ಇಂದಿನ ಪುಸ್ತಕಗಳು : ಸತಿ ಧರ್ಮಸಾರ ಮತ್ತು ವೀರ ಜೈನ ಮಹಿಳೆಯರು.
ಮೊದಲನೆಯದಾಗಿ : ಸತಿ ಧರ್ಮಸಾರ ಬಂಧುವರ್ಮನ ಜೀವ ಸಂಭೋದನೆ ಹೇಗೋ ಹರಿವಂಶಾಭ್ಯುದಯ ಹೇಗೋ ಹಾಗೇ ಸತಿ ಧರ್ಮಸಾರ ಎನ್ನುವ ಪುಟ್ಟ ಕೃತಿ ಮಹಿಳೆಯರಿಗಾಗಿಯೇ ವಿಶೇಷವಾಗಿ ಬರೆದಂತಹ ಕೃತಿ ಆ ಕಾಲ ಘಟ್ಟದ ಕೃತಿಯನ್ನು ನಾವು ಪ್ರಾಚೀನ ಕೃತಿಯನ್ನಾಗಿ ಪರಿಚಯ ಮಾಡಿಕೊಳ್ಲುತ್ತಿದ್ದೇನೆ. ಇದನ್ನು ಸಂಪಾದನೆ ಮಾಡಿದಂತಹವರು ಬಿ.ಎಸ್ ಸಣ್ಣಯ್ಯ ಸರ್ ರವರು . ಇತ್ತೀಚೆಗಷ್ಟೇ ನಮ್ಮನ್ನೆಲ್ಲಾ ಅಗಲಿದ ಬಿ.ಎಸ್ ಸಣ್ಣಯ್ಯ ಸರ್ ರವರು ಇದನ್ನು ಸಂಪಾದನೆ ಮಾಡಿರುವಂತಹುದು.
ಮತ್ತೊಂದು ಮಹತ್ವದ ಇತ್ತೀಚಿನ ಕೃತಿ : ವೀರ ಜೈನ ಮಹಿಳೆಯರು ಎನ್ನುವಂತಹ ಕೃತಿ ಇದನ್ನು ಬರೆದಂತಹವರು ರತ್ನಮ್ಮನವರು . ಇವರ ಒಂದು ಅತ್ಯಂತ ಪರಿಶ್ರಮದ ಕನ್ನಡ ನಾಡಿನ ವೀರ ಜೈನ ಮಹಿಳೆ ಯರು ಎನ್ನುವಂತಹ ಕೃತಿ ಯನ್ನು ಪರಿಚಯ ಮಾಡಿಕೊಡುತ್ತಿದ್ದೇವೆ.
ಇಂದು ಬಿ.ಎಸ್ ಸಣ್ಣಯ್ಯರವರು ಬರೆದಿರುವಂತಹ ಸತಿ ಧರ್ಮಸಾರ 12 ನೇ ಶತಮಾನದಲ್ಲಿ ಇದ್ದಂತಹ ಬಂದುವರ್ಮನ ಜೀವ ಸಂಭೋದನೆ ನಾವೆಲ್ಲರೂ ಕೇಳಿರುವಂತಹ ಮಹತ್ವವಾದಂತಹ ಕೃತಿ . ಆದರೆ ಅವರು ಬಹಳ ಜನಕ್ಕೆ ಬಹಳ ಕಾಲಘಟ್ಟದವರೆಗೂ ಈ ಕೃತಿ ಸಿಕ್ಕಿರಲಿಲ್ಲ . ಇದನ್ನು ಪ್ರಥಮ ಮುದ್ರಣವನ್ನಾಗಿ 1976 ರಲ್ಲಿ ಮತ್ತು ದ್ವಿತೀಯ ಮುದ್ರಣವನ್ನಾಗಿ 1978 ರಲ್ಲಿ ಮುದ್ರಣವನ್ನು ಮಾಡಿದರು. ಇದರ ದರ 15 ರೂ.ಗಳು ಆಗಿದ್ದು ಇದನ್ನು ಪ್ರಕಾಶನ ಮಾಡಿದವರು ಕನಕಗಿರಿ ಪ್ರಕಾಶನ . ಮಲೆಯೂರು . ಕನಕಗಿರಿ ಇವರಿಂದ ಪ್ರಕಟಗೊಂಡಿರುವುದು. ಈ ಕೃತಿಯಲ್ಲಿ ಸುಲಭ ಶೈಲಿಯಲ್ಲಿ ರಚಿತವಾದಂತಹ 189 ಕಂದಪದ್ಯಗಳನ್ನು ಹಾಗೂ ಒಂದು ಪ್ರಾಕೃತ ಗಾಹ್ಯವನ್ನು ಒಳಗೊಂಡಿರುವಂತಹುದು ಕೃತಿ ಸತಿ ಧರ್ಮ ಸಾರ ಎನ್ನುವಂತಹುದು. ಇದನ್ನು ಸುಮಾರು 18 ನೇ ಶತಮಾನದಲ್ಲಿ ಮೈಸೂರಿನ ಹದಿಬದೆಯ ಧರ್ಮವನ್ನು ಬರೆದಂತಹ ಆ ಒಂದು ಕೃತಿ ಯನ್ನು ಇದೇ ಸಾಲಿಗೆ ಈ ಕೃತಿಯನ್ನು ಸೇರಿಸಬಹುದೇನೋ , ಏಕೆಂದರೆ ಆ ಕೃತಿಯಂತೆಯೇ ಸ್ತ್ರೀಯ ಮನೆಯ ನಿತ್ಯ ಕೆಲಸಗಳಲ್ಲಿ ನಡೆದುಕೊಳ್ಳಬೇಕಾದ ರೀತಿ ನೀತಿ ಗಳನ್ನು ವಹಿಸಬೇಕಾದ ಕೆಲಸಗಳಲ್ಲಿ ಎಚ್ಚರಿಕೆಯಿಂದ ಮನಮುಟ್ಟುವಂತೆ ಕವಿ ಇಲ್ಲಿ ಯಾವುದು ಕೆಟ್ಟದ್ದು ಯಾವುದು ಒಳ್ಳೆಯದು ಎನ್ನುವಂತಹುದ್ದನ್ನು ಪ್ರಸ್ತಾಪ ಮಾಡಿದ್ದಾರೆ. ಸತಿಯರ ಸನ್ಮಾರ್ಗದ ನೀತಿಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಈ ಕೃತಿಯನ್ನು ಬರೆದ ಬಿ.ಎಸ್ ಸಣ್ಣಯ್ಯ ಸರ್ ರವರು ಪಿರಿಯಾ ಪಟ್ಟಣದ ಭೋಗನಹಳ್ಳಿಯವರು . ಅವರು 1928 ರಲ್ಲಿ ಜನಿಸಿದರು. ಕನ್ನಡ ಸಾಹಿತ್ಯದಲ್ಲಿ ಮೊದಲಿನಿಂದಲೂ ಆಸಕ್ತಿ ಇದ್ದುದ್ದರಿಂದ ಅವರು ಎಂ. ಎ ಪದವಿಯನ್ನು ಹೀಗೆ ಹಲವಾರು ಸಂಶೋಧನೆ ಹಾಗೂ ಶಾಸ್ತ್ರದಾನಗಳಲ್ಲಿ ಹಾಗೂ ಪ್ರಾಚ್ಯ ಶಾಸ್ತ್ರದಲ್ಲಿ ಬಹಳ ಗಮನೀಯವಾದಂತಹ ಕೆಲಸವನ್ನು ಮಾಡಿದರು. ಹಸ್ತ ಪ್ರತಿಶಾಸ್ತ್ರದ ಬಗ್ಗೆ ಬಹಳಷ್ಟು ಆಸಕ್ತಿ ಇತ್ತು ದೇಶದ ವಿವಿದೆಡೆಗಳಲ್ಲಿ ದೊರೆಯುವಂತಹ ಹಸ್ತಪ್ರತಿಗಳನ್ನು ಪರಿಶೀಲನೆ ಮಾಡಿ ಅನೇಕ ಅಪರೂಪದ ಕೃತಿಗಳನ್ನು ಬರೆದಿದ್ದಾರೆ. ಇಲ್ಲಿಯವರೆಗೂ ಸುಮಾರು 50 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಹಾಗೂ ಸಂಪಾದಿಸಿ ಅನ್ವಾದಿಸಿ ಮತ್ತು ರಚನೆಕಾರರಾಗಿದ್ದಾರೆ. ಇವರಿಗೆ ಹಲವು ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಗಳು ದೊರೆತಿವೆ ಹಾಗೂ ಇತ್ತೀಚೆಗಷ್ಟೇ ಶ್ರೀ ಶ್ರವಣಬೆಳಗೊಳದ ಪ್ರತಿಷ್ಟಿತ ಗೊಮ್ಮಟೇಶ್ವರ ಪ್ರಶಸ್ತಿಯೂ ಕೂಡ ಇವರಿಗೆ ಲಭಿಸಿದೆ.
ಮತ್ತೊಂದು ಕೃತಿ ಅಂದರೆ ರತ್ನಮ್ಮ ನವರು ಬರೆದಿರುವಂತಹ ವೀರ ಜೈನ ಮಹಿಳೆಯರು ಎನ್ನುವ ಕೃತಿಯನ್ನು ಪ್ರಕಾಶನ ಮಾಡಿದವರು ಪಂಡಿತರತ್ನ ಹೆತ್ತೂರು ಶಾಂತರಾಜ ಶಾಸ್ತ್ರಿಯವರು ಮತ್ತು ಸಹಯೋಗ ಲಕ್ಷ್ಮೀ ಸರ್ವೀಸ್ ಟ್ರಸ್ಟ್ ಬೆಂಗಳೂರು ಇವರು. ಇವರಿಬ್ಬರೂ ಸೇರಿ ಇದನ್ನು 1998 ರಲ್ಲಿ ಪ್ರಕಟಣೆ ಮಾಡಿದ್ದಾರೆ. 30 ರೂ.ಗಳು ಈ ಕೃತಿಯ ಬೆಲೆ . ರತ್ನಮ್ಮನವರು ಶೈಕ್ಷಣಿಕವಾಗಿ ಅನೇಕ ಪ್ರಬಂಧ ಸ್ಪರ್ಧೆಗಳಲ್ಲಿ ಬೇರೆ ಬೇರೆ ಶಿಕ್ಷಣದ ಹಿಂದು ಪತ್ರಿಕೆಯ ಸ್ಪರ್ಧೆ, ಪಾರಿಜಾತ ಪ್ರಬಂಧ ಸ್ಪರ್ಧೆ ಹೀಗೆ ಅನೇಕ ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ಇದರಲ್ಲೆಲ್ಲಾ ಅನೇಕ ಪ್ರಶಸ್ತಿಯನ್ನು ಪಡೆದುಕೊಂಡವರು. ಮೂಲತಃ ಅವರು ಮೈಸೂರಿನವರು ಮತ್ತು ಜನಪ್ರಿಯ ಅಧ್ಯಾಪಕಿಯಾಗಿದ್ದವರು ಮತ್ತು ಕಾಲೇಜುಗಳ ಎಲ್ಲಾ ಸಂಘಸಂಸ್ಥೆಗಳ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಪ್ರೋಫೆಸರ್ ಜಿ. ಬ್ರಹ್ಮಪ್ಪನವರು ಇವರಿಂದ ಪಂಚನಮಸ್ಕಾರದ ದೀಕ್ಷೆಯನ್ನು ಪಡೆದಂತಹವರು. ಮೈಸೂರಿನ ಮಹಾರಾಜ ಮಹಾರಾಣಿ ಕಾಲೇಜಿನಲ್ಲಿ ಬೆಂಗಳೂರಿನ ಮಹಾರಾಣಿ ಕಾಲೇಜು, ಮಂಡ್ಯದ ಮಹಾರಾಣಿ ಕಾಲೇಜುಗಳಲ್ಲಿ ಪ್ರಾದ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಸ್ವ ಸಮಾಧಾನಕ್ಕಾಗಿ ಕನ್ನಡ ನಾಡಿನ ವೀರ ಮಹಿಳೆಯರು ಎನ್ನುವ ವಿಷಯಕ್ಕೆ ಪಿ ಹೆಚ್ ಡಿ ಗಾಗಿ ಮಹಾ ಪ್ರಬಂದವನ್ನು ಡಾ|| ಎಂ.ಡಿ ಬಸಂತರಾಜ್ ರವರ ಹತ್ತಿರ ಅವರು ಪ್ರಾರಂಭ ಮಾಡಿದರು. ಆದರೆ ಈ ಕೃತಿ 5 ವರ್ಷಗಳ ಸತತ ಸಂಶೋಧನೆಯ ನಂತರ ಈ ಕೃತಿ ಕಾಲದ ಚೌಕಟ್ಟಿನಲ್ಲಿ ಈ ಕೃತಿ ಯನ್ನು ಈ ಕೃತಿಯನ್ನು ಯುನಿವರ್ಸಿಟಿಗೆ ತಲುಪಿಸಲು ಸಾಧ್ಯವಾಗಲಿಲ್ಲ. ಪೌರಾಣಿಕ ಕಾಲದ ಕದಂಬ ಜೈನ ಗಂಗ ಹೀಗೆ ಹಲವಾರು ಸಂಸ್ಕ್ರತಿಗಳ ವೀರ ನಾರಿಯರ ಬಗ್ಗೆ ಈ ಕೃತಿಯಲ್ಲಿ ತಿಳಿಸಿದ್ದಾರೆ. ಇವರ ಈ ಕೃತಿ ಅನೇಕ ದಾನಿಗಳಿಂದ ಪ್ರಕಟಗೊಂಡಿತು. ಇವರು ಈ ಕೃತಿಯಲ್ಲಿ ಮೊದಲ ಆದ್ಯತೆ ನಮ್ಮ ವೀರ ಜೈನ ಮಹಿಳೆಯರ ಬಗ್ಗೆ ತಿಳಿಸಿದ್ದಾರೆ ಎಂದರೆ ನಮಗೆ ಅದು ಹೆಮ್ಮೆ ತರುವಂತಹ ವಿಷಯ. ಈ ಎರಡು ಪುಸ್ತಕಗಳ ಬಗ್ಗೆ ಪರಿಚಯ ಮಾಡಿಕೊಡಲು ಅವಕಾಶ ಮಾಡಿಕೊಟ್ಟ ತಮಗೆಲ್ಲಾ ನನ್ನ ಧನ್ಯವಾದಗಳು.














