ಇಂದು ಪರಿಚಯಿಸುತ್ತಿರುವ ಪುಸ್ತಕಗಳು ವಡ್ಡಾರಾಧನೆಯ ಕಥೆಗಳು ಮತ್ತು ಅರಸೀಕೆರೆ ಸಹಸ್ರಕೂಟ ಜಿನಾಲಯ.
ಡಾ.ಪದ್ಮಿನಿ ನಾಗರಾಜು.
ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.
ಆತ್ಮಿಯರೇ ನಮಸ್ಕಾರ ಹೊಸದೊಂದು ಸರಣಿ ಕಾರ್ಯಕ್ರಮಕ್ಕೆ ತಮಗೆಲ್ಲಾರಿಗೂ ಸ್ವಾಗತ, ಜ್ಞಾನದೀಪಿಕೆ ಎನ್ನುವಂತಹ ಈ ಸರಣಿ ಕಾರ್ಯಕ್ರಮದಲ್ಲಿ ಕನ್ನಡ ಕೃತಿಕಾರರು ಜೈನಕೃತಿಕಾರರು ಕನ್ನಡದಲ್ಲಿ ಬರೆದಿರುವಂತಹ ಜೈನ ಕೃತಿಗಳನ್ನ, ಧಾರ್ಮಿಕ ಕೃತಿಗಳನ್ನ ಮತ್ತು ಸಮಾಜಿಕ ಕೃತಿಗಳನ್ನ ಪರಿಚಯ ಮಾಡಿಸುವಂತಹ ಕೆಲಸವನ್ನು ಈ ಸರಣಿಯಲ್ಲಿ ಮಾಡಲ್ಲಿದೇವೆ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸ ಬೇಕಾಗಿರುವಂತಹದ್ದು ಇದ್ದು ಅವಲೋಕನವಲ್ಲಾ, ಪೂರ್ತಿಯಾಗಿ ಕೃತಿ ಏನು ಹೇಳುತ್ತದೆ ಎಂದು ನಾವು ಹೇಳುತ್ತಿಲ್ಲ, ಆದರೆ ಈ ಕೃತಿ ಯಾವುದು ಓದಬೇಕು ಎಂದು ಆಸಕ್ತಿ ಇರುವವರಿಗೆ ಈ ಕೃತಿಗಳು ಎಲ್ಲಿ ಸಿಗುತ್ತದೆ, ಈ ಕೃತಿಯಲ್ಲಿ ಏನು ಇದೆ ಎನ್ನುವಂತಹ ಒಂದು ಕಿರುಚಿತ್ರಣವನ್ನು ಕೊಡುವಂತಹದು ಈ ಒಂದು ಸರಣಿಯ ಜ್ಞಾನದೀಪಿಕೆಯ ವಿಶೇಷ ಅನ್ನುವಂತಹದು ತಾವೇಲ್ಲರೂ ಗಮನಿಸ ಬೇಕು.
ಇಲ್ಲಿ ಮೊಟ್ಟಮೊದಲಿಗೆ ನಾನು ವಡ್ಡಾರಾಧನೆಯ ಕೃತಿಯ ಬಗ್ಗೆ ಮಾತನಾಡ ಬೇಕೆಂದು ಕೂತಿದ್ದೇನೆ. ಡಿ ಎಲ್ ನರಸಿಂಹಚಾರರು ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲಿಗೆ ಈ ಒಂದು ವಡ್ಡಾರಾಧನೆಯನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟಂತಹದ್ದು, ಐದಾರೂ ಓಲೆ ಗರಿಗಳನ್ನು ಗಮನಿಸಿ ಅನಂತರದಲ್ಲಿ ರಾಮಶ್ರೀಮುಗಳಿ ಇರಬಹುದು ಪ್ರೋಫೆಸರ್ ಕಮಲ ಹಂಪಾನ ಇವರೇಲ್ಲರೂ ಕೂಡ ಈ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟರು ಅನ್ನುವಂತಹದು. ಡಾ|| ಹಂಪನ ರವರು ಸಾಲಿಗ್ರಾಮದಲ್ಲಿ ಸಿಕ್ಕಂತಹ ಸರಾಭ್ ಜಿನ್ ರಾಜಯ್ಯ ರವರ ಮನೆಯಲ್ಲಿ ಇದಂತಹ ಒಂದು ಓಲೆಗರಿಯನ್ನು ಇಟ್ಟುಕೊಂಡು ಈ ಒಂದು ಕೃತಿಯನ್ನು ಸಂಶೋದನಾತ್ಮಕ ವಿವರಣೆಯೊಂದಿಗೆ ಕನ್ನಡ ಸಾಹಿತ್ಯಕ್ಕೆ ಕೊಟ್ಟರು. ಅನಂತರದಲ್ಲಿ ಮತ್ತಷ್ಟು ಸಂಶೋದನೆಯನ್ನು ನಾಡೋಜ ಹಂಪನ ರವರು ಮಾಡಿ ಇದು ಆರಾಧನ ಟಿಕಾ ವಡ್ಡಾರಾಧನೆ ಅಲ್ಲಾ ಎಂದು ಹೇಳಿ ಆರಾಧನ ಕರ್ನಾಟಕ ಟಿಕಾ ಈ ಕೃತಿ ಬ್ರಾಜಿಷ್ಟು ಬರೆದಿರುವಂತಹದ್ದು ಶಿವಕೋಟೆ ಆಚಾರ್ಯ, ಶಿವಾರ್ಯ, ಶಿವಯ್ಯ ಇವರು ಅಲ್ಲಾ ಎನ್ನುವುದನ್ನು ಕೂಡ ಹೆಚ್ಚಿನ ಸಂಶೋದನೆ ಇಂದ ಕನ್ನಡ ಸಾಹಿತ್ಯದ ಜನಮಾನಕ್ಕೆ ತಂದುಕೊಟ್ಟಂತವರು.
ಈ ವಡ್ಡಾರಾಧನೆ ಕೃತಿಯನ್ನು ನಾವು ಯಾಕೆ ಓದ ಬೇಕು ಎಂದರೆ ಅದು 19 ಕಥೆಗಳಿರುವಂತಹ ಕನ್ನಡ ಸಾಹಿತ್ಯದಲ್ಲಿ ಸಿಗುವಂತಹ ಮೊಟ್ಟಮೊದಲ ಗದ್ಯ ಗ್ರಂಥ. ಗದ್ಯಲೋಕದ ಉಜ್ವಲ ದೀಪ ಸ್ಥಂಭ ಎಂದು ನಾವು ಕರೆಯುತ್ತೇವೆ. ಈ ಕೃತಿಯನ್ನು ಬಹಳ ಮುಖ್ಯವಾಗಿ ಗಮನಿಸಿದಾಗ ಇದರಲ್ಲಿ ಇರುವಂತಹ ಕಥೆಗಳು ಕೇವಲ ಧಾರ್ಮಿಕ ಕಥೆಗಳಲ್ಲಾ. ಈ ಕೃತಿಯನ್ನು ಗಮನಿಸಿದರೆ ಮೇಲ್ನೋಟ್ಟಕ್ಕೆ ಕಥೆಗಳು, ಒಳಹೊಕ್ಕರೆ ಧಾರ್ಮಿಕ ಉದ್ದೇಶದ ಆಶಯಗಳನ್ನು ಮಡಿಲಿನಲ್ಲಿ ತುಂಬಿಕೊಂಡಿವೆ ಅನ್ನುವಂತಹದನ್ನು ನಾವು ಗಮನಿಸಬಹುದು. ವೈರಾಗ್ಯ ಪರವಾಗಿರುವಂತಹ ಈ ಒಂದು ಕಥೆಗಳು ತೋರಿಕೆಯ ಲೌಕಿಕ ಆಗಮಿಕಗಳ ಬೇಧವನ್ನು ತೊಡೆದು ಹಾಕಿ ಜನರ ಸಮಾಜಿಕ ಬದುಕಿನ ಆಸೆ ಆತಂಕ ಆನಂದ ತಲ್ಲಣ ದೌರ್ಬಲ್ಯಗಳನ್ನ ಒಟ್ಟಾಗಿ ಚರ್ಚಿಸುವ ಕಥನಗಳು ಅನ್ನುವಂತಹದ್ದು.ಕೇವಲ 9ನೇ ಶತಮಾನಕ್ಕೆ ಮಾತ್ರವಲ್ಲ ಈ ಕಾಲಕ್ಕೂ ಸಮಾಕಾಲಿನ ಬದುಕಿಗೂ ಬಹಳ ಮುಖ್ಯ ಅನುವಂತಹದನ್ನ ನಾವು ಗಮನಿಸುತ್ತೇವೆ. ಇದನ್ನು ಅನೇಕ ಜನ ಹೀಗಾಗಲೆ ಕನ್ನಡ ಸಾಹಿತ್ಯದಲ್ಲಿ ವಡ್ಡಾರಾಧನೆಯ ಕೃತಿಯನ್ನು ತಂದಿದ್ದಾರೆ ಆ ಕೃತಿಯ ಬಗ್ಗೆ ಬಹಳಷ್ಟು ಸಂಶೋಧನೆಗಳು ಕೂಡ ಹಾಗಿವೇ. ಇಲ್ಲಿ ನಾವು ತೋರಿಸುತ್ತಿರುವಂತಹ
ವಡ್ಡಾರಾಧನೆ ಕಥೆಗಳು ಅನ್ನೂವಂತ ಈ ಕೃತಿ ಜಿ ಬ್ರಹ್ಮಪ್ಪ ಅನ್ನುವವರು 1995ರಲ್ಲಿ ತಂದಂತಹ ಕೃತಿ, ಮೈಸೂರಿನ ರತ್ನಾತ್ರೇಯ ಪ್ರಕಾಶನ ದಿಂದ ತಂದಿರುವಂತಹದ್ದು. ಇದಕ್ಕೆ 40 ರೂಪಾಯಿಗಳು, ಇನ್ನೊಂದು ಮಹತ್ವದ ಕೆಲಸ ಮಾಡಿರುವುದು ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ ಹಂಪಿಯವರು ಶಿವಕೋಟ್ಯಾಚಾರ್ಯರು ಮತ್ತು ಚಾವುಂಡರಾಯ ಸಂಪುಟ ಎಂದು ತಂದರು ಅದರ ಸಂಪಾದಕರು ಪ್ರೋಫೆಸರ್ ನಾಡೋಜ ಕಮಲ ಹಂಪನ ಅವರು ಇದರಲ್ಲಿ ಸಮಗ್ರವಾಗಿ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ ಕೃತಿಯ ಬಗ್ಗೆ ಇರುವಂತಹದು ಇದಕ್ಕೆ ವಿವೇಕ್ ರೈಯವರು ಮುನ್ನುಡಿಯನ್ನು ಬರೆದಿದ್ದಾರೆ ಮತ್ತು ಚಾವುಂಡರಾಯನ ಪುರಾಣ ಕೂಡ ಇದರಲ್ಲಿದೆ. 2006ರಲ್ಲಿ ಕರ್ನಾಟಕ ಸರ್ಕಾರದ ಆರ್ಥಿಕ ಸಹಕಾರದಿಂದ ಈ ಕೃತಿ ಕೈ ಸೇರಿದೆ. ವಡ್ಡಾರಾಧನೆಯನ್ನು ಪ್ರತಿಯೊಬ್ಬರು ಕೂಡ ಓದ ಬೇಕಾಗಿರುವಂತಹದ್ದು 19 ಕಥೆಗಳಲ್ಲೂ ಕೂಡ ಕಥೆಯೊಳಗೆ ಕಥೆ ಇರುವಂತಹದ್ದು. ಕರ್ನಾಟಕ ಸರ್ಕಾರದ ಐಸ್ಕೂಲ್ ಪುಸ್ತಕಗಳಲ್ಲೂ ಕೂಡ ಇದೆ. ಪಿ ಯು ಸಿ ಮತ್ತು ಪದವಿಯಲ್ಲೂ ವಡ್ಡಾರಾಧನೆ ಕಥೆಗಳು ಇವೆ.
ಈ ಪ್ರಾಚೀನ ಕೃತಿಯನ್ನು ಈ ಸರಣಿಯಲ್ಲಿ ಪರಿಚಯ ಮಾಡಿಕೊಡುವುದರ ಜೊತೆಗೆ ಅದೇ ರೀತಿಯಲ್ಲಿ ಮತ್ತೊಂದು ಕೃತಿಯನ್ನ ನವ್ಯಕಾಲ ಘಟ್ಟಗೆ ಬಂದಾಗ ಪರಿಚಯ ಮಾಡಿಸುವಂತಹ ಧಾರ್ಮಿಕ ಕೃತಿ ಪ್ರೋಫೆಸರ್ ನಾಡೋಜರವರು ಬರೆದಿರುವಂತಹ ಅರಸೀಕೆರೆ ಸಹಸ್ರಕೂಟ ಜಿನಾಲಯ ಎನ್ನುವ ಒಂದು ಧಾರ್ಮಿಕ ಕೃತಿಯನ್ನು ನಾನು ಇವತ್ತು ಪರಿಚಯ ಮಾಡಿಸಿಕೊಡುತ್ತೇನೆ.
ಇದನ್ನು ಶ್ರೀ ದಿಗಂಬರ ಜೈನ ಸಹಸ್ರ ಕೂಟ ಜಿನಾಲಯ ಮಂಡಳಿಯವರು ತಂದಿರುವಂತಹದ್ದು, ಹೀಗಾಗಲೇ ಪಾಳು ಬಿದ್ದಿರುವಂತಹ ಅರಸೀಕೇರೆ ಈ ದೇವಾಲಯವು ಮತ್ತೇ ಜಿರ್ಣೋದ್ದಾರವಾಗಿದೆ. ಇದರ ಬಗ್ಗೆ ಬಹಳಷ್ಟು ಗಮನ ಸೆಳೆದಿದೆ, ಕರ್ನಾಟಕ ಸರ್ಕಾರ ಮತ್ತು ಪ್ರಾಚೀನ ಸಂಗ್ರಹಾಲಯ ದಿಂದ ಬಹಳಷ್ಟು ಗಮನ ಸೆಳೆದಿದೆ. ಈ ಕೃತಿಯಲ್ಲಿ ಅನೇಕ ಚಿತ್ರಗಳನ್ನು ಇಟ್ಟು ಸಚಿತ್ರ ಮಾಲಿಕೆಯನ್ನು ಕೊಟ್ಟಿರುವಂತಹದ್ದು. ಕೇವಲ ಸಹಸ್ರ ಕೂಟ ಎಂದರೆ ಏನು ಸಹಸ್ರ ಕೂಟ ಜಿನಾಲಯಗಳ ನಿರ್ಮಾಣ ಹೇಗೆ ಹಾಗುತ್ತದೆ ಏನುವುದರ ಜೊತೆಗೆ ಕರ್ನಾಟಕದಲ್ಲಿ ಮತ್ತು ಭಾರತದಲ್ಲಿ ಎಲ್ಲೇಲಿ ಸಹಸ್ರ ಕೂಟ ಜಿನಾಲಯಗಳು ಇದೆ ಎಂದು ಈ ಕೃತಿಯಲ್ಲಿ ನಾಡೋಜ ಹಂಪನ ರವರು ಕೊಟ್ಟಿದ್ದಾರೆ ಅನ್ನುವುದನ್ನು ಗಮನಿಸ ಬೇಕು. ಕಲಚೂರಿ ಬಿಜ್ಜಣ್ಣನ ಬಲಗೈ ಮತ್ತು ದಿಮಂತ ಸಚಿವನಾಗಿದಂತಹ ರೇಚಣ್ಣ ದಂಡನಾಯಕ ಕಲಚೂರಿ ರಾಜ ಮನೆತನ ಮುಳುಗಿದ ನಂತರ ಹೊಯ್ಸಳ ವೀರ ಬಲ್ಲಾಳನ ಅಚ್ಚು ಮೆಚ್ಚಿನ ಅಧಿಕಾರಿಯಾಗಿರುತ್ತಾರೆ. ಅವರು ಜೈನ ಸಮಾಜದ ಹಿರಿಮೆ ಮತ್ತು ಸಾಗರಣ ನಂದಿ ಮುನಿಯ ಮಹಿಮೆ ಯನ್ನು ಅರಿತು ಮಡದಿ ಗೌರಿಯೊಂದಿಗೆ ಅರಸೀಕೆರೆಗೆ ಬರುತ್ತಾರೆ ಪೂರ್ವ ಸಹಸ್ರ ಕೂಟ ಜಿನಾಲಯವನ್ನು 1219ರಲ್ಲಿ ಕಟ್ಟಿಸಿದರು ಎನ್ನುವ ಮಾಹಿತಿಯನ್ನು ಈ ಕೃತಿಯಲ್ಲಿ ನಾವು ಗಮನಿಸಬಹುದು. ಇದು ಒಂದು ಅಪೂರ್ವ ಸಿಲ್ಪ ಕಲೆಯನ್ನು ಹೊಂದಿರುವ ತಹ ಸಹಸ್ರ ಕೂಟ ಜಿನಾಲಯ, ಈ ಜಿನಾಲಯದಲ್ಲಿ ಶಾಸನಗಳು ಕೂಡ ಇದೆ ಅವುಗಳನ್ನು ಕೂಡ ಈ ಕೃತಿ ವಿವರವಾಗಿ ಕೊಟ್ಟಿರುವುದನ್ನು ನಾವು ನೋಡಬಹುದು. ಪ್ರೋಫೆಸರ್ ನಾಡೋಜರವರ ಈಕೃತಿ ಕೂಡ ಓದಲೇ ಬೇಕಾದಂತಹ ಕೃತಿ.
ಈ ಜ್ಞಾನ ದೀಪಿಕೆಯ ಮುಖ್ಯ ಉದ್ದೇಶವೇ ಜೈನ ಕೃತಿಗಳನ್ನ ಓದುವಂತಹ ಆಸಕ್ತರಿಗೆ ಕೆಲವು ಪುಸ್ತಕಗಳು ಕೆಲವು ಸಿಕ್ಕುತ್ತವೆ ಇನ್ನೂ ಕೆಲವು ಸಿಕ್ಕುವುದಿಲ್ಲಾ. ಆದರೆ ಇಂತಹ ಕೃತಿಗಳನ್ನು ಓದುವುದರಿಂದ ಅರಿವನ್ನು ವಿಸ್ತಾರ ಮಾಡುವುದಕ್ಕೆ ಒಂದು ವಿಶೇಷವಾದಂತಹ ಅವಕಾಶ ಸಿಗುತ್ತದೆ ಮತ್ತು ನಮ್ಮ ಜ್ಞಾನ ದೀಪಿಕೆ ಬೆಳಗುತ್ತದೆ ಎಂದು ಮುಖ್ಯವಾಗಿ ಇಟ್ಟು ಕೊಂಡು ಈ ಸರಣಿ ಕಾರ್ಯಕ್ರಮವನ್ನು ಮಾಡುತ್ತಿದೇವೆ. ಇವತ್ತಿಗೆ ಈ ಎರಡು ಕೃತಿಗಳನ್ನು ಪರಿಚಯಿಸುವುದರ ಮೂಲಕ ಧನ್ಯವಾದಗಳು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














