಶಿವಮಿಗ್ಗ ಜಿಲ್ಲೆ ಹೊಸನಗರದ ತಾಯಪ್ಪ ಮತ್ತು ಜಿನ್ನಮ್ಮನರ ಮಗಳಾಗಿ ಜನಿಸಿದರು . ತಮ್ಮ ತಂದೆಯವರಿಂದಲೇ ಸಾಹಿತ್ಯಸಕ್ತಿಗೆ ಪ್ರೇರೇಪಣೆ ಪಡೆದ ಶಾಂತಮ್ಮನವರು ಕಥೆಗಳನ್ನು ಪತ್ರಿಕೆಗಳನ್ನು ಓದುವುದರ ಜೊತೆಗೆ ಆ ಕಾಲದಲ್ಲಿ ಪ್ರಕಟವಾಗುತ್ತಿದ್ದ ಸನ್ಮತಿ ಗುರುದಾನ ಪತ್ರಿಕೆಗಳಿಗೆ ಬರೆಯುತ್ತಿದ್ದರು. ವಿಸ್ತಾರವಾದ ಓದು ಸಮಾನಮನಸ್ಕರ ಗೆಳೆತನ ಹಾಗೂ ಹಲವು ವಿಚಾರಗಳಿಂದ ಅವರ ಕವಿ ಮನಸ್ಸು ಅರಳಿ ಅಭಿವ್ಯಕ್ತಿಗೊಳ್ಳಲು ಆರಂಭವಾಯಿತು. ಹಾಗೆ ವಯಸ್ಸಿನಲ್ಲಿ ಇಂದಿರಾ ಎಂಬ ಕೃತಿಯನ್ನು ಬರೆದಿದ್ದಾರೆ. ನಂತರ ಅವರ ತಂದೆಯವರ ಪ್ರೇರೇಪಣೆಯಿಂದ ಹಲವು ಧಾರ್ಮಿಕ ಕೃತಿಗಳನ್ನು ರಚಿಸಿದ್ದಾರೆ. ಅಂಜನಾ , ಚಂದನದೇವಿ, ಭವಘಟ್ಟ, ಶಕ್ತಿಶ್ರೀ ಎಂಬ ಕಾಂಬರಿಗಳನ್ನು ಬರೆದಿದ್ದಾರೆ. ಬೆಳ್ಳಿ ಬೆಟ್ಟದಂಕ, ಭಾವ-ಸೇತು ಇವರ ಪ್ರವಾಸ ಕಥನಗಳು ಸೀತಾಳೆ ಎಂಬ ಕವನಸಂಕಲನ ನ್ಯೇಮಿನಾಥ, ಮಹಾಮಂಡಲೇಶ್ವರ , ಭದ್ರಬಾಹು ಶಿಲಾಶ್ರೀ ಎಂಬ ನಾಟಕಗಳಲ್ಲದೇ 30 ಕ್ಕೂ ಹೆಚ್ಚು ಕವನಸಂಕಲನಗಳನ್ನು ರಚಿಸಿದ್ದಾರೆ. ಶ್ರವಣ ಬೆಳಗೊಳದ ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾಚಾರ್ಯ ರ ಪ್ರವಚನಗಳಿಂದ ಆಯ್ದ ನುಡಿಮುತ್ತುಗಳನ್ನು ಸಂಗ್ರಹಿಸಿ ಶ್ರೀ ಚಾರುಶ್ರೀ ಮುನಿಗಳು, ಶ್ರೀ ಚಾರುಶ್ರೀ ಚಿಂತನಗಳು ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಮಹಾವಸ್ತಕಾಭಿಷೇಕ ಸಂದರ್ಭದ ಸಾಂಸ್ಕೃತಿಕ ಕಾರಯಕ್ರಮದಲ್ಲಿ ಭಾಗವಹಿಸಿದ ಹೆಸರಾಂತ ನೃತ್ಯ ಪಟುಗಳಾದ ವೈಜಯಂತಿಮಾಲಾ, ಶ್ರೀಧರ್, ವೈಜಯಂತಿ ಕಾಶಿ ಮತ್ತು ಲಲಿತಾ ಶ್ರೀನಿವಾಸ್ ಇವರಿಗಾಗಿ ಗೀತಾ ರೂಪಕಗಳನ್ನು ರಚನೆ ಮಾಡಿದ ಹಿರಿಮೆ ಇವರದು. ಆಕಾಶವಾಣಿ ದೂರದರ್ಶನಗಳಲ್ಲಿ ನಾಟಕ, ಭಾಷಣ ಹಾಗೂ ಚಿಂತನಗಳ ಕಾರ್ಯಕ್ರಮಗಳನ್ನು ನಡೆಸಿಕೊಡುವುದರ ಮೂಲಕ ಜೈನ ಧರ್ಮದ ಉನ್ನತ ಆಶಯಗಳನ್ನು ಸಾರಿದ್ದಾರೆ. ಇವರು ಹಲವು ಪ್ರಶಸ್ತಿಗಳಿಂದ ಸನ್ಮಾನಿತರಾಗಿದ್ದಾರೆ. ಸಾಲಿಗ್ರಾಮ ಮಿತ್ರಮಂಡಲಿ ಪ್ರಶಸ್ತಿ , ಅಂತರ ರಾಷ್ಟ್ರೀಯ ಕವಿಗಳ ಪ್ರಶಸ್ತಿ , ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ , ಜೈನ ಯೋಗ ಸಾಧನಾ ಶಿರೋಮಣಿ ಪ್ರಶಸ್ತಿ ಗಳಿಂದ ಗೌರವಿಸಲ್ಪಟ್ಟಿದ್ದಾರೆ. ಧಾರಿಣಿಯವರೇ ತಾವು ಮಹಿಳೆಯಾಗಿ ಸಾಂಸಾರಿಕ ಜವಾಬ್ದಾರಿಯನ್ನು ನಿರ್ವಹಿಸುವುದರ ಜೊತೆಗೆ ಧಾರ್ಮಿಕವಾಗಿ ಸಾಮಾಜಿಕವಾಗಿ ತೊಡಗಿಸಿಕೊಂಡು ಹಲವು ಪುಸ್ತಕಗಳನ್ನು ಜೈನ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದೀರಿ.
ಸಾಹಿತಿಗಳೊಂಡಿಗೆ ಸಂವಾದ- 02 / ಶ್ರೀಮತಿ. ಶಾಂತಮ್ಮ (ಧರಣಿ) / 27-08-2021 / jwalamalanews / 2021














