ಕ್ಷೇತ್ರ ಪರಿಚಯ- 20 / ಮೇಳಿಗೆ ಜೈನ ಬಸದಿ / ಪಾರ್ಶ್ವನಾಥ ಸ್ವಾಮಿ / ಶಿವಮೊಗ್ಗ / ತೀರ್ಥಹಳ್ಳಿ

ಇಂದಿನ ಕ್ಷೇತ್ರ ಪರಿಚಯದಲ್ಲಿ ಶಿವಮೊಗ್ಗ ಜಿಲ್ಲೆಯ ಮೇಳಿಗೆ ಬಸದಿಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲಾಗುತ್ತಿದೆ.

 

ಶಿವಮೊಗ್ಗ ಜಿಲ್ಲೆಯ ಬಹುತೇಕ  ಬಸದಿಗಳನ್ನು  ನಮ್ಮ ಕ್ಷೇತ್ರ ಪರಿಚಯದಲ್ಲಿ ಈಗಾಗಲೇ ಪರಿಚಯಿಸಿದ್ದೇವೆ.  ಅವುಗಳ ಸಾಲಿಗೆ  ಹೊಂಬುಜ ಶ್ರೀ ಕ್ಷೇತ್ರದಿಂದ  33 ಕಿಲೋ ಮೀಟರ್  ದೂರದಲ್ಲಿರುವ ಕ್ಷೇತ್ರ ಮೇಲಿಗೆ ಜೈನ  ಬಸದಿ ಯ ಪರಿಚಯ ಮಾಡಿಸುತ್ತಿದ್ದೇವೆ . ಹೊಂಬುಜ ಮಹಾ ಸಂಸ್ಥಾನಕ್ಕೆ ಸೇರಿರುವ ಈಗ ಪ್ರಸ್ತುತ  ರಾಜ್ಯ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ಬಸದಿ  ಶಿವಮೊಗ್ಗ ಜಿಲ್ಲೆಯಲ್ಲಿ  ಬಹಳ ಅಪರೂಪದ ಬಸದಿ. ವೈಶಿಷ್ಟತೆಯಿಂದ ಕೂಡಿದ ಬಸದಿ  ಹಾಗೂ ಬೃಹದಾಕಾರದ  ಬಸದಿಯೂ ಕೂಡ . ಈ ಬಸದಿಯ ಮುಂಭಾಗ  ಕಾಣುವ ಬೃಹದಾಕಾರದ ಮಾನಸ್ಥಂಬವೂ  ಕೂಡ ಬಹಳ ವಿಶಿಷ್ಟವಾದುದು.  ಮಾನಸ್ಥಂಭದ ಅದಿಷ್ಠಾನ ಹಾಗೂ ಮೇಲಿನ ಮಂಟಪಗಳೆರಡೂ ಉತ್ತಮ ಶಿಲ್ಪಾ ವಿನ್ಯಾಸದಿಂದ ಕೂಡಿದೆ. ಇದರ ಸೌಂದರ್ಯಕ್ಕೆ  ವಿನ್ಯಾಸಕ್ಕೆ ಸಮಾನವಾದುವು ಕೆಲವೇ ಕೆಲವು ಮಾನಸ್ಥಂಭಗಳೆಂದರೆ ಹೊಂಬುಜದ  ಪಂಚಬಸದಿ ಮಾನಸ್ಥಂಭ , ಕಾರ್ಕಳದ ಹಿರಿಯ ನಡೆ ಹಾಗೂ ಗುರುವಾಯನಕೆರೆ ಮೂಡುಬಿದಿರೆ ಮಾನಸ್ಥಂಭಗಳು ಬಹಳ ಕಲಾತ್ಮಕವಾಗಿ ನಿರ್ಮಿಸಲಾಗಿದೆ.

 

ಬಸದಿಯ ಮುಂಬಾಗಿಲ ಕೆತ್ತನೆಯಿಂದ ಹಿಡಿದು  ಬಸದಿಯ ಒಳಾಂಗಣ ಕೆತ್ತನೆಗಳು ಕೂಡ ಉತ್ತರ ಭಾರತದ ಮಂದಿರಗಳ ಸೂಕ್ಷ್ಮ ಕೆತ್ತನೆಯನ್ನು ಬಹಳ ಹಿಂದೆಯೇ ನಾವಿಲ್ಲಿ  ಅಲ್ಲಿನ ಬಸದಿಗಳಲ್ಲಿ ಕಾಣಬಹುದು. ಮುಖ ಮಂಟಪ ನವರಂಗ ಅಂತರಾಳ ಗರ್ಭಗುಡಿ ಹೀಗೆ ಒಳ ನಡೆದಾಗ ಗರ್ಭಗುಡಿಯಲ್ಲಿ ಕಾಣಸಿಗುವುದು  ಪಾರ್ಶ್ವನಾಥ ಸ್ವಾಮಿಯ ಮೂಲ ಮೂರ್ತಿ ಹಾಗೂ ಕೆಳಭಾಗದಲ್ಲಿ ನ್ಯೇಮಿನಾಥ ಭಗವಂತರ ಅಮೃತ ಶಿಲೆ ಮೂರ್ತಿ ಆದರೆ ಮೊದಲು ಇದ್ದ ಮೂಲ ಮೂರ್ತಿ ಅನಂತನಾಥಸ್ವಾಮಿಯ ಮೂರ್ತಿಯಾಗಿತ್ತೆಂದು  ಅದು 80 ವರ್ಷಗಳ ಹಿಂದೆಯೇ  ಕಳುವಾಯಿತೆಂದು ಹೇಳಲಾಗುತ್ತದೆ.  ಕಾಲನಂತರ ಈ ಬಸದಿ  ಪಾಳುಬಿದ್ದು 1970ನೇ ಇಸವಿಯಲ್ಲಿ ಶ್ರಾವಕರು ಬಸದಿಯನ್ನು ಸ್ವಚ್ಛಗೊಳಿಸಿ  ಅಲ್ಲಿಗೆ ಹೊಂಬುಜದ ಆಗಿನ ಪೀಠಾಧಿಪತಿಗಳಾದ ದೇವೇಂದ್ರ ಕೀರ್ತಿ ಸ್ವಾಮೀಜಿಯವರಿಂದ ಪಾರ್ಶ್ವನಾಥ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.

ಇಲ್ಲಿನ ಮತ್ತೆರೆಡು ವೈಶಿಷ್ಟ್ಯಗಳೆನೆಂದರೇ  ಬಸದಿಯ ಹೊರಗಿರುವ ಕ್ಷೇತ್ರಪಾಲ ಹಾಗೂ ಸರ್ವಾಣಿ ಲಕ್ಷಣ ಶಿಲ್ಪಗಳು . ಬೃಹದಾಕಾರವಾದ ಸುಂದರವಾದ ವೈಶಿಷ್ಟ್ಯಪೂರ್ಣ ಕ್ಷೇತ್ರಪಾಲ ಮೂರ್ತಿ  ಒಂದೆಡೆಯಾದರೆ ಸರ್ವಾಂಘೇಶನ ಮೂರ್ತಿ ಆನೆಯ ಮೇಲೆ ನಿಂತು ತನ್ನ ನಾಲ್ಕು

ಕೈಗಳ ಪೈಕಿ 2 ಕೈಗಳಿಂದ ಧರ್ಮ ಚಕ್ರವನ್ನು ಎತ್ತಿ ಹಿಡಿದು ನಿಂತಿರುವುದು ಹಾಗೂ ಹಿಂಭಾಗದಲ್ಲಿಯೂ ಕೂಡ ಕೆತ್ತನೆ ಇಡುವುದು ಒಂದು  ಅಪರೂಪದ ಗೌರವವರ್ಣದ  ಕಲ್ಲಿನ ಮೂರ್ತಿಯಾಗಿದೆ. ಇಂತಹ ಒಂದು ಬಸದಿಯನ್ನು ಹೊಂಬುಜಕ್ಕೆ ಭೇಟಿ ನೀಡಿದಾಗ ದರ್ಶನ ಮಾಡಿಬನ್ನಿ.