ಅತಿಶಯ ಕ್ಷೇತ್ರ ಜೈನರಗುತ್ತಿ, ಅಡಗೂರು. ವೀಕ್ಷಕರೆ ಈ ಕ್ಷೇತ್ರಕ್ಕೆ ನಾವು ಚಾತುರ್ಮಾಸ ಕಳಸ ಸ್ಥಾಪನೆ ಕಾರ್ಯಕ್ರಮಕ್ಕೆ ಎಂದು ಭೇಟಿ ನೀಡಿದಾಗ, 7ನೇ ದಿನದ ಶ್ರೀ 1008 ಸಿದ್ದಚಕ್ರ ಆರಾಧನ ಮಹೋತ್ಸವ ಭಕ್ತಿಪೂರ್ವಕವಾಗಿ ನಡೆಯುತ್ತಿತ್ತು. ಬಳಿ ಮಡಿ ಯುಟ್ಟು ಆರಾಧನೆಯಲ್ಲಿ ಭಾಗವಹಿಸಿದ ಶ್ರಾವಕಿಯರ ಭಕ್ತಿ ಕ್ಷೇತ್ರದಲ್ಲಿ ಸಂಭ್ರಮದ ವಾತಾವರಣದ ಸೃಷ್ಟಿಸಿತ್ತು.
ಹಾಸನದ ಶ್ರೀ ವೀರೇಂದ್ರ ಬೆಗುರು ರವರು ಕಾರ್ಯಕ್ರಮದ ಸಮಯದಲ್ಲಿ ಒಂದು ಮಾತು ಹೇಳಿದರು 1070 ವರ್ಷಗಳ ಹಿಂದೆ ಆಚಾರ್ಯ ಶ್ರೀ ಶುಭಚಂದ್ರಾಚಾರ್ಯರು ಈ ಕ್ಷೇತ್ರಕ್ಕೆ ಬೇಟಿನೀಡಿ ಅತಿಶಯ ಸೃಷ್ಟಿಸಿದರು. ಹೀಗ ಪರಮಪೂಜ್ಯ ಮುನಿಶ್ರೀ 108 ವೀರ ಸಾಗರ ಮುನಿ ಮಹಾರಾಜರು ನೆಲೆಸಿ ಅತಿಶಯಗಳಾಗುತ್ತಿದೆ ಎಂದು ಈ ಮಾತು ಅಕ್ಷರ ಸಹ ಸತ್ಯ. ಮುನಿಶ್ರೀ ವೀರಸಾಗರರು ಇಲ್ಲಿಗೆ ತಮ್ಮ ಪಾವನ ಸಾನಿದ್ಯವನ್ನು ದಯಪಾಲಿಸಿದಾಗಿನಿಂದ ಅನೇಕ ಅತಿಶಯ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿಂದೆ ನಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ ವಿತ್ತರಿಸಿದೆವು. 12-03-2021 ರಂದು ಇಲ್ಲಿ ಭೂಗರ್ಭಗಳಿಂದ ಜಿನ ಬಿಂಬಗಳ ಪತ್ತೆಯಾಗಿತ್ತು. ಇಂದು ಅಂದರೆ ದಿನಾಂಕ 23-07-2021ರಂದು ಭಗವಾನ್ ಮುನಿಸುವ್ರತ ನಾಥ ತೀರ್ಥಂಕರರ ಬಿಂಬ ಕೆತ್ತಲು ಮೂರ್ತಿ ನಿರ್ಮಾಣ ಮಹೋತ್ಸವ ಕಾರ್ಯ ನೆರವೇರಿತು.
ಇಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಮೂರ್ತಿ ಕಪ್ಪು ಶಿಲೆಯದಾಗಿದ್ದು 27 ಅಡಿ ಎತ್ತರದ ಅಖಂಡ ಪ್ರತಿಮೆಯಾಗಿದೆ. ಈ ಮೂರ್ತಿಗಾಗಿ ಮುಖೇಶ್ ಜೈನ್ ರವರು ಶಿಲೆಯ ದಾನವನ್ನು ಮಾಡಿದರೆ ಮೂರ್ತಿಯ ಕೆತ್ತನೆಗೆ ಮೈಸೂರಿನ ವಿಶಾಲ್ ಮೆಡಿಕಲ್ಸ್ ನ ಶ್ರೀ ವಿಶಾಲೇಂದ್ರ ರವರು ದಾನದಂತಹ ಪುಣ್ಯಕಾರ್ಯವನ್ನು ಮಾಡುತ್ತಿದ್ದಾರೆ. ಶಿಲೆಯೂ ಹೊಸ ದುರ್ಗದ ಬಳಿ ಇರುವ ಶ್ರೀ ರಾಮ ಪುರದಿಂದ ತರಿಸಲಾಗಿದೆ. ಮೂರ್ತಿಯ ಕೆತ್ತನೆಯನ್ನು ಜಗದೀಶ್ ಶರ್ಮಾ ರವರು ಮಾಡಲ್ಲಿದ್ದಾರೆ. ನಡೆದ ಪೂಜೆಯಲ್ಲಿ ಕಮಿಟಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದು, ದಾನಿಗಳ ಕುಟುಂಬದವರು ಸಹ ಪಾಲ್ಗೊಂಡಿದರು.
ನಂತರ ನಡೆದ ಚಾತುರ್ಮಾಸ ಕಳಸ ಸ್ಥಾಪನೆಯಲ್ಲಿ ಪರಮ ಪೂಜ್ಯ ಮುನಿಶ್ರೀ 108 ವೀರ ಸಾಗರ ಮುನಿ ಮಹಾರಾಜರು ಹಾಗೂ ಪರಮ ಪೂಜ್ಯ ಮುನಿಶ್ರೀ 108
ಅಮಿತಂಜನ ಕೀರ್ತಿ ಮುನಿ ಮಹಾರಾಜರುಗಳು ತಮ್ಮವರ್ಷಾಯೋಗವನ್ನು ಆರಂಭಿಸಿದರು ಮೊದಲ ಕಳಸವನ್ನು ಶ್ರೀ ದಿಶಾಲೇಂದ್ರರವರು ಹಾಗೂ ಎರಡನೇ ಕಳಸವನ್ನು ಶ್ರೀ ಯುತರಾದ ಬ್ರಹ್ಮ ದೇವ ಬೆಂಗಳೂರು ಹರಾಜಿನ ಮೂಲಕ ತಮ್ಮದಾಗಿಸಿಕೊಂಡು ಸ್ಥಾಪನ ಕಾರ್ಯದಲ್ಲಿ ಪಾಲ್ಗೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಶ್ರಾವಕ ಶ್ರಾವಕಿಯರು ಈ ವೈಭವವನ್ನು ನೋಡಿ ಕಣ್ತುಂಬಿಕೊಂಡರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














