ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಕವಿರಾಜಮಾರ್ಗ ಮತ್ತು ಶ್ರೀ ಭದ್ರಬಾಹು ಚರಿತ್ರೆ.
ಡಾ.ಪದ್ಮಿನಿ ನಾಗರಾಜು.
ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.
ಆತ್ಮಿಯರೇ ನಮಸ್ಕಾರ, ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಪ್ರಾರಂಭವಾಗಿರುವ ಸರಣಿ ಕಾರ್ಯಕ್ರಮ ಜ್ಞಾನ ದೀಪಿಕೆ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಅತ್ಮಿಯ ಸ್ವಾಗತ.
ಈ ದಿನ ನಾನು ಪರಿಚಯಿಸುತ್ತಿರುವುದು ಎರಡು ಮಹತ್ವದ ಕೃತಿಗಳು ಒಂದು ಶ್ರೀ ಭದ್ರಬಾಹು ಚರಿತ್ರೆ, ಈ ಕೃತಿಯನ್ನು ಬರೆದಂತವರು ಶ್ರೀ ರತ್ನನಂದ ಮುನಿಗಳು. ನಂತರ ಮತ್ತೇ ಕನ್ನಡಕ್ಕೆ ಅನುವಾದ ಮಾಡಿದಂತವರು ಶ್ರಮಣ ರತ್ನಾಚಾರ್ಯ 108 ಶ್ರೀ ಸುಭಲ ಸಾಗರ ಮುನಿಮಹಾರಾಜರು, ಈ ಕೃತಿಯನ್ನು ಮತ್ತೆ ಪರಿಷ್ಕರಣೆ ಮಾಡಿ ತಂದಿರುವಂತವರು ಡಾ|| ಪಿ ಜಿ ಕೆಂಪಣ್ಣನವರು.
ಮತ್ತೊಂದು ಕೃತಿ ಕವಿರಾಜಮಾರ್ಗ ಈ ಕೃತಿ ಸಾಂಸ್ಕೃತಿ ಮುಖಾಮುಖಿಎನ್ನುವಂತಹ ಹೆಸರಿನಲ್ಲಿ ಪ್ರಕಟವಾಗಿರುವಂತಹದ್ದು, ಈ ಕೃತಿಯ ಸಂಪಾದನೆಯನ್ನು ಮಾಡುರುವಂತವರು ರಹಮತ್ ತರಿಕೆರೆಯವರು ಈ ಕೃತಿ ಪ್ರಸಾರಂಗ ಹಂಪಿಯಿಂದ ಪ್ರಕಟವಾಗಿರುವಂತಹ ಕೃತಿ.
ಮೊದಲಿಗೆ ಶ್ರೀ ಭದ್ರಬಾಹು ಚರಿತ್ರೆ ಕೃತಿಯ ಮೂಲ ಹಿಂದಿಯಲ್ಲಿ ರತ್ನನಂದ ಮುನಿಗಳು ಬರೆದಿರುವುದನ್ನು ಗಮನಿಸಿದಾಗ ಇದು ಪ್ರಕಟವಾಗಿರುವಂತಹದ್ದು 2009ರಲ್ಲಿ, ನಮ್ಮ ಮೈಸೂರಿನ ರತ್ನಾತ್ರೇಯ ಪ್ರಕಾಶಕರು 50ರೂಗಳಿಗೆ ಪ್ರಕಟ ಮಾಡಿದರು. ಶ್ರಮಣ ರತ್ನಾಚಾರ್ಯ ಸುಭಲ ಸಾಗರರು ಈ ಒಂದು ಕೃತಿಯನ್ನು ಕನ್ನಡಕ್ಕೆ ತಂದಂವರು, ಪ್ರಕಟಣೆಗೆ ಕಾರಣರಾದಂತವರು ಬ್ರಹ್ಮಾಚಾರ್ಯ ಪುಣ್ಯ ಸಾಗರರು. ಶ್ರೀ ಭದ್ರಬಾಹು ಚರಿತ್ರೆ ಶ್ಲೋಕ ರೂಪದಲ್ಲಿ ರಚಿಸಿರುವಂತಹದ್ದು. ಉತ್ತರ ಕರ್ನಾಟಕ ಹಾಡು ಭಾಷೆಯಲ್ಲಿ ಮೂಲ ಕನ್ನಡಕ್ಕೆಅನುವಾದ ಮಾಡಿ ಕೊಟಂತಹ ಶ್ರೇಯಸ್ಸು ಪರಮಪೂಜ್ಯ ಆಚಾರ್ಯ ಶ್ರೀ ಸುಭಲ ಸಾಗರರಿಗೆ ಸಲ್ಲ
ಬೇಕು. ಇನ್ನಷ್ಟು ಶ್ಲೋಕಗಳನ್ನು ತೆಗೆದು ಸಂಕಲಿಸಿ ಕೊಡುವಂತ ಕೆಲಸವನ್ನು ಡಾ|| ಪಿ ಜಿ ಕೆಂಪಣ್ಣ ನವರು ಮಾಡಿದರು.
ಮತ್ತು ಈ ಕೃತಿ ಬರೆದಂತವರು ರತ್ನನಂದಿ ಮುನಿಗಳು ನಿರ್ಧೋಶ ಚರಿತ್ರೆ ಬರೆದಿರುವವರು ಆದರೆ ಇವರು ಎಲ್ಲಿಯವರು ಎಂದು ಸರಿಯಾದ ಮಾಹಿತಿ ಸಿಕ್ಕಿಲ್ಲಾ. ಆದರೆ ಲಲಿತ ಕೀರ್ತಿ ಮಹಾರಾಜರನ್ನು ತನ್ನ ಹೃದಯದಲ್ಲಿ ಸ್ಮರಿಸಿರುವುದರಿಂದ ಲಲಿತ ಕೀರ್ತಿ ಮುನಿಗಳು ಶ್ರೀ ಅನಂತ ಕೀರ್ತಿ ಆಚಾರ್ಯರ ಶಿಷ್ಯರಾಗಿದರು. ಇವರು ಜನಿಸಿದ್ದು ಯಾವಗ ಎಂದು ಗೊತ್ತಿಲ್ಲಾ ಅದರೆ 1527ರಲ್ಲಿ ಇರಬಹುದು ಎಂದು ಒಂದು ಊಹೆ. ಎಕೆಂದರೆ ಸುದರ್ಶನ ಎನ್ನುವ ಗ್ರಂಥದಲ್ಲಿ ರತ್ನಕೀರ್ತಿ ಮುನಿಗಳು ಉಲ್ಲೇಖ ಮಾಡುವುದರಿಂದ. ಭದ್ರಬಾಹು ಚರಿತ್ರೆಯನ್ನು ರಚಿಸಿರುವಂತಹ ರತ್ನ ನಂದಿಯವರು ರತ್ನಿ ಕೀರ್ತಿ ಎಂದು ಬರೆದಿರುವುದನ್ನು ನಾವು ನೋಡುವುದರಿಂದ ಇಬ್ಬರು ಒಬ್ಬರೆ ಎಂದು ತಿಳಿಯಬಹುದು.
ಇದು ಒಂದು ಪುಟ್ಟ ಕೃತಿ ಎಲ್ಲರು ಸ್ವಾದ್ಯಾಯ ಮಾಡಲು ಸಾದ್ಯವಾಗುವಂತಹ ರೀತಿಯಲ್ಲಿ ಬರೆಯಲಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ಕೊಟ್ಟಂತವರು ಶ್ರೀ ಪಿ ಜಿ ಕೆಂಪಣ್ಣ ನವರು. ಕನ್ನಡಕ್ಕೆ ಸುಭಲ ಸಾಗರ ಮುನಿಮಹಾರಾಜರು ತಂದಿದ್ದರೂ ಇನ್ನಷ್ಟು ಪರಿಷ್ಕರಣೆ ಮಾಡಿ ಕೊಟ್ಟಂತವರು ಬೆಳಗಾವಿ ಜಿಲ್ಲೆಯ ಮುತ್ತನಾಳು ಗ್ರಾಮದವರು, ಸ್ನಾತಕೋತ್ತರ ಪದವಿದರರಾದ ಅವರು ಕನ್ನಡ ಭೋದಕರಾಗಿ, ಪ್ರವೃತಿ ಇಂದ ಸೃಜನ ಶೀಲ ಲೇಖಕರಾಗಿ, ವಾಘ್ಮಿಗಳಾಗಿ, ಸಂಶೋದಕರಾಗಿ, ಸಂಘಟಕರಾಗಿ ಅನೇಕ ಕಾರ್ಯಗಳನ್ನು ಇವತ್ತಿಗೂ ನಮ್ಮೊಂದಿಗೆ ಮಾಡುತ್ತಾ ಇದ್ದಾರೆ. ಬೆಳಗಾವಿಯಲ್ಲಿ ನೆಲೆಸಿರುವಂತ ಕೆಂಪಣ್ಣ ನವರು ಅನೇಕ ಕೃತಿಗಳನ್ನು ತಂದಿದ್ದಾರೆ. ಹಾರೈಕೆ ಎನ್ನುವ ಕವನ ಸಂಕಲನ ಕಥಾ ಸಂಕಲನ ಮತ್ತು ಪ್ರಬಂಧ ಸಂಕಲನ ಕೂಡ ಬಂದಿದೆ.
ಈ ಒಂದು ಪುಟ್ಟ ಕೃತಿ ಭದ್ರಬಾಹು ಚರಿತ್ರೆಯನ್ನು ಪರಿಚಯಿಸಿದ್ದೇನೆ.
ಮತ್ತೊಂದು ಕೃತಿ ಅತ್ಯಂತ ಪ್ರಾಚೀನ ಪಂಪ ಪೂರ್ವ ಯುಗದ ಗ್ರಂಥ, ಶ್ರೀ ವಿಜಯ ರಾಷ್ಟ್ರಕೂಟರ ಅಮೋಘ ನೃಪತುಂಗ ಅಸ್ಥಾನದಲ್ಲಿದಂತಹ ಸುಮಾರು 850ರಲ್ಲಿ ಶ್ರೀ ವಿಜಯ ಬರೆದಂತಹ ಕೃತಿ ಕವಿರಾಜ ಮಾರ್ಗ. ಹಂಪಿ ವಿಶ್ವವಿದ್ಯಾನಿಲಯದಲ್ಲಿ ನಡೆದಂತಹ ಗೋಷ್ಠಿಯಲ್ಲಿ ಕೃತಿಯನ್ನು 20ನೇ ಶತಮಾನದಲ್ಲಿ ತರಿಸಿರುವಂತಹದ್ದು. ಈ ಕೃತಿಯಲ್ಲಿ ಸುಮಾರು 11 ಜನ ಮಹತ್ವದ ಕೃತಿ ಎಂದು ಬರೆದುಕೊಟ್ಟಿರುವುದು. ಇದರ ಸಂಪಾದಕರು ರಹಮತ್ ತರಿಕೆರೆಯವರು ಕನ್ನಡದ ಪ್ರಸಿದ್ದ ಸಂಸ್ಕೃತಿ ಚಿಂತಕರು ಮತ್ತು ವೈಚಾರಿಕ ಬರಹಗಾರರು ತರಿಕೆರೆ ತಾಲ್ಲೂಕಿನವರು ಅವರು ಪ್ರಸಿದ್ದ ವಿಮರ್ಷಕರು ಕೂಡ, ಅವರು ಬಹಳ ಕೃತಿಗಳನ್ನು ಬರೆದಿದ್ದಾರೆ, ಧರ್ಮ ಪರೀಕ್ಷೆ, ಅಕ್ಕನ ವಚನಗಳು, ಐವರು ಹೇಳಿದ ಜನಪದ ಕಥೆಗಳು ಅನ್ನುವಂತಹ ಅನೇಕ ಸಂಪಾದಿತ ಕೃತಿಗಳನ್ನು ಬರೆದಿದ್ದಾರೆ.
ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ, ಅವರ ಅನೇಕ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇಗಲೂ ಹಂಪಿ
ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿದ್ದಾರೆ. ಸಂಪಾದನೆ ಮಾಡಿರುವಂತಹ ಈ ಕೃತಿಯಲ್ಲಿ ಕವಿರಾಜ ಮಾರ್ಗದ ಬಗ್ಗೆ ಪ್ರಸ್ತಾವನೆಯನ್ನು ಬರೆದಿದ್ದಾರೆ. ಕವಿರಾಜ ಮಾರ್ಗದ ಓದುವಿನ ಬಗ್ಗೆ ಕೆ ವಿ ಸುಬ್ಬಣ ನವರು ಬರೆದಿದ್ದಾರೆ. ದೇಶಿ ಚಹರೆಯ ಕ್ರೀಯಾಶೀಲದ ಬಗ್ಗೆ ಬಸವರಾಜು ಕಲ್ಗುಡಿಯವರು ಬರೆಯುತ್ತಾರೆ. ಕವಿರಾಜ ಮಾರ್ಗ ಏನಿದರ ಹೆಚ್ಚಳ ಎಂದು ಪಿ ವಿ ನಾರಾಯಣನವರು ಬರೆದಿದ್ದಾರೆ. ಹೊಸ ಭಾಷೆಯೊಂದರ ನಿರ್ಮಾಣ ಎಂದು ನಾಜರಾಜ್ ರವರು ಬರೆಯುತ್ತಾರೆ. ಇನ್ನು ಮುಂತಾದವರು ಈ ಕೃತಿಯನ್ನು ಬರೆದಿರುತ್ತಾರೆ. ಈ ಪ್ರಬಂದಗಳನ್ನು ಮತ್ತೊಮ್ಮೆ ಪರಿಶೀಲಿಸಿ ವಿಮರ್ಶಿಸಿ ಈ ಕೃತಿಯನ್ನು ತಂದಿರುವುದು. ಶ್ರೀ ವಿಜಯರವರು, ಮೊಟ್ಟಮೊದಲ ಕನ್ನಡದ ಜೈನ ಕವಿ ಅವರ ಈ ಕೃತಿಯು ಪ್ರಸರಂಗ ಹಂಪಿ ವಿಶ್ವವಿದ್ಯಾನಿಲಯದಲ್ಲಿ ದೊರೆಯುವಂತಹದ್ದು. ಈ ಕೃತಿಯ ಬೆಲೆ 60 ರೂಪಾಯಿ ಮೊದಲ ಮುದ್ರಣ ಬಂದಿದ್ದು 2000ದಲ್ಲಿ, 2008ರಲ್ಲಿ ಎರಡನೇ ಮುದ್ರಣ ಬಂದಿರುವುದು.
ಈ ಎರಡು ಕೃತಿಗಳು ಮಹತ್ವದ ಕೃತಿಗಳು ಇವುಗಳನ್ನು ಓದಿ ಮತ್ತಷ್ಟು ಅರಿವನ್ನು ಹೆಚ್ಚಿಸಿಕೊಳ್ಳೊಣ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














