ಹೆಮ್ಮೆಯ ಶ್ರಾವಕ~ಶ್ರಾವಕಿ- 01 / ಶ್ರೀಮತಿ ಶೀಲಾ ಅನಂತರಾಜು / 2021

ಜ್ವಾಲಮಾಲ ನ್ಯೂಸ್ ಅರ್ಪಿಸುತ್ತಿರುವ ನೂತನ ಕಾರ್ಯಕ್ರಮ ಸಮುದಾಯದ ಸೇವೆಯಲ್ಲಿ ನಿರತ ಶ್ರಾವಕ ಶ್ರಾವಕಿಯರ ಜೀವನ ಗಾಥೆ.

ಹೆಮ್ಮೆಯ ಶ್ರಾವಕ ಅಥವಾ ಶ್ರಾವಕಿ

ಸಮಾಜಕ್ಕಾಗಿ ಮುಡುಪಾದ ಕಥೆಯನ್ನು ಸಮಾಜದವರೇ ನೋಡಿ ಅವರನ್ನು ಇನ್ನು ಹೆಚ್ಚಿನ ಸೇವೆಗಾಗಿ ಹುರಿದುಂಬಿಸುವ ಕಾರ್ಯ ನಿಮ್ಮಿಂದ ಆಗಲಿ.

ಸಾಧನೆಯ ಹಾದಿಯಲ್ಲಿ ನಿರಂತರ ತೊಡಗಿಸಿಕೊಂಡು ಸಾಗಿದ ಛಲಗಾತಿ ಹೆಣ್ಣು, ಎಂತಹ ಜವಾಬ್ದಾರಿಯನ್ನು ಸಹ ನಿಭಾಹಿಸಬಲ್ಲೆ ಎಂದು ದಿಟ್ಟ ನಿರ್ಧರಮಾಡುತ್ತಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ದಿಟ್ಟ ಮಹಿಳೆ ಶ್ರೀಕ್ಷೇತ್ರ ಶ್ರವಣ ಬೆಳಗೊಳದ ಶ್ರೀಗಳವರ ಪೂರ್ಣ ಆಶೀರ್ವಾದದೊಂದಿಗೆ ಅವರ ಸಕಲ  ಅಣತೆಯನ್ನು ಭಕ್ತಿಯಿಂದ ಸ್ವೀಕರಿಸಿ ನಡೆಸಿ ಶ್ರೀಗಳವರ ಮೆಚ್ಚುಗೆಗೆ ಪಾತ್ರವಾಗಿ ಸಾರ್ಥಕ ಬದುಕು ಸಾಗಿಸಿದ ಹೆಮ್ಮೆಯ ಶ್ರಾವಕಿ ಇಂದಿನ ನಮ್ಮಸಂಚಿಕೆಯ ನಾಯಕಿ ಶ್ರೀಮತಿ ಶೀಲಾ ಅನಂತರಾಜು ರವರು.

ಅವರ ಪರಿಚಯ ಮಾಡಲು ನಿಂತಾಗ ಅವರ ಬಗ್ಗೆ ಹೆಮ್ಮೆ ಮೂಡಿಸುವ ಅನೇಕ ಸಂಗತಿಗಳು ಕಾಣ ಸಿಗುತ್ತವೆ. ಶ್ರೀಮತಿ ಶೀಲಾ ಅನಂತರಾಜು ರವರು 1947ರ ಜುಲೈ 12 ರಂದು ಶ್ರವಣ ಬೆಳಗೊಳದಲ್ಲಿ ಜೈನ ಧಾರ್ಮಿಕಥೆಯ ಆಗರವಾದ ಉತ್ತಮ ಸಂಸ್ಕಾರ ಹೊಂದಿದ ಮನೆತನದಲ್ಲಿ ಸತ್ಕುಲದಲ್ಲಿ ಹಾಗೂ ಸುಪ್ರಸಿದ್ದ ಯಾತ್ರ ಸ್ಥಳವಾದ ಶ್ರವಣ ಬೆಳಗೊಳದ ಶ್ರೇಷ್ಠ ಪರಿಸರದಲ್ಲಿ ಜನಿಸಿದರು. ಇಲ್ಲಿನ ಜೈನ ಮಠದ ಪಾರುಪತ್ಯಗಾರರಾಗಿ ನಿಷ್ಟಾವಂತ ಸೇವೆಗೈದ ಶ್ರೀ ಪಾರ್ಶ್ವನಾಥಯ್ಯನವರು ಮತ್ತು ಇಂದ್ರಮ್ಮನವರ ಮಗಳಾದ ಇವರಿಗೆ ಕ್ಷೇತ್ರದ ನಿರಂತರ ಧಾರ್ಮಿಕ ಕ್ರಿಯಾಚರಣೆ ಒಡನಾಟದಲ್ಲಿ ಕ್ರೀಯಾ ಶೀಲರಾಗಿ ಬೆಳೆಯಲು ಸಹಕಾರವಾಯಿತು. ಅಸ್ಥಾನವಿಧ್ವಾನ್  ಶ್ರವಣ ಬೆಳಗೊಳದ ಡಿ ನಾಗರಾಜ ಶಾಸ್ತ್ರಿ ಹಾಗೂ ಜ್ವಾಲಮ್ಮ ದಂಪತಿಯ ಸೊಸೆಯಾಗುವ ಭಾಗ್ಯ 1962ರಲ್ಲಿ ಲಭಿಸಲು ಪುತ್ರನಾದ ಮೈಸೂರಿನ ಇಂಜಿನಿಯರ್ ಶ್ರೀ ಎನ್ ಅನಂತರಾಜು ರವರೊಡನೆ ವಿವಾಹವಾಯಿತು. ಇದರ ಪರಿಣಾಮವಾಗಿ ಅತ್ತೆ ಮಾವಂದಿರಂತೆ ತಾವು ಸಹ ಉತ್ತಮ ಸಮಾಜ ಸೇವಾ ತತ್ಪರರಾಗುವಲ್ಲಿ ಿಂಗು ನೀಡಿತು. ಎರಡು ಹೆಣ್ಣುಮಕ್ಕಳು ಹಾಗೂ ಒಂದು ಗಂಡು ಮಗುವಿಗೆ ಜನ್ಮದಾತೆಯಾದ ಈಕೆಯ ಮಗ ಸೊಸೆ ಈಗ ಪ್ರತಿಷ್ಟಿತ ಕಂಪನಿಯೊಂದನ್ನು ತಮ್ಮ ಯಶಸ್ವಿ ಮಾಲೀಕತ್ವದಲ್ಲಿ ನಡೆಸುತ್ತಿದ್ದಾರೆ.

ಮೈಸೂರು ಜಯಲಕ್ಷ್ಮಿ ಪುರಂನ ಅನಂತ ನಿಲಯದಲ್ಲಿ ಅನಂತ ಸೇವಾ ಕಾರ್ಯ ಕೈಗೊಳ್ಳುತ್ತಾ ಶೀಲಾರವರ ತುಂಬು ಸಂಸಾರ ಎಲ್ಲರಿಗೂ ಮಾದರಿಯಾದರು.

ಇವರಲ್ಲಿ ಸಮಾಜ ಸೇವೆಯೊಡನೆ ಗೌರವ ಪ್ರೀತಿ ವಾತ್ಸಲ್ಯ ಹೆಚ್ಚಳವಾಗಿ ಮೈಸೂರು ನಗರದಲ್ಲಿ ಅನೇಕ ಧಾರ್ಮಿಕ ಕ್ರಿಯಾ ಕಲಾಪಗಳಲ್ಲಿ ಇವರ ವರ್ಚಸ್ಸು ಬೆಳೆಯಲಾರಂಭಿಸಿತು. ಸಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಲ್ಲದೆ ನಾಡಿನ ಹೆಸರಾಂತ ವಿದ್ವಾಂಸರುಗಳಾದ ಜಿ ಬ್ರಹ್ಮಪ್ಪ ಎಂ ಡಿ ವಸಂತರಾಜು ಅವರುಗಳ ಹಲವಾರು ಕೃತಿಗಳನ್ನು ಜೈನ ಧರ್ಮದ ಹತ್ತಾರು ಗಂಥಗಳನ್ನು ಪ್ರಕಾಶಿಸುವ ಕೀರ್ತಿ ಶೀಲಾರವರಿಗೆ ಸೇರುತ್ತದೆ. ಕೋಶ ಓದಿ ನೋಡು ದೇಶ ಸುತ್ತಿ ನೋಡು ಎಂಬಂತೆ ಶ್ರೀಮತಿಯವರು ತಮ್ಮ ಸಂಸಾರದೊಂದಿಗೆ ಕನಿಷ್ಟ ವರ್ಷಕೊಮ್ಮೆಯಾದರು ಅಪರೂಪದ ಸ್ಥಳಗಳಿಗೆ ಪ್ರವಾಸ ಕೈಗೊಂಡು ತಮ್ಮ ಜ್ಞಾನದಾಹವನ್ನು ಹೆಚ್ಚಿಸಿಕೊಂಡಿದ್ದಾರೆ. 25 ಮಿಗಿಲಾದ ಗ್ರಂಥ ಪ್ರಕಟಣೆ ಮಾಡಿದ ಶಾಸ್ತ್ರದಾನ ಕೂಡ ಮಾಡಿರುವ ಹೆಗ್ಗಳಿಕೆ. ದೇಹದ ಅಂಗಾಂಗ ದಾನ ತ್ಯಾಗ ಪತ್ರ ನೋಂದಣಿ ಮಾಡಿರುವ ಜೈನ ಸಮಾಜದ ಪ್ರಪ್ರಥಮ ಮಹಿಳೆ. ಕ್ರಿ ಶ 2009 ರಲ್ಲಿ ಮಂಡ್ಯ ಜಿಲ್ಲಾ ಮಹಿಳಾ ಸಾಹಿತ್ಯ ಸಂಮೇಳನ ಉದ್ಘಾಟನೆಯ ಗೌರವಕ್ಕೆ ಪಾತ್ರರಾಗುತ್ತಾರೆ. ಕ್ರಿ ಶ 2010 ರಲ್ಲಿ ಮಂಡ್ಯ ಜಿಲ್ಲಾ ಮಕ್ಖಳ ಸಾಹಿತ್ಯ ಸಂಮೇಳನದ ಉದ್ಘಾಟಕರಾಗಿ ಸೇವೆ ಸಲ್ಲಿಸಿರುತ್ತಾರೆ. ಕ್ರಿ ಶ 2011 ರಲ್ಲಿ ರಾಜ್ಯಮಟ್ಟದ ತೊಗಲು ಗೊಂಬೆ ಆಟದ ಅಧ್ಯಕ್ಷಿಯ ಪೀಠದ ಗೌರವ ಇವರಿಗೆ ಸಲ್ಲುತ್ತದೆ. ಮಂಡ್ಯದ ಜೈ ಭಾರತ್ ಚಿತ್ರಕಲಾ ಮಹಾವಿದ್ಯಾಲಯದ ವ್ಯವಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 34 ವರ್ಷಗಳ ಸುಧೀರ್ಘ ಸಾರ್ಥಕ ಸೇವೆ 1997ರಲ್ಲಿ ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾಗಿ ಆಯ್ಕೆಗೊಂಡರು, ಮೈಸೂರಿನ ಪದ್ಮಶ್ರೀ ಮಹಿಳಾ ಸಮಾಜದ ಅಧ್ಯಕ್ಷರಾಗಿ ಸುವರ್ಣ ಮಹಿಳಾ ಸಮಾಜದ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ಸುವರ್ಣ ಭವನದ 50ಲಕ್ಷ ರೂ ವೆಚ್ಚದ ನಿರ್ಮಾಣ ಇವರ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ. ಕ್ರಿ ಶ 2010ರಲ್ಲಿ ಮೈಸೂರಿನ ಪದ್ಮಶ್ರೀ ಮಹಿಳಾ ಸಮಾಜದಲ್ಲಿ ಮಹಿಳಾ ಸಮಾಜದ ಅಧಿಕಾರವಧಿಯಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಆರಾಧನ ಕಾರ್ಯಕ್ರಮಗಳು, ಜಿನ ಭಕ್ತಿಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮಗಳು, ಶಿಭಿರಗಳು, ದಾನ ಧರ್ಮಾಧಿ ಕಾರ್ಯಕ್ರಮಗಳನ್ನು ಬಹುತೇಕ ನೆರವೇರಿಸಿದ್ದಾರೆ. ಕ್ರಿ ಶ 2010ರಲ್ಲಿ ಮೈಸೂರಿನ ಪದ್ಮಶ್ರೀ ಮಹಿಳಾ ಸಮಾಜದ ಆಶ್ರಯದಲ್ಲಿ ರಾಜ್ಯಮಟ್ಟದ ಜೈನ ಮಹಿಳಾ ಸಂಮೇಳನವನ್ನು ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಡಿಯಲ್ಲಿ ಸಮಸ್ತ ಜೈನ ಮಹಿಳೆಯರನ್ನು ಒಂದೇಡೆ ಸೇರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಶ್ರೀಕ್ಷೇತ್ರ ಶ್ರವಣ ಬೆಳಗೊಳದ  ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ. ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಂಘದ ಆಶ್ರಯದಲ್ಲಿ ಜರುಗಿದ ಸಂಮೇಳನದಲ್ಲಿ  ಕೂಡ ಶ್ರವಣ ಬೆಳಗೊಳ ಮೈಸೂರು ಬೆಳಗಾವಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇದುವರೆವಿಗೂ 1,500ಕ್ಕೂ ಮಿಗಿಲಾದ ಸಮಾರಂಭಗಳ ಅತಿಥಿಯಾಗಿ ಭಾಗವಹಿಸಿದ್ದು ನೂರಾರು ಕಾರ್ಯಕ್ರಮಗಳ ಸಂಘಟಕರಾಗಿ ಸೇವೆಸಲ್ಲಿಸಿದ್ದಾರೆ

ಇವರಿಗೆ ಸಂದ ಗೌರವಗಳಲ್ಲಿ ಪಂಚ ಕಲ್ಯಾಣಗಳಲ್ಲಿ ಸನ್ಮಾನ, ರಾಜ್ಯದ ಎಲ್ಲಾ ಮಠಗಳಿಂದಲು ಗೌರವ ಸನ್ಮಾನ, ಕನಕ ಗಿರಿ ಜೈನ ಮಠದ ಕಾರ್ಯನಿರತ ಕಮಿಟಿಯ ಮುಖ್ಯ ಸದಸ್ಯರಾಗಿ ಸೇವಾ ಗೌರವ, ಮೈಸೂರು ಭೂಷಣ ಪ್ರಶಸ್ತಿ ಮಂಡ್ಯ ಜಿಲ್ಲಾ ಸಾಹಿತ್ಯ ಸಂಮೇಳನದ ಗೌರವ ಪ್ರಶಸ್ತಿ, ಹತ್ತು ಹಲವಾರು ಪ್ರಶಸ್ತಿಗಳಿಗೆ ಭಜನರಾಗುತ್ತಾರೆ.

ಅಖಿಲ ಕರ್ನಾಟಕದ ಜೈನ ಮಹಿಳಾ ಒಕ್ಕುಟದ ಅಧ್ಯಕ್ಷಿಯ ಪೀಠಕ್ಕೆ ಅವಿರೋಧವಾಗಿ ಆಯ್ಕೆಯಾದ ಇವರಿಗೆ ಶ್ರವಣ ಬೆಳಗೊಳದ ಶ್ರೀಗಳು ಪ್ರೀತಿ ಪೂರ್ವಕವಾಗಿ ಊರಿನ ಮಗಳನ್ನು ತೆರದ ವಾಹನದಲ್ಲಿ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಹೆಮ್ಮೆಯ ಮೆರವಣಿಗೆಯ ಮೂಲಕ ಅವರಿಂದ ಗೌರವ ಸನ್ಮಾನಕ್ಕೆ ಪಾತ್ರರಾಗುತ್ತಾರೆ. ಅಷ್ಟೇ ಅಲ್ಲದೆ 2018ರ ಮಹಾಮಸ್ತಕಾಭಿಷೇಕದ ರಾಜ್ಯಮಟ್ಟದ ಜೈನ ಮಹಿಳಾ ಸಂಮೇಳನದ ಅಧ್ಯಕ್ಷತೆ ಹಾಗೂ ರಾಷ್ಟ್ರ ಮಟ್ಟದ ಜೈನ ಮಹಿಳಾ ಸಂಮೇಳನದ  ಸ್ವಾಗತ ಸಮಿತಿ ಅಧ್ಯಕ್ಷರ ಗೌರವ ಪ್ರಾಪ್ತಿಯಾಗುತ್ತದೆ.

ಧವಳ ಶ್ರೀ ಜಿನ ಪೂಜಾ ಸಮಿತಿ ಅಧ್ಯಕ್ಷೆಯಾಗಿ, ಚಿಕ್ಕನ ಸೊಗೆ ಬಸದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತ, ಸಂಯುಕ್ತ ಸೇವಾ ಪ್ರತಿಷ್ಟಾನದ ಗೌರವ ಅಧ್ಯಕ್ಷ ಗೌರವವನ್ನು ಕೂಡ ಪಡೆಯುತ್ತಾರೆ. ಆನೆವಾಳಿನ ವೃಷಭ ಗಿರಿ ಆದಿನಾಥ ಬಸದಿಯ ಅಧ್ಯಕ್ಷರಾಗಿ, ಮಹಾವೀರ ವಿದ್ಯಾ ಮಂದಿರದ ಉಪಾಧ್ಯಕ್ಷರಾಗಿ, 2018ರ ಮಹಾಮಸ್ತಕಾಭಿಷೇಕದಲ್ಲಿ ನ್ಯಾಷಿನಲ್ ಲೆವಲ್ ನಲ್ಲಿ ಸಂರಕ್ಷಕರಾಗಿ ಕೂಡ ಆಯ್ಕೆಯಾಗಿದ್ದಾರೆ. ಪ್ರಸ್ತುತ ಭಾರತೀಯ  ಜೈನ ಮಿಲನ್ ಮೈಸೂರು ವಿಭಾಗದ ವಲಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದು ಇಷ್ಟೆಲ್ಲಾ ಗುರುತರ ಜವಾಬ್ದಾರಿಗಳನ್ನು ಉತ್ಕೃಷ್ಟವಾಗಿ ನಿಭಾಹಿಸಿದ ಸದ್ಗುಣ ಶೀಲಾಚಾರ ಸಂಪನ್ನೆಯಾಗಿ ಮುನಿಗಳ ಭಗವಾನರ ಸೇವೆ ಸಮಾಜ ಸಂಸ್ಕೃತಿಯ ಪೋಷಣೆ ಮಾಡುವ ಧೀಮಂತೆ ನಮ್ಮ ಜೈನ ಸಮಾಜಕ್ಕೆ ಭೂಷಣ ಇವರನ್ನು ಸಮಾಜ ರತ್ನ ಎಂದರೆ ತಪ್ಪೇನಿಲ್ಲಾ.

ಶ್ರೀಮತಿ ಶೀಲಾ ಅನಂತರಾಜು ರವರು ಮಾತನಾಡಿ ನಾನು ನಡೆದು ಬಂದ ದಾರಿಯಬಗ್ಗೆ ನಾನು ಹೇಳಿಕೊಳ್ಳಲು ಇಷ್ಟಪಡುತ್ತೇನೆ, 22 ವರ್ಷದಿಂದ ಮೈಸೂರು ಮಹಿಳಾ ಸಮಾಜಕ್ಕೆ ಕೆಲಸಮಾಡಿದ್ದೇನೆ. ತುಂಬಾ ಹಿಂದೆ ಉಳಿದ್ದಿದ ಸಮಾಜವನ್ನು ಮುಂದೆ ತರುವಂತಹ ಪ್ರಯತ್ನಮಾಡಿದೇನೆ ಹಾಗಾಗಿ ಈಗ ಮೈಸೂರು ಮಹಿಳಾ ಸಮಾಜ ಮೊದಲ ಸ್ಥಾನದಲ್ಲಿದೆ. ಒಕ್ಕೂಟದ ಅಧ್ಯಕ್ಷರಾಗಿ ಮೂರುವರೆ ವರ್ಷ ಕಾರ್ಯ ನಿರ್ವಹಿಸಿದ್ದೇನೆ. ಮತ್ತು ಅವರಿಗೆ ಬಂದಿರುವಂತಹ ಸನ್ಮಾನಗಳು ಹಾಗೂ ಶ್ರವಣ ಬೆಳಗೊಳದ ಶ್ರೀಗಳು ಪ್ರೀತಿ ಪೂರ್ವಕವಾಗಿ ತೆರದ ವಾಹನದಲ್ಲಿ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿಮೆರವಣಿಗೆಯ ಮೂಲಕ ಅವರಿಂದ ಗೌರವ ಸನ್ಮಾನಕ್ಕೆ ಪಾತ್ರರಾಗಿರುವುದಕ್ಕೆ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಮತ್ತು ಅವರ ಕಾರ್ಯ ವೈಕರಿಯಬಗ್ಗೆ ವಿವರಿಸಿದರು.

ಜ್ವಾಲಮಾಲ ನ್ಯೂಸ್ ನವರು ಹೆಮ್ಮೆಯ ಶ್ರಾವಕಿ ಎಂದು ಆಯ್ಕೆ ಮಾಡಿದದಕ್ಕೆ ಧನ್ಯವಾದಗಳನ್ನು ತಿಳಿಸಿದರು.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್