ಕಂಬದಹಳ್ಳಿ ವರ್ಷಿಕಾಪೂಜೆ 17 01 2021

ಪರಮಪೂಜ್ಯ ಸ್ವಸ್ಥಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ಪಾವನ ನೇತೃತ್ವದಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಬೆಳಗ್ಗಿನ ನಿತ್ಯ ಪೂಜೆ  ಯೊಡನೆ ಕಂಬದ  ಮೇಲಿನ 1008  ಶ್ರೀ ಶೀಥಲನಾಥ ತೀರ್ಥಂಕರರಿಗೆ ಹಾಗೂ  ಬ್ರಹ್ಮ ದೇವರಿಗೆ 108 ಕಳಸಾಭಿಷೇಕ, ಅಷ್ಟದ್ರವ್ಯ  ಅಭಿಷೇಕ , ಶೋಡಶೋಪಚಾರ  ಪೂಜೆ ಮತ್ತು ಮಹಾಮಂಗಳಾತಿ  ಬಹಳ ಸುಂದರವಾಗಿ ನೆರವೇರಿತು.

ದಿನಾಂಕ 17/01/2020 ರಂದು ವಾರ್ಷಿಕ ಪೂಜಾ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ  ಸಭಾ ಕಾರ್ಯಕ್ರಮದಲ್ಲಿ  ಪರಮಪೂಜ್ಯ   ಸ್ವಸ್ಥಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರು , ಪರಮಪೂಜ್ಯ ಸ್ವಸ್ಥಿಶ್ರೀ  ಸಿದ್ದಾಂತ ಕೀರ್ತಿ ಭಟ್ಟಾರಕರು ಸ್ವಾಮೀಜಿರವರ  ಪಾವನ  ಉಪಸ್ಥಿತಿಯಲ್ಲಿ ಕರ್ನಾಟಕ ಜೈನ  ತೀರ್ಥ ಕ್ಷೇತ್ರ ಕಮಿಟಿಯ ಅಧ್ಯಕ್ಷರಾದ  ವಿನೋದ್ ಬಾಟ್ಲೀವಾಲಾರವರ ಅಧ್ಯಕ್ಷತೆಯಲ್ಲಿ ಶ್ರೀ ಎನ್ ಪ್ರಸನ್ನ ಕುಮಾರ್ ರವರು ಉದ್ಘಾಟಕರಾಗಿ ಶ್ರೀ ಜೆ.ಪಿ. ಅನಂತರಾಜು ರವರು ಶ್ರವಣಬೆಳಗೊಳ  ಮಠದ ಅಶೋಕ್ ಕುಮಾರ್ ಜೈನ್ ರವರು ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು. ಒಟ್ಟಾರೆ ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿಬಂದು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.