ಜೈನ ತೀರ್ಥಕ್ಷೇತ್ರ ತಾಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮದ ಬೀಡು ಭಗವಾನ್ ಬಾಹುಬಲಿ ಕ್ಷೇತ್ರ ಮುಂಜಾನೆ ಮಂಜಿನಿಂದ ಮಿಂದೆದ್ದ ಗೊಮ್ಮಟನ ಗಿರಿಯಿಂದ ನಮ್ಮ ಕ್ಷೇತ್ರ ಪರಿಚಿತ ಚಿತ್ರೀಕರಣ ಅಂದು ಆರಂಭಗೊಂಡಿತು. ಅದೇ ಮಂಜು ಕವಿದ ಅಂಕು ಡೊಂಕಾದ ಹಾದಿಯನ್ನು ಕ್ರಮಿಸುತ್ತಾ ನಮ್ಮ ತಂಡ ಬಂದು ತಲುಪಿದ್ದು, ಅಳದಂಗಡಿ ಬೆಟ್ಟದ ಬಸದಿಗೆ.
ಹಚ್ಚನೇ ಸಿರಿ ನಡುವಿನಲ್ಲೊಂದು ಗಿರಿ ಅಳದಂಗಡಿ ಪುರಿಯ ಅಂಥದ್ದೊಂದು ಐಸಿರಿ. ಬೆಟ್ಟದ ಬಸದಿಯ ಇತಿಹಾಸವೊಂದು ತೆರೆದುಕೊಂಡಿದೆ ಕೇಳಿರಿ. ಸುಮಾರು 200 ವರ್ಷಗಳ ಹಿಂದೆ ಬೆಟ್ಟದಲ್ಲಿರುವ ಬಸದಿಯ ಪೂಜೆಯ ನೀರಿಗೆ ವ್ಯವಸ್ಥೆ ಗೆ ಅನಾನುಕೂಲವಾದ ಕಾರಣ ಬಸದಿಯ ಸ್ಥಳಾಂತರಕ್ಕೆ ಯೋಚಿಸಿ ಅರಮನೆ ಪೇಟೆಯಲ್ಲಿ ಬಸದಿ ನಿರ್ಮಾಣ ಮಾಡಿ ಅಲ್ಲಿ ದೇವರನ್ನು ಸ್ಥಾಪನೆಯನ್ನು ಮಾಡುವುದು ಎಂದು ತೀರ್ಮಾನಿಸಲಾಗುತ್ತದೆ. ಆದರೆ ಆಗ ಇಡೀ ಪೇಟೆಗೆ ಬೆಂಕಿ ಬಿದ್ದು ಬೆಟ್ಟದ ಬಸದಿಯ ಬಳಿ ಹೆಜ್ಜೇನು ದಾಳಿ ನಡೆಯುತ್ತದೆ. ನಂತರ ಇಲ್ಲಿ ದೇವರನ್ನು ಇಲ್ಲಿ ಮರುಸ್ಥಾಪನೆ ಮಾಡಲಾಗುತ್ತದೆ. ಪುನಃ ಆ ಬಸದಿಯು ಪಾಳು ಬಿದ್ದು 1982 ರಂದು ದೇವರನ್ನು ಬಾಲಾಲಯದಲ್ಲಿ ಇಟ್ಟು 12 ರಿಂದ 13 ವರ್ಷ ಗಳ ಕಾಲ ದೇವರು ಬಾಲಾಲಯದಲ್ಲಿ ಇದ್ದು ಆರ್ಥಿಕ ಮುಗ್ಗಟ್ಟನ ಕಾರಣ ಜೀರ್ಣೀದ್ದಾರ ಸಾಧ್ಯವಾಗದೇ ಪುನಃ ಶ್ರಾವಕರು ಎಲ್ಲಾ ಸೇರಿ 2002ರಲ್ಲಿ ಕಾರ್ಕಳ ಮಠದ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಉವರ ಆಶೀರ್ವಾದದಿಂದ ಧರ್ಮಸ್ಥಳದ ಮಾತೃಶ್ರೀ ರತ್ನಮ್ಮ ನವರ ಹಾಗೂ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಸಹಕಾರದೊಂದಿಗೆ , ಊರ , ಪರ ಊರ ಸಹಕಾರದೊಂದಿಗೆ ಧಾಮ ಸಂಪ್ರೋಕ್ಷಣೆಯು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ ತದನಂತರ ಮೂಲ ಸ್ವಾಮಿಯು ಭಿನ್ನವಾಗಿರುವುದನ್ನು ಕಂಡು ವಜ್ರ ಲೇಪನ ಮಾಡಲಾಗುತ್ತದೆ.ಇತ್ತೀಚೆಗಷ್ಟೇ ಜೀರ್ಣೋದ್ದಾರಗೊಂಡ ಈ ಬಸದಿಯ ಮೂಲ ನಾಯಕ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಬ್ರಹ್ಮದೇವರು . ಇಲ್ಲಿ ಬ್ರಹ್ಮದೇವರ ಮೂರ್ತಿ ಅತ್ಯಂತ ಕಾರಣಿಕವಾಗಿದ್ದು ಪ್ರತಿ ಗುರುವಾರ ವಿಶೇಷ ಪೂಜೆ ಬ್ರಹ್ಮದೇವರಿಗೆ ನಡೆಯುತ್ತದೆ. ಇಲ್ಲಿ ಈಗಲೂ ಬೆಳೆ ಪೂಜೆಯನ್ನು ಮಾಡಿ ಭಕ್ತರ ಇಷ್ಟಾರ್ಥವನ್ನು ಸಂಪನ್ನಗೊಳಿಸುವಂತೆ ಆಗ್ರಹಿಸುತ್ತಾರೆ.
ಇದು ಬೆಟ್ಟದ ಬ್ರಹ್ಮದೇವರ ಬಸದಿಯೆಂದೆ ಪ್ರಖ್ಯಾತ . ಈ ಬಸದಿಯನ್ನು ತಲುಪಲು ನೀವು ಧರ್ಮಸ್ಥಳದಿಂದ ಗುರುವಾಯನ್ ಕೆರೆ ಮಾರ್ಗವಾಗಿ , ಗುರುವಾಯನ್ ಕೆರೆಯಿಂದ 12 ಕಿ. ಮೀ ದೂರದಲ್ಲಿ ಅರದಂಗಡಿ ಗ್ರಾಮಕ್ಕೆ ತುಸು ದೂರದಲ್ಲಿಯೇ ಕಾಣುವುದು ಈ ಸುಂದರ ಬಸದಿ. ಶ್ಯೇಶ್ರಶ್ರೀ ಪಾರ್ಶ್ವನಾಥ ಸ್ವಾಮಿಯ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಬ್ರಹ್ಮೇಶ್ಯ ಹಾಗೂ ಶ್ರೀ ಪದ್ಮಾವತಿ ಅಮ್ಮನವರ














