ಕ್ಷೇತ್ರ ಪರಿಚಯ- 17 / ಶ್ರೀ ಕ್ಷೇತ್ರ ಸಿದ್ದಸಿರಿ ವದನಬೈಲು / ಪಾರ್ಶ್ವನಾಥ ಸ್ವಾಮಿ / ಶಿವಮೊಗ್ಗ

ಕಳೆದ ಬಾರಿ  ಕ್ಷೇತ್ರ ಪರಿಚಯದಲ್ಲಿ  ವಿಶ್ವ ವಿಖ್ಯಾತ ಜೋಗ ಜಲಪಾತದ ಬಳಿಯಿರುವ ಅತಿಶಯ ಕ್ಷೇತ್ರ  ಗೇರುಸೊಪ್ಪೆಯ ಪರಿಚಯ ಮಾಡಿದ್ದೆವು. ಅಲ್ಲಿ ಹತ್ತಿರದಲ್ಲಿ  ಸ್ಥಿತವಾಗಿರುವ  ಶರಾವತಿ ನದಿ ದಂಡೆಯ  ಪ್ರಕೃತಿ ದತ್ತ ರಮಣೀಯ ಕ್ಷೇತ್ರ ಬೀಸುವ ಗಾಳಿಯು ಶುಧ್ಧ ಹಿತಕಾರಿಯಾದ  ಕಾಡಿನ ಮಧ್ಯದಲ್ಲಿ  ಮನಸ್ಸಿಗೆ ಮುದ ನೀಡುವ ವಾತಾವರಣದಲ್ಲಿ ರುವ ಕ್ಷೇತ್ರ ಮಾತೆ ಪದ್ಮಾವತಿ ಅಮ್ಮನವರು  ನೆಲೆ ನಿಂತ ಅತಿಶಯ ಕಾರಿ ಕ್ಷೇತ್ರ . ಶ್ರೀ ಸಿದ್ದ ಗಿರಿ ವಡಲು ಬಯಲು  ಕ್ಷೇತ್ರವನ್ನು ಪರಿಚಯಿಸಲಿದ್ದೇವೆ. ದಯವಿಟ್ಟು ನಿಮಗಾಗಿ   ದೃಶ್ಯೀಕರಿಸಿದ  ಈ ಸುಂದರ ದೃಶ್ಯ ಕಾವ್ಯವನ್ನು  ಪ್ರತಿಯೊಬ್ಬರೂ ಕೊನೆಯವರೆಗೂ  ವೀಕ್ಷಿಸಿ.

 

ಈ ಕ್ಷೇತ್ರಕ್ಕೆ ಐತಿಹಾಸಿಕ  ಹಿನ್ನೆಲೆ ಇದ್ದು ಸುಮಾರು 10ನೇ ಶತಮಾನದ  ಪೂರ್ವದಲ್ಲಿ ಕರ್ನಾಟಕದ  ಇತಿಹಾಸದಲ್ಲಿ  ವಿಜಯನಗರ ಸಾಮ್ರಾಜ್ಯವು  ಮಲೆನಾಡಿನ ಸಾಗರ ತಾಲ್ಲೂಕಿನಲ್ಲಿ  ಪ್ರಭಾವವಿದ್ದ ಕಾಲ  ವಿಜಯನಗರದ ಅರಸರು ಈ ಪ್ರಾಂತ್ಯವನ್ನು ದಾನವಾಗಿ ಕೊಟ್ಟಿದ್ದರು  ಆಗ ಇದು ಹೆಬ್ಬಯಲು ಆಗಿತ್ತೆಂದು  ಹೇಳಲಾಗುತ್ತದೆ. ಕಾಲ ನಂತರ ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ಸಮಯದಲ್ಲಿ  ಮುಳುಗಡೆ ಗೊಂಡಿದ್ದ  ಕ್ಷೇತ್ರ ಒಡಂಬಯಲಿಗೆ ಸ್ಥಳಾಂತರಿಸಲಾಯಿತು. ಆಗ ಅಲ್ಲಿಯೂ ಕೂಡ ಹುತ್ತದ ರೂಪದಲ್ಲಿ ನೆಲೆಸಿದ್ದ ಪದ್ಮಾವತಿ ಮೂರ್ತಿ ಯನ್ನು ವ ಡಂಬಯಲಿಗೆ ಸ್ಥಳಾಂತರಿಸಲಾಯಿತು  ಮೂರ್ತಿಯನ್ನು ಸ್ಥಾಪಿಸಿದಲ್ಲಿ ತಂತಾನೆ ಹುತ್ತ ಬೆಳೆದು , ಅತಿಶಯವೆಂದರೆ ಮೂರ್ತಿಯನ್ನು  ಹೊತ್ತಿಕೊಂಡೇ ಹುತ್ತ ಬೆಳೆಯುತ್ತದೆ.  ಅಲ್ಲಿಂದ ಈ ಕ್ಷೇತ್ರವು ಅಭಿವೃದ್ದಿ ಗೊಳ್ಳುತ್ತಾ ಹೋಗುತ್ತದೆ. ಭಕ್ತಾದಿಗಳ ಇಷ್ಟಾರ್ಥವನ್ನು  ನೆರವೇರಿಸುತ್ತಾ ದೇವಿ ಪದ್ಮಾವತಿ ಪ್ರಸಿದ್ದವಾಗುತ್ತಾ ಸಾಗಿ  ಹುತ್ತ ಪದ್ಮಾವತಿ, ಚತುರ್ಮುಖ ಪದ್ಮಾವತಿ  ಹಾಗೂ ದೇವಿಗೆ ಬಳೆಯೆಂದರೇ ತುಂಬಾ ಇಷ್ಟವಾದ ಕಾರಣ  ಬಳೆಯ ಹರಕೆಯನ್ನು ನೀಡುವುದರಿಂದ  ಬಳೆ ಪದ್ಮಾವತಿ ಎಂದು ಕರೆಯಲಾಗುತ್ತದೆ.

ಅಭಿವೃದ್ದಿಗೊಂಡ  ವಡಂಬಯಲು ಕ್ಷೇತ್ರದಲ್ಲಿ  ಸಮಯ ಕಳೆದಂತೆ 1995 ರಿಂದ ಆರಂಭಗೊಂಡ  ಅಮ್ಮನವರ ನೂತನ ಬಸದಿ ಕ್ರಿ.ಶ 2007ರಲ್ಲಿ ಹೊಂಬುಜದ ಶ್ರೀ ದೇವೇಂದ್ರ ಕೀರ್ತಿ ಭಟ್ಠರಕರವರ ಸಾನಿಧ್ಯದಲ್ಲಿ  ಪಂಚಕಲ್ಯಾಣವಾಗುತ್ತದೆ. ಬೃಹತ್ ಮಾನಸ್ಥಂಭವನ್ನು

ಹಾದು ದೇವಾಲಯದ ಒಳ ನಡೆದರೆ ಭಕ್ತರ ಇಚ್ಛೆಯನ್ನು ಪರಿಹರಿಸುವ  ಮದುವೆ ಸಂತಾನಭಾಗ್ಯ  ನಿರುದ್ಯೋಗ  ವ್ಯಾಪಾರ ಮತ್ತು ಇತರೆ ಸಮಸ್ಯೆಗಳಿಗೆ  ಇಲ್ಲಿ ಇಷ್ಟಾರ್ಥ ಸಿದ್ದಿಯಾಗಿದ್ದಾಳೆ ಪದ್ಮಾವತಿ ಮಾತೆ.

 

ಈ ಕ್ಷೇತ್ರದಲ್ಲಿ ಒಂದು ಬೃಹತ್  ನಾಗವಿಗ್ರಹವನ್ನು ನೋಡಬಹುದು.  ಈ ವಿಗ್ರಹ 7 ಅಡಿ 7 ಇಂಚು ಎತ್ತರ ಹಾಗೂ 7 ಎಡೆಗಳನ್ನು  ಹೊಂದಿದೆ.  2010 ರಲ್ಲಿ ಸ್ಥಾಪಿತವಾದ  ಈ ವಿಗ್ರಹವನ್ನು  ಮುಕ್ತಿನಾಗ ಎಂದು ಕರೆಯಲಾಗುತ್ತದೆ. ಅಲ್ಲದೇ ಈ ವಿಗ್ರಹ ನಾಗದೋಷ ಪರಿಹಾರ ದಲ್ಲಿ ಪ್ರಸಿದ್ದಿ ಪಡೆದಿದೆ. ಇಲ್ಲಿ ಭಗವಾನ್ ಪಾಶ್ವನಾಥರ  ಬೃಹತ್ ಸುಂದರ ಬಿಂಬವು ಪಂಚ ಕಲ್ಯಾಣಕ್ಕೆ ಸಿದ್ದವಾಗಿದೆ. ಇಲ್ಲಿನ  ಧರ್ಮದರ್ಶಿಗಳಾದ  ಹೆಚ್.ಎಂ.ವೀರರಾಜ್ ಜೈನ್ ರವರು ಮೊದಲು  ದೇವರನ್ನೇ ನಂಬದ ನಾಸ್ತಿಕರಾಗಿದ್ದರು. ಈಗ ಆಸ್ತಿಕರಾಗಿದ್ದಾರೆ. ಅವರ ಪ್ರಕಾರ ಇದು ದೇವಿಯ ಮಹಿಮೆ. ಬರುವ ಭಕ್ತರನ್ನು ನಮ್ರತೆಯಿಂದ  ಆದರದಿಂದ ಕಾಣುವ  ಸ್ವಭಾವಕ್ಕೆ  ಅನೇಕ ಗಣ್ಯಾತಿಗಣ್ಯರು  ಶ್ರೀ ಕ್ಷೇತ್ರದ ದರ್ಶನಕ್ಕಾಗಿ ಬಂದಿದ್ದಾರೆ. ಇವರು ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ  ಸೇವೆಯನ್ನು ಪರಿಗಣಿಸಿ  ಬೆಂಗಳೂರಿನ ಆದಿಶ್ರೀ ಜೈನಯುವಕ ಸಂಘವು ಜೈನರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಶುಭ ಸಮಾರಂಭಗಳಿಗೆ ಹಾಗೂ ದರ್ಶನಕ್ಕೆ  ಬರುವವರು ಯಾರು ಉಪಹಾರ  ಊಟ ಮಾಡದೇ ಹೋಗದಿರಲಿ ಎನ್ನುವ ಸದುದ್ದೇಶದಿಂದ  1008 ಶ್ರೀ ಪಾರ್ಶ್ವನಾಥ  ಭವನದಲ್ಲಿ ಎಲ್ಲವೂ ವ್ಯವಸ್ಥೆಗೊಳಿಸಲಾಗಿದೆ.  ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿ. ನೀವು ಕ್ಷೇತ್ರಕ್ಕೆ ಹೋಗಲು ಮಾ‍ರ್ಗಸೂಚಿ ಇಲ್ಲೆದೆ :- ಬೆಂಗಳೂರು – ತುಮಕೂರು – ಅರಸೀಕೆರೆ – ಶಿವಮೊಗ್ಗ – ಸಾಗರ – ತಾಳಗುಪ್ಪ – ಜೋಗ್ ಫಾಲ್ಸ್ – ವದನಬೈಲು