ನಿತ್ಯ ಪೂಜೆ ಪ್ರೋಮೋ / ಜ್ವಾಲಾಮಾಲಾನ್ಯೂಸ್

ಜೈ ಜಿನೇಂದ್ರ ವೀಕ್ಷಕರೆ,

ನಿಮ್ಮ ನೆಚ್ಚಿನ ಜ್ವಾಲಮಾಲ.ನ್ಯೂಸ್ ತಂದಿದೆ ಉತ್ತಮ ಸದವಕಾಶ. ಪ್ರತಿದಿನ ಬಸದಿಗಳಿಗೆ ತೆರಳಿ ಅಭಿಷೇಕ ವೀಕ್ಷಿಸಿ ಅಷ್ಟ ವಿದಾರ್ಚನೆ ಹಾಗೂ ನಿತ್ಯ ಪೂಜೆಗಳಲ್ಲಿ ಭಾಗವಹಿಸುವವರಿಗೆ ಅನುಕೂಲವಾಗಲು, ಇನ್ನು ಮನೆಯಲ್ಲೇ ಈ ಪರಿಪಾಠವನ್ನು ಬೆಳೆಸಿಕೊಂಡವರಿಗೆ ಸಹ, ಅಥವಾ ಇಲ್ಲದಿದ್ದಲ್ಲಿ ಈ ಪರಿಪಾಠವನ್ನು ಇಂದೇ ನೀವುಗಳು ಆರಂಭಿಸಲು ಸಹ ಅನುಕೂಲವಾಗುವಂತೆ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ ಪ್ರತಿದಿನ ಒಂದೊಂದು ಬಸದಿಯ ಅಭಿಷೇಕ, ಅಷ್ಟವಿದಾರ್ಚನೆ ಹಾಗೂ ಪೂಜಾದಿ ಕಾರ್ಯಕ್ರಮಗಳ ನೇರ ಪ್ರಸಾರ ನಿರಂತರವಾಗಿ ಮೂಡಿ ಬರಲ್ಲಿದೆ. ನೀವು ಸೇರಿ ಭಾಗವಹಿಸಿ ಬಸದಿಗಳಲ್ಲಿ ಪ್ರತ್ಯಕ್ಷ ಅಭಿಷೇಕ ಹಾಗೂ ಜಿನೇಶ್ವರರ ಎದುರು ಅಷ್ಟ ವಿದಾರ್ಚಾನೆ ಮಾಡಿ ಪುಣ್ಯರ್ಜನೆ ಮಾಡಬಹುದು. ಇನ್ನೊಂದು ವಿಶೇಷವೆಂದರೆ ಅಭಿಷೇಕ ಪೂಜಾದಿಗಳು ನಿರ್ವಿಘ್ನವಾಗಿ ನಡೆಯಲು ಮತ್ತು ನಿರ್ವಹಣೆ ದೃಷ್ಟಿಯಿಂದ ಹಾಗೂ ಜಿನ ಮಂದಿರಗಳ ಒಳಿತಿನ ದೃಷ್ಟಿಯಿಂದ ನೀವು ಇಚ್ಛಿಸಿದ ಬಸದಿಗಳಲ್ಲಿ ಪೂಜೆಯನ್ನು ನಿಮ್ಮ ಹೆಸರಿನಲ್ಲಿ ನೀಡಬಹುದು. ಅಂದಿನ ದಿನ ನಿಮ್ಮ ಹೆಸರಿನಲ್ಲಿ ಅಲ್ಲಿ ಪೂಜೆ ನಡೆಯುತ್ತದೆ. ಪ್ರತಿದಿನ ಬಸದಿಗಳ ಹೆಸರನ್ನು ಹಿಂದಿನ ದಿನವೇ ನಿಮಗೆ ತಿಳಿಸಲಾಗುತ್ತದೆ. ಹುಟ್ಟುಹಬ್ಬ ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಬಸದಿಗಳಿಗೆ ಜಿನೇಶ್ವರನ ಪೂಜೆಯೊಂದಿಗೆ ನೀವು ಆಚರಿಸಬಹುದು. ಪೂಜೆ ಬರೆಸಲು ಸಂಪರ್ಕಿಸಬಹುದಾದ ಸಂಪರ್ಕ ಸಂಖ್ಯೆ :- 7899796359 ಕಾರ್ಯಕ್ರಮದ ಮೇಲ್ವಿಚಾರಕರಾಗಿ ನಮ್ಮ ಪವನ್ ಪಂಡಿತ್ ರವರು ನಮಗೆ ಸಹಕರಿಸಲಿದ್ದಾರೆ. ಇನ್ನೇಕೆ ಯೋಚನೆ ಪ್ರತಿದಿನ ಮಾಡಿ ಜಿನನ ಸ್ಮರಣೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್