ಹಾಡುವಳ್ಳಿ / ಉತ್ತರ ಕನ್ನಡ / ಚಂದ್ರನಾಥ ಬಸದಿ / ಕ್ಷೇತ್ರ ಪರಿಚಯ

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ಇಂದಿನ ನಮ್ಮ ಕ್ಷೇತ್ರ ಹಾಡುವಳ್ಳಿ ಸಂಗೀತಪುರ, ಹೆಸರೇ ಸೂಚಿಸುತ್ತಿರುವ ಹಾಗೆ  ಕಲೆ ವಾಸ್ತು ಶಿಲ್ಪ ಎಲ್ಲದರ ಪ್ರತಿ ಬಿಂಬ ಕಲೆ ಸಂಸ್ಕೃತಿಯ ತವರೂರು. ಸೌಂದರ್ಯ ಮತ್ತು ಕಲೆ ಇವೇರಡು ನಮ್ಮ ಮನಸ್ಸಿನ ಮೂಲಕ ಸೃಷ್ಟಿಯಾಗುತ್ತದೆ. ಕಾಲ ಸೌಂದರ್ಯ ಒಂದೇ ಮಾಧ್ಯಮಕ್ಕೆ ಸೀಮಿತವಲ್ಲ, ಮಣ್ಣಿನಲ್ಲು ಕಲೆಗೆ ಒಂದು ಸ್ಥಾನವಿದೆ. ಅದೇ ರೀತಿ ಕಲ್ಲು, ತಾಮ್ರ, ಕಂಚು, ಹಿತ್ತಾಳೆ, ಚಿನ್ನ ಎಲ್ಲದರಲ್ಲೂ ತನ್ನದೇ ಆದ ರೂಪ ಹೊಂದಿದೆ. ಈ ಎಲ್ಲದರ ರೂಪಗಳನ್ನು ಸಹ ನಾವಿಲ್ಲಿ ಕಾಣಬಹುದು, ಅಂತಹ ಒಂದು ದಿವ್ಯ ಸ್ಥಳ ಇದಾಗಿದೇ, ಇದು ಸಾಳ್ವ ಅರಸು ಮನೆತನ ಆಳಿದ ನಾಡು. ಗೇರುಸೊಪ್ಪೆ ಮತ್ತು ಹಾಡುವಳ್ಳಿ ಪ್ರಮುಖವಾಗಿ ಇಲ್ಲಿನ ಶಾಸನಗಳಲ್ಲಿ ಉಲ್ಲೇಖಿತವಾಗಿದೆ. ಕಾಳು ಮೆಣಸಿನ ರಾಣಿ ಚೆನ್ನಮ್ಮ ಬೈರಾದೇವಿ ಕೆಲವು ವರ್ಷ ತನ್ನ ರಾಜಧಾನಿಯನ್ನಾಗಿಸಿ ರಾಜ್ಯ ಭಾರಮಾಡಿದ ಹಾಗೂ ಧರ್ಮದ ಮಹತ್ವದ ಕುರುಹು ಆಗಿ ಇಲ್ಲಿನ ಶಾಸನಗಳು ಕಂಡು ಬರುತ್ತದೆ.

ಧರ್ಮವು ಸಂಸ್ಕೃತಿಯ ಜೀವಾಳ ಜೈನ ಬಸದಿಗಳು ಧರ್ಮ ಸಂಸ್ಕೃತಿಯ ಒಟ್ಟಿಗೆ ಜೀವನ ರೂಪಿಸುವ ಬಹುದೊಡ್ಡ ಪಾತ್ರ ಇಂತಹ ಬಸದಿಗಳು ಅದರಲು ಮನೋಹರ ಪ್ರಕೃತಿಯ ಮಡಿಲಲ್ಲಿರುವ ವಾಸ್ತುಶಿಲ್ಪದಲ್ಲಿ ಶ್ರೇಷ್ಠತೆಯನ್ನು ಹೊಂದಿರುವ ಹಾಡುವಳ್ಳಿಯ ಬಹುತೇಕ ಬಸದಿಗಳು ಪಾಳು ಬಿದ್ದಿದು ಇದರ  ಮರುನಿರ್ಮಾಣದ ಕನಸನ್ನು ಕಾಣುವಂತೆ ಮಾಡಿದೆ. ಇಲ್ಲಿ ಇಂದ್ರಗಿರಿ ಮತ್ತು ಚಂದ್ರಗಿರಿ ಎನ್ನುವ ಪ್ರಕೃತಿ ನಿರ್ಮಿತ ವನರಾಶಿಯ ನಡುವೆ ಬೆಟ್ಟಗಳಿದ್ದು ವ್ಯವಸ್ಥೆಗಳು  ಅನುಕೂಲಕರವಾಗಿದಲ್ಲಿ ಒಂದು ಸುಂದರ ಪ್ರವಾಸಿತಾಣವಾಗುವುದರಲ್ಲಿ ಸಂದೇಹವಿಲ್ಲಾ.

ಹಾಡುವಳ್ಳಿ ಪುರಾತನ ಜೈನ ಧಾರ್ಮಿಕ ಕೇಂದ್ರ ನೀವು ಇಲ್ಲಿ ನೋಡುತ್ತಿರುವುದು ಪ್ರಾಚೀನ ಕಲಾತ್ಮಕ ಚಂದ್ರನಾಥ ಬಸದಿಯ ಮುಂದೆ ನಾವು ಇದ್ದೆವೇ. ಈ ಬಸದಿಯು ಪೂರ್ವಾಭಿಮುಖವಾಗಿದ್ದು ಹಾಡುವಳ್ಳಿ ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿದೆ. ಪ್ರಶಾಂತ ಏಕಾಂತದಲ್ಲಿ ಅದ್ಬುತವಾಗಿ ಗೋಚರಿಸುತ್ತಿರುವ ಈ ಬಸದಿ ವಾಸ್ತುಶಿಲ್ಪದ ಸಿರಿ, ಆದರೆ ಈಗಾ ಪಾಳು ಬಿದ್ದಿದೆ. ಇಲ್ಲಿ ಒಳ ಭಾಗ ಗರ್ಭಗೃಹ ಅಲ್ಲಿಂದ ಸಿದಾ ಉಪ ಮಂಟಪ ನಂತರ ಸಭಾ ಮಂಟಪವಿದೆ. ಆದರೆ ಪ್ರಸ್ತುತ ಈ ಗರ್ಭ ಗೃಹದಲ್ಲಿ ಮೂರ್ತಿ ಇಲ್ಲಾ , ಬಾಗಿಲು ವಾಡದಲ್ಲಿ ನಿಂತ ತೀರ್ಥಂಕರರ ಬಿಂಬವಿದ್ದು ದ್ವಾರದಲ್ಲಿ ದ್ವಾರ ಪಾಲಕರಿದ್ದಾರೆ. ಎಡ ಬಲಕ್ಕೆ ಉಬ್ಬು ಶಿಲ್ಪಗಳಿವೆ. ಇಲ್ಲಿನ ಸ್ತಂಭಗಳ ಕೆತ್ತನೆಯ ಸೌಂದರ್ಯತೆಯಲ್ಲಿ ವೈವಿಧ್ಯತೆ ಇದೆ. ಮುಖ ಮಂಟಪದ ಮೇಲೆ ಎರಡು ಕೋತಿಗಳು ಕೆಳಕ್ಕೆ ಇಣುಕಿ ನೋಡುವ ದೃಶ್ಯವಿದೆ. ಆವರಣದಲ್ಲಿ ಪಾಳು ಬಿದ್ದಿರುವ ಮಾನಸ್ತಂಭದ ಭಾಗವನ್ನು ಕಾಣಬಹುದು ಒಟ್ಟಿನಲ್ಲಿ ನಾನು ಹೇಳಿದನೇಲ್ಲಾ ಇದು ಶಿಲ್ಪಕಲೆಯ ಹಾಗರ.

ಅಧ್ಯಕ್ಷರು ಶೈಲೇಂದ್ರಗೌಡ, ಕಾರ್ಯದರ್ಶಿಗಳು ವೀರೇಂದ್ರ ಶಾಂತಿರಾಜ ಜೈನ್ ರವರು ಮಾತನಾಡಿ ಹಾಡುವಳ್ಳಿಯ ಪ್ರಸಿದ್ದ ಸ್ಥಳವಾದ ಸಂಗೀತಪುರದಲ್ಲಿ 18 ಜೈನ ಬಸದಿಗಳು ಇದಂತಹ ಇತಿಹಾಸವಿದೆ. ರಾಣಿ ಚೆನ್ನಮ್ಮ ಬೈರಾದೇವಿಯ ಅಳ್ವಿಕೆಗೆ ಒಳಪಟ್ಟಿತ್ತು. ಇವಾಗ 18 ಬಸದಿಗಳಲ್ಲಿ ಕೆಲವು ಕುರುಹುಗಳು ಮಾತ್ರ ಇವೆ ಪ್ರಸ್ತುತ ಆರು ಬಸದಿಗಳನ್ನು ನಾವು ಇಲ್ಲಿ ನೋಡುತ್ತಾಇದ್ದೇವೆ. ಸೋಂಧ ಮಠದ ಶ್ರೀಗಳಿಂದ ಈ ಕ್ಷೇತ್ರದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದೆ. ಹಡುವಳ್ಳಿಯಲ್ಲಿ ಇರುವಂತಹ ಪ್ರಸಿದ್ದ ಪುರಾತನ ಶ್ರೀ ಪದ್ಮಾವತಿ ದೇವಿ, ಶ್ರೀ 24 ತೀರ್ಥಂಕರರ ಬಸದಿ, ಶ್ರೀ ಚಂದ್ರಬಾಬ ಬಸದಿ, ಪಾರ್ಶ್ವನಾಥ ಬಸದಿ,ಗುಂಡನ್ ಬಸದಿ, ವೀರ ಮಹಾಸತಿ ಬಸದಿ ಹಾಗೇ ಮುಂದಿನ ದಿನಗಳಲ್ಲಿ ಚಂದ್ರಗಿರಿ ಬಸದಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಜೀರ್ಣೋದ್ದಾರವಾಗಲಿದೆ.  ಮತ್ತು ನಮ್ಮಈ ಕ್ಷೇತ್ರದ ಜೀರ್ಣೋದ್ದಾರಕ್ಕೆ ಕೈಜೋಡಿಸಿ ತನು ಮನ ಧನದಿಂದ ಸಹಾಯಮಾಡಿ ಎಂದು ವಿನಂತಿಸಿ ಕೊಂಡರು.

ಹಾಡುವಳ್ಳಿ ಗ್ರಾಮಕ್ಕೆ ಬಂದಾಗ ಇಲ್ಲಿನ ಬಹುತೇಕ ಬಸದಿಗಳು ಪಾಳು ಬಿದ್ದ ಸ್ಥಿತಿಯಲ್ಲಿದ್ದು ಇತ್ತೀಚೆಗೆ ಕೆಲವೊಂದು ಜೀರ್ಣೋದ್ದಾರಗೊಳ್ಳುತ್ತಿದ್ದೆ.

ಮತ್ತೊಂದು ವಿಶೇಷವೆಂದರೆ ಇಲ್ಲಿ ಚಂದ್ರನಾಥ ಬಸದಿಗಳೇ ಹೆಚ್ಚಿವೆ, ಚೌಹಿಸ ತೀರ್ಥಂಕರರ ಬಸದಿ, ಇತ್ತೀಚೆಗೆ ನವೀಕರಿಸಲಾದ ಈ ಬಸದಿಯಲ್ಲಿ 24 ತೀರ್ಥಂಕರರ ಬಿಡಿ ಶಿಲ್ಪ ಸಾಲಾಗಿ ನಿಲ್ಲಿಸಲಾಗಿದ್ದು ಎಡ ಬಲಕ್ಕೆ ಯಕ್ಷ ಯಕ್ಷೆಯರು ಇದ್ದಾರೆ. ಈ ಬಸದಿ ಮೂಡಿಬಿದ್ರೆಯ ಬಸದಿಯನ್ನು ನೆನಪಿಸುತ್ತದೆ. ಗರ್ಭಗುಡಿಯಲ್ಲಿ ಎರಡು ಪದ್ಮಾವತಿ ಮೂರ್ತಿಗಳು, ಶುತಸ್ಕಂದ ಹಾಗೂ ಸರಸ್ವತಿ ಮೂರ್ತಿ ಇದೆ, ಇಲ್ಲಿ ಇಷ್ಟಾರ್ಥಸಿದ್ದಿಯಾಗಿದ್ದಾಳೆ ಮಾತೆ ಪದ್ಮಾವತಿ.

ಚಂದ್ರನಾಥ ಬಸದಿ ಪ್ರಸ್ತುತ ಕಲ್ಲಿನಿಂದ ಆವೃತವಾಗಿದೆ, ಇದು ಚೌವಿಸ ತೀರ್ಥಂಕರರ ಬಸದಿಯ ಆವರಣದ ಮುಂಭಾಗದಲ್ಲಿದೆ. ಇಲ್ಲಿ ನೇಮಿನಾಥ ಚಂದ್ರನಾಥ ಮೂರ್ತಿಗಳು ಇದ್ದು ಇನ್ನೇರಡು ತೀರ್ಥಂಕರರು ಮಾರ್ಬಲ್ ನಿಂದ ಮಾಡಲಾಗಿತ್ತು. ಇದೀಗ ಇಲ್ಲಿ ನೂತನ ಬಸದಿಯು ನಿರ್ಮಾಣವಾಗುತ್ತಿದ್ದು ಜೀರ್ಣೋದ್ದಾರ ಕಾರ್ಯ ಸಾಗಿದೆ. ಇಂತಹ ಒಂದು ಕ್ಷೇತ್ರದ ಅಭಿವೃದ್ದಿಗೆ  ಧರ್ಮಾತ್ಮರುಗಳಾದ ದಾನಿಗಳು ಉದಾರತೆಯನ್ನು ತೋರಬೇಕಿದೆ. ಪಾಳು ಬಿದ್ದ ಪಾರ್ಶ್ವನಾಥ ಬಸದಿ, ಈ ಬಸದಿಯ ಹೆಚ್ಚು ಭಾಗ ಪಾಳು ಬಿದ್ದಿರುವುದರಿಂದ ಇಲ್ಲಿ ಗರ್ಭಗುಡಿಯಲ್ಲಿದ ಪಾರ್ಶ್ವನಾಥ ಮೂರ್ತಿಯನ್ನು ಸ್ಥಳಾಂತರಿಸಲಾಗಿದೆ. ಮೂರ್ತಿಗೆ ರಕ್ಷಣೆ ಇಲ್ಲದರಿಂದ ಪಾರ್ಶ್ವನಾಥ ಮೂರ್ತಿಯನ್ನು ಗೌಡರ ಮನೆಯ ಆವರಣದಲ್ಲಿ ಪ್ರತ್ಯೇಕ ಕಟ್ಟಡದಲ್ಲಿ  ಗರ್ಭಗುಡಿಯಲ್ಲಿ ಇಡಲಾಗಿದೆ.

ಪಾಳು ಬಿದ್ದ ಚಂದ್ರನಾಥ ಬಸದಿ, ಈ ಬಸದಿಯು ಕೂಡ ಪೂರ್ವಾಭಿಮುಖವಾಗಿದ್ದು ಗರ್ಭಗುಡಿಯಲ್ಲಿ ಚಂದ್ರನಾಥ ಭಗವಂತರ ಖಡ್ಗಾಸನ

ಪ್ರತಿಮೆ ಇದೆ. ಈ ಬಸದಿಯ ಆವರಣದಲ್ಲಿ ಬಲ ಭಾಗಕ್ಕೆ ವೀರಮಾಸ್ತಿಇದೆ. ಸ್ಥಳಿಯವಾಗಿ ವೀರ ಮಾಸ್ತಿ ಎಂದು ಕರೆದರು ಮಾಸ್ತಿಯ ಸಂಕೇತ ಇಲ್ಲಿಲ್ಲ, ಬಹುಶಹ ವೀರ ಮಹಿಳೆಗಾಗಿ ಕಟ್ಟಿಸಿದ ಗುಹೆ ಇದ್ದಿರಬಹುದು.

ಹಾಡುವಳ್ಳಿಯಲ್ಲಿ ಪ್ರಸ್ತುತ ಯಾವ ಮಠ ಇಲ್ಲದಿದ್ದರು ಅಲ್ಲಿ ಅಕಲಂಕ ಮಠ ಇತ್ತೆಂಬುದರ ಬಗ್ಗೆ ಶಾಸನಗಳು ಉಲ್ಲೇಖಿಸುತ್ತವೆ. ಮದ್ಯಯುಗ ಕಾಲದಲ್ಲಿ ಹಾಡುವಳ್ಳಿಯಲ್ಲಿ ಅಕಲಂಕ ಮಠ ಪ್ರಸಿದ್ಧಿ ಪಡೆದ್ದಿತ್ತು ಮುಂದೆ ಬಿಳ್ಳಿಗೆಯಲ್ಲು ಸ್ವಾದಿಯಲ್ಲು ಈ ಮಠ ಶಾಖೆಗಳು ನಿರ್ಮಾಣಗೊಂಡವು ಪ್ರಸ್ತುತ ಅಕಲಂಕ ಮಠವಾಗಿರುವ ಸ್ವಾದಿ ದಿಗಂಬರ ಜೈನ ಮಠವಿದ್ದು ಇಲ್ಲಿನ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರು ಇಲ್ಲಿನ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ.

ಶ್ರೀಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿ ಯವರು ಮಾತನಾಡಿ ಹಾಡುವಳ್ಳಿ ಕ್ಷೇತ್ರದ ಅಭಿವೃದ್ದಿ ಕಾರ್ಯ ಮತ್ತು ಇಲ್ಲಿನ ಬಸದಿಗಳ ಜೀರ್ಣೋದ್ಧಾರ ಮಾಡುತ್ತಿರುವ ಕುರಿತು ವಿವರಿಸಿದರು, ಅದರಲ್ಲಿ ಚಂದ್ರ ಪ್ರಭ ತೀರ್ಥಂಕರರ ಬಸದಿಯನ್ನು ಜೀರ್ಣೋದ್ಧಾರ ಗೊಳಿಸ ಬೇಕು ಎಂದು ನಿರ್ಧಾರಮಾಡಿ ಹಳೆಯ ಪಾರಂಪರಿಕ ಶೈಲಿಯಲ್ಲಿ  ಬಸದಿಯನ್ನು ನಿರ್ಮಾಣ ಮಾಡಬೇಕು ಎಂದು ಒಂದುವರೆ ಕೋಟ್ಟಿಯ ವೆಚ್ಚದಲ್ಲಿ  ನವೀಕರಣ ನೇರವೇರುತ್ತಿದೆ ಜೊತೆಗೆ ಸರಕಾರವು ಕೂಡ ಸಹಕಾರ ನೀಡುತಿದ್ದು ಮತ್ತು ಅನೇಕ ಶ್ರಾವಕ ಶ್ರಾವಕಿಯರು ಕೂಡ ಸಹಾಯಮಾಡುತ್ತಿದ್ದಾರೆ, ಹಾಗೂ ಜ್ವಾಲಮಾಲ ನ್ಯೂಸ್ ಮತ್ತು ಚಂದನ  ವಾಹಿನಿಯ ಮೂಲಕ ವೀಕ್ಷಿಸುತ್ತಿರುವ ಎಲ್ಲರು ಕೂಡ ತಮ್ಮ ತನು ಮನ  ಧನದ  ಸಹಾಯ ಮಾಡಿರುವವರಿಗೆ ಶುಭ ಹಾರೈಸಿದರು.

ಈ ಸುಂದರ ಸಂಗೀತ ಪುರವನ್ನೊಮ್ಮೆ ನೋಡಲು ಮರೆಯದಿರಿ, ಅದಕ್ಕು ಮುಂಚೆ ಇದರ ಅಭಿವೃದ್ಧಿ ಕಾರ್ಯಕ್ಕಾಗಿ ಸಹಕರಿಸಿ

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್