ಜ್ಞಾನದೀಪಿಕೆಗಳು-11 / 13-08-2021/ jwalamalanews / 2021

ಇಂದು ಪರಿಚಯಿಸುತ್ತಿರುವ ಪುಸ್ತಕಗಳು ರತ್ನಕರಂಡಕ-ಶ್ರಾವಕಾಚಾರ ಮತ್ತು ಕನ್ನಡ ಕವಿಗಳು ಕಂಡ ಗೊಮ್ಮಟೇಶ್ವರ.

ಡಾ.ಪದ್ಮಿನಿ ನಾಗರಾಜು.

ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.

ಎಲ್ಲರಿಗೂ ನಮಸ್ಕಾರ, ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಸರಣಿಕಾರ್ಯಕ್ರಮ ಜ್ಞಾನ ದೀಪಿಕೆಗಳಿಗೆ ತಮ್ಮೆಲ್ಲರಿಗೂ ಆತ್ಮಿಯವಾದಂತಹ ಸ್ವಾಗತ.

ಈ ದಿನ ನಾನು ಎರಡು ಕೃತಿಗಳನ್ನು ತಮಗೆ ಪರಿಚಯ ಮಾಡಿಕೊಡುತ್ತಾ ಇದ್ದೀನಿ. ಅ ಪರಿಚಯದಲ್ಲಿ ಮೊಟ್ಟ ಮೊದಲಿನ ಕೃತಿ ರತ್ನಕರಂಡಕ – ಶ್ರಾವಕಾಚಾರ ಅನ್ನುವಂತಹದ್ದು ಸಮಂತ ಭದ್ರಚಾರ್ಯರು ಬರೆದಂತಹ ಈ ಮಹತ್ವದ ಕೃತಿಯನ್ನು ಮಿರ್ಜೆ ಅಣ್ಣರಾಯರವರು ಅನುವಾದ ಮಾಡಿರುತ್ತಾರೆ. ರತ್ನಕರಂಡಕ ಶ್ರಾವಕಚಾರ ಪ್ರತಿಯೊಬ್ಬ ಜೈನರ ಮನೆಯಲ್ಲಿ ಇರುವಂತಹ ಗ್ರಂಥ ಅನ್ನುವಂತಹದ್ದು ನಮ್ಮೆಲ್ಲರಿಗೂ ಗೊತ್ತಿದೆ. ಮತ್ತೊಂದು ಮಹತ್ತರ ಕೃತಿ ಕನ್ನಡ ಕವಿಗಳು ಕಂಡ ಗೊಮ್ಮಟೇಶ್ವರ ಅನ್ನುವಂತಹ ಕೃತಿ. ಈ ಕೃತಿಯನ್ನು ಸಂಪಾದನೆ ಮಾಡಿರುವಂತವರು ಡಾ|| ಟಿ ವಿ ವೆಂಕಟಾಚಲ ಶಾಸ್ತ್ರಿಗಳು ಅನ್ನುವಂತಹದ್ದು. ಬಹಳ ಮಹತ್ವದ ಎರಡು ಕೃತಿಗಳನ್ನು ನಿಮ್ಮ ಮುಂದೆ ತಂದಿದ್ದೇನೆ.

ಮೊದಲಿಗೆ ರತ್ನಕರಂಡಕ ಶ್ರಾವಕಚಾರ ಸಮಂತ ಭದ್ರಚಾರ್ಯರು ಬರೆದಂತಹ ಕೃತಿ. ಇದನ್ನು ಪಂಡಿತ ಸದಾ ಸುಖಜಿಯವರು ಹಿಂದಿಯಲ್ಲಿ ತಂದಿದ್ದರು. ಅದನ್ನು ಕನ್ನಡಕ್ಕೆ ತಂದಂತವರು ಅಣ್ಣರಾಯ್ ಮಿರ್ಜಿ ಯವರು. ಇದರಲ್ಲಿ ಬಹಳ ಮುಖ್ಯವಾಗಿ ಸೊಲ್ಲಾಪುರದ ಗುಲಾಬ್ಚಂದ್ ಹಿರಾಚಂದ್ ದೋಶೆ ಎನ್ನುವವರು ಜೈನ ಸಂಸ್ಕೃತಿ ಸಂರಕ್ಷಕ ಸಂಘದ ಮೂಲಕ ಈ ಕೃತಿಯನ್ನು 1960ರಲ್ಲಿ ಪ್ರಕಾಶನ ಮಾಡಿದರು ಇದರ ಬೆಲೆ ಅವಾಗ 15 ರೂಪಾಯಿ ಇತ್ತು. ಜೀವರಾಜ ಜೈನ ಗ್ರಂಥಮಾಲ ಅನ್ನುವಂತಹ ಈ ಗ್ರಂಥಮಾಲದ ಸಂಪಾದಕರಾದಂತಹ ಆನೆ ಉಪಾದ್ಯಾಯ ರವರು ಮತ್ತು ಪ್ರೋಫೆಸರ್ ಹಿರಾಲಾಲ್ ಚಂದ್ ಜೈನ್ ಅವರು ಈ ಕೃತಿಯ ಪ್ರಾರಂಭದಲ್ಲಿಯೇ ಆಚಾರ್ಯ ಶಾಸ್ತ್ರ. ಈ ಕೃತಿ ಎರಡು ವಿಧವಾಗಿದೆ

ಒಂದು ಮುನಿಗಳ ಆಚಾರಕ್ಕೆ ಇನ್ನೊಂದು ಗೃಹಸ್ಥರ ಆಚಾರಕ್ಕೆ ಸಂಬಂಧ ಉಳ್ಳದ್ದಾಗಿದೆ.

ಈ ರತ್ನಕರಂಡಕ ಶ್ರಾವಕಚಾರ ಸಂಸ್ಕೃತ ಪದ್ಯಗಳಿಂದ ರಚಿಸಲ್ಪಟ್ಟಿದೆ, ಇದರ ಭಾಷೆ ಮತ್ತು ಶೈಲಿಗಳು ಆಕರ್ಷಕವಾಗಿದೆ, ದಿಗಂಬರ ಜೈನ ಸಮಾಜದಲ್ಲಿ ಇದರ ಪ್ರತಿಷ್ಠೆ ಬಹಳ ದೊಡ್ಡದಾಗಿದೆ, ಅಲ್ಲದೆ ಶ್ರಾವಕರಲ್ಲಿ ಅತ್ಯಂತ ಲೋಕ ಪ್ರಿಯವಾಗಿದೆ.

ಸ್ವಾಮಿ ಸಮಂತ ಭದ್ರಾಚಾರ್ಯರ ಬಗ್ಗೆ ಹೇಳಬೇಕಾದರೆ, ಭಾರತ ವರ್ಷದ ಮಹಾನ್ ನೀತಿ ಶಾಸ್ತ್ರದಲ್ಲಿ ಇವರ ಸ್ಥಾನ ಉಚ್ಚತರಗತಿಯಂತಹದ್ದು. ಮತ್ತು ಅವರು ಸಮರ್ಥ ವಿದ್ವಾಂಸರು ಮತ್ತು ಲೇಖಕರು ಮಹಾತ್ಮರು ಹಾಗಿದ್ದರು. ಜೈನ ಧರ್ಮದ ಸಾಕ್ಷಾತ್ ಜೀವಂತ ಮೂರ್ತಿಗಳಂತೆಯೇ ಇದ್ದರು. ಈ ಕೃತಿಯನ್ನು ಬರೆದಂತಹ ಸಮಂತ ಭದ್ರ ಸ್ವಾಮಿಗಳು ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ಮುಖ್ಯ ಹೆಸರು ಇದೆ. ಆಪ್ತಮಿಮಾಂಸ, ಯಕ್ತಾನುಶಾಸನ, ಸ್ವಯಂಭೂಸ್ತೋತ್ರ, ಜಿನ ಸ್ತುತಿ, ರತ್ನಕರಂಡಕ-ಶ್ರಾವಕಾಚಾರ ಹೀಗೆ ಬಹಳಷ್ಟು ಕೃತಿಗಳನ್ನು ಬರೆದಿದ್ದಾರೆ.

ಸಮಂತ ಭದ್ರ ಸ್ವಾಮಿಯವರ ರತ್ನಕರಂಡಕ-ಶ್ರಾವಕಚಾರದಲ್ಲಿ ಇರುವುದನ್ನು ಗಮನಿಸಿದಾಗ, ಶ್ರಾವಕರ ಆಚಾರಗಳನ್ನು ವಿವರಿಸುತ್ತದೆ. ಈ ರತ್ನಕರಂಡಕ-ಶ್ರಾವಕಚಾರದಲ್ಲಿ ಮೊದಲನೇಯದು ದರ್ಶನಾಧಿಕಾರ ಇದರಲ್ಲಿ 41 ಸ್ತೋತ್ರಗಳಿವೆ. ಸತ್ಯಾರ್ಥದಲ್ಲಿ ಆಪ್ತ ಆಗಮ ಇವುಗಳ ಸ್ವರೂಪ ಏನು ಎಂಬುದನ್ನು ವಿವರಿಸಿ ಅದನ್ನು ತಿಳಿಸುತ್ತಾರೆ. ಜ್ಞಾನ ಅಧಿಕಾರ ಎನ್ನುವ ಎರಡನೇಯದರಲ್ಲಿ ಸುಮಾರು 42 ರಿಂದ 46 ಸೂತ್ರ ಪೂರ್ಣ 5 ಸೂತ್ರಗಳಲ್ಲಿ ಸಮ್ಯಜ್ಞಾನದ ಲಕ್ಷಣಗಳನ್ನು ಹೇಳುತ್ತಾರೆ. ಮೂರನೇಯದರಲ್ಲಿ ಚ್ಯಾರಿತ್ರಧಿಕಾರವನ್ನು ಹೇಳಿದರೆ, ನಾಲ್ಕನೇಯದು ಭಾವಾಧಿಕಾರದಲ್ಲಿ ಸಮ್ಮಿಚಾರಿತ್ರವನ್ನ ಧಾರಣಮಾಡುವುದಕ್ಕೆ ಬೇಕಾಗುವಂತಹ ಅವ‍ಶ್ಯಕತೆಗಳ ಬಗ್ಗೆ ತಿಳಿಸುತ್ತಾರೆ. ಕೊನೆಯದಾಗಿ ಸಲ್ಲೇಖನ ವ್ರತದ ಬಗ್ಗೆ ತಿಳಿಸಿದ್ದಾರೆ ಅಂದರೆ ಹೇಗೆ ಆಚರಿಸ ಬೇಕು ಅದರ ಸ್ವರೂಪ ಏನು ಅದರ ಅವಶ್ಯಕತೆ ಏನು ಎಂಬುವುದನ್ನು ಈ ಕೃತಿ ತಿಳಿಸಿದೆ. ಮತ್ತು ಸಮಾಧಿ ಮರಣದ  ಮಹಿಮೆ ಎಂದರೆ ಏನು ಸನ್ಯಾಸದ ಪೂರ್ವ ಸಿದ್ದತೆ ಹೇಗಿರ ಬೇಕು ಎಂಬುವುದನ್ನು ಪರಿಪೂರ್ವಕವಾಗಿ ರತ್ನಕರಂಡಕ-ಶ್ರಾವಕಾಚಾರ ಕೃತಿ ವಿವರಿಸುತ್ತದೆ.

ಮತ್ತೊಂದು ಬಹಳ ಪ್ರಮುಖವಾದಂತಹ ಕೃತಿ ಕನ್ನಡ ಕವಿಗಳು ಕಂಡ ಗೊಮ್ಮಟೇಶ್ವರ. ಈ  ಕೃತಿಯ ಸಂಪಾದಕರು ಡಾ|| ಡಿ ವಿ ವೆಂಕಟಾಚಲ ಶಾಸ್ತ್ರಿಗಳು. ಈ ಕೃತಿಯನ್ನು ಪ್ರಕಾಶಕ ಮಾಡಿದಂತವರು ಗೊಮ್ಮಟೇಶ್ವರ ಭಗವಾನ್ ಬಾಹುಬಲಿ ಮಸ್ತಕಾಭಿಷೇಕ ಸಮಿತಿ ಶ್ರವಣ ಬೆಳಗೊಳದವರು, ಇದರ ಪ್ರಥಮ ಮುದ್ರಣ 1990 ಎರಡನೇ ಮುದ್ರಣ 1993ರಲ್ಲಿ ಮಾಡಲಾಯಿತು. ಇದಕ್ಕೆ ಮುನ್ನುಡಿಯನ್ನು ಚಾರಿಕೀರ್ತಿ ಭಟ್ಟಾರಕರು ಹೇಳಿರುವುದು 1988ನೇ ಇಸವಿಯಲ್ಲಿ ಕುಂದ ಕುಂದ ಚಾರ್ಯರ ದ್ವೀಸಹಸ್ಥರ್ಥಾಬ್ಧ ಮಹೋತ್ಸವವನ್ನು ನಮ್ಮ ಕ್ಷೇತ್ರದಲ್ಲಿ ಮಾಡುವಾಗ ಇಲ್ಲಿಗೆ ಬಂದಿದಂತಹ  ಪ್ರಾಧ್ಯಾಪಕರು ಡಿ ವಿ

ವೆಂಕಟಾಚಲ ಶಾಸ್ತ್ರಿಗಳು ಒಂದು ಗ್ರಂಥವನ್ನು ತರುವ ಯೋಚನೆಯಲ್ಲಿ ಇರುವುದನ್ನು ಹೇಳಿದರು ಹಾಗ ಪ್ರಕಟಣೆಗೆ ಸೂಕ್ತ ಸಮಯ ಎಂದು ಯೋಚನೆಮಾಡಿ ಗೊಮ್ಮಟನ ಪದ್ಯಗಳನ್ನು ಸಂಗ್ರಹಿಸಿ ಕನ್ನಡ ಕವಿಗಳು ಕಂಡ ಗೊಮ್ಮಟೇಶ್ವರ ಎನ್ನುವ ಕಾವ್ಯ ಸಂಪುಟವನ್ನು ಮಹತ್ವದ ಗ್ರಂಥ ಎಂದು ಹೇಳುತ್ತಾರೆ. ಅನೇಕ ಲೇಖಕರು ಈ ಗ್ರಂಥವನ್ನು ಬರೆದ್ದಿದ್ದಾರೆ, ಬೊಪ್ಪಣ್ಣ ಪಂಡಿತರಿಂದ ಮಧುರ, ಗೊವಿಂದ ಪೈ, ಡಿ.ವಿ.ಜಿ, ಕುವೆಂಪು ಇನ್ನು ಮುಂತಾದವರು ಈ ಕೃತಿಗೆ ಸಂಕಲನದಲ್ಲಿ ಗೊಮ್ಮಟೇಶ್ವರನ ಪದ್ಯಗಳನ್ನು ಸೇರಿಸಿದ್ದಾರೆ.

(ಕುವೆಂಪುರವರ ಪದ್ಯವನ್ನು ಹೇಳಿದರು).

ತುಂಬಾ ಚೆಂದದ ಸಾಲುಗಳನ್ನು ಕುವೆಂಪುರವರು ಬರೆದಿದ್ದಾರೆ. ಇವೆಲ್ಲವೂ ಕನ್ನಡ ಕವಿಗಳು ಕಂಡ ಗೊಮ್ಮಟೇಶ್ವರ ಕೃತಿಯಲ್ಲಿದೆ, ಈ ಕೃತಿ ಸಿಕ್ಕಿದರೆ  ಓದಿ. ಇಂತಹ ಕೃತಿಗಳನ್ನು ಪರಿಚಯಿಸಲು ಮತ್ತೆ ಮುಂದಿನ ವಾರ ಬರುತ್ತೇನೆ ನಮಸ್ಕಾರ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್