ಜ್ಞಾನದೀಕ್ಷೆಗಳು-07 / 02-07-2021 / jwalamalanews / 2021

ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಮಲ್ಲಿನಾಥ ಪುರಾಣಂ ಮತ್ತು ಇತಿಹಾಸದ ಹಾದಿಯಲ್ಲಿ.

ಡಾ.ಪದ್ಮಿನಿ ನಾಗರಾಜು.

ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.

ಆತ್ಮಿಯರೇ ನಮಸ್ಕಾರ ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಸರಣಿ ಕಾರ್ಯಕ್ರಮ ಪ್ರಾರಂಭವಾಗಿದೆ, ಆ ಸರಣಿ ಕಾರ್ಯಕ್ರಮದ ಮತ್ತೊಂದು ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಅತ್ಮಿಯವಾದಂತಹ ಸ್ವಾಗತ. ನಾನಿಂದು ಪರಿಚಯಿಸುತ್ತಿರುವುದು ಮಲ್ಲಿನಾಥ ಪುರಾಣಂ ಎನ್ನುವ ಕೃತಿ. ಪ್ರಸಿದ್ದ ಕವಿ ನಾಗಚಂದ್ರ ವಿರಚಿತವಾದಂತಹ ಕೃತಿ ಇದು. 19ನೇ ತೀರ್ಥಂಕರರಾದಂತಹ ಮಲ್ಲಿನಾಥರ ಪುರಾಣವನ್ನು ಬರೆದಿರುವಂತಹದ್ದು, ಇದರಲ್ಲಿ ನಾಗಚಂದ್ರರ ಹೆಗ್ಗಳಿಕೆ ಏನೆಂದರೆ 10ನೇ ಶತಮಾನದಲ್ಲಿ ಆದಿಪುರಾಣವನ್ನು ಮತ್ತು ವಿಕ್ರಮಾರ್ಜುನ ವನ್ನು ಬರೆದಂತಹ ಪಂಪ, ಮತ್ತು ರನ್ನ ಬರೆದಿರುವ ಗಧಾಯುದ್ದ ಅಥವಾ ಸಹಾಸ ಭೀಮ ವಿಜಯವನ್ನು ಬರೆಯುತ್ತಾರೆ. ಇವರಿಬ್ಬರು ಮಹಾಭಾರತವನ್ನು ಬರೆದರೆ ನಾಗಚಂದ್ರ ರಾಮಯಣದ ಕಥೆಯನ್ನು ತೆಗೆದು ಕೊಂಡು ರಾಮಚಂದ್ರ ಚರಿತಪುರಾಣವನ್ನು ಬರೆಯುತ್ತಾರೆ. ಅವರೆ ಬರೆದಿರುವಂತಹ ಮಲ್ಲಿನಾಥ ಪುರಾಣಂ ಕೃತಿ ಕರ್ನಾಟಕ ವಿಶ್ವವಿದ್ಯಾಲಯ ದಾರವಾಢದ ಅಧ್ಯಾಯನ ಪೀಠದಿಂದ ಬಂದಂತಹ ಕೃತಿ ಇದು. ಇದರ  ಪ್ರಧಾನ ಸಂಪಾದಕರು ಡಾ|| ಆರ್ ಸಿ ಹಿರೇಮಠರವರು ಇದನ್ನು ಸಂಪಾದನೆ ಮಾಡಿದಂತವರು ಡಾ|| ಬಿ ಬಿ ಹೆಂಡಿ ರವರು.

ಈ ಕೃತಿಯನ್ನು ಬಹಳ ಮುಖ್ಯವಾಗಿ ಏಕೆ ಓದ ಬೇಕು ಅಂದರೆ ಮಲ್ಲಿನಾಥ ಪುರಾಣಂ ಅನ್ನು ಡಾ|| ಬಿ ಎಸ್ ಕುಲಕರ್ಣಿ  ಒಬ್ಬ ಮಹಾನ್ ಜಾನಪದ ಸಂಶೋದಕರು ಮತ್ತು ಲೇಖಕರು ಹಾಗಿದಂತವರು, ಕನ್ನಡ ಅಧ್ಯಾಯನ ಪೀಠದ ಜೈನ ಶಾಖೆಯಲ್ಲಿ ಪ್ರಧ್ಯಾಪಕರಾಗಿದ್ದು ಅ ಸಮಯದಲ್ಲಿ ಈ ಕೃತಿಯನ್ನು ಪರಿಷ್ಕರಣಕಾಗಿ ತೆಗೆದುಕೊಂಡಿದ್ದರು. ಅವರ  ನಂತರ ಅ ವಿಭಾಗಕ್ಕಾಗಿ ಬಿ ಬಿ ಹೆಂಡಿ ರವರು ಬಂದಂತ್ತವರು ಇದನ್ನೂ ಪೂರ್ಣಗೊಳ್ಳಿಸಿದರು. ಹಾಗಾಗಿ ಈ ಕೃತಿ ನಮ್ಮ ಕೈ ಸೇರಲು ಸಾಧ್ಯತೆಯಾಯಿತು. 1974ರಲ್ಲಿ ಪ್ರಥಮ ಕೃತಿಯಾಗಿ ಬಂದಂತಹದ್ದು ಅವಾಗ 15 ರೂಪಾಯಿ ಇತ್ತು. ಈ ಕೃತಿಯ ಸಹಾಯಕ

ಸಂಶೋದಕರಾಗಿ ಎಸ್ ಪಿ ಪಾಟೀಲರೂ, ವಿ ಎಂ ವಾಲಿಯವರು ಕೂಡ ಇದಕ್ಕೆ ಕೆಲಸಮಾಡಿದ್ದಾರೆ.

ಕನ್ನಡ ಸಾಹಿತ್ಯದ ನಬ್ಬೊ ಮಂಡಲದಲ್ಲಿ ಚಿರಂತನ ಧ್ರುವ ತಾರೆಯಂತೆ ಮಿನುಗುವ ಮಹಾಕವಿಗಳಲ್ಲಿ ನಾಗಚಂದ್ರ ಕೂಡ ಒಬ್ಬರು. ಅವರು ಮಹಾಕವಿ ಪಂಪರನ್ನು ಸ್ಮರಿಸಿ ಅತನ ಮಹಾ ಪ್ರಸಾದ ಅಂತ ಹೇಳಿ ಅವರ ಹೆಸರನ್ನು ಅಭಿನವ ಪಂಪ ಎಂದು ಹೇಳಿಕೊಳ್ಳುತ್ತಾರೆ. ನಾಗಚಂದ್ರ ಈ ಕೃತಿಯನ್ನು ಸುಮಾರು 1140 ರಚಿಸಿದ್ದಾರೆ. ನಾಗಚಂದ್ರರವರು ವಿಜಯಪುರದಲ್ಲಿ ಮಲ್ಲಿನಾಥನ ಬಸದಿಯಮ್ಮು ಕಟ್ಟಿಸಿ ಮಲ್ಲಿನಾಥಪುರಣವನ್ನು ರಚಿಸಿದರು. ಅವರು ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯವರು, ನಾಗಚಂದ್ರ ಒಬ್ಬಮಹಾನ್  ಕವಿ ಲಾಲಿತ್ಯ ಅವರ  ಪ್ರಧಾನ ಗುಣ ಅವರ  ಎರಡು ಕಾವ್ಯದಲ್ಲಿ ಚಂಪು ಶೈಲಿ ಗಂಭೀರವಾಗಿ ತುಂಬಿದ ತುಂಗಾಭದ್ರೆಯಂತೆ. ಮಲ್ಲಿನಾಥ ಪುರಾಣ ಅವರ  ಶ್ರೇಷ್ಠ ಕೃತಿ, ಮಲ್ಲಿನಾಥ ಪುರಾಣದಲ್ಲಿ ಕಥಾವಸ್ಥು ತುಂಬಾ ಚಿಕ್ಕದು. ಆದರೆ ನಾಗಚಂದ್ರ ಅದನ್ನು ಚತುರ್ದಶ 14ಮಹಾ ಕಾವ್ಯಗಳಲ್ಲಿ ಮಲ್ಲಿನಾಥರ ಜೀವನ ವೃತ್ತಾಂತ, ತಪಸ್ಸು, ಪಂಚಕಲ್ಯಾಣ ಮುಂತಾದಜೈನ ಪುರಾಣದ ಅಷ್ಟಾಂಗಗಳನ್ನು ಯಶಸ್ವಿಯಾಗಿ ನಾಗಚಂದ್ರ ಪೂರೈಸಿ ಜೈನ ಧರ್ಮವನ್ನು ಉನ್ನತಸ್ಥಾನಕ್ಕೆ ತೆಗೆದುಕೊಂಡು ಹೊದಂತಹ ಕವಿ. ಈ ಕೃತಿಯಲ್ಲಿ ಬಹಳ ಪ್ರಮುಖವಾಗಿರುವಂತಹದ್ದು ಅವರು ತನ್ನ ಭಾಷೆಯನ್ನು ಕಾವ್ಯವನ್ನು ಬಳಸು ಕೊಂಡಿರುವುದಕ್ಕೆ ಒಂದು ಉದಾಹಾರಣೆ, ತಮ್ಮ ಹಿಂದೆ ಇದ್ದಂತಹ ಕವಿಗಳನ್ನು ನೆನಪಿಸಿಕೊಂಡಿದ್ದಾರೆ ಮತ್ತು ಅವರು ನಾನು ಯಾರಿಗೆ ವಂದಿಸುತ್ತೇನೆ ಎಂಬುವುದನ್ನು ಕೂಡ ಹೇಳುತ್ತಾರೆ.

ಇಂತಹ ಒಂದು ಮಹತ್ವದ ಕೃತಿ ಮಲ್ಲಿನಾಥ ಪುರಾಣಂ ಎನ್ನುವಂತಹದ್ದು.

ಮತ್ತೊಂದು ಇತ್ತೀಚಿನ ಕೃತಿಯನ್ನು ಪರಿಚಯಿಸುತ್ತಿರುವುದು ಇತಿಹಾಸದ ಹಾದಿಯಲ್ಲಿ ಎನ್ನುವಂತಹ ಕೃತಿ. ಕೃತಿಯನ್ನು ಬರೆದಿರುವಂತವರು ಪ್ರೋಫೆಸರ್ ವಸಂತಕುಮಾರಿ ಎನ್ನುವವರು ಮೈಸೂರಿನಲ್ಲಿ ನೆಲೆಸಿದ್ದವರು ಮೂಲತಃ ಸಾಲಿಗ್ರಾಮದವರು. ಈ ಕೃತಿ 2003ರಲ್ಲಿ ಬಂದಂತಹದ್ದು, ಈ ಕೃತಿಗೆ ಅವಾಗ 75 ರೂಪಾಯಿ ಇತ್ತು. ಈ ಕೃತಿಯ ಪ್ರಕಾಶಕರು ವಸು ಪ್ರಕಾಶನ ಮೈಸೂರಿನವರು. ಎಂ ಎ ಎಲ್ ಎಲ್ ಬಿ ಮಾಡಿ ನಿವೃತ್ತ ಇತಿಹಾಸ ಪ್ರಧ್ಯಾಪಕರು ಅನ್ನುವಂತಹದ್ದು ಬಹಳ ಮುಖ್ಯ. ಈ ಕೃತಿಯ ಪ್ರಾರಂಭದಲ್ಲಿ ಮನ್ನುಡಿಯನ್ನು ಬರೆದಿರುವುದು ನಾಡೋಜ ಹಂಪನರವರು.

ಈ ಇತಿಹಾಸದ ಹಾದಿಯಲ್ಲಿ ಎನ್ನುವ ಕೃತಿಯಲ್ಲಿ ಕದಂಬರ ಕಾಲದ ಜೈನ ಸ್ತ್ರೀ ಸಮಾಜದ ಬಗ್ಗೆ, ವಿಜಯನಗರದ ಕಾಲದ ಜೈನ ಸೈನ್ಯಾಧಿಕಾರಿಗಳ ಪ್ರಭಾವದ ಬಗ್ಗೆ, ಕರ್ನಾಟಕದಲ್ಲಿ ಜೈನ ಧರ್ಮ, ಕರ್ನಾಟಕ ತಮಿಳುನಾಡಿನ ಜೈನ ಪರಂಪರೆ, ಕೇರಳದ ಜೈನ ಶಾಸನದ ಬಗ್ಗೆ, ಶ್ರೀ ಕ್ಷೇತ್ರ ಶ್ರವಣ ಬೆಳಗೊಳಕ್ಕೆ ಮೈಸೂರು ಅರಸರ ನಿಷ್ಟೇ, ಜೈನ ಸನ್ಯಾಸಿನಿಯರ ಪರಿಕಲ್ಪನೆ, ಕರ್ನಾಟದ ಜೈನ ಸಾಮಜಿಕ

ಧಾರ್ಮಿಕ ಪದ್ದತಿಯಲ್ಲಿ ನೋಪಿಗಳ ಪ್ರಾಮುಖ್ಯ ಹೀಗೆ ಎಂಟು ಪ್ರಬಂಧಗಳು ಈ ಕೃತಿಯಲ್ಲಿ ಇವೆ. ಈ ಕೃತಿಯನ್ನು ಓದಲೇ ಬೇಕಾದಂತಹ ಕೃತಿ ಎಂದು ಹೇಳುತ್ತೇನೆ.

ವಸಂತ ಕುಮಾರಿಯವರು 2002ರಲ್ಲಿ ನಮ್ಮನ್ನು ಅಗಲಿದರು 1940ರಲ್ಲಿ ಅವರು ಹುಟ್ಟಿದರು, ಅವರ ಈ ಒಂದು ಕೃತಿಯನ್ನು  ಓದಬೇಕು ಎಂದು ಪ್ರತಿಯೊಬ್ಬರನ್ನು ಕೇಳಿಕೊಳ್ಳುತ್ತೇನೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್