ಕಣಿವೆ / ಭಾ. ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ / ಚಿಕ್ಕಮಗಳೂರು / jwalamalanews / 2021

ಜೈ ಜಿನೇಂದ್ರ ವೀಕ್ಷಕರೆ, ನರಸಿಂಹ ರಾಜಪುರದಿಂದ 22 ಕಿ.ಮೀ., ಶಿವಮೊಗ್ಗದಿಂದ 30 ಕಿ.ಮೀ. ದೂರದಲ್ಲಿದೆ ಮನಮೋಹಕ ಪರಿಸರದಲ್ಲಿ ಸುಂದರವಾದ ಪ್ರಾಚೀನ ಬಸದಿ.

ದಟ್ಟ ಕಾಡಿನ ಹಾದಿಯನ್ನು ಸಾಗಿ ಬಂದು ನಿಂತಾಗ ನಿಮಗೆ ಕಾಣಸಿಗುವುದೇ ಕಣಿವೆ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ. ಹೊಂಬುಜ ಮಹಾ ಸಂಸ್ಥಾನಕ್ಕೆ ಸೇರಿದ ಈ ಬಸದಿಯಲ್ಲಿ ಮಾತೆ ಪದ್ಮಾವತಿ ಅಮ್ಮನವರನ್ನು ಕೂಡ ಪ್ರತಿಷ್ಟಾಪಿಸಲಾಗಿದೆ. ಬನ್ನಿ ಒಮ್ಮೆ ದರ್ಶಿಸಿ ಪುನೀತರಾಗೋಣ.

ಕಣಿವೆ ಗ್ರಾಮದಲ್ಲಿರುವ ಈ ಬಸದಿ ಕ್ರಿ.ಶ 2012ರಂದು ಬಸದಿಯನ್ನು ಸಂರಕ್ಷಿಸುವ ಉದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ಷರ ಟ್ರಸ್ಟಿನ ಅಧ್ಯಕ್ಷರಾದ ರಾಜಶ್ರೀ ಡಾ|| ವೀರೆಂದ್ರ ಹೆಗ್ಗಡೆಯವರು ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು ಸಂಗ್ರಹಾಲಯದ ನಿರ್ದೇಶನಾಲಯ, ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಜೀರ್ಣೋದ್ಧಾರ ಸಮಿತಿ ಹಾಗೂ ಭಕ್ತಾದಿಗಳ ಜೈನ ಶ್ರಾವಕರ ಸಹಕಾರದೊಂದಿಗೆ ಜೀರ್ಣೋದ್ಧಾರ ಕಾರ್ಯ ನಡೆದ್ದಿದು, ಪರಮಪೂಜ್ಯ ಸ್ವಸ್ತಿಶ್ರೀ ದೇವೆಂದ್ರ ಕೀರ್ತಿ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಶಿಲಾಮಯ ಬಸದಿಯನ್ನು ಪ್ರವೇಶಿಸಿದಾಗ ಪದ್ಮಾಸನದಲ್ಲಿ ಸ್ಥಿತ ಕಪ್ಪು ಶಿಲೆಯ ಮುದ್ದಾದ ಪ್ರತಿಮೆ ನಿಮ್ಮನ್ನು ಮಂತ್ರ ಮುಗ್ದರನ್ನಾಗಿಸುತ್ತದೆ.

ಮಂದಿರದ ದರ್ಶನ ಪಡೆದು ಕೆಳಗೆ ಬಂದಾಗ ಬಸದಿಯ ಎಡ ಭಾಗದಲ್ಲಿ ಕ್ಷೇತ್ರಪಾಲ ಮಂದಿರ ದರ್ಶನವಾಗುತ್ತದೆ.

ಪ್ರಾಚೀನ ಬಸದಿಗಳು ಶ್ರೀ ಕ್ಷೇತ್ರ ಹೊಂಬುಜ ಮಹಾಸಂಸ್ಥಾನ ಮಠದ ಶ್ರೀಗಳವರಿಂದ ಜೀರ್ಣೋದ್ದಾರಗೊಳ್ಳುತ್ತಿರುವು ಶ್ಲಾಘನೀಯವಾಗಿದೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್

.