ಜ್ಞಾನದೀಕ್ಷೆಗಳು-09 / 16-07-2021 / jwalamalanews / 2021

ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಶ್ರೀ ಶಾಸ್ತ್ರಸಾರ ಸಮುಚ್ಚಯದ ಕನ್ನಡ ಟೀಕು ಮತ್ತು ಅತ್ತಿಮಬ್ಬೆ.

ಡಾ.ಪದ್ಮಿನಿ ನಾಗರಾಜು.

ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.

ಆತ್ಮಿಯರೇ ನಮಸ್ಕಾರ, ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಸರಣಿ ಕಾರ್ಯಕ್ರಮ ಜ್ಞಾನ ದೀಪಿಕೆ ಪ್ರಾರಂಭವಾಗಿದೆ ತಾವೇಲ್ಲರು ನೋಡುತ್ತಾ ಇದ್ದೀರಿ ಪ್ರೋತ್ಸಾಹಿಸುತ್ತಾ ಇದ್ದೀರಿ ತಮ್ಮೆಲ್ಲರಿಗೂ ಅತ್ಮಿಯ ಸ್ವಾಗತ.

ಮತ್ತೊಂದು ಸರಣಿಕಾರ್ಯಕ್ರಮದಲ್ಲಿ ತಾವೇಲ್ಲರು ಪರಿಚಯ ಮಾಡಿಕೊಳ್ಳ ಬೇಕಾದಂತಹ ಕೃತಿ ಶ್ರೀ ಮಾಗ ನಂದಿ ಅಚಾರ್ಯರು ಬರೆದಿರುವಂತಹ ಶಾಸ್ತ್ರಸಾರ ಸಮುಚ್ಚಯ ಅನ್ನುವಂತಹ  ಕನ್ನಡ ಟೀಕು ಗ್ರಂಥ ಈ ಗ್ರಂಥವನ್ನು ಪರಿಚಯ ಮಾಡಿ ಕೊಡುತ್ತಿದ್ದೇನೆ.

ಈ ಗ್ರಂಥದ ಮುಖ ಪುಟದಲ್ಲಿ  ಶ್ರೀ ಶಾಸ್ತ್ರಸಾರ ಸಮುಚ್ಚಯದ ಕನ್ನಡ ಟೀಕು ಎಂದು ಬರೆದಿದೆ. ಶ್ರೀ ಮಾಗ ನಂದಿ ಅಚಾರ್ಯರು ಬರೆದಿರುವಂತಹ ಕೃತಿ ಇದು, ದಿಗಂಬರ ಜೈನ ಅಚಾರ್ಯರಲ್ಲಿ ಇವರಿಗೆ ಬಹಳ ಶ್ರೇಷ್ಠವಾದಂತಹ ಹೆಸರಿದೆ. 1916ರಲ್ಲಿ ಈ ಕೃತಿ ಪ್ರಕಟವಾಗಿರುವಂತಹದ್ದು ಈ ಕೃತಿಯ ಬೆಲೆ 2ರೂಪಾಯಿ ಎಂಟ್ಟಾಣೆ ಇತ್ತು. ಈ ಗ್ರಂಥ ಬೆಳಗಾಂ ನಲ್ಲಿ ಸಿಗುತ್ತಿತ್ತು ಎಂದು ಹೇಳಲಾಗಿದೆ. ಈ ಕೃತಿಯ ಮುದ್ರಣ ವಾಗಿರುವುದು ಬೆಳಗಾವಿಯ ಡಿ ಪಿ ಚೌಗುಲೆ  ಇವರ ಮಹಾವೀರ ಮುದ್ರಣಾಲಯದಲ್ಲಿ ಮುದ್ರಿಸಲಾಗಿತ್ತು. ಈ ಕೃತಿಯನ್ನು ಪ್ರಕಾಶನ ಮಾಡಿರುವಂತವರು ಶ್ರೀ ಏಲಕ ಚಂದ್ರ ಸಾಗರ ಸ್ವಾಮೀಜಿ ಸರಗೂರು. ಚಂದ್ರ ಸಾಗರ ಮುನಿಗಳು ಈ ಕೃತಿಯನ್ನು ಪ್ರಕಾಶನ ಮಾಡುವಂತಹ ಸಂದರ್ಭದಲ್ಲಿ ಮುನ್ನುಡಿಯಲ್ಲಿ ಹೇಳುತ್ತಾರೆ, ಈ ಗ್ರಂಥದ ಹೆಸರು ಎಷ್ಟು ದೊಡ್ಡದಾದದ್ದೊ ಅಷ್ಟು ಈ ಗ್ರಂಥವು  ದೊಡ್ಡದು ಇದರ ಮಹಿಮೆಯೂ ದೊಡ್ಡದು ಎಂದು ಹೇಳಿದ್ದಾರೆ. ಮಗಾನಂದಿ ಅಚಾರ್ಯರಿಂದ ರಚಿಸಲ್ಪಟಂತಹ ಈ ಗ್ರಂಥವು  ತಾಳೆ ಪತ್ರಿಯಲ್ಲಿ ಹಳೆಗನ್ನಡ ಲಿಪಿಯಲ್ಲಿ ಇದುದ್ದರಿಂದ ಕನ್ನಡದಲ್ಲಿ ಬರೆದು ಅಚ್ಚು ಆಕಿಸಿ ಇಡುತ್ತೇನೆ ಎಂದು ಚಂದ್ರ ಸಾಗರ ಸ್ವಾಮೀಜಿ ಸರಗೂರು ರವರು ಹೇಳುತ್ತರೆ. ನನಗೆ ಈ ಗ್ರಂಥ ಎಷ್ಟು ಶುದ್ದವಾಗಿ ಮುದ್ರಣವಾಗ ಬೇಕಿತ್ತೊ ಅಷ್ಟು ಶುದ್ದವಾಗಿ ಮುದ್ರಣವಾಗಲ್ಲಿಲ್ಲ, ಏಕೆಂದರೆ ಈ ದರ ಮೂಲ ಪ್ರತಿ  ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಾಳ ತಾಲ್ಲೂಕಿನ ನಲ್ಲಿಕಾರಲ್ಲಿ ಇದಂತಹ ಶ್ರೀ ಯುತ ಅನಂತ ರಾಜಯ್ಯ ನವರ ಮನೆಯಲ್ಲಿ ಇತ್ತು, ಈ ಮೂಲ ಪ್ರತಿಯನ್ನು ಅವರು ಕೊಡಲ್ಲಿಲ್ಲ ಅದರಿಂದ ಮತ್ತು ಇದರ ಬೇರೆ ಕೃತಿಗಳು ದೊರೆಯದಿದ್ದರಿಂದ  ನನ್ನ ಪ್ರಮಾದದಿಂದಲೊ, ಬುದ್ದಿ ಶೂನ್ಯದಿಂದಲೊ ತಪ್ಪುಗಳು ಈ ಕೃತಿಯಲ್ಲಿ ಆಗಿರಬಹುದು. ಈ ಗ್ರಂಥದ ಮೂಲ ಪ್ರತಿಯಂತೆ ಬೆಳಗಾವಿಯ ಚೌಗುಲೆ ಕೇಶವ ರಾವ್ ಸಹಾಯದಿಂದ ಪರಿಶೋದಿಸಿ, ಶ್ರೀ ದೇವೇಂದ್ರಪ್ಪ ಚೌಗುಲೆ ಇವರ ಮಹಾವೀರ ಮುದ್ರಣಾಲಯದಲ್ಲಿ ಚಾಪಿಸುವಾಗ ಅನೇಕ ಮೊಳೆಗಳು ಮುರಿದು ಅಶುದ್ದವಾಗಿರುತ್ತದೆ. ಮಾಗ ನಂದಿ ಅಚಾರ್ಯರ ಬಗ್ಗೆ ಎಲ್ಲೂ ಕೂಡ ವಿವರವಾದ ದಾಖಲೆಗಳು ಸಿಗುವುದಿಲ್ಲಾ. ಈ ಶಾಸ್ತ್ರಸಾರ ಸಮುಚ್ಚಯ ಗ್ರಂಥ ಧರ್ಮ ರಹಸ್ಯವನ್ನು, ಜ್ಞಾನ ಭಕ್ತಿ ಶ್ರದ್ದೆ ರಹಸ್ಯವನ್ನು ತಿಳಿಯಪಡಿಸುತ್ತದೆ. ಜೈನ ಧರ್ಮದ ಪುಸ್ತಕದಲ್ಲಿ ಇದ್ದು ಅತ್ಯುತ್ತಮವಾದಂತಹ ಕೃತಿ, ಇದರಲ್ಲಿ ಪ್ರಥಮಾನು ಯೋಗ, ಕರ್ಣಾನುಯೋಗ, ಚರಣಾನುಯೋಗ, ದ್ರವ್ಯಾನು ಯೋಗ ಈ ರೀತಿ ನಾಲ್ಕು ಯೋಗಗಳ ಬಗ್ಗೆ  ವಿವರಿಸಿದ್ದಾರೆ. ಆದರೆ ನನಗೆ ಈ ಗ್ರಂಥವನ್ನು ಕೊಟ್ಟಿದ್ದು ಶ್ರೀಯುತ ಮದನ್ ಕೇಸರಿಯವರು, ಈ ಪುಸ್ತಕದಲ್ಲಿ ಪ್ರಮುಖವಾಗಿ ನಮ್ಮ ಮೂರು ಲೋಕದ ನಕಾಶೆಯನ್ನು ಕೊಟ್ಟಿದ್ದಾರೆ ಮತ್ತು ಲವಣ ಸಮುದ್ರದ ಮದ್ಯದಲ್ಲಿ

ಒಡಲಾಳಗಳ ನಕಾಶೆ ನಕಾಶೆಯನ್ನು ಕೊಟ್ಟಿದ್ದಾರೆ, ಹಾಗೂ ಎರಡುವರೆ ದ್ವೀಪದಲ್ಲಿ ಇರುವಂತಹ ಪದಾರ್ಥಗಳನ್ನ ಕ್ಷೇತ್ರಗಳನ್ನ ಪ್ರಮಾಣದ ಮುಖ್ಯ ರಚನೆಗಳನ್ನ ಪರ್ವತ ನದಿಗಳನ್ನ ಸಂಕ್ಷೀಪ್ತದಿಂದ ತೋರಿಸಿರುತ್ತದೆ. 1916-2-26ರಲ್ಲಿ ಚಂದ್ರ ಸಾಗರ ಮುನಿಗಳು ಇದನ್ನು ಮುದ್ರಿಸಿದ್ದಾರೆ.

ಇನ್ನೊಂದು ಒಬ್ಬ ಜೈನೇತರರು ಬರೆದಿರುವಂತಹ ಸಮೇತನಹಳ್ಳಿ ರಾಮರಾಯರು ಬರೆದಿರುವಂತಹ ಅತ್ತಿಮಬ್ಬೆ ಕೃತಿಯನ್ನು ಪರಿಚಯಮಾಡಿಸುತ್ತಿದ್ದೇನೆ. ಸಮೇತನಹಳ್ಳಿ ರಾಮರಾಯರು ವೈಶ್ಣವ ಪಂಥದಲ್ಲಿ ಬೆಳೆದಂತವರು, 1917ರಲ್ಲಿ ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಸಮೇತನಹಳ್ಳಿಯಲ್ಲಿ ಹುಟ್ಟಿದಂತವರು. ಪುರಾತನ ಮತ್ತು ಇತಿಹಾಸವನ್ನು ಆಧರಿಸಿ ವಿಶಿಷ್ಟ ರೀತಿಯಲ್ಲಿ ಕಥೆ ಕಾದಂಬರಿಗಳನ್ನ ರಚಿಸಿದಂತವರು. ಭೀಷ್ಮ, ಶಾಕುಂತಲ ಇವು ಮಹಾಕಾವ್ಯ. ಸಂಕಲ್ಪ, ತಲಕಾಡುಗೊಂಡ ಮಹಾಶ್ವೇತೆ ಎಂಬ ನಾಟಕಗಳನ್ನ ಸವತಿಗಂಧ ವಾರಿಣಿ, ನೃತ್ಯ ಸರಸ್ವತಿ, ಮೋನೆಗಾರ ಇನ್ನು ಮುಂತಾದ ಕಾದಂಬರಿಗಳನ್ನು ಬರೆದಿರುತ್ತಾರೆ. ಕೋಟೆ ಮನೆ ಎನ್ನುವ ಆತ್ಮಕಥೆಗಳನ್ನಬರೆದಿದ್ದಾರೆ. 1999ರಲ್ಲಿ ನಿಧನರಾದರು. 30 ವರ್ಷಗಳು ಚಿಂತನೆಮಾಡಿ ಬರೆದಿದ್ದೇನೆ ಎಂದು ಹೇಳಿದ್ದಾರೆ. ಪ್ರೋಫೆಸರ್ ಜಿ ಆಶ್ವತ ನಾರಯಣರವರು ಲಕುಂಡಿಯ ಶಾಸನಗಳನ್ನು ಪ್ರತಿಮಾಡಿ ತಂದುಕೊಟ್ಟರು, ನಾನು ಅತ್ತಿಮಬ್ಬೆ ಬರೆಯಬೇಕು ಎಂದು ಯೋಚಿಸಿದೆ ಎಂದು ಹೇಳಿಕೊಳ್ಳುತ್ತಾರೆ. ಈ ಕೃತಿ 1998ರಲ್ಲಿ ಪ್ರಕಟವಾಗಿರುತ್ತದೆ, ಮೈಸೂರಿನ ಉತ್ತರಾದಿ ಮಠದ ರಸ್ತೆಎಸ್ ಎಲ್ ಪಂಡಿತ್ ಬೀದಿ ತಳುಕಿನ ವೆಂಕಣಯ್ಯ ಗೋಕುಲಂ 3ನೇ ಹಂತ ಮೈಸೂರು

ಇಲ್ಲಿ ಈ ಕೃತಿ ಪ್ರಕಟವಾಗಿದೆ. ಅತ್ತಿಮಬ್ಬೆಯ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಕಾದಂಬರಿ ಇದು, ಅತ್ತಿಮಬ್ಬೆ ಪೊನ್ನನ ಶಾಂತಿ ಪುರಾಣವನ್ನು ಬರೆಸಿದಂತವರು ಸಾವಿರಪ್ರತಿಗಳನ್ನು ಮಾಡಿಸಿ ಆನೆಯ ಮೇಲೆ ಮೆರವಣಿಗೆ ಮಾಡಿರುವಂತವರು, ರನ್ನನ ಅಜಿತನಾಥ ಪುರಾಣವನ್ನು 1008 ಪ್ರತಿಗಳನ್ನು ಬರೆಸಿದಂತವರು ಮತ್ತು ಅ ಪ್ರತಿಗಳನ್ನು 1008 ಜೈನ ಬಸದಿಗಳಿಗೆ ದಾನಮಾಡಿದಂತವರು ಅಂತಹ ಅತ್ತಿಮಬ್ಬೆಯನ್ನು ತನ್ನ ಕೃತಿಯ ಪ್ರರಂಭದಲ್ಲಿಯೇ ಹೊಗಳುತ್ತಾರೆ. ಅತ್ತಿಮಬ್ಬೆಯ ಬದುಕಿನ ಸರಣಿಗಳನ್ನು ಇಟ್ಟುಕೊಂಡು ಬರೆದಂತಹ ಕಾದಂಬರಿ, ಅತ್ತಿಮಬ್ಬೆಯವರು ಜೈನ ಧರ್ಮಕ್ಕಾಗಿ ಮೂಡಿಪಾಗಿ ಇಟ್ಟಿದ್ದಾರೆ ಅನ್ನುವುದನ್ನು ಈ ಕೃತಿ ಹೇಳುತ್ತದೆ.

ಈ ಎರಡು ಕೃತಿಗಳು ಇವತ್ತು ನಮ್ಮ ಗಮನಕ್ಕಾಗಿ ನಮಸ್ಕಾರ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್