ಧರ್ಮದಕುಡಿ -42 / 18-07-2021 / jwalamalanews / 2021

ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಎಲ್ಲಾ ವೀಕ್ಷಕರಿಗೂ ಸ್ವಾಗತ. ನಮ್ಮ ಇಂದಿನ ಕಾರ್ಯಕ್ರಮದಲ್ಲಿ ಯಾವ ಪುಟ್ಟ ಪ್ರತಿಭೆ ಇದ್ದಾರೆ ಅವರು ಏನ್ನು ಮಾಡುತ್ತಾರೆ ಎಂದು ನೋಡೊಣ. ಅದಕ್ಕೂ ಮುನ್ನ ಭಕ್ತಾಂಬರ ಸ್ತೋತ್ರದ ಎರಡನೇ ಶ್ಲೋಕದ ಭಾವಾರ್ಥವನ್ನು ತಿಳಿದುಕೊಳ್ಳೋಣ.

(ಸಂಸ್ಕೃತಿ ಎಂ ಜೈನ್ ಏಳನೀರು ರವರು ಭಕ್ತಾಂಬರ ಶ್ಲೋಕವನ್ನು ಬಹಳ ಸುಂದರವಾಗಿ ಹೇಳಿದರು).

(ಸಂಸ್ಕೃತಿ ಎಂ ಜೈನ್ ಏಳನೀರು ರವರು ಹೇಳಿದ ಭಕ್ತಾಂಬರ ಶ್ಲೋಕದ ಭಾವಾರ್ಥವನ್ನು ವಿವರಿಸಿದರು).

ವೀಕ್ಷಕರೆ ನಮ್ಮ ಇಂದಿನ ಕಾರ್ಯಕ್ರಮದಲ್ಲಿ ದೀಕ್ಷಾ ಆರ್ ಅಂಗಡಿ ಇದ್ದಾರೆ, ಬನ್ನಿ ಇವರ ಒಂದು ಕಿರುಪರಿಚಯವನ್ನು ವಿ ಟಿ ಮುಖಾಂತರ ನೊಂಡಿಕೊಂಡು ಬರೋಣ.

ಹೆಸರು ದೀಕ್ಷಾ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹೆಣ್ಣು ಮಗಳು ಇವಳು. ಧರ್ಮದ ವಿಷಯದಲ್ಲಿ ಆಸಕ್ತಿ ಇರುವ  ಈಕೆ ಶ್ಲೋಕಗಳನ್ನು ಚೆನ್ನಾಗಿ ಹೇಳುತ್ತಾಳೆ, ಐದನೇ ತರಗತಿ ಓದುತ್ತಿರುವ ಈಕೆಯ ತಂದೆ ತಾಯಿ ರಾಜು ಹಾಗೂ ಸ್ಮಿತ  ಅಂಗಡಿ, ಸಂಗೀತ, ಡ್ರಾಯಿಂಗ್, ಶೆಟಲ್ ಕಾಕ್, ಕೆರಂ, ಲೂಡೊ, ಯೋಗ, ದ್ಯಾನ ಹೀಗೆ ಉತ್ತಮ ಹವ್ಯಾಸಗಳನ್ನು ಹೊಂದಿದ್ದಾಳೆ. ಶ್ರವಣ ಬೆಳಗೊಳದ ರತ್ನಾತ್ರೇಯ ಅನ್ ಲೈನ್ ಪಾಠ ಶಾಲೆಯಲ್ಲಿ ಧರ್ಮ ಪಾಠ ಕಲಿಯುತ್ತಿದ್ದಾಳೆ. ಈಕೆ ಧಾರ್ಮಿಕವಾಗಿ ಬಹಳ ತಿಳಿಯುತ್ತಾ ಸಾಗಿದ್ದಾಳೆ, ಈಕೆಗೆ ಲೈಕ್ ಮತ್ತು ಕಮೆಂಟ್ ಮೂಲಕ ಪ್ರೊತ್ಸಾಹಿಸಿ..

ನಿರೂಪಕರು :- ಜೈ ಜಿನೇಂದ್ರ ದೀಕ್ಷಾ ಕಾರ್ಯಕ್ರಮಕ್ಕೆ ಸ್ವಾಗತ.

ದೀಕ್ಷಾ ಆರ್ ಅಂಗಡಿ :- ಜೈ ಜಿನೇಂದ್ರ.

ನಿರೂಪಕರು :- ಎಂದಿನಂತೇ ನಾವು ಮಕ್ಕಳು ಹೇಳುವ ಭಕ್ತಾಂಬರದ ಮೂಲಕ ನಮ್ಮ ಕಾರ್ಯ ಕ್ರಮವನ್ನು ಶುರು ಮಾಡೋಣ. ದೀಕ್ಷಾ ನೀವು ಭಕ್ತಾಂಬರದ ಹದಿನೆಂಟನೇ ಶ್ಲೋಕವನ್ನು ಹೇಳುತ್ತಿರ.

(ದೀಕ್ಷಾ ಆರ್ ಅಂಗಡಿ ರವರು 18ನೇ  ಭಕ್ತಾಂಬರ ಶ್ಕೋಕವನ್ನು ಹೇಳಿದರು).

ನಿರೂಪಕರು :- ಅದ್ಬುತವಾಗಿ ಭಕ್ತಾಂಬರ ಸ್ತೋತ್ರವನ್ನ ಹೇಳಿದ್ದಿರಾ, ತುಂಬ ಭಕ್ತಿಯಿಂದ ಹೇಳಿ ನಮ್ಮ ಕಾರ್ಯಕ್ರಮಕ್ಕೆ  ಒಂದು ಶುಭಾರಂಭವನ್ನು ಕೊಟ್ಟಿದ್ದೀರಾ. ವೀಕ್ಷಕರೆ ನಾವೇಲ್ಲರೂ ಕೂಡ ಭೂತಕಾಲದ ತೀರ್ಥಂಕರರು ವರ್ತಮಾನಕಾಲದ ತೀರ್ಥಂಕರರ ಹೆಸರು ಹಾಗೂ ಭಷಿಷ್ಯತ್ಕಾಲದ ತೀರ್ಥಂಕರರ ಹೆಸರು ಇದನ್ನೇಲ್ಲಾ ಕೇಳಿದ್ದೀವಿ. ಅದರೆ ದೀಕ್ಷಾ ಅವರು ನಮಗೆ ವಿದೇಯ ಕ್ಷೇತ್ರದ ತೀರ್ಥಂಕರರ ಹೆಸರನ್ನು ಹೇಳುತ್ತಾರೆ. ದೀಕ್ಷಾ ವಿದೇಯ ಕ್ಷೇತ್ರದ ತೀರ್ಥಂಕರರ ಹೆಸರನ್ನು ಹೇಳುತ್ತಿರ.

ದೀಕ್ಷಾ ಆರ್ ಅಂಗಡಿ :- ವಿದೇಯ ಕ್ಷೇತ್ರದ 20 ತೀರ್ಥಂಕರರ ಹೆಸರನ್ನು ಹೇಳುತ್ತೇನೆ.

ಸಿಮಂದಿರ, ಯುಗಮಂದಿರ, ಬಾಹು, ಸುಬಾಹು, ಸುಜಾತ, ಸ್ವಯಂ ಪ್ರಭು, ವೃಷಬಾನನ, ಅನಂತ ವೀದ್ಯಾ, ಸುರಪ್ರಭ, ವಿಶಾಲ ಕೀರ್ತಿ, ವಜ್ರದದ, ಚಂದ್ರಾನನ, ಭದ್ರಬಾಹು, ಬುಜಂಗಮ, ಈಶ್ವರ, ನೇಮಪ್ರಭ, ವೀರಸೇನ, ಮಹಾಭದ್ರ.

ನಿರೂಪಕರು :- ತುಂಬ ಚೆನ್ನಾಗಿ ವಿದೇಯ ಕ್ಷೇತ್ರದ ತೀರ್ಥಂಕರರ ಹೆಸರನ್ನು ಹೇಳಿದ್ರಿ. ನಾವು ತುಂಬ ಅಪರೂಪವಾಗಿ ವಿದೇಯ ಕ್ಷೇತ್ರದ ತೀರ್ಥಂಕರರ ಹೆಸರನ್ನು ಕೇಳುತ್ತೀವಿ, ಅಂತಹದರಲ್ಲಿ ನೀವು ಕಲಿತು ಹೇಳಿದ್ದೀರ ವೆರಿ ನೈಸ್ ದೀಕ್ಷಾ,

ಹೀಗ ನಾವು ದೀಕ್ಷಾ ಅವರು ಹೇಳಿದಂತಹ  ಭಕ್ತಾಂಬರ ಮತ್ತು ವಿದೇಯ ಕ್ಷೇತ್ರದ ತೀರ್ಥಂಕರರ ಹೆಸರನ್ನುಕೇಳಿಯಾಯಿತು. ಅವರು ತುಂಬ ಚೆನ್ನಾಗಿ ಶ್ಲೋಕ ಸ್ತೋತ್ರಗಳನ್ನು ಕೂಡ ಹೇಳುತ್ತಾರೆ. ಅದರಲ್ಲಿ ಇವತ್ತು ಅವರು ಜ್ಞಾನ ಸ್ವರೂಪವನ್ನು ಹೇಳಬೇಕಾಗಿ ಕೇಳಿ ಕೋಳ್ಳುತ್ತೇನೆ.

(ದೀಕ್ಷಾ ಆರ್ ಅಂಗಡಿ ರವರು ಸ್ವರೂಪವನ್ನು ಹೇಳಿದರು).

ನಿರೂಪಕರು :- ತುಂಬ ಚೆನ್ನಾಗಿ ಹೇಳಿದ್ದೀರ. ಹೀಗೆ ಅಭ್ಯಾಸ ಮಾಡಿ ಬೇರೆ ಬೇರೆ ಶ್ಲೋಕಗಳನ್ನು ಕಲಿಯಿರಿ.

ಹೀಗ ವೀಕ್ಷಕರೆ ನಮಗೆ ಕೋವಿಡ್ ನಂತರ ಪ್ರಾಣಯಾಮ ಲಾಭಗಳ ಬಗ್ಗೆ ನಾವು ಅಂತರ್ಜಾಲದಲ್ಲಿ ನೋಡಿದ್ದೀವಿ, ಪ್ರಾಣಯಾಮ ಮಾಡುವುದರಿಂದ ಮಾನಸಿಕ ಮತ್ತು ಉಸಿರಾಟದ ತೊಂದರೆಯಲ್ಲಿ ಕಡಿಮೆ ಮಾಡಬಹುದು ಎಂದು ನಮಗೆ ಗೊತ್ತು, ಇವತ್ತು ದೀಕ್ಷಾ ರವರು ನಮಗೆ ಪ್ರಾಣಯಾಮ ಮಾಡುವುದನ್ನು ತೋರಿಸಿ ಕೊಡುತ್ತಾರೆ.

(ದೀಕ್ಷಾ ಆರ್ ಅಂಗಡಿ ರವರು ಪ್ರಾಣಯಾಮ ಮಾಡುವುದನ್ನು ತೋರಿಸಿ ಕೊಟ್ಟರು).

ನಿರೂಪಕರು :- ದೀಕ್ಷಾ ನೀವು ತುಂಬ ಚೆನ್ನಾಗಿ ಪ್ರಾಣಯಾಮ ಮಾಡುವುದನ್ನು ತಿಳಿಸಿದಿರಿ, ಇವತ್ತು ಇದನ್ನು ನೋಡಿ ನಮ್ಮ ವೀಕ್ಷಕರಲ್ಲಿ ಸ್ವಲ್ಪ ಜನವಾದರು ಪ್ರತಿನಿತ್ಯ ಅಭ್ಯಾಸ ಮಾಡುತ್ತಾರೆ ಹಾಗೂ ಪ್ರಾಣಯಾಮದ ಲಾಭವನ್ನು ಪಡೆಯುತ್ತಾರೆ ಎಂದು ಹೇಳುತ್ತಾ, ದೀಕ್ಷಾ ರವರು ದಿನನಿತ್ಯ ಮನೆಯಲ್ಲಿ ಭಜನೆ ಕೂಡ ಮಾಡುತ್ತಾರೆ, ತುಂಬಾ ಚೆನ್ನಾಗಿ ಹಾಡು ಹೇಳುತ್ತಾರೆ, ಇವತ್ತು ಒಂದು ಭಕ್ತಿ ಗೀತೆಯನ್ನು ಹೇಳಬಹುದ.

(ದೀಕ್ಷಾ ಆರ್ ಅಂಗಡಿ ರವರು ಭಕ್ತಿ ಗೀತೆಯನ್ನು ಹೇಳಿದರು).

ನಿರೂಪಕರು :- ವೆರಿ ನೈಸ್ ದೀಕ್ಷಾ ತುಂಬಾನೆ ಚೆನ್ನಾಗಿ ಹಾಡು ಹೇಳಿದ್ದೀರ, ಇದೇ ರೀತಿ ದಿನ ನಿತ್ಯ ಭಜನೆಯನ್ನು ಅಭ್ಯಾಸ ಮಾಡಿ.

ವೀಕ್ಷಕರೆ ನೋಡಿದ್ದೀರಿ ಅಲ್ವಾ ಐದನೇ ತರಗತಿಯ ಈ ಪುಟ್ಟ ಬಾಲಕಿ ಎಷ್ಟು ಚೆನ್ನಾಗಿ ನಮ್ಮ ಕಾರ್ಯ ಕ್ರಮದಲ್ಲಿ ಬಂದು ಶ್ಲೋಕ ಸ್ತೋತ್ರ ಹಾಡು ಅದರ ಜೊತೆಗೆ ಪ್ರಾಣಯಾಮ ಕೂಡ ಹೇಳಿಕೊಟ್ಟರು. ಇದೇ ರೀತಿ ಇನ್ನೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸಾಧನೆಯನ್ನು ಮಾಡಲಿ ಎಂದು ಆಶಿಸೋಣ. ದೀಕ್ಷಾ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಧನ್ಯವಾದಗಳು.

ಜೈ ಜಿನೇಂದ್ರ.

ಈಗ ನಿಮ್ಮ ಮುಂದೆ ಧರ್ಮದ ಪಾಠ ಹಾಗೂ ರತ್ನಾತ್ರೇಯ ಬಾಲ ಬೋಧೆ ಪ್ರಸಾರವಾಗಲ್ಲಿದೆ ಇದನ್ನು ನೋಡಿ  ಕಾರ್ಯಕ್ರಮದ ಕೊನೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಈ ಕೂಡಲೇ ವಾಟ್ಸ್ ಆ್ಯಪ್ ಮಾಡಿ.

 

‘ಧರ್ಮದ ಕುಡಿ’

ಧರ್ಮದ ಬೆಳೆ ಬಿತ್ತೋಣ

‘ಧರ್ಮ ಪಾಠ’

ಧೀರಜ್ ಜೈನ್, ಹೊಳೆನರಸಿಪುರ.

ಜೈ ಜಿನೇಂದ್ರ ಮಕ್ಕಳೇ ಜ್ವಾಲಮಾಲ ಡಾಟ್ ನ್ಯೂಸ್ ಸಮರ್ಪಿಸುವ ಜೈನ ಧಾರ್ಮಿಕ ಪಾಠ ಮಾಲಿಕೆ ಕಾರ್ಯಕ್ರಮಕ್ಕೆ ನಿಮ್ಮಗೆಲ್ಲರಿಗೂ ಆತ್ಮಿಯವಾದಂತಹ ಸ್ವಾಗತ.

ಇಂದಿನ ಸಂಚಿಕೆಯಲ್ಲಿ ವರ್ತಮಾನ ಕಾಲದ 24 ತೀರ್ಥಂಕರರಲ್ಲಿ ಕೊನೆಯ ತೀರ್ಥಂಕರರಾದ ಶ್ರೀ ಶ್ರೀ ಶ್ರೀ 1008 ವರ್ಧಮಾನ ತೀರ್ಥಕಂರರ ಬಗ್ಗೆ ತಿಲಿದು ಕೋಳ್ಳೊಣ.

ವರ್ಧಮಾನ ತೀರ್ಥಕಂರರು ಭರತ ಕ್ಷೇತ್ರದ  ಕುಂಡಲ ಪುರ ಅನ್ನುವಂತಹ ಪ್ರಾತ್ಯದ ರಾಜನಾಗಿರುವಂತಹ ಸಿದ್ದಾರ್ಥ ರಾಜ ಅವರ ಮಡದಿಯಾದ ತ್ರೀಶಿಲಾದೇವಿಯ ಗರ್ಭದಲ್ಲಿ ವರ್ಧಮಾನ ತೀರ್ಥಕಂರರು ಜನ್ಮವನ್ನು ಪಡೆಯುತ್ತಾರೆ. ಸುಮಾರು ಏಳು ಧನಸ್ಸಿನಷ್ಟು ಎತ್ತರ, 72 ವರ್ಷ ಆಯಸ್ಸನ್ನು ಹೊಂದಿರುತ್ತಾರೆ. ಅವರಿಗೆ ಸಮಾರು ಹೆಸರುಗಳಿವೇ ಸನ್ಮತಿ, ಮಹಾವೀರ ಹಾಗೂ ಮುಂತಾದವು.

ಸನ್ಮತಿ  ಎಂದು ಹೆಸರು ಬರಲು ಕಾರಣವೇನೆಂದರೆ, ಒಮ್ಮೆ ಆಕಾಶದಲ್ಲಿ ಸಂಜಯ ಮತ್ತು ವಿಜಯ ಎಂಬ ಇಬ್ಬರು ಚಾರಣ ಮುನಿಗಳು ಹೋಗುತ್ತಿದಂತಹ ಸಂದರ್ಭದಲ್ಲಿ ಅವರಿಗೆ ಆಗಮದಲ್ಲಿ ಸಂದೇಹ ಬರುತ್ತದೆ, ಮಗುವಾಗಿದಂತಹ ವರ್ಧಮಾನ ಸ್ವಾಮಿಯ ದರ್ಶನವನ್ನು ಮಾಡಿ ಅವರ ಸಂದೇಹ ನಿವಾರಣೆಯಾಗುತ್ತದೆ. ಚಾರಣ ಮುನಿಗಳು ವರ್ಧಮಾನ ತೀರ್ಥಕಂರರಿಗೆ ಸನ್ಮತಿ ಎನ್ನುವ ಹೆಸರನ್ನು ಇಡುತ್ತಾರೆ.

ಮಹಾವೀರ ಎಂದು ಹೆಸರು ಬರಲು ಕಾರಣವೇನೆಂದರೆ, ಚಿಕ್ಕ ಬಾಲಕನಾಗಿದ್ದಾಗ ಉದ್ಯಾನ ವನದಲ್ಲಿ ಆಟವಾಡ ಬೇಕಾದರೆ ಸಂಗಮ ದೇವ ಎನ್ನುವವರು ಪರೀಕ್ಷೆ ಮಾಡಬೇಕೆಂದು ಸರ್ಪದ ರೂಪದಲ್ಲಿ ಬರುತ್ತಾರೆ. ವರ್ಧಮಾನ ತೀರ್ಥಕಂರರು ಅ ಸರ್ಪದ ಮೇಲೆ ಹತ್ತಿ ನರ್ತನವನ್ನು ಮಾಡುತ್ತಾರೆ, ಅದನ್ನು ಕಂಡಂತಹ ಸಂಗಮ ದೇವ ಇವರಿಗೆ ಮಹಾವೀರ ಎನ್ನುವ ಬಿರುದನ್ನು ಕೊಡುತ್ತಾರೆ. ಈ ರೀತಿ ಅವರಿಗೆ ಈ ಹೆಸರುಗಳಿಂದ ಕರೆಯುತ್ತಾರೆ.

ಜಾತಿ ಸ್ಮರಣೆ ಯಿಂದ ಮತ್ತು ಅವರ ಹಿಂದಿನ ಭವಗಳ ನೆನಪು ಬರುತ್ತದೆ ಅ ನೆನಪಿನಿಂದ ಎಲ್ಲಾ ವೈಭೋಗವನ್ನು ಬಿಟ್ಟು ವೈರಾಗ್ಯ ಹೊಂದುತ್ತಾರೆ. 12 ವರ್ಷಗಳ ಕಾಲ ಕಠಿಣವಾದಂತಹ ತಪಸ್ಸನ್ನು ಮಾಡುತ್ತಾರೆ, ಜೃಂಬಿಕ ಎನ್ನುವ ಗ್ರಾಮದ ರುಜುಕುಲಾ ಎಂಬ ನದಿಯ ತೀರದಲ್ಲಿ ಮತ್ತಿಯ ಮರದ ಕೆಳಗಡೆ ಕೂತು ಪ್ರತಿಮ ಯೋಗದಲ್ಲಿ ಅವರು ಧ್ಯಾನವನ್ನು ಮಾಡುವಾಗ ಅವರಿಗೆ ಕೇವಲ ಜ್ಞಾನವನ್ನು ಪ್ರಾಪ್ತಿಯಾಗುತ್ತದೆ.

ಒಮ್ಮೆ ಮುನಿ ದೀಕ್ಷೆ ಪಡೆದು ಕೊಂಡ ಮೇಲೆ ಪ್ರಪ್ರಥಮವಾಗಿ ಆಹಾರವನ್ನು ಸ್ವೀಕಾರ ಮಾಡಲು ಕೂಲ ಗ್ರಾಮಕ್ಕೆ ಬರುತ್ತಾರೆ. ಕೂಲ ಗ್ರಾಮದ ರಾಜನಾದ ಕೂಲರಾಜ ಮೊಟ್ಟ ಮೊದಲ ಬಾರಿಗೆ ಆಹಾರವನ್ನು ಕೊಡುತ್ತಾರೆ. ಒಮ್ಮೆ ಸ್ಮಶಾಣದಲ್ಲಿ ರಾತ್ರಿ ಕಠಿಣವಾದ ತಪಸ್ಸು ಮಾಡಬೇಕಾದರೆ ಅ ಒಂದು ಪ್ರದೇಶದಲ್ಲಿ ಬೇತಾಳ, ಸಿಂಹ, ಆನೆ, ಬಿರುಗಾಳಿ ಎಲ್ಲವು ಬಂದು ಅವರಿಗೆ ಉಪಸರ್ಗವನ್ನು ಕೊಡುತ್ತವೆ, ಅದರು ಕೂಡ ಉಪಸರ್ಗಕ್ಕೆ ಬಗ್ಗದೆ ತಪಸ್ಸಿನಲ್ಲಿ ಮಗ್ನರಾಗಿರುತ್ತಾರೆ.

ಜೃಂಬಿಕ ಎನ್ನುವ ಗ್ರಾಮದ ರುಜುಕುಲಾ ಎಂಬ ನದಿಯ ತಟದಲ್ಲಿ ಮತ್ತಿಯ ಮರದ ಕೆಳಗಡೆ ಕೇವಲ ಜ್ಞಾನ ಪ್ರಾಪ್ತಿಯಾಗುತ್ತದೆ. ಅವರ ಸಂವತ್ಸರಣ

ರಚನೆಯನ್ನು ಕುಬೇರ ಮಾಡುತ್ತಾರೆ, ಈ ಒಂದು ಸಂವತ್ಸರಣ ರಚನೆಯಲ್ಲಿ ಅನೇಕ ಜನರು ಸಂದೇಹವನ್ನು ನಿವಾರಣೆ ಮಾಡಿಕೊಳ್ಳುತ್ತಾರೆ. ಕೊನೆಯಲ್ಲಿ ಸಂವತ್ಸರಣ ವಿಸರ್ಜನೆಯನ್ನು ಮಾಡಿ ಇಂದಿನ ಬಿಹಾರ ರಾಜ್ಯದ ಪಾವಪುರಿಗೆ ಬಂದು ಮೋಕ್ಷವನ್ನು ಪಡೆಯುತ್ತಾರೆ. ಸಿದ್ದ ಪರಮೇಶ್ಟಿಗಳಾಗುತ್ತಾರೆ.

ಮಹಾವೀರ ಸ್ವಾಮಿಯ ಲಾಂಛನ ಸಿಂಹ, ಯಕ್ಷ ಮಾತಂಗ, ಯಕ್ಷಿಣಿ ಸಿದ್ದಾಯಿಣಿ.

ಈ ರೀತಿಯಾಗಿ ನಮ್ಮ ವರ್ತಮಾನಕಾಲದ ಪರಂಪರೆಯಲ್ಲಿ 24  ತೀರ್ಥಂಕರರು ಕೂಡ ಹಾಗಿ ಹೋಗುತ್ತಾರೆ.  ವರ್ಧಮಾನ ತೀರ್ಥಕಂರರು ಮಹಾವೀರ ತೀರ್ಥಕಂರರು ಕೊನೆಯ ತೀರ್ಥಂಕರರಾಗಿರುತ್ತಾರೆ, ಇಷ್ಟು ಸಂಚಿಕೆಯಲ್ಲಿ ನಾವೇಲ್ಲರು ವರ್ತವಾನ ತೀರ್ಥಂಕರರ ಬಗ್ಗೆ ಮಾಹಿತಿಯನ್ನು ಪಡೆದು ಕೊಂಡಿರುತ್ತೇವೆ, ಮುಂದಿನ ಸಂಚಿಕೆಯಲ್ಲಿ ಬೇರೆ ಬೇರೆ ಜೈನ ಧರ್ಮಕ್ಕೆ ಸಂಬಂಧ ಪಟ್ಟಂತೆ ಮಾಹಿತಿಗಳನ್ನು ಕೊಡುವ ಪ್ರಯತ್ನ ಮಾಡುತ್ತೇವೆ. ಜೈನ ಧರ್ಮವನ್ನು ಪರಿಪಾಲನೆ ಮಾಡಿ ಎಂದು ಕೇಳಿ ಕೊಳ್ಳುತ್ತಾ ಮುಂದಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ. ಜೈ ಜಿನೇಂದ್ರ.

 

ರತ್ನತ್ರಯ ಜೈನ ಬಾಲಬೋಧೆ

ಪ್ರೇರಣೆ

ಪೂಜ್ಯ ಮಾತೃಶ್ರೀ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಮಾರ್ಗ ದರ್ಶನ

ಶ್ರೀ ಡಿ ಸುರೇಂದ್ರ ಕುಮಾರ್

ರಾಷ್ಟ್ರೀಯ ಕಾರ್ಯಧ್ಯಕ್ಷರು  ಭಾರತೀಯ ಜೈನ್ ಮಿಲನ್

ಪ್ರಾಯೋಜಕರು

ಬಾರತೀಯ ಜೈನ್ ಮಿಲನ್, ವಲಯ – 8

ಸಹಕಾರ : ಜೈನ್ ಮಿಲನ್ ಬೆಳ್ತಂಗಡಿ

ಶ್ರೀ ಮುನಿರಾಜ ರೆಂಜಾಳ :- ಮಕ್ಕಳೇ ಜೈ ಜಿನೇಂದ್ರ ನಿಮಗೆ ವ್ರತ ಸ್ವೀಕಾರವಾಗಿದೆ ಎಂದು ತಿಳಿದು ಕೊಳ್ಳುತ್ತೇನೆ, ಎಂಟು ವರ್ಷ ಹಾಗಿರುವ ವ್ರತ ಸ್ವೀಕರ ಹಾಗಿರುವಂತವರೆಲ್ಲಾ ಜನಿವಾರ ಹಾಕುತ್ತಾರೆ. ಜನಿವಾರದಲ್ಲಿ ಮೂರು ಎಳೆ ಇದೆ, ಜನಿವಾರದ ಮೂರು ಎಳೆ ಸೂಚಿಸುವುದು ಜೈನ ಧರ್ಮದ ಅತ್ಯಂತ ಮುಖ್ಯ ಸಿದ್ದಾಂತವಾದಂತಹ ರತ್ನತ್ರೇಯವನ್ನು ಸೂಚಿಸುತ್ತದೆ. ರತ್ನತ್ರೇಯ ಯಾವುವು ಎಂದರೆ ಸಮ್ಯಗ್ಚರ್ಶನ, ಸಮ್ಯಜ್ಞಾನ, ಸಮ್ಯಗ್ಚಾರಿತ್ರ. ಹಾಗೆಂದೇ ಸತ್ಯ, ಪ್ರಾಮಾಣಿಕಥೆ, ಪರಿಶುದ್ಧತೆಯಿಂದ ಕೂಡಿದ ಸರಿಯಾದ ನಂಬಿಕೆ, ಯುಕ್ತವಾದ ಜ್ಞಾನ, ಯೋಗ್ಯವಾದ ಕ್ರಿಯೆ ಎಂದರ್ಥ. ಇನ್ನೂ ಸರಳವಾಗಿ ಹೇಳುವುದ್ದಾದರೆ, ಜೈನ ಧರ್ಮದ ಮೇಲೆ ದೃಡವಾದ ನಂಬಿಕೆ ಇರುವಂತಹದ್ದು ಸಮ್ಯಗ್ಚರ್ಶನ, ಜೈನ ಧರ್ಮದ ತತ್ವ ಸಿದ್ದಾಂತವನ್ನು ತಿಳಿದು ಕೊಳುವುದಕ್ಕೆ ಪ್ರಯತ್ನಿಸುವುದು ಸಮ್ಯಜ್ಞಾನ, ಮತ್ತು ತಾನು ನಂಬಿದ ಜೈನ ಧರ್ಮದ ಸಿದ್ದಾಂತಗಳನ್ನ ನಾನು ತಿಳಿದಿರುವುದನ್ನ ನಾನು ಒಳ್ಳೆ ಸಿದ್ದಾಂತವನ್ನು ಆಚರಣೆಗೆ ತರುವುದನ್ನು  ಸಮ್ಯಗ್ಚಾರಿತ್ರ. ಹೀಗೆ ನಾನು ಜೈನ ಧರ್ಮದ ತತ್ವ ಸಿದ್ದಾಂತಗಳನ್ನು ನಂಬುತ್ತೇನೆ ಆಚರಿಸುತ್ತೇನೆ ಮತ್ತು ಅದನ್ನು ತಿಳಿಯುತ್ತೇನೆ ಎಂದು ಹೇಳುವುದೆ ನಾವು ಹಾಕುವ ಜನಿವಾರದ ಮೂರು ಎಳೆಯ ಅರ್ಥ. ಈ ರತ್ನತ್ರಯಗಳೆ ನಮ್ಮ ಧಾರ್ಮಿಕ ಜೀವನದ ಅಡಿಪಾಯ ಎಂದು ಅನಿಸಿಕೊಳ್ಳುತ್ತದೆ. ಜನಿವಾರದಲ್ಲಿ ಎರಡು ಗಂಟುಗಳಿರುತ್ತದೆ ಒಂದು ಬ್ರಹ್ಮ ಗಂಟು ಇನ್ನೊಂದು ಪವಿತ್ರ ಗಂಟು. ಮೊದಲಿಗೆ ಜನಿವಾರ ಗಂಟು ಹಾಕುವಾಗ ಪವಿತ್ರ ಗಂಟು ಹಾಕುತ್ತಾರೆ. ಪವಿತ್ರ ಗಂಟು ಎಂದರೆ, ಸಮ್ಯಗ್ಚರ್ಶನ, ಸಮ್ಯಜ್ಞಾನ, ಸಮ್ಯಗ್ಚಾರಿತ್ರ. ಎಂಬ ರತ್ನತ್ರೆಯವನ್ನು ಸೇರಿಸಿ ಮಾಡಿದಂತಹ ಪವಿತ್ರ ಗಂಟು, ನಂತರ ಬ್ರಹ್ಮ ಗಂಟು. ಬ್ರಹ್ಮ ಗಂಟು ಎಂದರೆ ಬ್ರಹ್ಮ ಎಂದರೆ ಆತ್ಮ ಎಂದು ಅರ್ಥ, ಆದರಿಂದ ಈ ಪವಿತ್ರ ವಾಗಿರುವಂತಹ ರತ್ನತ್ರೆಯಗಳು ನಮ್ಮ ಆತ್ಮಗಳಿಗೆ ನಿಕಟವಾಗಿ ಇರಬೇಕು ಎನ್ನುವುದನ್ನು ಸೂಚಿಸುವುದಕ್ಕಾಗಿ ಪವಿತ್ರ ಗಂಟು ಮತ್ತು ಬ್ರಹ್ಮ ಗಂಟು ಹಾಕಿ ಜನಿವಾರವನ್ನು ಹಾಕಿಕೊಳ್ಳುತ್ತೇವೆ, ಅದು ರತ್ನತ್ರೆಯ ದಾರಣದ ಸೂಚಕವಾಗಿರುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ಅಮ್ಮಂದಿರು ವರ್ಷದಲ್ಲಿ ಒಂದು ದಿನ ಹಾಕುತ್ತಾರೆ. ಎಕೆಂದರೆ ತಿಂಗಳ ತೊಂದರೆ ಇತ್ಯಾದಿ ಇರುವುದರಿಂದ ಅಮ್ಮ ಹಾಕಬೇಕಾದ ಜನಿವಾರವನ್ನು ಅಪ್ಪ ಹಾಕುತ್ತಾರೆ ಹಾಗಾಗಿ ಆರು ಎಳೆಗಳು ಇರುತ್ತವೆ. ಉತ್ತರ

ಭಾರತದಲ್ಲಿ ಜನಿವಾರದ ಬದಲು ರಕ್ಷಬಂಧವನ್ನು ಕಟ್ಟಿಕೊಳುತ್ತಾರೆ. ಒಟ್ಟಿನಲ್ಲಿ ಎಂಟು ವರ್ಷ ವಯಸ್ಸಿನ ಪ್ರತಿಯೊಂದು ಮಗು ಕೂಡ ವ್ರತ ಸ್ವೀಕಾರ ಮಾಡಿದಾಗ ಜನಿವಾರ ಹಾಕುತ್ತೇವೆ, ಅದನ್ನು ಜೀವಮಾನ ಪರಿಯಂತ ಮರಣ ಹೊಂದುವ ವರೆಗೂ ಅಜನಿವಾರ ನಮ್ಮ ದೇಹದ ಮೇಲೆ ಇದ್ದು ನಮ್ಮನ್ನು ಎಚ್ಚರಿಸಬೇಕು. ದೀಕ್ಷೆಯನ್ನು ಸ್ವೀಕರಿಸಿದರೆ ಜನಿವಾರದ ಅವಶ್ಯಕತೆ ಇಲ್ಲ. ಹಾಗಾಗಿ ಜನಿವಾರದ ಮೂರು ಎಳೆಗಳು ಸೂಚಿಸುವ ಸಮ್ಯಗ್ಚರ್ಶನ, ಸಮ್ಯಜ್ಞಾನ, ಸಮ್ಯಗ್ಚಾರಿತ್ರಗಳನ್ನ ಸದಾಕಾಲ ನೆನಪಿನಲ್ಲಿರಬೇಕು. ಜೈನ ಧರ್ಮದ ಸಿದ್ದಾಂತಗಳ ಮೇಲೆ ಶ್ರದ್ದೆ ನಂಬಿಕೆ ಇರಬೇಕು, ತಿಳಿದಿರುವುದನ್ನ ನಂಬಿರುವುದನ್ನ ಪ್ರಮಾಣಿಕವಾಗಿ ಆಚರಿಸ ಬೇಕು ಇದು ನಮ್ಮ ಧರ್ಮ ಮಕ್ಕಳೇ .

ಜೈ ಜಿನೇಂದ್ರ

ಈ ವಾರದ ಪ್ರಶ್ನೆಗಳು

  1. ಹಿಂದಿನ ಪಾಠದಲ್ಲಿ ಏನು ತಿಳಿದುಕೊಂಡಿರಿ ?
  2. ಶ್ರೀ ವರ್ಧಮಾನ ತೀರ್ಥಂಕರರ ತಂದೆ ತಾಯಿ ಹೆಸರೇನು ?
  3. ಅವರ ಆಯಸ್ಸು ಮತ್ತು ಎತ್ತರ ಎಷ್ಟು?
  4. ಅವರ ಬಾಲ್ಯದಲ್ಲಿ ಚಾರಣ ಮುನಿಗಳು ನೀಡಿದ ಹೆಸರೇನು ?
  5. ಅವರಿಗೆ ಮಹಾವೀರ ಎಂಬ ಹೆಸರು ಬರಲು ಕಾರಣವೇನು ?
  6. ಜನಿವಾರದ ಮೂರು ಎಳೆ ಏನನ್ನು ಸೂಚಿಸುತ್ತದೆ ?
  7. ಬ್ರಹ್ಮ ಎಂದರೆ ಏನು ?

    ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

    ಜ್ವಾಲಮಾಲ ಡಾಟ್ ನ್ಯೂಸ್