ಪಂಚಪರಿಮೇಷ್ಠಿ ಆರಾಧನೆ

ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಹಾಗೂ ಪದ್ಮ ಶ್ರೀ ಜೈನ ಮಹಿಳಾ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 9-12-2016ನೇ ಶುಕ್ರವಾರದಂದು ಬೆಳಗ್ಗೆ ಶ್ರೀ ಪಂಚಪರಿಮೇಷ್ಠಿ ಆರಾಧನೆ ವಿಜ್ರಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಕೇಂದ್ರ ಬಿಂದುವಾದ ಎಸ್. ಜಿತೇಂದ್ರ ಕುಮಾರ್ ಹಾಗೂ ಗಣ್ಯರನ್ನು ಸ್ವಾಗತಿಸಿ ಗೌರವಿಸಲಾಯಿತು. ಪಾವನ ಸಾನಿಧ್ಯವಹಿಸಿದ ಮಹಾ ಸ್ವಾಮೀಜಿಯನ್ನು ಭಕ್ತಿಯಿಂದ ಸ್ವಾಗತಿಸಲಾಯಿತ್ತು. ಸ್ವಸ್ತಿಶ್ರೀ ಚಾರಿಕೀರ್ತಿ ಭಟಾರಕ ಮಹಾಸ್ವಾಮಿರವರ ಅಣತೆಯಂತೆ. ಎಸ್. ಜಿತೇಂದ್ರ ಕುಮಾರ್ ರವರ ಅಭಿನಂದನ ಪ್ರಯುಕ್ತ ನಡೆದ ಪಂಚಪರಿಮೇಷ್ಠಿ ಆರಾಧನೆಯಲ್ಲಿ, ಸ್ವಸ್ತಿಶ್ರೀ ಭಟಾಕಲಂಕ ಭಟಾರಕ ಸ್ವಾಮೀಜಿ, ಸ್ವಸ್ತಿಶ್ರೀ ಭಾನುಕೀರ್ತಿ ಭಟಾರಕ ಮಹಾಸ್ವಾಮೀಜಿರವರು ಆರಾಧನಾ ವಿಧಾನವನ್ನು ಅರ್ಥಸಹಿತ ಭೋದಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಆರಾಧನೆಯಲ್ಲಿ ಪಾಲ್ಗೂಂಡು ಅರ್ಗಿವನಿತ್ತರು, ಎಲ್ಲೆಡೆಯಿಂದ ಜೈನ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ನಂತರ ಪೂಜ್ಯಶ್ರೀಗಳು ಧರ್ಮ ಉಪದೇಶ ನೀಡಿದರು. ಮೈಸೂರಿನ ಎರಡು ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಎಸ್.ಜೆ.ಕೆ ಅಭಿನಂದನ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಂದು ಬೆಂಗಳೂರಿನ ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ, ಅಭಿನಂದನ ಕಾರ್ಯಕ್ರಮದ ಬಗ್ಗೆ ಚರ್ಚಿಸಿದರು.