ಆತ್ಮೀಯ ವೀಕ್ಷಕರೇ ನಮಸ್ಕಾರ ಜ್ವಾಲಾ ಮಾಲ ಡಾಟ‍್ ನ್ಯೂಸ‍್ ವತಿಯಿಂದ ಈಗಾಗಲೇ ಹೊಸ ಸರಣಿಯೊಂದು ಪ್ರಾರಂಭವಾಗಿದೆ. ಜ್ಞಾನದೀಪಿಕೆಗಳು ಈ ಸರಣಿಯ ಮತ್ತೊಂದು ಸಂಚಿಕೆಗೆ ತಮ್ಮೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇನೆ. ಈ ದಿನ ನಾನು ಪರಿಚಯ ಮಾಡಲು ಇರುವಂತಹ ಒಂದು ಮಹತ್ವದ ಪ್ರಾಚೀನ ಕೃತಿ ಪಂಪ ಭಾರತ ಅನ್ನುವಂತಹದು ಯಾಕೆ ಪಂಪ ಬಹಳ ಮುಖ್ಯ ಆಗುತ್ತಾನೆ.ಅಂದರೆ ಆದಿ ಕವಿ ಪಂಪ ನಾವೇಲ್ಲರು ಕನ್ನಡಸಾಹಿತ್ಯವನ್ನು ಓದುವಾಗ ಮೊಟ್ಟಮೊದಲ ಕವಿ ಯಾರು ಎಂದರೆ ಅದು ಪಂಪನ ಹೆಸರನ್ನು ಹೇಳುತ್ತೇವೆ. ಆಂಧ್ರದಲ್ಲಿ ಇದ್ದಂತಹ ವೈದಿಕ ಧರ್ಮದಲ್ಲಿ ಇದ್ದಂತಹ ಕವಿ ಆ ನಂತರ ತನಗೆ ಆಶ್ರಯ ಕೊಟ್ಟಂತಹ ಶೈವ ಧರ್ಮದ ರಾಜನಿಗೆ ಬರೆದಂತಹ ಕಾವ್ಯವಿದು ಅನ್ನುವಂತಹದನ್ನು ಗಮನಿಸಹಬಹುದು ವಿಕ್ರಮಾರ್ಜುನ ವಿಜಯ ಮೂಲಹೆಸರಾದರು ಕೂಡ ಇದಕ್ಕೆ ಪಂಪಭಾರತ ಎನ್ನುವ ಮತ್ತೊಂದು ಹೆಸರಿದೆ ಈ ಕೃತಿಯನ್ನು ತಾಳೆ ಗರಿಯಿಂದ ಅನೇಕರು ಈಗಾಗಲೇ ವಿಶ್ಲೇಷಣೆ ಮಾಡಿರುವುದನ್ನು ನೊಡುತ್ತೇವೆ.ಅದರಲ್ಲೂ ಡಿ.ಎಲ್ ನರಸಿಂಹಾಚಾರ್ಯರು ಇರಬಹುದು ಎಲ್ ಬಸವರಾಜು ಅವರು ಇರಬಹುದು ಕುವೆಂಪುರವರು ಇರಬಹುದು ಇವರೆಲ್ಲರು ಇದನ್ನು ಕನ್ನಡಕ್ಕೆ ತಂದಿರುವುದನ್ನು ಗದ್ಯಯನಮಾಡಿರುವುದನ್ನು ನಾವು ನೊಡುತ್ತೇವೆ.ಅಂದರೆ ಈಗ ನಾನು ತೊರಿಸುತ್ತಿರುವುದು ಅನಂತರಂಗಚಾರ್ಯರು ಮಾಡಿರುವಂತಹ ಈ ಕೃತಿ ಇದು ಗದ್ಯಾನುವಾದ ಆಗಿರುವಂತಹ ಕೃತಿ ಇದು ಕನ್ನಡ ಸಾಹಿತ್ಯಪರಿಷತ್ ಪ್ರಕಟಮಾಡಿರುವಂತಹದ್ದು 77ರಲ್ಲಿ 67ನೇ ಯ ಕನ್ನಡ ಸಾಹಿತ್ಯಸಮ್ಮೇಳನದ ಸಂಧರ್ಭದಲ್ಲಿ ಈ ಪಂಪ ಭಾರತವನ್ನು ಪ್ರಕಟಮಾಡಿರುವಂತಹದು ಪಂಪ ಎರಡು ಕೃತಿಗಳನ್ನು ಬರೆದಿದ್ದಾನೆ. ಒಂದು ಆದಿಪುರಾಣ ಮತ್ತು ವಿಕ್ರಮಾರ್ಜುನವಿಜಯ ಆ ವಿಕ್ರಮಾರ್ಜುನವಿಜಯವೆ ಪಂಪಭಾರತ ಎನ್ನುವಂತಹದ್ದು.ಈ ಕೃತಿ ಆತನ ಶೈಲಿಗಾಗಿ ಆತನ ಬರವಣಿಗೆಗಾಗಿ ಆತ ನೋಡಿದಂತಹ ಒಂದು ರೀತಿ ಮೂಲಮಹಾಭಾರತವನ್ನು ನೋಡಿದಂತಹ ರೀತಿಗಿಂತ ವಿಭಿನ್ನವಾಗಿ ಆತ ಇದನ್ನು ನೋಡುತ್ತಾನೆ.ಎನ್ನುವಂತಹದ್ದು. ಬಹಳ ಮುಖ್ಯ ಯಾಕೆಂದರೆ ಮೂಲಭಾರತದಲ್ಲಿ ನೋಡಿದ್ದಂತಹ ಹೀರೊಗಳೆ ಬೇರೆ ಅರ್ಜುನ ಇರಬಹುದು ಧರ್ಮರಾಯ ಇರಬಹುದು. ಭೀಮ ಇರಬಹುದು ಬೇರೆ ಆದರೆ ಈತ ಅರ್ಜುನನ ಬಗ್ಗೆ ಹೇಳುತ್ತಾ ಹೇಳುತ್ತಾ ಕರ್ಣನ ಬಗ್ಗೆ ಅತ್ಯಂತ ಪ್ರೀತಿಯ ಮಾತುಗಳನ್ನು ಹೇಳುತ್ತಾನೆ.ಅದರಲ್ಲಿ ಇಲ್ಲಿ ಒಂದು ಸಂಧರ್ಭವನ್ನು ಹೇಳಲು ಇಷ್ಟಪಡುತ್ತೇನೆ. ಕರ್ಣನ ಅದ್ಭುತ ಜೀವನ ಪಂಪನ ಹೃದಯವನ್ನು ಹೇಗೆ ಸೂರೆ ಗೊಂಡಿತ್ತು ಎಂಬುದನ್ನ ಆತ ಹೇಗೆ ಪದ್ಯದಲ್ಲಿ ಇಡುತ್ತಾನೆ ಎಂದರೆ ನೆನೆಯದಿರಣ್ಣ ಭಾರತ ದೊಳಿಂ ತೆರೆರಾರುಮ ಒಂದೇ ಚಿತ್ತದಿಂನೆನೆವೊಡೆ ಕರ್ಣನಂ ನೆನೆ ಕರ್ಣನ ವಿಷಯ ಕೇಳೋದೆ ಕರ್ಣ ಎಂದರೆ ಕಿವಿಕೇಳೋದೆ ಮಹಾಭಾರತ ಕರ್ಣನಪ್ರೀತಿ ಕರ್ಣನ ತ್ಯಾಗ ಧುರ್ಯೋಧನನ್ನು ನೋಡಿಕೊಂಡಂತಹ ಪ್ರೀತಿ ಬಹಳ ಮುಖ್ಯ ಎನ್ನುವುದನ್ನು ಈ ಒಂದು ಪಂಪಭಾರತದಲ್ಲಿ ನೋಡುವಂತದ್ದು ಹಾಗಾಗಿ ಈ ಕೃತಿ 150 ರೂಪಾಯಿಯಲ್ಲಿ ಕನ್ನಡ ಸಾಹಿತ್ಯಪರಿಷತ್ತು ಪ್ರಕಟಮಾಡಿದೆ. ಇದೊಂದು ಮಹತ್ವದ ಕೃತಿ ಗದ್ಯಾನುವಾದವನ್ನು ಓದುವುದಾಗಿದೆ.ಅನ್ನುವಂತಹದನ್ನು ಗಮನಿಸಬಹುದು ಮತ್ತೋಂದು ಈತ್ತೀಚೆಗೆ ಬರೆದಂತಹ ಮತ್ತೋಂದು ಕೃತಿಯನ್ನ ಪರಿಚಯ ಮಾಡಬೇಕು ಅಂದರೆ ಅದು ಇವತ್ತು ನಾನು ಪರಿಚಯ ಮಾಡುತ್ತಿದ್ದೇನೆ.ಜೈನ ವಿಗ್ರಹಗಳು ಅನ್ನುವುದನ್ನು ಡಿ .ಎನ್ ನಕ್ಕಿಸರ್ ರವರ ಕೃತಿ ಡಿ. ಎನ್ ನಕ್ಕಿಸರ್ ಮಾಸ್ತರು ಅತ್ಯಂತ ಹಿರಿಯ ಸಂಶೋಧನಾ ತಜ್ಞರು ಕೂಡ ಇತ್ತೀಚೆಗಷ್ಟೇ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.ತಮ್ಮ ಮಧ್ಯೆಇರುವಂತಹ ಅತ್ಯಂತ ಸರಳ ಸಜ್ಜನಿಕೆ ಡಿ.ಎನ್ ನಕ್ಕಿಸರ್ ರವರು ಬಹುಮುಖ ಪ್ರತಿಭೆವುಳ್ಳಂತಹ ಒಬ್ಬ ಮೇಷ್ಟ್ರು ನಾವು ಮೇಷ್ಟ್ರು ಏನು ಮಾಡಲಿಕ್ಕೆ ಸಾಧ್ಯ ಆದರೆ ಆಸಕ್ತಿ ಅನ್ನುವುದಿದ್ದರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಡಿ.ಎನ್ ನಕ್ಕಿಸರ್ ಒಂದು ಉದಾಹರಣೆ ಚಿತ್ರಕಲಾಶಿಕ್ಷಕರಾಗಿ ವಾಸ್ತುಶಿಲ್ಪ ಕುರಿತಂತೆ ಅತ್ಯಂತ ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ.ಜೊತೆಗೆ ಅವರು 2000 ವರ್ಷಗಳ ಹಿಂದಿನ ಶಾತವಾಹನರ ಸೀಸದ ನಾಣ್ಯಗಳನ್ನು ನವಶೀಲಾ ಯುಗದ ಬೂದಿಗುಡ್ಡ ಕಲ್ಯಾಣ ಚಾಲುಕ್ಯರ ಕಾಲದ ಕಂಚಲಾದೇವಿ ಶಾಸನ ಸಗರದಲ್ಲಿ ಗುರುತಿಸುತ್ತಿದ್ದು ಹಾಗು ಹೈದರಾಬಾದ್ ಕರ್ನಾಟಕದಲ್ಲಿ ಪ್ರಮುಖ ಶಿಲ್ಪಗಳ ವಿಗ್ರಹಗಳ ವಿಶೇ಼ಷತೆಗಳನ್ನ ಲಕ್ಷಣಗಳನ್ನ ಕಲಾತ್ಮಕ ಗುಣಗಳನ್ನು ಸಂಶೋಧನಾತ್ಮಕವಾಗಿ ಕಂಡುಹಿಡಿಯುವುದು ಒಂದು ಕಷ್ಟವಾದರೆ ಪ್ರಕಟಮಾಡುವುದು ಇನ್ನೋಂದು ಕಷ್ಟ ಎಲ್ಲದ್ದಕ್ಕೂ ಹಣ ಅನ್ನುವುದು ಬಹಳ ಮುಖ್ಯ ನಾನು ಕಲ್ಬುರ್ಗಿಗಷ್ಟೆ ಸೀಮಿತಮಾಡಿದ್ದೇನೆ ನನ್ನ ಸಂಶೋಧನೆಯನ್ನು ಮತ್ತು ಸುತ್ತ ಮುತ್ತಕಷ್ಟೆ ಈ ಕರ್ನಾಟಕ ಸುತ್ತಲಿಕ್ಕೆ ಕ್ಷೇತ್ರ ಕಾರ್ಯ ಮಾಡಲಿಕ್ಕೆ ನನ್ನಲ್ಲಿ ಬಲನೂ ಇರಲಿಲ್ಲ ಅನುಕೂಲನು ಇರಲಿಲ್ಲ ಬಲ ಎಂದರೆ ಧನ ಬಲ ಎಂಬುದನ್ನು ಗಮನಿಸಬಹುದು. ನಾನು ನನ್ನ ಸೀಮಿತ ಅವಧಿಯಲ್ಲಿಯೇ ನಾನು ಎಲ್ಲಾ ಕೆಲಸಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ.ಈ ಜೈನ ವಿಗ್ರಹಗಳು ಮತ್ತು ಜೈನಶಿಲ್ಪ ಜೈನಚಿತ್ರಕಲೆ ಇವೆಲ್ಲವೂ ಜೈನಧರ್ಮ ಸಾಹಿತ್ಯಕ್ಕೆ ಹೇಗೆ ವಿಶಿಷ್ಟಕೊಡುಗೆ ಕೊಟ್ಟಿದೆ ತತ್ವಗಳನ್ನು ಶಿಲ್ಪಕಲೆಗೂ ಮಹತ್ವದ ಜೈನ ಸಾಹಿತ್ಯದಷ್ಟೆ ಮನ್ನಣೆ ಕೊಟ್ಟಿದೆ.ಈ ಒಂದು ದೇವಾಲಯಗಳಲ್ಲಿ ಬಸಿದಿಗಳಲ್ಲಿ ನಿರ್ಮಾಣಗಳಲ್ಲಿ ಶಿಲ್ಪಗಳಲ್ಲಿ ಇವೆಲ್ಲ ಇದ್ದಾವೆ ಎಂಬುದನ್ನು ಗಮನಿಸಬಹುದು ಇಡೀ ಜೈನ ವಿಗ್ರಹಗಳಿಗೆ ಸಂಬಂಧ ಪಟ್ಟಂತೆ ಸಚಿತ್ರಮಾಣಿಕ್ಯಅನೇಕ ಚಿತ್ರಗಳನ್ನು ಅಳವಡಿಸಿದ್ದಾರೆ ಬಹಳ ಮುಖ್ಯ ಇರುವಂತಹ ಕೃತಿ ಅದರಲ್ಲೂ ಬಹಳಮುಖ್ಯವಾಗಿ ಮೆಗೂತಿ ಬಸೀದಿ ಬಾಗಲಕೋಟೆ ಜಿಲ್ಲೆದು ಪಾರ್ಶ್ವನಾಥ ಬಸೀದಿ ಗುಲ್ಬರ್ಗಜಿಲ್ಲೆದು ರಾಣಿ
ಜಾಕಲದೇವಿ ಬಸೀದಿ ಚಿತ್ತಾಪುರದ್ದು ಗುಲ್ಬರ್ಗಜಿಲ್ಲೆದ್ದು ಇವೆಲ್ಲವೂ ಕೂಡ ವಿಷದಿ ಶಿಲ್ಪಗಳ ಬಗ್ಗೆ ಬರೆದಿದ್ದಾರೆ ಸ್ವಸ್ತಿಕ್ ಬಗ್ಗೆ ಬರೆದಿದ್ದಾರೆ ಸರಸ್ವತಿ ಪ್ರತಿಮೆಗಳಬಗ್ಗೆ ಬರೆದಿದ್ದಾರೆ ಪರಮಜಿನೇಂದ್ರವಾಣಿಯೇ ಸರಸ್ವತಿ ಎಂದು ಪಂಪ ಹೇಳಿರುವಮಾತನ್ನು ಕೇಳಿ ಬಂದಿದ್ದೇವೆ. ಅದರ ಸ್ವರೂಪ ಶಾರೀರಿಕ ಶಿಲ್ಪಗಳನ್ನು ಜೈನರು ಹೇಗೆ ಕೊಟ್ಟರು ಅಂತ ಅನ್ನುವುದನ್ನು ಈ ಸಣ್ಣ ಕೃತಿಯಲ್ಲಿ ಕಟ್ಟುಕೊಡುತ್ತಾರೆ.ಡಿ ಎನ್ ನಕ್ಕಿಸರ್ ರವರೆ ಹೇಳಿದ್ದಾರೆ. ಒಂದು ಲೇಖನ ಬರೆದು ಇಟ್ಟಿದ್ದೆ ಅದು ಪ್ರಕಟ ಆಗಿರಲಿಲ್ಲ ಆ ನಂತರ ಪ್ರಕಟ ಆಗುವಾಗ ಅದನ್ನು ನಾನು ಬಹಳ ಮುಖ್ಯವಾಗಿ ಪುಸ್ತಕಕ್ಕೆ ನೆರವು ನೀಡುಲು 10.000 ರೂ ಹಣವನ್ನು ಕಲ್ಬುರ್ಗಿಯ ಖ್ಯಾತ ನ್ಯಾಯವಾದಿ ಅವರು ಕೊಟ್ಟರು ಅಂತನೂ ಹೇಳಿದ್ದಾರೆ. ಹಾಗಾಗಿ ಅವರ ಇಡೀ ಪರಿಶ್ರಮ ಈ ಕೃತಿಯಲ್ಲಿ ಇದೆ ಡಿ.ಎನ್ ನಕ್ಕಿಸರ್ ರವರ ಈ ಕೃತಿ ಬಹಳ ಮುಖ್ಯವಾಗಿ ಪ್ರಕಟವಾಗಿರುವಂತಹ 25 ರೂ ಅಷ್ಟೆ ಪ್ರಥಮ ಮುದ್ರಣ ಕಂಡಿರುವುದು 2000ವರ್ಷದಲ್ಲಿ ಮತ್ತೆ ಮುಖಪುಟದ ಶಿಲ್ಪ ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬ ಎಂಬ ಗ್ರಾಮದಲ್ಲಿ ಭಗವಾನ್ ಪದ್ಮಪ್ರಭ ತೀರ್ಥಂಕರರ ಪ್ರತಿಮೆ ಎಂದು ಅವರು ಇಲ್ಲಿ ಹೇಳುತ್ತಿದ್ದಾರೆ. ಇದನ್ನು ಮುದ್ರಣಮಾಡಿರುವುದು ನವನೀತ ಮುದ್ರಣಾಲಯ ಆನಂದಪುರ ರಸ್ತೆ ಬೆಂಗಳೂರು ಇದು ಅತ್ಯಂತ ಪುಟ್ಟಪುಸ್ತಕ ವಾದರೂ ಅತ್ಯಂತ ಓದಲೇ ಬೇಕಾದ ಜೈನಶಿಲ್ಪಕಲೆ ಜೈನವಿಗ್ರಹಗಳಬಗ್ಗೆ ಕಣ್ಣು ತೆರೆಸುವಂತದ್ದು ಯಾಕೆಂದರೆ ಇದಕ್ಕಿಂತ ವಿಸ್ತಾರವಾಗಿ ಬರೆದಿರಬಹುದು ಆದರೆ ಜನಸಾಮಾನ್ಯರಿಗೆ ತಲುಪುವಂತೆ ಡಿ ಎನ್ ನಕ್ಕಿಸರ್ ರವರು ಈ ಕೃತಿಯನ್ನು ರಚಿಸಿದ್ದಾರೆ ಎರಡು ಕೃತಿಗಳ ಬಗ್ಗೆ ನಿಮಗೆ ತಿಳಿಸಲು ಅವಕಾಶ ಸಿಕ್ಕಿರುವುದರಿಂದ ಕೃತಿ ಗಳನ್ನು ತಿಳಿದುಕೊಳ್ಳುವುದು ಅಷ್ಟೆ ಅಲ್ಲದೆ ಅವುಗಳನ್ನು ಓದಿ ಅವುಗಳ ಸಾರ ತಿಳಿದುಕೊಳ್ಳುವ ಕೆಲಸಮಾಡಭೇಕು ಜೈನರು ಬರೀ ಕೃತಿಗಳನ್ನು ಸಂಗ್ರಹಿಸಿದ್ದಾರೆ ಬಹಳಷ್ಟು ಮನೆಗಳಲ್ಲಿ ಕೃತಿಗಳನ್ನು ನೊಡುತ್ತೇವೆ ಓದಿದ್ದಾರ ಅನ್ನುವುದು ದೊಡ್ಡಪ್ರಶ್ನೆ ಓದುವ ಸಂಸ್ಕೃತಿ ಹೆಚ್ಚಲಿ ಈ ಕಾರ್ಯ ಕ್ರಮದ ಉದ್ದೇಶ ಅರಿವನ್ನು ಹೆಚ್ಚಿಸಿಕೊಳ್ಳುವ ಕೆಲಸ ಮಾಡಿ ಎಂದು ಹೇಳುತ್ತೇವೆ.














