ಎಲ್ಲಾ ಪೂರ್ವಭಾವಿ ಕಾರ್ಯಕ್ರಮಗಳೊಂದಿಗೆ ನಡೆದ ಜಿನಸಮ್ಮಿಲನದ ಕಾರ್ಯಕ್ರಮದ ಪ್ರಮುಖ ಘಟ್ಟಕ್ಕೆ ನಾವು ಬಂದಿದ್ದೇವೆ. ಅಂದು ದಿನಾಂಕ 20/12/2020. ಬೆಳಗ್ಗೆ 9.00 ಘಂಟೆಗೆ ಪ್ರಾರಂಭವಾದ ಜಿನಸಮ್ಮಿಲನ 2020 ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಅಲ್ಲದೇ ವಿದೇಶದಿಂದಲೂ ಕೂಡ ಜೈನ ಬಾಂಧವರು ಬಹಳಷ್ಟು ಮಂದಿ ಕಾದು ಕುಳಿತಿದ್ದರು. ಅಲ್ಲಿನ ಕಾರ್ಯಕ್ರಮದಲ್ಲಿಸಾಂಸ್ಕೃತಿಕ ಕಾರ್ಯಕ್ರಮ, ಛಾವಡಿ ಚರ್ಚೆಯಂತಹ ಮನರಂಜನೆಯ ಕಾರ್ಯಕ್ರಮಗಳ ಒಟ್ಟಿಗೆ ಜಿನಸಮ್ಮಿಲನಕ್ಕಾಗಿ ನಡೆದ ರಂಗೋಲಿ ಸ್ಪರ್ಧ, ಜೈನ್ ಫುಟ್ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ,ಭದ್ಮವೇಷ ಸ್ಪರ್ದೆ, ಸ್ವರಚಿತ ಕವನ ವಾಚನ ಸ್ಪರ್ದೆ, ರಸಪ್ರಶ್ನೆ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಹಾಗೂ ಜೈನ ಕಿರುಚಿತ್ರ ಸ್ಪರ್ಧೆ ಈ ಸ್ಪರ್ಧೆಗಳ ಫಲಿತಾಂಶವನ್ನು ಪ್ರಕಟಗೊಳಿಸುವ ಕಾರ್ಯಕ್ರಮ ಇದಾಗಿತ್ತು.
ಮೊದಲಿಗೆ ಮಾತೃಶ್ರೀ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಶುಭನುಡಿಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಂತರ ಈ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ತುಂಬಾ ಖುಷಿಯಾಗುತ್ತಿದೆ ಏಕೆಂದರೆ ಎಲ್ಲರನ್ನೂ ಕೂಡ ಒಟ್ಟಾಗಿ ಸೇರಿಸುವ ಈ ಜಿನಸಮ್ಮಿಲನ ಕಾರ್ಯಕ್ರಮ ಇದಾಗಿದ್ದು ನಮ್ಮ ಧರ್ಮ ನಮ್ಮ ನಮ್ಮ ಪದ್ಧತಿಗಳನ್ನು ಗುರುತಿಸುವಲ್ಲಿ ಹಾಗೂ ನಮ್ಮ ಸಂಪ್ರದಾಯಗಳನ್ನೆಲ್ಲಾ ತಿಳಿಸಿಕೊಡುವಲ್ಲಿ ಈ ಕಾರ್ಯಕ್ರಮ ತುಂಬಾ ಸದುಪಯೋಗ ಆಗುತ್ತಿದೆ ಎಂದು ಹೇಳಲು ತುಂಬಾ ಹರ್ಷವಾಗುತ್ತಿದೆ ಎಂದು ತಿಳಿಸಿದರು. ಹಾಗೆಯೇ ಜೈನ ದರ್ಮದ ಬಗ್ಗೆ ಹಾಗೂ ಅವರು ಮಾಡುವಂತಹ ಊಟದ ಪದ್ದತಿಯ ಬಗ್ಗೆ ಹಾಗೂ ಸಾತ್ವಿಕ ಆಹಾರ ಪದ್ದತಿಯ ಬಗ್ಗೆ ಪ್ರಮುಖವಾಗಿ ತಿಳಿಸಿಕೊಟ್ಟರು. ಮತ್ತೆ ಈ ಜಿನಸಮ್ಮಿಲನದ ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ ಈಗಿನ ಯುವಕರು ಈ ಕಾರ್ಯಕ್ರಮವನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ. ಹೀಗೆ ಈ ಕಾರ್ಯಕ್ರಮ ಮುಂದುವರೆಸಿಕೊಂಡು ಬರಲಿ ಹಾಗೂ ನಾವು ಜೈನರು ಎಂಬ ಧರ್ಮವನ್ನು ತುಂಬಾ ಹೆಮ್ಮೆಯಿಂದ ಹೇಳಿ. ಹಿಂಜರಿಯಬೇಡಿ. ಎಂದು ತಿಳಿಸಿದರು ಹಾಗೆಯೇ ಝೂಮ್ ಆ್ಯಪ್ ಮೂಲಕ ನಡೆದ ಸಂದರ್ಶನದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ವೀರೇಂದ್ರ ಹೆಗ್ಗಡೆಯವರ ಮಾತುಗಳನ್ನು ಕೇಳಿಸಿಕೊಂಡರು ಹಾಗೂ ಚರ್ಚೆ ಕೂಡ ಮಾಡಿದರು. ಪ್ರತಿಯೊಬ್ಬರು ಮಾತನಾಡಿ ಅವರವರ ಅನಿಸಿಕೆಗಳನ್ನು ಈ ಸಂದರ್ಶನದಲ್ಲಿ ಹಂಚಿಕೊಂಡರು.
ಮುಂದಿನಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ . ವಂದನೆಗಳೊಂದಿಗೆ ಜೈ ಜಿನೇಂದ್ರ.














