ಶರನ್ ನವರಾತ್ರಿ ಅಂಗವಾಗಿ ಮೈಸೂರಿನ ಶ್ರೀ ಪದ್ಮಶ್ರೀ ಜೈನ ಮಹಿಳಾ ಸಮಾಜದ ಆಶ್ರಯದಲ್ಲಿ ವೈಭವದ ಶ್ರೀ ಸರಸ್ವತಿ ಪೂಜೆಯನ್ನು ದಿನಾಂಕ :- 7 ಅಕ್ಟೋಬರ 2016ನೇ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಮಾಜದ ಅತ್ತಿಮಬ್ಬೆ ಸಭಾಭವನದಲ್ಲಿ ಅಯೋಜಿಸಲಾಯಿತು.
ಬೆಂಗಳೂರಿನ ಸುಮೇರು ಫೌಂಡೇಶನ್ ಮತ್ತು ಚಿನ್ಮಯ ಸಾಗರ ಚಾರಿಟಬಲ್ ಟ್ರಸ್ಟ್ ಇವರ ವತಿಯಿಂದ ಸುಮೇರು ಫೌಂಡೇಶನ್ ನವರು ನಡೆಸಿಕೊಂಡು ಬರುತ್ತಿರುವ ಅಂಚೆ ಶಿಕ್ಷಣ ಕೋರ್ಸ್ಗಳ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು 16/10/2016ರ ಭಾನುವಾರ ಹಮ್ಮಿಕೊಳ್ಳಲಾಗಿತ್ತು
ಶ್ರೀ ದಿಗಂಬರ ಜೈನ ಸಮಾಜ ಮೈಸೂರು ಇಲ್ಲಿನ ನಿರ್ದೇಶಕರುಗಳ ಚುನಾವಣೆ ದಿನಾಂಕ :- 23-10-2016ರ ಭಾನುವಾರದಂದು ಎಂ ಎಲ್ ಜೈನ್ ಬೋರ್ಡಿಂಗಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಯಿತು.
ಶ್ರೀಕ್ಷೇತ್ರ ಕನಕಗಿರಿಯಲ್ಲಿ 2017ನೇ ಜನವರಿ 26ರಿಂದ ಫೆಬ್ರವರಿ 5ರವರೆಗೆ ಅತಿಶಯ ಮಹೋತ್ಸವವು ನಡೆಯಲ್ಲಿದು ಪರಮಪೂಜ್ಯ ಅಂರ್ತಮನಾ ಮುನಿಶ್ರೀ ಪ್ರಸನ್ನ ಸಾಗರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಹಾಗೂ ಪರಮಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟಾರಕ ಭವ್ಯ ನೇತೃತ್ವದಲ್ಲಿ ಜಿನಸಹಸ್ರನಾಮ ಮಹಾವಿಧಾನ ಗಜರಥೋತ್ಸವ ಹಾಗೂ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪ್ರತಿಷ್ಠಮಹೋತ್ಸವ ನಡೆಯಲಿದೆ
ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಹಾಗೂ ಪದ್ಮಶ್ರೀ ಜೈನ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 8-2016ರಿಂದ 14ರವರೆಗೆ ನಡೆಯಲ್ಲಿರುವ ಶ್ರೀ ದುರ್ಮುಖಿ ನಾಮ ಸಂವತ್ಸರದ ಕಾರ್ತಿಕ ಮಾಸದ ನಂದಿಶ್ವರ ಅಷ್ಟಾನಿಕ ಪರ್ವದ ಉದ್ಘಾಟನ ಸಮಾರಂಭ ನವೆಂಬರ್ 8ರಂದು ಮೈಸೂರಿನ ಶ್ರೀ ಶಾಂತಿನಾಥ ಬಸದಿಯಲ್ಲಿ ನಡೆಯಿತು.
ಜೈನ ಕಾಶಿ ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ 2018 ರಲ್ಲಿ ನಡೆಯಲಿರುವ ಪ್ರತಿ 12 ವರ್ಷಕ್ಕೊಮ್ಮೆ ನಡೆಯಲಿರುವ ಐತಿಹಾಸಿಕ ಮಹೋತ್ಸವ ಮಹಾಮಸ್ತಕಾಭಿಷೇಕದ ಶುಭ ಮುಹೂರ್ತದ ದಿನಾಂಕವನ್ನು ಪ್ರಕಟಿಸಲಾಯಿತು.
ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಮತ್ತು ಪದ್ಮ ಶ್ರೀ ಜೈನ ಮಹಿಳಾ ಸಮಾಜದವತಿಯಿಂದ ಎಮ್, ಎಲ್ ಜೈನ್ ಬೋರ್ಡಿಂಗ್ ಹೊಮ್ ನಲ್ಲಿ ಮುನಿಶ್ರೀ 108 ಪಾವನ ಕೀರ್ತಿ ಮುನಿ ಮಹಾರಾಜರ ವರ್ಷಯೋಗ ಚಾತುರ್ಮಾಸದ ವ್ರತಸಮಾರೋಪ ಹಾಗೂ ಪಿಂಚಿ ಪರಿವರ್ತನ ಕಾರ್ಯಕ್ರಮ ನಡೆಯಿತು.
ಸೆಪ್ಟೆಂಬರ್ 18ರ 2016 ರಂದು ನಡೆದ ವಲಯ 8 ಪದಾದಿಕಾರಿಗಳ ನಿರ್ದೇಶಕರುಗಳ ಕಾರ್ಯಗಾರದಲ್ಲಿ ಮಹಿಳಾ ವಿಭಾಗದ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ರವರು ಪ್ರಪ್ರಥಮ ಬಾರಿಗೆ ತಮ್ಮ ಯೋಜನೆಯೊಂದನ್ನು ಪ್ರಕಟಗೊಳಿಸಿದರು.
ಹುಣಸೂರು ತಾಲ್ಲೂಕಿನ ದಿಗಂಬರ ಜೈನ ಅತೀಶಯಕ್ಷೇತ್ರ ಶ್ರೀ ಗೊಮ್ಮಟಗಿರಿಯಲ್ಲಿ ಶ್ರೀಗೊಮ್ಮಟೆಶ್ವರ ಸ್ವಾಮಿ ಗೆ 67ನೇ ಮಹಾಮಸ್ತಕಾಭಿಷೇಕ ಪೂಜಾ ಮಹೋತ್ಸವ ದಿನಾಂಕ 27/11/2016ನೇ ಭಾನುವಾರ ನಡೆಯಿತು
ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಹಾಗೂ ಪದ್ಮ ಶ್ರೀ ಜೈನ ಮಹಿಳಾ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 9-12-2016ನೇ ಶುಕ್ರವಾರದಂದು ಬೆಳಗ್ಗೆ ಶ್ರೀ ಪಂಚಪರಿಮೇಷ್ಠಿ ಆರಾಧನೆ ವಿಜ್ರಂಭಣೆಯಿಂದ ನಡೆಯಿತು.
ಸೋಂದಾ :- ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಮಠ,ಸೋಂದಾ ಇಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಉತ್ಸವದ ಆಚರಣೆ ಬಹಳ ವಿಷೇಶವಾಗಿ ಆಚರಿಸಲಾಗುತ್ತಿದೆ.ದಿನಾಂಕ : 08.10.2016 ರಂದು ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನೆ ಕೂಡಾ ಜರುಗಿತು.
ಶ್ರೀ ಎಸ್. ಜಿತೇಂದ್ರ ಕುಮಾರ್ ಅಭಿನಂದನ ಸಮಿತಿ ಬೆಂಗಳೂರು, ಶ್ರೀ ದಿಗಂಬರ ಸಮಾಜ ಹಾಗೂ ಪದ್ಮ ಶ್ರೀ ಜೈನ ಮಹಿಳಾ ಸಮಾಜ ಮೈಸೂರು ಹಾಗೂ ಸಕಲ ಜೈನ ಸಮಾಜ ಮೈಸೂರುವತಿಯಿಂದ ಶ್ರೀ ಎಸ್. ಜಿತೇಂದ್ರ ಕುಮಾರ್ ರವರಿಗೆ ಅಭಿನಂದನ ಸಮಾರಂಭ ನಡೆಯುತ್ತಿರುವಂತಹ ಈ ಸುಸಂದರ್ಭದಲ್ಲಿ ಜಿತೇಂದ್ರ ಕುಮಾರ್ ಅವರ ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳೊಣ.
ಪಂಡಿತ ರತ್ನ ಶ್ರೀ ಎ. ಶಾಂತಿರಾಜು ಶಾಸ್ತ್ರಿ ಯವರ ಪುತ್ರ ರಾದ ಸಮಾಜ ರತ್ನ, ಸಮಾಜ ಭೂಷಣ, ಶ್ರಾವಕ ರತ್ನ ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕದ ರಾಷ್ರೀಯ ಅಧ್ಯಕ್ಷ ರಾದ ಶ್ರೀ ಎಸ್. ಜಿತೇಂದ್ರಕುಮಾರ್ ರವರ ಅಭಿನಂದನಾ ಸಮಾರಂಭ ದಿನಾಂಕ 10/12/2016 ರಂದು ಅವರು ಹುಟ್ಟು ಬೆಳೆದ ಸಾಂಸೃತಿಕ ನಗರಿ ಮೈಸೂರಿನ ಪುರಭವನದಲ್ಲಿ ಅದ್ದೂರಿಯಾಗಿ ನಡೆಯಿತು.
ಶ್ರೀ ಚಾರುಕೀರ್ತಿ ಭಟಾರಕ ಮಹಾಸ್ವಾಮೀಜಿಗಳವರ ಅಣತಿಯಂತೆ ಮೈಸೂರಿನಲ್ಲಿ ನಡೆದ 10-12-2016 ರಂದು ಶ್ರೀ ಎಸ್. ಜಿತೇಂದ್ರ ಕುಮಾರ್ ರವರ ಅಭಿನಂದನ ಕಾರ್ಯಕ್ರಮದಲ್ಲಿ ಕಾರ್ಕಳ, ಕನಕಗಿರಿ, ಹರಿಯಂತಗಿರಿ, ಕಂಬದಹಳ್ಳಿ, ವರೂರು, ಹೊಂಬುಜ, ಎನ್. ಆರ್. ಪುರ, ಲಕ್ಕವಳ್ಳಿ ಮಹಾಸ್ವಾಮೀಜಿಗಳವರು ಶ್ರೀ ಸುರೇಂದ್ರ ಕುಮಾರ್ ರವರು ಹಾಗೂ ವೇದಿಕೆ ಗಣ್ಯರಿಂದ ಜಿತೇಂದ್ರ ಕುಮಾರ್ ರವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಶ್ರೀ ಚಾರುಕೀರ್ತಿ ಭಟಾರಕ ಮಹಾಸ್ವಾಮೀಜಿಗಳವರ ಅಣತಿಯಂತೆ ಮೈಸೂರಿನಲ್ಲಿ ನಡೆದ 10-12-2016 ರಂದು ಶ್ರೀ ಎಸ್. ಜಿತೇಂದ್ರ ಕುಮಾರ್ ರವರ ಅಭಿನಂದನ ಕಾರ್ಯಕ್ರಮದಲ್ಲಿ ಕಾರ್ಕಳ, ಕನಕಗಿರಿ, ಹರಿಯಂತಗಿರಿ, ಕಂಬದಹಳ್ಳಿ, ವರೂರು, ಹೊಂಬುಜ, ಎನ್. ಆರ್. ಪುರ, ಲಕ್ಕವಳ್ಳಿ ಮಹಾಸ್ವಾಮೀಜಿಗಳವರು ಶ್ರೀ ಸುರೇಂದ್ರ ಕುಮಾರ್ ರವರು ಹಾಗೂ ವೇದಿಕೆ ಗಣ್ಯರಿಂದ ಜಿತೇಂದ್ರ ಕುಮಾರ್ ರವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಶ್ರೀ ದಿಗಂಬರ ಜೈನ ಸಮಾಜ ಮೈಸೂರಿನ ನೂತನ ಪದಾದಿಕಾರಿಗಳಿಗೆ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರಿಂದ ಸನ್ಮಾನ ಸಮಾರಂಭವನ್ನು ದಿನಾಂಕ 24/12/2016 ರಂದು ಶ್ರವಣಬೆಳಗೊಳದಲ್ಲಿ ನೆರವೇರಿತು.
ಶ್ರೀ ಕ್ಷೇತ್ರ ಕನಕಗಿರಿ ಕನಕಾದ್ರಿ, ಇದು ಕನಕಗಿರಿ ಕ್ಷೇತ್ರ ಕರ್ನಾಟಕದ ಜೈನ ತೀರ್ಥ ಕ್ಷೇತ್ರಕಳಲ್ಲಿ ಇದು ಒಂದು ಅತಿಶಯದ ಕ್ಷೇತ್ರ ವಾಗಿದೆ. ಕನಕ ಎಂದರೆ ಚಿನ್ನ, ಗಿರಿ ಎಂದರೆ ಬೆಟ್ಟ, ಇದು ಹೆಸರಿಗೆ ತಕ್ಕಂತೆ ಚಿನ್ನದ ಬೆಟ್ಟವಾಗಿದೆ
ಕನಕಗಿರಿಯಲ್ಲಿ ವೈಭವಯುತವಾಗಿ ನಡೆಯುತ್ತಿರುವ ಮಹೋತ್ಸವದಲ್ಲಿ 21 – 1 – 2017ರಂದು ಬೆಳಿಗ್ಗೆ ನವ ಗ್ರಹ ಹಾಗೂ ಗಣದರವಲಯ ಆರಾಧನೆ, ಶುಕ್ರಗ್ರಹ 108 ಜಪ ಹಾಗೂ ಶಾಂತಿಹೋಮ ಪೂಜೆ ಮಾಡಲಾಯಿತು.
ಎಷ್ಟೋ ಬಾರಿ ಪದಗಳಲ್ಲಿ ಹೇಳಲಾಗದನ್ನುರೇಖೆಗಲ್ಲಿಹೇಳಿಮುಗಿಸಬಹುದು,ರೇಖೆಗಳ ಮುಂದೆ ಬಣ್ಣವು ಬೇಕಿಲ್ಲಎನಿಸಬಹುದು,ರೇಖೆಗಳುಮಾತನಾಡಲುಬಹುದು ಆದರೆ ಅದು ಕೇಳಿಸುವುದಿಲ್ಲ, ಕೇಳಿಸಿದರೆ ಅದು ಮನಸ್ಸಿಗೆ ಮಾತ್ರ. ಇದು ಎಮ್.ಎಮ್. ಜಿನೇಂದ್ರರವರ ಅನಿಸಿಕೆ.
ಶ್ರವಣಬೆಳಗೊಳದ 2018ನೇ ಮಹಾಸ್ತಕಾಭಿಷೇಕದ ಹಿನ್ನೆಲೆಯಲ್ಲಿ ವಿಂಧ್ಯಗಿರಿಗೆ ನೂತನ ಮೇಟಿಲು ನಿರ್ಮಾಣ ಹಲವು ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ದಿನಾಂಕ: 9-2-2017ರಂದು ಚಾಲನೆ ದೊರಕಿದೆ.
ಚಿತ್ತ ಜಿನೇಂದ್ರನೆಂದೆ ಖ್ಯಾತಿಯಾದ ಜಿನೇಂದ್ರರವರು ಕರ್ನಾಟಕ ಲಲಿತ ಕಲಾ ಆಕಾಡೆಮಿ ಜೊತೆಗೂಡಿ ತಾವು ಹುಟ್ಟಿ ಬೆಳೆದ ಮಲೆನಾಡಿನ ಶಿವಮೊಗ್ಗದಲ್ಲಿ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನವನ ಫೆಬ್ರವರಿ 4, 2017ರಂದು ಏರ್ಪಡಿಸಿದರು.
ದಿನಾಂಕ 7 ಮತ್ತು 8ನೇ ಜನವರಿ 2017ರಂದು ನಮ್ಮ ನೆನಪಿನಲ್ಲಿ ಉಳಿಯುವಂತಹ ಇಡೀ ಕರ್ನಾಟಕ ಜೈನ ಸಮುದಾಯ ಭವನದಿಂದ ಒಳ್ಳೆಯ ಅನಿಸಿಕೆ ಅಭಿಪ್ರಾಯಗಳನ್ನು ಪಡೆದಂತಹ ಒಂದು ಉನ್ನತ ಮಟ್ಟದ ಕಾರ್ಯಕ್ರಮ ಜೈನ್ ಮಿಲನ್ ವಲಯ 8 ರ ವತಿಯಿಂದ ನಡೆಯಿತು.
ಫೆಬ್ರವರಿ 21,2017ರಂದು ಶ್ರವಣಬೆಳಗೊಳ ಶ್ರೀ ಕ್ಷೇತ್ರ ಸ್ಥಾಪಿಸಿರುವ ಚಾವುಂಡರಾಯ ಪ್ರಶಸ್ತಿಯನ್ನು ಧರಣೇಂದ್ರ ಕುರಕುರಿ ರವರಿಗೆ ಬೆಂಗಳೂರಿನ ಕನ್ನಡ ಸಾಹ್ಯಿತ ಪರಿಷತ್ತು ಸಭಾಂಗಣದಲ್ಲಿ ನೀಡಲಾಯಿತು.
ಜಿನ ಭಜನ ಕಾರ್ಯಕ್ರಮದಲ್ಲಿ ಪ್ರತಿಕ್ಷಣವು ಅವಿಸ್ಮರಣಿಯವಾಗಿತು ಗಮನಸೆಳೆದ ಒಂದು ಭಾಗವೆಂದರೆ ಇಪ್ಪತ್ತು ನಿಮಿಷದ ಐವತ್ತು ಸದಸ್ಯರೊಡಗೂಡಿ ಹಾಡಿದ ಫಿನಾಲೆ ಸಾಂಗ್, ಯುವ ಅಜಿತ್ ರವರ ಪರಿಕಲ್ಪನೆಯಲ್ಲಿ ಮೂಡಿಬಂದ ಗೀತೆಗಳು, ಗಾಯಕರುಗಳ ಶಿಸ್ತು ಭದ ತಯಾರಿ ಸುಂದರ ಪ್ರಸ್ತುತಿ ಸಭಿಕರ ಮನ್ನಣೆ ಪಡೆದಿತ್ತು.
ಬೆಳಗಾವಿ ಜಿಲ್ಲೆಯ ಖಾನಪುರ ತಾಲ್ಲೂಕಿನ ಕಸಂಬಳ್ಳಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅವರಣದಲ್ಲಿ ಏಪ್ರಿಲ್ 25, 2005ರಂದು ಕಟ್ಟಡಕಾಗಿ ಪಾಯ ತೊಡುತ್ತಿದ ಸಂದರ್ಭದಲ್ಲಿ ಕ್ರಿ.ಶ.ಸುಮಾರು 11ನೇ ಶತಮಾನದ ಪಾರ್ಶ್ವನಾಥ ತೀರ್ಥಂಕರ ಶಿಲ್ಪ ದೊರಕಿದೆ.
ದಿನಾಂಕ : 12-03-2017ರ ಭಾನುವಾರದಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕೂಟ್ಟದಿಂದ ಕನಕಗಿರಿಯಲ್ಲಿ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾ ಅಭಿಷೇಕವನ್ನು ಸ್ವಸ್ತಿಶ್ರೀ ಭುವನ ಕೀರ್ತಿ ಭಟಾರಕ ಸ್ವಾಮೀಜಿಯವರ ಸಾನಿಧ್ಯದಲ್ಲಿ ಹಮ್ಮಿಕೊಳಲಾಗಿತ್ತು.
ಅತಿಶಯ ಶ್ರೀ ಕ್ಷೇತ್ರ ಹೊಂಬುಜದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತಿ ದೇವಿ ಮಹಾರಥೋತ್ಸವದ ಅಂಗವಾಗಿ ಮಠದ ಪೀಠಾಧಿಪತಿಗಳಾದ ಸ್ವಸ್ತೀಶ್ರೀ ದೇವೇಂದ್ರ ಕೀರ್ತಿ ಭಟಾರಕ ಪಟ್ಟಚಾರ್ಯರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಎಂಟು ನೂರು ವರ್ಷಗಳಿಗೂ ಹಿಂದಿನ ರಥವನ್ನು ಸಿಂಗರಿಸಿ ಸಂಪ್ರದಾಯದಂತೆ ರಥೋತ್ಸವವನ್ನು ಆಚರಿಸಲಾಯಿತು.
ಶ್ರವಣಬೆಳಗೊಳದಲ್ಲಿನ ವಿಂದ್ಯಗಿರಿ ಬೆಟ್ಟದಲ್ಲಿ ವಿಶ್ವ ವಿಖ್ಯಾತ ಭಗವಾನ್ ಬಾಹುಬಲಿಯ 1037ನೇ ಪ್ರತಿಷ್ಟಾಪನೆ ಮಹೋತ್ಸವ ಕಾರ್ಯಕ್ರಮವನ್ನು ಶ್ರವಣಬೆಳಗೊಳದ ಪೀಠದ್ಯಕ್ಷರಾದ ಪೂಜ್ಯ ಸ್ವಸ್ತಿಶ್ರೀ ಚಾರು ಕೀರ್ತಿ ಭಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ನೆರೆವೇರಿಸಲಾಯಿತು.
ಜೈ ಜಿನೇಂದ್ರ, ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ಪುಷ್ಪಗಿರಿ ತೀರ್ಥಪ್ರಣಿತ ಪರಮ ಪೂಜ್ಯ 108 ಅಚಾರ್ಯ ಶ್ರೀ ಶ್ರೀ ಪುಷ್ಪದಂತ ಸಾಗರರು ತಮ್ಮ ಸಂಘ ಸಹಿತ ಚಾತುರ್ಮಾಸವನ್ನು ಕೈಗೊಂಡಿದಾರೆ.
ಮಹಿಳಾ ಸಮ್ಮೇಳನ ರಂಗೋಲಿ, ಅಕ್ಷತಾ ಪುಂಜ ಸಂಯೋಜನೆ ಮತ್ತು ಪ್ರದರ್ಶನ
ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಮಹಿಳಾ ಸಮ್ಮೇಳನದ ಅಂಗವಾಗಿ ದಿನಾಂಕ : 10-08-2017ರಂದು ರಂಗೋಲಿ ಸ್ಪರ್ಧೆಯನ್ನು ಹಾಗೂ ಅಕ್ಷತ ಪುಂಜ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಭಗವಾನ್ ಶ್ರೀ ಶ್ರೀ ಶ್ರೀ ಗೊಮ್ಮಟೇಶ್ವರ ಮಹಾ ಮಸ್ತಕಾಭಿಷೇಕದ ಶುಭ ಸಂದರ್ಭದಲ್ಲಿ ನಡೆದ ರಾಷ್ಟ್ರಮಟ್ಟದ ಜೈನ ಮಹಿಳಾ ಸಮಾವೇಶ ದಿನಾಂಕ ಆಗಸ್ಟ್ 11, 12, 13ರಂದು ಗೊಮ್ಮಟ ನಗರದ ಪಟ್ಟಮಹಾದೇವಿ ಶಾಂತಲ ಸಭಾ ಮಂಟಪದಲ್ಲಿ ವೈಭವಯುತವಾಗಿ ನಡೆಯಿತು.
ರಾಷ್ಟ್ರಮಟ್ಟದ ಜೈನ ಮಹಿಳಾ ಸಮ್ಮೇಳನದಲ್ಲಿ ಬೆಂಗಳೂರಿನ ನಾಟ್ಯಾಲಯ ನೃತ್ಯ ಶಾಲೆಯಿಂದ ಭ್ರಾಮ್ಹಿ ಮತ್ತು ಸುಂದರೆ ಇವರಿಬ್ಬರ ಒಂದು ಕಥಾ ಪುರಕವನ್ನ ಪ್ರಸ್ತುತಪಡಿಸಲಾಯಿತ್ತು, ಮತ್ತು ಗಣ್ಯರಿಗೆ ಸನ್ಮಾನಿಸಲಾಯಿತು.
ಮಲೆನಾಡಿನ ನರಸಿಂಹರಾಜಪುರದ ಯುವ ವಿದ್ಯಾರ್ಥಿನಿ ಕೇವಲ ಎಂಟುವರೆ ನಿಮಿಷದಲ್ಲಿ ನಿರರ್ಗಳವಾಗಿ, ಮನಮುಟ್ಟುವಂತೆ ನಮ್ಮ ದೇಶ ವಿಶ್ವದ ದೊಡ್ಡಣ್ಣನಾಗಬೇಕಾದರೆ ಏನು ಮಾಡಬೇಕು, ದೇಶದ ಜನರು ಹೇಗೆ ಕಾರ್ಯನಿರ್ವಹಿಸಬೇಕು ಇತ್ಯಾದಿ ವಿಚಾರಗಳನ್ನು ತುಂಬಾ ಸ್ಪಷ್ಟವಾಗಿ ಹೇಳಿದ್ದಾಳೆ
ವಿಶ್ವವಿಖ್ಯಾತ ಶ್ರೀ ಗೊಮ್ಮಟೇಶ್ವರ ಶ್ರೀ ಬಾಹುಬಲಿ ಮೂರ್ತಿಗೆ 2018 ರ ಫೆಬ್ರವರಿಯಲ್ಲಿ ನಡೆಯಲಿರುವ ಮಹಾ ಮಸ್ತಕಾಭಿಷೇಕದ ಹಿನ್ನಲೆಯಲ್ಲಿ ಮೂರ್ತಿಯ ವೈಙ್ನಾನಿಕ ಸಂರಕ್ಷಣೆ ಮತ್ತು ಸ್ವಚ್ಛತಾ ಕಾರ್ಯಕ್ಕೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಚಾಲನೆ ನೀಡಿದರು.
ಶ್ರೀ ಪಿ. ವೈ. ರಾಜೆಂದ್ರ ಕುಮಾರ್ ರವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಶ್ರೀ ಎಸ್ ಜಿತೇಂದ್ರ ಕುಮಾರ್ ರವರು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಲಾಂಛನವು ಗುಳ್ಳಕಾಯಿ ಅಜ್ಜಿಯು ಬಾಹುಬಲಿ ಮೂರ್ತಿಗೆ ಅಭಿಷೇಕ ಮಾಡಿದ 10ನೇ ಶತಮಾನದ ಸಂದರ್ಭದ ಚಿತ್ರಣವನ್ನು ಹೊಂದಿದೆ.
ಬೆಂಗಳೂರಿನಿಂದ ಹಾಸನಕ್ಕೆ ಆಗಮಿಸಿದ ಗೊಮ್ಮಟೇಶ್ವರ ಎಕ್ಸ್ ಪ್ರೆಸ್ . ಶ್ರವಣಬೆಳಗೊಳ ತಲುಪಿದ ಮೊದಲ ರೈಲು ಸಾವಿರಾರು ಮಂದಿಯಿಂದ ಹರ್ಷೋದ್ಘಾರ, ಶಿಲ್ಲೆ, ಚಪ್ಪಾಳೆ, ಜಯಘೋಷದ ಮೂಲಕ ಸ್ವಾಗತಿಸಿದ ಜನಸ್ತೋಮ
ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ (ರಿ ) , ನ ಬಗ್ಗೆ ಹೇಳುತ್ತಿದ್ದೆ. ಈ ಹಿಂದಿನ ಭಾಗದಲ್ಲಿ ಹೇಳಿದಂತೆ ಅಗಾಧ ಭಂಡಾರ. ಇದನ್ನು ಕೆಲವೇ ನಿಮಿಷದಲ್ಲಿ ಸಂಕ್ಷೀಪ್ತ ಗೊಳಿಸುವುದು ನನ್ನ ಮುಂದಿರುವ ಸವಾಲೇ ಸರಿ.
ಧರ್ಮ ಬಂಧುಗಳೇ . 2616ನೇ ಮಹಾವೀರ ಜನ್ಮ ಕಲ್ಯಾಣದ ಆಚರಣೆಯನ್ನು ಸರ್ಕಾರವು ಎಡೆ ಗೂಡಿ ಎಲ್ಲೆಡೆ ಆಚರಿಸಲಾಗುತ್ತಿದೆ. ಹರಿಯಾಣ ಸರ್ಕಾರ ದಿಂದ ಮಹಾವೀರ ಜಯಂತಿಯನ್ನು ಅಹಿಂಸಾ ದಿನಾಚರಣೆಯನ್ನಾಗಿ ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಬನ್ನಿ ಬಂಧುಗಳೇ ನೋಡೋಣ ಎಲ್ಲೆಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆಯೆಂದು ತಿಳಿದುಕೊಳ್ಳೋಣ.
ಜೂನ್ 19 2017 ರಂದು ನಡೆದ ಜಯಪುರದ ಸಾಂಗನೇರ್ ಬಸದಿಯ ಭೂಗರ್ಭ ಮೂರ್ತಿಗಳ ಪೂಜಾ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಗಳಾಗಿ ವೀಕ್ಷಿಸಿದ ಪುಣ್ಯಶಾಲಿಗಳಾದ ನನ್ನ ಸ್ನೇಹಿತರೊಬ್ಬರು ಜ್ವಾಲಾಮಾಲಾ ನ್ಯೂಸ್ ಗಾಗಿ ನೀಡಿದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಜೈ ಜಿನೇಂದ್ರ ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ಪುಷ್ಪಗಿರಿ ತೀರ್ಥಪ್ರಣೀತ ಪರಮಪೂಜ್ಯ 108 ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರು ಮಂದಾರಗಿರಿ ತೀರ್ಥ ಪ್ರಣೀತ ಮುನಿಶ್ರೀ 108 ಪ್ರಮುಖ ಸಾಗರ ಮಹಾರಾಜರು,
ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನಡೆಯುತ್ತಿರುವ ಶ್ರೀ ಶ್ರೀ ಶ್ರೀ 108 ಪುಷ್ಪದಂತ ಸಾಗರರ ಚಾತುರ್ಮಾಸದ ಅಂಗವಾಗಿ ಪ್ರತಿ ಭಾನುವಾರದಂತೆ ಈ ಬಾರಿಯ ವಿಶೇಷ ಕಾರ್ಯಕ್ರಮದಲ್ಲಿ ಐ.ಪಿ.ಎಸ್. ಅಧಿಕಾರಿಗಳಾದ ಶ್ರೀ ಜಿನೇಂದ್ರ ಕಣಿವೆಯವರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಜೈ ಜಿನೇಂದ್ರ ಶ್ರೀ ಧಿಗಂಬರ ಜೈನ ಸಮಾಜ, ಪದ್ಮಶ್ರೀ ಜೈನ ಮಹಿಳಾ ಸಮಾಜ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ 105 ಶ್ಕುಲಕ ಪ್ರಶಸ್ತ ಮತ್ತಿ ಮಾತಜೀಯವರ ಸಾನಿಧ್ಯದಲ್ಲಿ ಪರಮ ಪೂಜ್ಯ ಪ್ರಥಮಚಾರ್ಯ ಚಾರಿತ್ಯ ಚಕ್ರವರ್ತಿ 108 ಅಚಾರ್ಯ ಶ್ರೀ ಶಾಂತಿ ಸಾಗರ ಮುನಿ ಮಹಾರಾಜರ 62ನೇ ಪುಣ್ಯ ತಿಥಿ ಆಚರಣೆ ಮಾಡಲಾಯಿತು.
ಜೈ ಜಿನೇಂದ್ರ ಶ್ರೀ ಕ್ಷೇತ್ರ ಹೊಂಬುಜ ಮಠದಲ್ಲಿ ನಡೆದ ಕ್ಷಮಾವಳಿ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಮಹಾ ಸ್ವಾಮೀಜಿಗಳ ಧ್ವನಿಯಲ್ಲಿ ಕ್ಷಮಾವಳಿ ಬೋಧನೆಯನ್ನು ಆಲಿಸಿ.
ಜೈ ಜಿನೇಂದ್ರ ಭಜನ ಸ್ಪರ್ಧೆ ಅಕಾಂಕ್ಷೀಗಳಿಗೆ ಸಂತೋಷತರುವ ವಿಷಯ ಮರಳಿ ಬರುತ್ತಿದೆ, ಜಿನೇಂದ್ರ ಭಜನಾ ಸ್ಪರ್ಧೆ. ಕಳೆದ ಜನವರಿ ತಿಂಗಳಲ್ಲಿ ಎಲ್ಲಾರ ಮನಗೆದ್ದು ಮನೆಮಾತಾದ ಜಿನ ಭಜನಾ ಸ್ಪರ್ಧೆ ಈ ಬಾರಿ ಪರಮ ಪೂಜ್ಯ ಜಗತ್ ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ಆಶಿರ್ವಾದದೊಂದಿಗೆ ಶ್ರೀ ಶ್ರೀ ಶ್ರೀ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಪ್ರಯುಕ್ತ ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ನಡೆಯಲಿದೆ.
ಜೈ ಜಿನೇಂದ್ರ ಮೈಸೂರು ದಿಗಂಬರ ಜೈನ ಸಮಾಜ ಹಾಗೂ ಪದ್ಮಶ್ರೀ ಜೈನಾ ಮಹಿಳಾ ಸಮಾಜದವತಿಹಿಂದ ನಡೆದ ಸರ್ವತೊಭದ್ರ ಆರಾಧನೆ ಪರಮ ಪೂಜ್ಯ ಸ್ವಸ್ತಿಶ್ತೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ಶುಭ ಆಶಿರ್ವಾದದೊಂದಿಗೆ ಹಾಗೂ 105 ಶ್ಕುಲಕ ಶ್ರೀ ಪ್ರಶಸ್ತಮತಿ ಮಾತಾಜೀಯವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆದು 10-10-2017ರಂದು ಮೆರವಣಿಗೆಯ ಮೂಲಕ ಮುಕ್ತಾಯಗೊಂಡಿತು. ಅಂದಿನ ಪೂಜಾ ಕಾರ್ಯಕ್ರಮಗಳನ್ನು ವೀಕ್ಷಿಸೋಣ ಬನ್ನಿ.
ಜೈ ಜಿನೇಂದ್ರ ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನಡೆಯುತ್ತಿರುವ ವಾತ್ಸಲ್ಯ ದಿವಾಕರ 108 ಪುಷ್ಪದಂತ ಸಾಗರ ಮಹಾರಾಜರವರ ಚಾತುರ್ಮಾಸದ ಅಂಗವಾಗಿ 14-10-2017ರಂದು ಮಹಿಳಾ ಅಧಿವೇಶನವನ್ನು ಏರ್ಪಡಿಸಲಾಗಿತ್ತು.
ಸುಹಾಸ್ತಿ ಜೈನ್ ಮಿಲನ್ ಬೆಂಗಳೂರಿನ ವತಿಯಿಂದ ಜೈನ ಯುವಕರಿಗೊಸ್ಕರ ಮೈ-ಮನಸುಗಳಿಗೆ ಕಸರತ್ತು ಕೊಡುವ ದೇಸಿ ಸೊಗಡಿನ ಅಪ್ಪಟ ಭಾರತೀಯ ಕ್ರೀಡೆಯಾದ ಕಬ್ಬಡಿ ಪಂದ್ಯಾವಳಿಯನ್ನು ರಾಜ್ಯಮಟ್ಟದಲ್ಲಿ ಆಯೋಜಿಸಲಾಗಿತ್ತು
ಕರ್ನಾಟಕ ಜೈನ ಅಸೋಸಿಯೇಷನ್ ಶತಮಾನೋತ್ಸವದ ಉದ್ಘಾಟನಾ ಸಮಾರಂಭ
ಕರ್ನಾಟಕ ಜೈನ್ ಅಸೋಸಿಯೇಷನ್ ಹಾಗೂ ಮೋತೀಖಾನೆ ತಿಮ್ಮಪ್ಪಯ್ಯ ಜೈನ ವಿದ್ಯಾರ್ಥಿ ನಿಲಯದವತಿಯಿಂದ ಕೆ.ಜೆ.ಎ.ಶತಮಾನೋತ್ಸವದ ಉದ್ಘಾಟನಾ ಸಮಾರಂಭ ದಿನಾಂಕ 28-6-2018ರಂದು ಕರ್ನಾಟಕ ಜೈನ ಭವನದಲ್ಲಿ ನಡೆಯಿತು.
ಭಾಗ-2 ಕರ್ನಾಟಕ ಜೈನ ಸೋಸಿಯೇಷನ್ ಶತಮಾನೋತ್ಸವದ ಉದ್ಘಾಟನಾ ಸಮಾರಂಭ
ಪೂಜ್ಯಶ್ರೀಗಳವರು ತಮ್ಮ ಆಶೀರ್ವಚನದಲ್ಲಿ ಸಮಾಜದ ಉನ್ನತ ಕಾರ್ಯವೆಂದರೆ ಕೇವಲ ದೇವಸ್ಥಾನದ ಕಾರ್ಯಗಳಲ್ಲಾ ಇಂತಹ ಶೈಕ್ಷಣಿಕ ಉನ್ನತಿಯ ಕೆಲಸಗಳು ಸೇರುತ್ತವೆ ಎಂದರು. (ಪೂಜ್ಯಶ್ರೀಗಳವರು ತಮ್ಮ ಆಶೀರ್ವಚನದಲ್ಲಿ ಹಿಂದಿನ ಕಾಲದ ಜೈನ ಶ್ರಾವಕರ ಉಡುಗೆ ಹೇಗೆ ಇರುತಿತ್ತು ಮತ್ತು ಅವರಲ್ಲಿದ ಧಾರ್ಮಿಕ ಶಕ್ತಿ, ಕರ್ತವ್ಯ ಪ್ರೌವೃತಿ ಮತ್ತು ಸಮಾಜದ ಹೇಳಿಗೆಗಾಗಿ ಒಳ್ಳೆಯ ಕಾರ್ಯಕ್ರಮವನ್ನು ಮಾಡಿ ಯಶಸ್ವಿಗೊಳಿಸುತ್ತಿದರು ಎಂದು ತಿಳಿಸಿದರು).
ಜೈ ಜಿನೇಂದ್ರ ವೀಕ್ಷಕರೆ ಚಾರಿತ್ರಿಕ ಸಾಂಸ್ಕೃತಿಕ ಶಿಲ್ಪಕಲೆಯ ತವರುರಾದ ಹಾಸನ ಜಿಲ್ಲೆಯ ಕಲೆ ಹಾಗೂ ವಾಸ್ತುಶಿಲ್ಪಗಳ ಪರಿಷಿಷ್ಟಗಳ ಕಲಾ ಪ್ರೇಮಿಗಳನ್ನು ಬಸದಿಗಳ ತಾಣವಾಗಿ ಭಕ್ತ ವೃಂದವನ್ನು ಅಧ್ಯಯನ ಕೇಂದ್ರವಾಗಿ ಸಂಶೋಧಕರನ್ನು ಅಕರ್ಶಣಿಯ ಸ್ಥಳವಾಗಿ ಪ್ರವಾಸಿಗರನ್ನು ತನ್ನತ್ತ ಕೈ ಬಿಸಿ ಕರೆಯುತ್ತಿದೆ ವಿಶ್ವ ಪ್ರಸಿದ್ದ ಐತಿಹಾಸಿಕ ಸ್ಥಳ ಶ್ರೀ ಕ್ಷೇತ್ರ ಶ್ರವಣಬೆಳಗೊಳ.
ಮೈಸೂರು ಚಾಮುಂಡಿಪುರಂ ಝಾನ್ಸಿ ಲಕ್ಷ್ಮಿ ಬಾಯಿ ರಸ್ತೆಯಲ್ಲಿರುವ ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯ ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು.
ಐತಿಹಾಸಿಕ ಪ್ರಸಿದ್ದ ಶ್ರೀಕ್ಷೇತ್ರ ಶ್ರವಣಬೆಳಗೂಳದಲ್ಲಿ ನಡೆಯುತ್ತಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಈ ಪಾವನ ಸಂದರ್ಭದಲ್ಲಿ 19-08-2018ರಂದು ನಡೆಯಲಿದೆ ಇಂದಿನ ಸಂಪ್ರದಾಯ ಪದ್ಧತಿಯಂತೆ ಭವ್ಯ ಸಂಪ್ರದಾಯಕ ಮಹಾಮಸ್ತಕಾಭಿಷೇಕ.
ಜೈ ಜಿನೇಂದ್ರ ವೀಕ್ಷಕರೆ ಮೈಸೂರಿನಿಂದ 61 ಕೀಲೋಮಿಟರ್ ಹಾಗೂ ಹುಣಸುರಿನಿಂದ 17 ಕೀಲೋಮಿಟರ್ ದೂರದಲ್ಲಿರುವ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮಾಕೊಡು ಗ್ರಾಮದಲ್ಲಿ ಪುರಾತನವಾದ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿಯ ಶೀಲಾವಸ್ಥೆಯಲ್ಲಿದ ಬಸದಿಯ ಜೀರ್ಣೊಧಾರ ಕಾರ್ಯ ಪ್ರಗತಿಯಲ್ಲಿದ್ದು, ಇದಕ್ಕಾಗಿ ಮಾಕೊಡು ಭಗವಾನ್ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಸೇವಾ ಟ್ರಸ್ಟ್ ಕಾರ್ಯೊನ್ಮುಕರಾಗಿದ್ದಾರೆ. ಡಾ|| ವೀರೇಂದ್ರ ಹೆಗ್ಗಡೆಯವರ ಮಾರ್ಗ ದರ್ಶನದಲ್ಲಿ ನಡೆಯುತ್ತಿರುವ ಶ್ರೀ ಧರ್ಮಸ್ಥಳದ ಧರ್ಮೊಥಾನ ಟ್ರಸ್ಟ್ ನವರು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಪರಮ ಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಟ್ರಸ್ಟಿನ ಪರಮ ಸಂರಕ್ಷಕರಾಗಿದಾರೆ.
ಪುರಾತನ ಕ್ಷೇತ್ರವಾದ ಶ್ರೀ ಕ್ಷೇತ್ರ ಕನಕಗಿರಿಯಲ್ಲಿ ಮುಕುಟ ಸಪ್ತಮಿಯ ಪ್ರಯುಕ್ತ ಶ್ರೀ ಪಾರ್ಶ್ವನಾಥ ಸ್ವಾಮಿಗೆ ನಡೆದ ಪೂಜಾಕಾರ್ಯಕ್ರಮ ನಿಮ್ಮಗಾಗಿ ತಂದಿದ್ದೆವೆ. ಹಿಂದೆ ಹೇಮಾಂಕ ದೇಶವಾಗಿದ್ದಕ್ಷೇತ್ರವೇ ಇಂದಿನ ಕನಕ ಗಿರಿ ಕ್ಷೇತ್ರ ಹೆಸರಿಗೆ ತಕ್ಕಂತೆ ಹೊನ್ನ ಕಳಸದಂತ್ತೆ ಸುಂದರ ಪರಿಸರದ ನಡುವೆ ಕಂಗೊಳ್ಳಿಸುತ್ತಿದೆ.
ಬೆಂಗಳೂರಿನಲ್ಲಿ ತರುಣಸಾಗರಜಿ ವಿನಯಂಜಲಿ/ jwalamalanews/2018
ಜೈ ಜಿನೇಂದ್ರ ಪವನ್ ಕುಮಾರ್ ಅಚಾರ್ಯಶ್ರೀ ಪುಷ್ಪದಂತ ಸಾಗರ್ ಜಿ ಮಹಾರಾಜರಿಂದ ದೀಕ್ಷಿತರಾಗಿ ತರುಣ್ ಸಾಗರ ಮುನಿ ಮಹಾರಾಜರಾಗಿ ತಮ್ಮ ಕಹಿ ಗುಳಿಗೆಗಳಿಂದ ಧರ್ಮ ಪ್ರಭಾವನೆಯ ಮೂಲಕ ವಿಶ್ವ ವಿಖ್ಯಾತರಾದ ರಾಷ್ಟ್ರಸಂತ. ಅನೇಕ ರಾಜ್ಯಗಳಲ್ಲಿ ತಮ್ಮ ಪ್ರವಚನ ನೀಡಿದಂತಹ ಪ್ರಬಾವಿ ಕ್ರಾಂತಿಕಾರಿ, ಮೃತ್ಯವನ್ನು ಮಹೋತ್ಸವವಾಗಿಸಿದ ಮಹಾತ್ಮ, ಮುನಿಗಳು ಸೆಪ್ಟೆಂಬರ್ 1, 2018ರ ಬೆಳಿಗ್ಗೆ 3:18ಕ್ಕೆ ದೆಹಲಿಯ ರಾಧೆಪುರಿಯಲ್ಲಿ ಸಲೆಕನ ಪೂರ್ವಕ ಸಮಾಧಿ ಮರಣವನ್ನು ಹೊಂದಿದರು ಪೂಜ್ಯರ ಅಂತಿಮ ಸಂಸ್ಕಾರ ದೆಹಲಿಯ ಮೀರತ್ ರಾಷ್ಟೀಯ ಹೆದ್ದಾರಿಯಲ್ಲಿರುವ ತರುಣಸಾಗರಂನಲ್ಲಿ ನಡೆಯಿತು
ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ನಡೆಯುತ್ತಿರುವ ಗೊಮ್ಮಟೇಶ್ವರ ಭಗವಾನ್ ಶ್ರೀ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಶ್ರವಣ ಬೆಳಗೊಳದ ದಿಗಂಬರ ಜೈನ ಸಮಾಜ ಮತ್ತು ಶ್ರೀ ಕುಷ್ಮಾಂಡಿನಿ ದಿಗಂಬರ ಜೈನ ಸಮಾಜವತಿಯಿಂದ 1967ರಲ್ಲಿ ನಡೆದಂತಹ ಸಾಂಪ್ರದಾಯಕ ಮಹಾಮಸ್ತಕಾಭಿಷೇಕ ಮಹೋತ್ಸವ ದಿನಾಂಕ 19-08-2018ರಂದು ವೈಭವದಿಂದ ಜರುಗಿತು.
ಜೈ ಜಿನೇಂದ್ರ ವೀಕ್ಷಕರೆ ಸದ ಒಂದಿಲ್ಲೊಂದು ಸಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಸದ ಧರ್ಮದ ಉಳಿವಿನೆಡೆಗೆ ಚಿಂತನೆ ನಡೆಸುವವರು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು. ಅಂತಹ ಅವರ ಚಿಂತನೆಗಳಲ್ಲಿ ಒಂದು ಅದ್ಭುತ ಕೊಡುಗೆ ಜಿನ ಭಜನಾ ಸ್ಪರ್ಧೆ, ಭಾರತೀಯ ಜೈನ್ ಮಿಲನ್ ವಲಯ 8ರ ಸಹಯೋಗದೊಂದಿಗೆ ನಡೆಸಿಕೊಂಡು ಬಂದ ಕಾರ್ಯಕ್ರಮದಿಂದ ಜನ-ಮಾನಸದಿಂದ ಮರೆಯಾಗುತ್ತಿರುವ ಜಿನ ಭಜನೆಯನ್ನು ಮುಂದಿನ ಪೀಳಿಗೆಗೂ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮಕರಾಗಿದ್ದಾರೆ.
ಜೈ ಜಿನೇಂದ್ರ ವೀಕ್ಷಕರೆ ಪಂಡಿತ ರತ್ನ ಎತ್ತುರು ಶಾಂತಿರಾಜ ಶಾಸ್ತ್ರಿಗಳು ಆದರ್ಶ ಸರಳ ಸಜ್ಜನಿಕೆಯಾ ಸಕಾರ ಮೂರ್ತಿ ಅವರ ಜೀವನವನ್ನು ಸಮಾಜ ಹಾಗೂ ಸಾಹಿತ್ಯ ಸೇವೆಗೆಂದೆ ಮುಡಿಪಾಗಿಟ್ಟ ಶ್ರೇಷ್ಟ ವಿದ್ವಾಂಸರು
ಜೈ ಜಿನೇಂದ್ರ ವೀಕ್ಷಕರೆ ಆತ್ಮಶುದ್ದಿ ಆತ್ಮಕಲ್ಯಾಣದ ಕಾರಣ ಆತ್ಮನಿಗೆ ದುಃಖ ನೀಡುವಂತಹ ಕರ್ಮವನ್ನು ಆತ್ಮನಿಂದ ದೂರಗೊಳಿಸುವ ಸಲುವಾಗಿ ಹತ್ತು ಉಪಾಯಗಳನ್ನು ಹೇಳಿದ್ದು ಅವುಗಳನ್ನು ದಶಲಕ್ಷಣ ಧರ್ಮವೆಂದು ಹೇಳುತ್ತಾರೆ
ನಮಗೆಲ್ಲ ಸಂತಸ ತಂದಿರುವ ಸಂಗತಿ 2017-18ನೇ ಸಾಲಿನ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತ್ಯಾಗ ಮತ್ತು ಅಹಿಂಸೆಯ ಪ್ರತೀಕವಾದ ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಯನ್ನು ಧಾರ್ಮಿಕ ಶೈಕ್ಷಣಿಕ ಸಮಾಜಿಕ ಆರೋಗ್ಯ ಕ್ಷೇತ್ರಕ್ಕೆ ಧರ್ಮಗುರುಗಳ ಕಾಣಿಕೆಯನ್ನು ಪರಿಗಣಿಸಿ ಸಾಧಕ ಸಂತ ಮಣಿಗಳ ಸಾಲಿನ ಹೆಗ್ಗುರುತ್ತು ಶ್ರವಣ ಬೆಳಗೊಳದ ಜೈನ ಮಠದ ಪೀಠಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಕರ್ಮ ಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳಿಗೆ ಶ್ರೀ ಕ್ಷೇತ್ರದಲ್ಲಿ ಸಂದ ಗೌರವ.
ಜೈ ಜಿನೇಂದ್ರ ವೀಕ್ಷಕರೆ ಈ ಬಾರಿಯ ಜಿನ ಭಜನಾ ಸ್ಪರ್ಧೆ ಅಂಗವಾಗಿ ಬೆಂಗಳೂರು ವಿಭಾಗದ ಮಕ್ಕಳಿಗೆ ಹಾಗೂ ಯುವ ಜನರಿಗೆ ಭಜನಾ ಕಮ್ಮಟದ ಹೆಸರಿನಲ್ಲಿ ತರಬೇತಿ ಶಿಬಿರವನ್ನು ಭಾರತೀಯ ಜೈನ್ ಮಿಲನ್ ವಲಯ ವತಿಯಿಂದ ಏರ್ಪಡಿಸಲಾಗಿತ್ತು
ಶ್ರೀ ಕ್ಷೇತ್ರ ವೇಣೂರಿನಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣವನ್ನು ಆಚಾರ್ಯ ಶ್ರೀ ಪುಷ್ಪನಂದ ಸಾಗರರ ಪರಮಶಿಷ್ಯರಾದ ಕರ್ನಾಟಕ ಕ್ರಾಂತಿಕಾರಿ ಸಂತ ಧರ್ಮ ಪ್ರಭಾವಕ ಪರಮ ಪೂಜ್ಯ 108 ಮುನಿಶ್ರೀ ಪ್ರಸಂಗ ಸಾಗರ ಮುನಿ ಮಹಾರಾಜರ ಸಾನಿಧ್ಯದಲ್ಲಿ ಸಡಗರದಿಂದ ಆಚರಿಸಲಾಯಿತು.
ಗೊಮ್ಮಟೇಶ್ವರ ಭಗವಾನ್ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಮಹಾ ಮಸ್ತಕಾಭಿಷೇಕ ಮಹೋತ್ಸವ 2018 ರ ಸುಸಂದರ್ಭದಲ್ಲಿ ರಾಷ್ಟ್ರಮಟ್ಟದ ಜೈನ ಮಹಿಳಾ ಸಮ್ಮೇಳನ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಾವನ ನೇತೃತ್ವದಲ್ಲಿ ದಿನಾಂಕ 11, 12 , 13 ಆಗಸ್ಟ್ 2007 ರಂದು ಜರುಗಿದ್ದು ಅಭೂತಪೂರ್ವ ಯಶಸ್ಸನ್ನು ಕಂಡಿತು
ಮಹಿಳಾ ಸಮ್ಮೇಳನ ಪರಮ ಪೂಜ್ಯ ಸ್ವಸ್ಥಿಶ್ರೀ ಚಾರುಕೀರ್ತಿ ಸ್ವಾಮೀಜಿ ಆಶೀರ್ವಚನ
ಭಗವಾನ್ ಶ್ರೀ ಶ್ರೀ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ 2018 ರ ಸಂದರ್ಭದಲ್ಲಿ ನಡೆದ ಅಖಿಲ ಭಾರತ ಜೈನ ಮಹಿಳಾ ಸಮ್ಮೇಳನದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ನೀಡಿದ ಆಶೀರ್ವಚನ
ಶ್ರೀ ಅಜಿತನಾಥ ತೀರ್ಥಂಕರರು ಜಿನಾಲಯ ಪಿನಗೊಂಡಿ ಕ್ಷೇತ್ರದ ವಾರ್ಷಿಕಪೂಜಾ ಮಹೋತ್ಸವ 17/09/2017ನೇ ಭಾನುವಾರದಂದು ಪರಮಪೂಜ್ಯ ಸ್ವಸ್ಥಿ ಶ್ರೀ ಮದನವಿನಭ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ನೇತೃತ್ವದಲ್ಲಿ ನಡೆಯಿತು.
ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಶ್ರೀ ಪದ್ಮಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ವರ್ಷಾಯೋಗ ಚಾತುರ್ಮಾಸ ದಲ್ಲಿ ಲೋಕಕಲ್ಯಾಣಾರ್ಥವಾಗಿ ದಿನಾಂಕ 3/10/2017 ರಿಂದ 10/10/2017ರವರೆಗೆ ಸರ್ವತೋಭದ್ರ ಆರಾಧನೆ ನಡೆಯುತಲ್ಲಿದ್ದು 105 ಕ್ಷುಲ್ಲಕ ಶ್ರೀ ಪ್ರಶಸ್ತಮತಿ ಮಾತಾಜಿಯವರ ಸಾನಿಧ್ಯದಲ್ಲಿ ಹಾಗೂ ಪರಮಪೂಜ್ಯ ಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ಶುಭ ಆಶೀರ್ವಾದದಲ್ಲಿ ವಿಧಿವತ್ತಾಗಿ ನಡೆಯುತ್ತಿದೆ.
ವೀಕ್ಷಕರೇ ತಮಗೆಲ್ಲಾ ಈಗಾಗಲೇ ತಿಳಿದಿರುವ ಹಾಗೇ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ ಜಿನಭಜನಾ ಸ್ಪರ್ಧೆ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಪರಮ ಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಯವರ ಶುಭ ಆಶೀರ್ವಾದದಲ್ಲಿ ರಾಜ್ಯ ಮಟ್ಟದಲ್ಲಿ ಸೆಮಿಫೈನಲ್ ಮತ್ತು ಫೈನಲ್ ಸ್ಪರ್ಧೆ ಗಳು ದಿನಾಂಕ 9/12/2017 ಮತ್ತು 10/12/2017
ಪರಮ ಪೂಜ್ಯ ಶ್ರೀ ಚಾರುಕೀರ್ತಿ ಸ್ವಾಮೀಜಿಯವರ ನೇತೃತ್ವ ದಲ್ಲಿ ಹಾಗೂ ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮುನಿ ಮಹಾರಾಜರ ಹಾಗೂ ಸಂಘಸ್ಯ ತ್ಯಾಗಿಗಳ ಪಾವನ ಸಾನಿಧ್ಯದಲ್ಲಿ ಮಂಡಲದಲ್ಲಿ ಸ್ಥಾಪನೆಗೊಳ್ಳಲಿರುವ 478 ಜಿನ ಭಂಡಾರಗಳಿಗೆ ಜಲಾಭಿಷೇಕವನ್ನು ಮಾಡಲಾಯಿತು.
ಭಗವಾನ್ ಶೀತಲನಾಥ ದಿಗಂಬರ ಜಿನ ಮಂದಿರ ಪುಟ್ಟೇನಹಳ್ಳಿ ಬೆಂಗಳೂರು . ಇಲ್ಲಿ ದಿನಾಂಕ 19/07/2018ರಂದು ಪರಮಪೂಜ್ಯ 108 ಪುಣ್ಯ ಸಾಗರ ಮಹಾ ರಾಜರ 22ನೇ ಭವ್ಯ ಪಾವನ ವರ್ಷಾಯೋಗ ಮಂಗಳ ಕಳಸ ಸ್ಥಾಪನ ಮಹೋತ್ಸವವು ನಡೆಯಿತು.
ಗೊಮ್ಮಟೇಶ್ವರ ಭಗವಾನ್ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂಜಾ ಉಪ ಸಮಿತಿ ವತಿಯಿಂದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳ ಪಾವನ ಸಾನಿಧ್ಯದಲ್ಲಿ ಪರಮ ಪೂಜ್ಯ ಶ್ರೀಗಳವರಿಗೆ ಭಕ್ತಿ ಪೂರ್ವಕ ಗೌರವ ಸಮರ್ಪಣೆ ಪದಾದಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ಗೌರವ ಸಮರ್ಪಣೆ ಕಾರ್ಯಕೃಮ ಹಮ್ಮಿಕೊಳ್ಳಲಾಗಿತ್ತು
ನಾವಿಂದು ತಿಳಿಯ ಹೊರಟಿರುವುದು ಕವಿ ರತ್ನಾಕರವರ್ಣಿ ರವರ ಬಗ್ಗೆ . ಕ್ರಿ.ಶ 16ನೆಯ ಶತಮಾನದಲ್ಲಿ ಕನ್ನಡದ ಕವಿಗಳಲ್ಲಿ ಅಗ್ರಗಣ್ಯನೆನಿಸಿದ ರತ್ನಾಕರವರ್ಣಿ ಸಾಂಗತ್ಯ ಚಕ್ರವರ್ತಿ ಎಂದು ಪ್ರಸಿದ್ದನಾದವನು ಧರ್ಮಾತ್ಮರಿಂದ ಕನ್ನಡದ ಕುಂದ ಕುಂದಾಚಾರ್ಯರೆಂದು ಪ್ರಶಂಸೆ ಗೊಳಗಾದವನು
ಮೈಸೂರಿನಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ವಧು ವರರ ಮಾಹಿತಿ ಕೇಂದ್ರ,ದ ವತಿಯಿಂದ 12ನೇ ಸಮಾವೇಶ ಈ ಬಾರಿ ದಿನಾಂಕ 30/09/2018ರಂದು ಎನ್ . ಎಲ್ . ವರ್ಧಮಾನಯ್ಯ ಜೈನ್ ಬೋರ್ಡಿಂಗ್ ನಲ್ಲಿ ನಡೆಯಿತು.
ಮಹಾವೀರ ಶಾಂತಿ ಪ್ರಶಸ್ತಿ ಸಮಾರಂಭವು ಅತಿ ಗಣ್ಯಾತಿಣ್ಯರಿಂದ ತುಂಬಾ ಅದ್ಧೂರಿಯಾಗಿ ನೆರವೇರಿತು. ಆಗ ಶ್ರೀಗಳನ್ನು ಕುರಿತು ಹಾಗೂ ಶ್ರವಣಬೆಳಗೊಳದ ಪಾರಂಪರಿಕ ಹಿನ್ನೆಲೆಯನ್ನು ಪ್ರತಿಯೊಬ್ಬ ಗಣ್ಯರುಗಳು ಶ್ಲಾಘಿಸಿದರು
ಜೈ ಜಿನೇಂದ್ರ ವೀಕ್ಷಕರೆ ನೀವಿಗ ನೋಡುತ್ತಿರುವುದು ಭಾಗಲಕೋಟೆ ತಾಲ್ಲೂಕಿನ ಜಮಖಂಡಿ. ಈ ಬಾರಿಯ ಜಿನ ಭಜನಾ ಸ್ಪರ್ಧೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿಭಾಗ ಪ್ರಥಮವಾಗಿ ಸ್ಪರ್ಧೆಯು ಜಮಖಂಡಿಯಿಂದ ಪ್ರಾರಂಭವಾಗಿದ್ದು ಅದ್ಭುತ ಯಶಸ್ಸನ್ನು ತನ್ನದಾಗಿಸಿಕೊಂಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಜಿನ ಭಕ್ತಿಗೀತೆಗಳ ಮಹಾ ಮಜ್ಜನ. ಅನಿತಾ ಸುರೇಂದ್ರ ಕುಮಾರ್ ರವರ ಕಲ್ಪನೆಯ ಕನಸು, ಕಳೆದೆರಡು ಬಾರಿಯ ಅಭೂತಪೂರ್ವ ಯಶಸ್ಸಿನೊಂದಿಗೆ ಈ ಬಾರಿಯ ಜಿನ ಭಜನಾ ಕಾರ್ಯಕ್ರಮ ಪ್ರತಿವಿಭಾಗದಲ್ಲು ಅದ್ದೂರಿ ಯಶಸ್ಸನ್ನು ಕಾಣಲು ನಾವುಗಳು ಜೊತೆಗೂಡೋಣ ಬನ್ನಿ.
ಜೈ ಜಿನೇಂದ್ರ ವೀಕ್ಷಕರೆ ಒಂದೇ ವೇದಿಕೆಯಲ್ಲಿ ವಯಸ್ಸಿನ ಮಿತಿ ಇಲ್ಲದೆ ಎಲ್ಲ ಜೈನ ಭಾಂದವರನ್ನು ಒಗ್ಗೂಡಿಸಿದ ರಾಜ್ಯದೆಲ್ಲೆಡೆಯಿಂದ ಬಂದ ಬಂಧುಗಳ ನಡುವೆ ಹೊಸ ಬಾಂಧವ್ಯ ಬೆಸೆಯುವಂತಹ ಒಂದು ಸ್ನೇಹ ಪೂರ್ಣ ಚೈತನ್ಯ ಪೂರ್ಣ ಕಾರ್ಯಕ್ರಮ ಒಂದು ಬೆಂಗಳೂರಿನ ಸುಹಾಸಿ ಜೈನ್ ಮಿಲನ್ ವತಿಯಿಂದ ಜಿನ ಸಮ್ಮಿಲನ ಎನ್ನುವ ಹೆಸರಿನಲ್ಲಿ ನಡೆಯಿತು.
ಜೈ ಜಿನೇಂದ್ರ ವೀಕ್ಷಕರೆ ತುಳು ನಾಡಿನ ಘಟ್ಟಗಳ ಮನೋಹರ ಪ್ರಕೃತಿ ಸೌಂದರ್ಯದ ನಡುವೆ ಅಂಕು ಡೊಂಕಾಗಿ ಬಳುಕುತ್ತ ಸಾಗುವ ಸೊಬಗಿನ ಹಾದಿಯಲ್ಲಿ ಸಾಗುತ್ತ ನಿಮಗೆ ಸಿಗುವುದು ನೇತ್ರವತಿ ದಂಡೆಯ ಪೂಣ್ಯ ಭೂಮಿ ಮಂಜುನಾಥ ಸ್ವಾಮಿಯ ನೇಲೆ ಬೀಡು, ಚಂದ್ರನಾಥ ಸ್ವಾಮಿಯ ತಾಣ ಶ್ರೀ ಕ್ಷೇತ್ರ ಧರ್ಮಸ್ಥಳ
(ಬೆಂಗಳೂರಿನಲ್ಲಿ ಶಶಿಕಾಂತ್ ಜೈನ್ ಎಂಬವರು ವಿದ್ವಾಂಸರು ಅಗಿದ್ದರು ನಮ್ಮ ತಂದೆಯವರಿಗರ ಅಪ್ತರು ಮತ್ತು ಜೋತಿಷ್ಯರು ಅಗಿದ್ದರು. ನಮ್ಮ ತಂದೆಯವರು ಅವರನ್ನು ವಿಚಾರಿಸಿದಾಗ ಅವರು ನಮ್ಮಗೆ ಈ ಬೆಟ್ಟವನ್ನು (ಚಂದ್ರಗಿರಿ) ಸೂಚಿಸಿದರು.
ಎಲ್ಲರಿಗೂ ಜೈ ಜಿನೇದ್ರ ಹಿಂದಿನಿಂದ ನಡೆದು ಬಂದ ಸಂಪ್ರದಾಯುತ ಕಲಾ ಪ್ರಕಾರದಲ್ಲೊಂದು ಜಿನ ಭಜನೆ. ಆಧುನಿಕಥೆಯ ಸೊಗಿನಲ್ಲಿ ನಶಿಸಿ ಹೋಗುತ್ತಿರುವ ಎನ್ನುವಂತಹ ಸಂದರ್ಭಹೊಂದಿತ್ತು ಅದರೆ ಈಗ ಹಾಗೆನ್ನಲಾಗದು ಈಗ ಸಮೃದ್ಧವಾಗಿದೆ ಜಿನ ಭಜನೆ, ಅದಕ್ಕೆ ಕಾರಣ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕಕ್ಕೆ ಇನ್ನುಕೆಲವೇ ದಿನಗಳು ಮಾತ್ರ. ಮಹೋತ್ಸವದ ಪ್ರಾರಂಭದ ದಿನದ ಪೂಜಾಕಾರ್ಯಕ್ರಮದೊಂದಿಗೆ ನಾವು ನಿಮ್ಮ ಮುಂದಿದ್ದೇವೆ.
ಹೋಗುತ್ತ ಹೋಗುತ್ತ ಇದುವರೆ ನಡೆದಿದ್ದನ್ನ ನೆನಪಿಸಿಕೊಳ್ಳಣ, ಭೋಗ ಭೂಮಿ ಕರ್ಮ ಭೂಮಿಯಾಗುವ ಕಾಲ ಸನ್ನಹಿತವಾಯಿತು, ಕಾಮಧೇನು ಕಲ್ಪವೃಕ್ಷಗಳು ನಿಧಾನವಾಗಿ ಕಣ್ಮರೆಯಾಗತೊಡಗಿದವು, ಆಗ ಕಂಗೆಟ್ಟು ಅಸಹಾಯಕರಾದ ಜನರಿಗೆ ವೃಷಭನಾಥರು ಹಸಿ, ಮಸಿ, ಕೃಷಿ, ವಾಣಿಜ್ಯ, ವಿಧ್ಯೆ, ಶಿಲ್ಪಗಳೆಂಬ ಆರು ಜೀವನ ಮಾರ್ಗಗಳನ್ನ ಬೋಧಿಸಿ ಹಾದಿ ಬ್ರಹ್ಮರೆನಿಸಿದರು
ಜೈ ಜಿನೇಂದ್ರ ವೀಕ್ಷಕರೆ ಧರ್ಮಸ್ಥಳದ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಇನ್ನು ದಿನ ಗಣನೆಯಲ್ಲ ಇನ್ನು ಕ್ಷಣಗಣನೆ ಮಾತ್ರ, ಬನ್ನಿ ವೀಕ್ಷಕರೆ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಕ್ಷಣ ಬಂದೆ ಬಿಟ್ಟಿತು.
ಜೈ ಜಿನೇಂದ್ರ ವೀಕ್ಷಕರೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಕೀರ್ತಿಶೇಷ ಶ್ರೀ ರತ್ನವರ್ಮ ಹೆಗ್ಗಡೆಯವರು ಮತ್ತು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಕನಸನ್ನು ಸಾಕರಗೋಳ್ಳಿಸಿ ರತ್ನಗಿರಿಯಲ್ಲಿ ಶ್ರೀ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಅಭಿನವ ಚಾವುಂಡರಾಯ ಎಂದೆ ಕರೆಯಲ್ಪಡುವ ಕ್ಷೇತ್ರದ ಧರ್ಮಾಧಿಕಾರಿಗಳಾದ ರಾಜಶ್ರೀ ಡಾ|| ವೀರೇಂದ್ರ ಹೆಗ್ಗಡೆಯವರಿಗೆ ಸಮಸ್ತ ಅಚಾರ್ಯ ಮುನಿಗಳ ಸಂಮುಖದಲ್ಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಅಯೋಧ್ಯ ನಗರಿಯಂತೆ ವೈಬವದಿಂದ ಕಂಗೊಳಿಸುತ್ತಿದೆ ಮಾತಿಗೆ ನಿಲುಕದಂತಹ ಶಬ್ಧಕ್ಕೆ ಸಿಗದಂತಹ ಬೇರೊಂದು ಲೋಕವೆ ಸೃಷ್ಟಿಯಾಗಿದೆ. ಬನ್ನಿ ಧರ್ಮಸ್ಥಳದ ಸುತ್ತ ಒಂದು ನೋಟ.
ಜೈ ಜಿನೇಂದ್ರ ವಿಕ್ಷಕರೆ ಸುತ್ತಲು ಬೆಟ್ಟಗಳ ಸಾಲು ಹಿತವಾದ ಗಾಳಿ ಕಣ್ಣು ಹಾಯಿಸಿದ್ದುದಕು ಸುಂದರ ಹೊಲ ಗದ್ದೆಗಳ ಮನೋಹರ ನೋಟ, ಇಂತಹ ಅಹಲಾದಕರ ವಾತಾವರಣದ ಮಧ್ಯೆ ಬಳ್ಳಾರಿ ಜಿಲ್ಲೆಯ ಹರಪ್ಪನಳ್ಳಿ ತಾಲ್ಲೂಕಿನ ಮಾಡಲಗಿರಿ ಪ್ರದೇಶದಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ, ಶ್ರೀ ಬ್ರಹ್ಮದೇವರ ಹಾಗೂ ತಾಯಿ ಪದ್ಮಾವತಿ ದೇವಿಯ ಮೂರ್ತಿ ಒಂದೇ ವಿಗ್ರಹದಲ್ಲಿ ಮೂಡಿಬಂದಿರುವ ವಿಶೇಷತೆಯನ್ನು ಹೊಂದಿರುವ ಜೈನ ಮಂದಿರವನ್ನು ನೀವು ನೋಡುತ್ತಿದ್ದೀರಿ
ವೀಕ್ಷಕರೆ ಶ್ರೀ ಜೈನ ಕಾಶಿ ಮೂಡುಬಿದ್ರೆಯಲ್ಲಿ ಅಚಾರ್ಯ ಶ್ರೀ 108 ವರ್ಧಮಾನ ಸಾಗರರ ಹಾಗೂ ಸತ್ಸಂಘ ತ್ಯಾಗಿಗಳ ಪುರ ಪ್ರವೇಶ ಮತ್ತು ಸ್ವಸ್ತಿಶ್ರೀ ಭಾರತ ಭೂಷಣ ಚಾರುಕೀರ್ತಿ ಭಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಅಚಾರ್ಯ ವಿನಯಾಂಜಲಿ ಕಾರ್ಯಕ್ರಮ ದಿನಾಂಕ 08-03-2019ರಂದು ನಡೆಯಿತು.
ವಾಣಿಜ್ಯ ನಗರಿ ಶೈಕ್ಷಣಿಕ ನಗರಿ ಎಲ್ಲದ್ದಕ್ಕಿಂತ ಹೆಚ್ಚಾಗಿ ಜೈನ ಧಾರ್ಮಿಕ ನಗರಿ ದಾವಣಗೆರೆಯಲ್ಲಿ ಈ ಬಾರಿಯ ಭಾರತೀಯ ಜೈನ್ ಮಿಲನ್ ನ ವಲಯ 8 ರ ವತಿಯಿಂದ ಹಾಗು ಭಾರತೀಯ ಜೈನ್ ಮಿಲನ್ ದಾವಣಗೆರೆ ವಿಭಾಗದ ಸಹ ಸಂಯೋಜಕತ್ವದಲ್ಲಿ 18 ನೇ ವಲಯ ಸಮ್ಮೇಳನ ಶ್ರೀ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನ ದಲ್ಲಿ ಹಲವು ಪ್ರಥಮ ಗಳ ಸಮ್ಮಿಲನದಲ್ಲಿ ವೈಭಮಯುತವಾಗಿ ನಡೆಯಿತು
ಪರಮ ಪೂಜ್ಯ ಶ್ರೀಗಳವರು ಆಶೀರ್ವಚನದಲ್ಲಿ ಜೈನ ಸಮುದಾಯದಲ್ಲಿ ವಿಶೇಷ ಸೇವಾ ಕಾರ್ಯದಲ್ಲಿ ಸಂಘಟಿತಗೊಂಡಿರುವ ಜೈನ್ ಮಿಲನ್ ಗೂ ಹಾಗೂ ಜೈನ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು.
ಪರಮ ಪೂಜ್ಯ ಶ್ರೀಗಳವರು ಆಶೀರ್ವಚನದಲ್ಲಿ ಜೈನ ಸಮುದಾಯದಲ್ಲಿ ವಿಶೇಷ ಸೇವಾ ಕಾರ್ಯದಲ್ಲಿ ಸಂಘಟಿತಗೊಂಡಿರುವ ಜೈನ್ ಮಿಲನ್ ಗೂ ಹಾಗೂ ಜೈನ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು.
ಧರ್ಮಸ್ಥಳ ಮಸ್ತಕಾಭಿಷೇಕ -ಪಿ. ಪಿ ವರ್ಧಮಾನ್ ಸಾಗರ್ಜಿ ಪುರಪ್ರವೇಶ
ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ 2019 ರ ಪಾವನ ಸಾನಿಧ್ಯ ವಹಿಸಲು ಪರಮ ಪೂಜ್ಯ ಶ್ರೀ 108 ಆಚಾರ್ಯ ಶ್ರೀ ವರ್ಧಮಾನ ಮುನಿ ಮಹಾರಾಜರ ಮಂಗಳ ಪ್ರವೇಶ ಕ್ಷೇತ್ರಕ್ಕೆ ಈಗಾಗಲೇ ದಿನಾಂಕ 31/1/2019 ರಂದು 23 ಮುನಿಗಳ , 23 ಮಾತಾಜಿಯವರ ಹಾಗೂ ಕ್ಷುಲ್ಲಕರೊಬ್ಬರ ಸಂತಸ್ಥ ತ್ಯಾಗಿಗಳು ಪುರಪ್ರವೇಶ ಮಾಡಿದ್ದಾರೆ. ಇನ್ನು ಮಹೋನ್ನತ ಕ್ಷಣಗಳಿಗೆ ದಿನಗಣನೆ ಮಾತ್ರ. ಪರಮಪೂಜ್ಯ ಆಚಾರ್ಯ ಶ್ರೀಗಳನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.
ಜೈ ಜಿನೇಂದ್ರ ವೀಕ್ಷಕರೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮೈಸೂರಿನ ಹಾಗೂ ಚಾಮರಾಜನಗರದ ಸಮಾಜದ ವತಿಯಿಂದ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ದಿನಾಂಕ 09-03-2019ರಂದು ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಅದ್ದೂರಿಯಾಗಿ ನಡೆದ ದೃಶ್ಯಾವಳಿಗಳು ನಿಮ್ಮಗಾಗಿ.
ಜೈ ಜಿನೇಂದ್ರ ವೀಕ್ಷಕರೆ ಶ್ರೀಕ್ಷೇತ್ರ ಧರ್ಮಸ್ಥಳದ 39 ಅಡಿ ಎತ್ತರದ ಶ್ರೀ ಬಾಹುಬಲಿ ಮೂರ್ತಿಗೆ ನಡೆದ ಈ ಬಾರಿಯ ಮಹಾಸ್ತಕಾಭಿಷೇಕದ ಕೊನೆಯ ದಿನವಾಗಿ ಮಾರ್ಚ್ 24, 2019ರಂದು ಮೂಡುಬಿದ್ರೆಯ ಜೈನ ಮಠದ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ನಡೆಯಿತು.
ಜೈ ಜಿನೇಂದ್ರ ವೀಕ್ಷಕರೆ, ನಿಮಗೆ ಈ ಮಾಸದ ಸಂಚಿಕೆಗಳಲ್ಲಿ ಪ್ರಕೃತಿಯ ಸೊಬಗಿನೊಂದಿಗೆ ಧಾರ್ಮಿಕ ಕ್ಷೇತ್ರಗಳ ದರ್ಶನದ ಹಬ್ಬ, ಹೀಗೆ ಹಸಿರು ಕಾನನದ ನಡುವೆ ನಮ್ಮ ತಂಡ ಭವ್ಯ ಇತಿಹಾಸವನ್ನು ಒಳಗೊಂಡ ಕ್ಷೇತ್ರಗಳ ಬಸದಿಗಳ ಹಾದಿಯಲ್ಲಿ ಸಾಗಿತ್ತು
ಕೆಜೆಎ, ಪ.ಪೂ ಶ್ರೀ ಸಿದ್ದಾಂತ ಕೀರ್ತಿ ಬಟ್ಟಾರಕ ಸ್ವಾಮೀಜಿ ಪುರಪ್ರವೇಶ
ದಿನಾಂಕ 19/4/2019ರಂದು ಶ್ರೀ ಕ್ಷೇತ್ರ ಆರತಿಪುರ ದಿಗಂಬರ ಜೈನ ಮಠದ ನೂತನ ಪಟ್ಟಾದೀಶರಾದ ಪರಮಪೂಜ್ಯ ಸ್ವಸ್ತಿ ಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳು ಪಟ್ಟಾಭಿಷಿಕ್ತರಾದ ನಂತರ ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರು ಮಹಾ ನಗರಕ್ಕೆ ಪುರಪ್ರವೇಶ ಮಾಡಿದ್ದು ,ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ ಹಾಗೂ 2018 ನೇ ಮಹಾವೀರ ಜಯಂತ್ಯೋತ್ಸವವನ್ನು ಕರ್ನಾಟಕ ಜೈನ್ ಅಸೋಸಿಯೇಷನ್ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾದ ಆಯ್ದ ಕ್ಷಣಗಳು ನಿಮ್ಮ ಮುಂದೆ. ಶ್ರೀಗಳವರನ್ನು ಮೆರವಣಿಗೆ ಮೂಲಕ ಕೆ.ಜಿ.ಎ ಜಿನ ಮಂದಿರದ ಬಳಿ ಭವ್ಯ ಸ್ವಾಗತ ಹಾಗೂ ಪಾದ ಪೂಜೆ ನೆರವೇರಿಸಲಾಯಿತು.
ಜೈ ಜಿನೇಂದ್ರ ವೀಕ್ಷಕರೆ ಭಾದ್ರಪದ ಮಾಸದ ಶುದ್ದ ಪಂಚಮಿಯಿಂದ ಪೌರ್ಣಮಿಯವರೆಗೆ ಅಚರಿಸಲ್ಪಡುವ ಈ ದಶ ಲಕ್ಷಣ ಮಹಾ ಪರ್ವಕ್ಕೆ ಜೈನ ಪರಂಪರೆಯಲ್ಲಿ ಬಹಳ ಮಹತ್ವದ ಸ್ಥಾನವಿದೆ. ಪವಿತ್ರತೆಯ ದೃಷ್ಟಿಯಿಂದ ಪ್ರಾಮುಖ್ಯತೆಯ ದೃಷ್ಠಿಯಿಂದ ಅಲ್ಲದೆ ಆತ್ಮನನ್ನು ಪಾಪದಿಂದ ಪುಣ್ಯದ ಕಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಎಲ್ಲಕಿಂತಲು ಮುಖ್ಯವಾಗಿ ಮಿತ್ಯತ್ವದಿಂದ ಸಂಯುತ್ವದ ಕಡೆಗೆ ನಡೆಸುವ ಈ ದಶಲಕ್ಷಣ ಪರ್ವವು ಶ್ರೇಷ್ಠವಾದದ್ದಾಗಿದೆ.
ಮೂಡುಬಿದ್ರಿಯಲ್ಲಿ ಜೈನ್‌ಮಿಲನ್‌ನಿಂದ ಶೈಕ್ಷಣಿಕ ಕಾರ್ಯಕ್ರಮ
ಇತ್ತೀಚೆಗಷ್ಟೇ ಭಾರತೀಯ ಜೈನ್ ಮಿಲನ್ ವಲಯ 108 ರ ವತಿಯಿಂದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಜೈನ್ ನ ಯುವಕ ಯುವತಿಯರಿಗೆ ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಯಿತು.
ಎಲ್ಲರಿಗೂ ಜೈ ಜಿನೇಂದ್ರ ದಿನಾಂಕ 9-12-2017 ಅಂದು ಶ್ರೀ ಕ್ಷೇತ್ರ ಶ್ರವಣ ಬೆಳಗುಳದಲ್ಲಿ ಗೊಮ್ಮಟ ಜಿನ ಭಕ್ತಿ ಗೀತಾಂಜಲಿಯ ಅಂತಿಮ ಸುತ್ತುಗಳ ಸ್ಪರ್ಧಾ ಕಾರ್ಯಕ್ರಮ, ಇಡಿ ರಾಜ್ಯದ ಜೈನ ಬಾಂಧವರನ್ನು ತನ್ನತ್ತ ಸೇಳೆದ ಒಂದು ಅದ್ಬುತ್ತ ಕಾರ್ಯಕ್ರಮ ಸುಂದರ ವೇದಿಕೆ ಬಹಳ ಅಚ್ಚುಕಟ್ಟಾದ ಕಾರ್ಯಕ್ರಮಗಳ ಸಂಯೋಜನೆ
ಜೈ ಜಿನೇಂದ್ರ ವೀಕ್ಷಕರೆ, ಇತ್ತೀಚೆಗಷ್ಟೇ ಅನಂತನೊಂಪಿ ಉಧ್ಯಾಪನ ಕಾರ್ಯಕ್ರಮ ಬಹಳ ವಿಜೃಂಭಣೆಯಾಗಿ ನಡೆದ ಈ ಬೆಳ್ಳೂರಿನಲ್ಲಿ ಬೃಹತ್ ಇಂದ್ರ ಧ್ವಜ ಮಹಾಮಂಡಲ ವಿಧಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಇದರ ದೃಶ್ಯಾವಳಿಗಳು ನಿಮಗಾಗಿ.
ನಮಗೆ ಅತ್ಯಂತ ಸಡಗರ ಉತ್ಸಾಹ ತಂದು ಕೊಟ್ಟ ಜಿನಭಜನಾ ಸ್ಪರ್ಧೆ ಸೀಸನ್ 4 ಹಂತಕ್ಕೆ ಬಂದು 4 ವರ್ಷಗಳಿಂದ ಮನೆ ಮನೆ ಮಾತಾಗಿರುವ ಕಾರ್ಯಕ್ರಮವಾಗಿದ್ದು ಮೂಲೆ ಸೇರಿದ್ದ ಭಜನೆಗಳು , ಜಾನಪದ ಗೀತೆಗಳು ಸಂಗೀತಗಳು ಇವುಗಳ ಪ್ರತಿಭೆಗಳು ಹೊರಹೊಮ್ಮುತ್ತಿವೆ
ಒಂದೇ ತೆರನಾದ ಉಡುಗೆಗಳಲ್ಲಿ ಮಿನುಗುತ್ತಿರುವ ಹೆಂಗಳೆಯರು , ಪೇಠ ಧರಿಸಿ ಗಂಡಸರು , ಮಧುವಣಗಿತ್ತಿಯಂತೆ ಅಲಂಕರಿಸಿಕೊಂಡು ನಾಚುತ್ತಾ ತಯಾರಾದ ಮುದ್ದು ಮುದ್ದಾದ ಮಕ್ಕಳು ನೀವು ನೋಡುತ್ತಿರುವ ಸಡಗರ ಸಂತಸ ಯಾವ ಜಾತ್ರೆಯದ್ದೂ ಅಲ್ಲ , ಯಾವ ದಿಬ್ಬಣದ್ದೂ ಅಲ್ಲ. ಹಬ್ಬದಂತೆ ಇವರೆಲ್ಲಾ ಸಂಭ್ರಮಿಸುತ್ತಿರುವುದು ಜಿನ ಭಜನಾ ಸ್ಪರ್ಧೆಗೆ .
ಜೈ ಜಿನೇಂದ್ರ ವೀಕ್ಷಕರೆ. ಪರಮ ಪೂಜ್ಯ ರಾಜಶ್ರೀ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಪರಮ ಸಂರಕ್ಷಕರಾಗಿರುವ ಅನುಜ ಶ್ರೀ ಡಿ ಸುರೇಂದ್ರ ಕುಮಾರ್ ರವರು ರಾಷ್ಟ್ರೀಯ ಕಾರ್ಯಧ್ಯಕ್ಷರಾಗಿರುವ ಹಾಗೂ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾಗಿರುವ ಭಾರತೀಯ ಜೈನ್ ಮಿಲನ್ ತನ್ನ ಧಾರ್ಮಿಕ ಸಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಆರೋಗ್ಯ ಸೇವಾ ಕ್ಷೇತ್ರಗಳಲ್ಲಿನ ಅನುಪಮ ಸೇವೆಗಾಗಿ ದೇಶ ವಿದೇಶಗಳಲ್ಲಿ ಖ್ಯಾತಿಗಳಿಸಿದೆ.
ನಿನ್ನೆ ಸೆಮಿಫೈನಲ್ ಮುಗಿದು ಫೈನಲ್ ಗೆ ಬಂದಿರುವ ಒಂದು ಅಭೂತಪೂರ್ವಕಾರ್ಯಕ್ರಮ ಒಂದು ಕ್ರಾಂತಿಯನ್ನೇ ಸೃಷ್ಠಿಸಿದ ಕಾರ್ಯಕ್ರಮದಲ್ಲಿ ನೀವಿದ್ದೀರಾ ಇದೆರ ಪ್ರತಿಯೊಂದು ಕ್ಷಣವನ್ನು ಸವಿಯಿರಿ.
ಜೈ ಜಿನೇಂದ್ರ ವೀಕ್ಷಕರೆ. ದಟ್ಟ ಕಾನನದ ನಡುವೆ ಒತ್ತಾಗಿ ಬೆಳೆದ ಗಿಡ ಮರಗಳ ಸಮೂಹದಿಂದಲು ಪೊದೆಗಳಿಂದಲು ಅವೃತವಾದ ಪುರವನ್ನು ಸಾಂತರ ರಾಜ ಜಿನ ದತ್ತನು ರಾಜಧಾನಿಯನ್ನಾಗಿಸಿಕೊಳ್ಳುತ್ತಾನೆ
ಶ್ರೀಗಳವರು ಮಾತನಾಡಿ ಹಾಸನ ಜಿಲ್ಲೆಯಿಂದ 7 ಕಿ.ಮೀ ದೂರದಲ್ಲಿರುವ ಪ್ರಶಾಂತ ಮತ್ತು ಸುಂದರ ಸ್ಥಳವಾದ ಅಗಿಲೆ ಪೋಸ್ಟ್ ನಲ್ಲಿ ಆಚಾರ್ಯ ಶ್ರೀ 108 ನಿಜಾನಂದಸಾಗರ ಮಹಾರಾಜರ ಚರಣ ಪ್ರತಿಷ್ಠಾಪನಾ ಮಹೋತ್ಸವ ನೆರವೇರುತ್ತಿದೆ.
ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮುದಾಯವನ್ನು ಒಂದುಗೂಡಿಸಿ ಕಳೆದ ಮೂರು ದಶಕದಿಂದಲೂ ಅನೇಕ ಸಾಂಸ್ಕೃತಿಕ ಧಾರ್ಮಿಕ ಹಾಗೂ ಸಮಾಜಿಕ ಕಳಕಳಿಯಿಂದ ಆದರ್ಶ ಕಾರ್ಯ ನಿರ್ವಹಿಸುತ್ತಿರುವ ಮಾದರಿ ಸಂಸ್ಥೆ ನಮ್ಮ ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟ ಹಾಗೆ ಹಲವು ವರ್ಷಗಳಿಂದ ಜೈನ ಕಾಶಿ ಮೂಡುಬಿದ್ರೆಯ ಶೃಂಗಾರ ಕವಿ ರತ್ನಾಕರ ವರಣಿಯ ಹೆಸರಿನಲ್ಲಿ ಮಹಾಕವಿ ರತ್ನಾಕರ ವರ್ಣಿ ಪ್ರಶಸ್ತಿಯನ್ನು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ನೀಡುತ್ತಾ ಬಂದಿರುತ್ತಾರೆ
ಜೈ ಜಿನೇಂದ್ರ ವೀಕ್ಷಕರೆ, ಸರ್ವ ಭಟ್ಟಾರಕರಿಗು ಪೂಜ್ಯ ಕಾವಂದರಿಗು ವಂದಿಸುತ್ತ ಸ್ಪೂರ್ತಿ ನೀಡಿದ ಹೊಂಬುಜ ಶ್ರೀಗಳಿಗೂ ಅಭಿನಂದಿಸುತ್ತ, ನಿಮ್ಮ ನೆಚ್ಚಿನ ಜ್ವಾಲಮಾಲ ಡಾಟ್ ನ್ಯೂಸ್ ಅರ್ಪಿಸುತ್ತಿರುವ ಪುಟ್ಟಾಣಿಗಳಿಗಾಗಿ ಧಾರ್ಮಿಕ ಚಟುವಟಿಕೆಯ ಎರಡನೇ ಕಂತು ಕೂಡ ಮಕ್ಕಳಿಂದ ಕೂಡ ಉತ್ತಮ ಪ್ರತಿಕ್ರಿಯೆ ದೊರಕ್ಕಿದು ಮೊದಲ ಕಂತಿನಂತೆ ಈ ಬಾರಿಯು ಒಂದು ತಾಸಿನೊಳಗೆ 350ಕ್ಕೂ ಹೆಚ್ಚು ಮಕ್ಕಳು ಕರೆಗಳಿಗಾಗಿ ಪ್ರಯತ್ನಿಸಿದ್ದು 35 ರಿಂದ 40 ಮಕ್ಕಳಿಗೆ ಮಾತ್ರ ಕರೆ ದೊರಕಿದೆ. ಇದ್ದು ಅಂಕಿ ಅಂಶಕ್ಕಾಗಿ ಅಲ್ಲ.
ಬಂಧುಗಳೆ ವಿಶ್ವ ವಿಶ್ವವೆ ನಲುಗುತ್ತಿರುವ ಆಗಾಧ ಭೀತಿಯನ್ನು ತಂದೊಡ್ಡಿರುವ ಕರೋನ ಮಾರಕಾಸ್ತ್ರ ಎಲ್ಲರನ್ನು ಎದೆಗುಂದಿಸಿರುವುದು ಸಂಕಷ್ಟಕೆ ಸಿಲುಕಿಸಿರುವುದು ನಿಜ ಆದರೆ ಸಹಿಷ್ಣುತೆ ಮನೋಧರ್ಮ ಹೊಂದಿದ ರಾಷ್ಟ್ರದಲ್ಲಿ ಹುಟ್ಟಿದ ನಾವು ಈ ಸನ್ನಿವೇಶವನ್ನು ಸಂಕಲ್ಪಮಾಡಿ ಹೆದುರಿಸಿ ಗೆಲ್ಲಬೆಕ್ಕಿದೆ.
ನಮ್ಮ ಜೈನ ಧರ್ಮದ ಆಚರಣೆಯ ಬಗ್ಗೆ ಶ್ರೀ ಧೀರಜ್ ಜೈನ್ ಹೊಳೆನರಸೀಪುರ ಇವರು ತಿಳಿಸಿದರು. ಅತಿ ಅವಶ್ಯಕವಾದಂತಹ ಶಕ್ರ್ಯಗಳಲ್ಲಿ ಒಂದು ಆಗಿರುವಂತಹ ದೇವರ ದರ್ಶನ ಅಂದರೆ ಭಗವಂತನ ದರ್ಶನವನ್ನು ಹೇಗೆ ಮಾಡುವುದು , ಜಿನೇಂದ್ರ ದೇವರ ದರ್ಶನವನ್ನು ಮಾಡಬೇಕೆಂದರೆ ಯಾವ ರೀತಿ ಮಾಡುವುದು , ಯಾವ ಆಚರಣೆಯನ್ನು ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇನೆ.
ಲಾಕ್‌ಡೌನ್ ಸಮಯದಲ್ಲಿ ಜೈನ ಸಮುದಾಯ ಸೇವೆಗಾಗಿ ಪ್ರೇರಣಾ ವಿಡಿಯೋ
ಜೈ ಜಿನೇಂದ್ರ ಬಂಧುಗಳೆ, ವಿಶ್ವವ್ಯಾಪ್ತಿ ಆರೋಗ್ಯ ತುರ್ತುಪರಿಸ್ಥಿತಿ ಸೃಷ್ಟಿಸಿರುವ ಕೊವಿಡ್ 19 ದಿನ ದಿಂದ ದಿನಕ್ಕೆ ವ್ಯಾಪಿಸುತ್ತಿದು ಅನೇಕ ದೇಶಗಳಲ್ಲಿ ಚಿಂತಾಜನಕ ಸ್ಥಿತಿ ನಿರ್ಮಾಣಗೊಂಡಿದೆ. ಆದರೆ ಭಾರತದಲ್ಲಿ ಎಲ್ಲಾ ದೇಶಗಳಲ್ಲಿನ ಜನಸಂಖ್ಯೆಗಿಂತ್ತಲು ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾದರು ನಮ್ಮಲಿ ಈ ಸೋಂಕು ನಿಗ್ರಹದಲ್ಲಿರುವುದರ ಹಿಂದೆ ನಮ್ಮ ಪ್ರಧಾನಿಯವರು ತೆಗೆದು ಕೊಂಡಿರುವ ದೃಢ ನಿರ್ಧಾರ ಪರಿಸ್ಥಿತಿಯ ಸೂಕ್ತ ನಿರ್ವಹಣೆ ಒಂದೇಡೆಯಾದರೆ ನಮ್ಮ ದೇಶ ವಾಸಿಗಳ ಕ್ರಿಯಾ ಶೀಲ ಮನೋಭಾವ, ವಿಪತ್ತಿನ ಸಮಯದಲ್ಲಿ ದೈರ್ಯಗೆಡದೆ ಅನೇಕ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸದೊಂದಿಗೆ ಸಮುದಾಯದ ಮಟ್ಟದಲ್ಲಿ ಆರ್ಥಿಕ ಸಮಾಜಿಕ ಅಗತ್ಯಗಳಿಗೆ ಸ್ಪಂದಿಸಿ ನಿರ್ಗತಿಕ ಬಡ ಜನರಿಗೆ ಸಹಾಯ ಹಸ್ತ ಚಾಚುತ್ತ ಅತ್ಯಂತ ಉತ್ಸಾಹಿಗಳಾಗಿ ಮನಸ್ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ. ಅವರಿಗಾಗಿ ಒಂದು ದೊಡ್ಡ ಚಪ್ಪಾಳೆ.
ಜೈ ಜಿನೇಂದ್ರ ವೀಕ್ಷಕರೆ, ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ ಸರ್ವ ಭಟ್ಟಾರಕರಿಗು ಪೂಜ್ಯ ಕಾವಂದರಿಗು ವಂದಿಸುತ್ತ, ಸ್ಪೂರ್ತಿ ನೀಡಿದ ಹೊಂಬುಜ ಶ್ರೀಗಳಿಗೂ ಅಭಿನಂದಿಸುತ್ತ ನಿಮಗೆಲ್ಲಾ ತಿಳಿದಿರುವಂತೆ ಜ್ವಾಲಮಾಲ ನ್ಯೂಸ್ ವತಿಯಿಂದ ಮಕ್ಕಳಿಗಾಗಿ ಸಿಕ್ಕಿರುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಜೈನ ಧರ್ಮದ ಸಂಸ್ಕಾರವನ್ನು ಕಲಿಸಿಕೊಡಲು ಧಾರ್ಮಿಕ ಚಟುವಟಿಕೆಗಳನ್ನು ಏರ್ಪಡಿಸಲಾಗಿದ್ದು ಈ ಕಂತಿನಲ್ಲಿ ಮಕ್ಕಳಿಗೆ ವೀಡಿಯೋ ಮೂಲಕ ಬಸದಿ ದರ್ಶನಕ್ಕೆ ಯಾವೆಲ್ಲ ಕ್ರಮವನ್ನು ಅನುಸರಿಸ ಬೇಕು ಯಾವ ಮಂತ್ರಗಳನ್ನು ಸೃತಿಸ ಬೇಕು ಹಾಗೂ ಪುಂಚಗಳನ್ನು ಹೇಗೆ ಇಡಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡಲಾಗಿತ್ತು. ಅದಕ್ಕೆ ಕಳೆದ ಭಾನುವಾರದಂದು ಪ್ರಶ್ನಾವಳಿ ಇಡಲಾಗಿತ್ತು.
ಹೊಂಭುಜ ಶ್ರೀಗಳಿಂದ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಸ್ವಾಮೀಜಿ ಜನ್ಮದಿನದ ಶುಭಾಶಯಗಳು
ಪರಮ ಪೂಜ್ಯ ಸ್ವಸ್ತಿಶ್ರೀ ಕರ್ಮಯೋಗಿ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಟ್ಟಚಾರ್ಯ ವರ್ಯ ಮಹಾಸ್ವಾಮೀಜಿಯವರ ಜನ್ಮದಿನದ ಈ ಶುಭದಿನದಂದು ಅವರಿಗಾಗಿ ಶುಭ ಕಾಮನ ನುಡಿಗಳನ್ನು ಶ್ರೀ ಕ್ಷೇತ್ರ ಹೊಂಬುಜ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳವರು ಸಮಸ್ತ ಭಟ್ಟಾರಕರ ಪರವಾಗಿ ಜ್ವಾಲಮಾಲ ಡಾಟ್ ನ್ಯೂಸ್ ಮೂಲಕ ಶುಭ ಸಂದೇಶವನ್ನು ತಿಳಿಸಿದ್ದಾರೆ. ಬನ್ನಿ ಅವರ ನುಡಿಗಳಲ್ಲಿ ಕೇಳೊಣ್ಣ.
ಅರಹಂತಗಿರಿ ಕ್ಷೇತ್ರ ಪರಿಚಯ / ಜೈನ ಮಠ/ ಸ್ವಸ್ತಿ ಶ್ರೀ ಧವಲಕೀರ್ತಿ ಸ್ವಾಮಿ
ಜೈ ಜಿನೇಂದ್ರ ವೀಕ್ಷಕರೆ ಶ್ರೀ ಕ್ಷೇತ್ರ ಅರಅಂತ ಗಿರಿ, ಅರಅಂತ ಗಿರಿಯು ತಮಿಳುನಾಡಿ ತಿರುವಣ್ಣಮಲೈ ಜಿಲ್ಲೆಯ ತಿರುಮಲೈನಲ್ಲಿದೆ, ಇಲ್ಲಿನ ಪ್ರಕೃತಿ ಸೌಂದರ್ಯ ಚಿತ್ತಾಕರ್ಷಕ ಕೆತ್ತನೆಗಳು ಪ್ರವಾಸಿಗರನ್ನು ಮನಸೂರೆ ಗೊಳಿಸುತ್ತವೆ
ಜೈ ಜಿನೇಂದ್ರ ವೀಕ್ಷಕರೆ, ಇಂದು ಒಂದು ಸಂತಸದ ಸುದ್ದಿಯೊಂದಿಗೆ ನಿಮ್ಮೊಂದಿಗೆ ಲೈವ್ ನಲ್ಲಿ ಇದ್ದೇನೆ, ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಿಮಗಾಗಿ ನವೀನ ಕಾರ್ಯಕ್ರಮಗಳ ಹೊಸ ಗುಚ್ಚವನ್ನು ಇದೆ ಶ್ರಾವಣ ಮಾಸದಿಂದ ತಂದಿದೆ. ಬನ್ನಿ ಈ ಬಗ್ಗೆ ತಿಳಿದುಕೊಳ್ಳೋಣ
ಜೈ ಜಿನೇಂದ್ರ ವೀಕ್ಷಕರೆ ಕಳೆದ ಸಂಚಿಕೆಯಲ್ಲಿ ನಿವೇಲ್ಲ ಯೋಧರುಗಳ ಸೇವಮನೋಭಾವ ಪರಸ್ಪರ ಸಹಕಾರ ಕಾರ್ಯತ್ತಪರತೆ ಇವೆಲ್ಲದರ ಕಿರು ನೋಟ ವೀಕ್ಷಿಸಿದ್ದಿರಿ, ಸಮಯದ ಅಭಾವದಿಂದ ಉಳಿದ ಸಂಘ ಸಂಸ್ಥೆಗಳ ಮಠಗಳ ವತಿಯಿಂದ ನಡೆದ ಬೃಹತ್ ಕಾರ್ಯವನ್ನು ಮುಂದುವರಿದ ಈ ಭಾಗದಲ್ಲಿ ವೀಕ್ಷಿಸಲ್ಲಿದಿರಿ .
ತೀರ್ಥಂಕರ ಪದವಿಗೆ ಕಾರಣರಾದ ಹದಿನಾರು ಭಾವನೆಗಳು ನಮ್ಮದಾಗಲಿ ನಮಗೂ ಅರ್ಯಂತ ಪದವಿ ಪ್ರಾಪ್ತವಾಗಲಿ ಎಂದು ಶೋಢಷಭಾವನೆ ವ್ರತಾಚರಣೆಯನ್ನು ಆಚರಿಸುತ್ತಿರುವ ಸರ್ವಸ್ವ ಜೈನ ಬಾಂಧವರಿಗೂ ಶುಭವನ್ನು ಕೋರುತ್ತಾ ಒಮ್ಮೆ ಮುಖ್ಯಾಂಶವನ್ನು ನೋಡಿ ಬರೋಣ.
ಜೈ ಜಿನೇಂದ್ರ ವೀಕ್ಷಕರೆ, ಇಂದಿನ ಅನುಮತಿ ಮಕ್ಕಳ ಧಾರ್ಮಿಕ ಆಸಕ್ತಿಯನ್ನು ಗುರುತಿಸುವ ಹಾಗೂ ಪ್ರೊತ್ಸಹಿಸುವ ಸಲುವಾಗಿ ಧರ್ಮದ ಕುಡಿ ಕಾರ್ಯಕ್ರಮದಲ್ಲಿ ನಿಮ್ಮೊಂದಿಗಿದೇನೆ. ಬನ್ನಿ ನೀವು ನನ್ನೊಟ್ಟಿಗೆ ಹೀಗತಾನೆ ಚಿಗುರೊಡೆಯುತ್ತಿರುವ ಕುಡಿಗಳಿಗೆ ನೀರೆರೆದು ಪೋಷಿಸೋಣ.
ಜೈ ಜಿನೇಂದ್ರ ವೀಕ್ಷಕರೆ, ನಮ್ಮ ಈ ದಿನದ ಪಯಣ ಬಹಳ ಪ್ರಾಚೀನ ಕ್ಷೇತ್ರವಾದ ಮಂದಾರಗಿರಿಯಡೆಗೆ. ಮಂದಾರಗಿರಿ ಬಹಳಷ್ಟು ಜೈನ ಬಾಂಧವರಿಗೆ ಚಿರಪರಿಚಿತ ಜೈನ ಧಾರ್ಮಿಕ ಕೇಂದ್ರ ಆದರು ನಿಮ್ಮ ಮುಂದೆ ಮತ್ತೆ ಮಂದಾರಗಿರಿಯ ಬಗ್ಗೆ ಪ್ರಸ್ತಾಪಮಾಡುತ್ತಿರುವುದರ ಹಿಂದೆ ನಿಮಗೆಲ್ಲಾ ಬಹಳ ಹರ್ಷ ತರುವಂತಹ ವಿಷಯ ಒಂದಿದ್ದೆ.
ತುಳುನಾಡು ದೇವಾನುದೇವತೆಗಳ ಆಲಯ ,ಧೈವಗಳ ನೆಲೆ , ಭೋರ್ಗರೆವ ಕಡಲ ಕಿನಾರೆ, ಪ್ರವಾಸಿಗರ ತಾಣ, ಯಕ್ಷಗಾನ ಕಂಬಳದಂತಹ ಕಲೆಯಿರುವ ಸಾಂಸ್ಕೃತಿಕ ಬೀಡು, ಸಾಹಿತ್ಯ ಸಂಸ್ಕೃತಿಯ ಸ್ನೇಹ ಸೌಹಾರ್ದತೆಯ ಪುಣ್ಯಭೂಮಿ. ಎತ್ತೆತ್ತ ನೋಡಿದರೂ ಹಸಿರು ವನರಾಶಿ .
ಜೈ ಜಿನೇಂದ್ರ ವೀಕ್ಷಕರೆ, ಹಸಿರು ಸೆರಗ ಹೊದ್ದು ನಿಂತಿರುವ ಪ್ರಕೃತಿ ಮಾತೆಯ ವರ್ಣನಾತಿತ ಸೌಂದರ್ಯದ ನಡುವೆ 18 ಕೆರೆ 18 ಚಾರಿತ್ರಾರ್ಹ ಬಸದಿಗಳ್ಳುಳ ಜೈನ ಕಾಶಿ ಮೂಡುಬಿದ್ರೆಯಲ್ಲಿನ ಮತ್ತೊಂದು ಪ್ರಮುಖವಾದ ಬಸದಿ ಇಲ್ಲಿನ ಕ್ರಿ.ಪೂ 7ನೇ ಶತಮಾನದಲ್ಲಿ ನಿರ್ಮಿತವಾದ ಬಸದಿ ಗುರುಗಳ ಬಸದಿ ಈ ಬಸದಿಯಲ್ಲಿ ನ್ಯಾಯ ತೀರ್ಮಾನ ಆಭಯ ಔಷಧ ಶಾಸ್ತ್ರದಾನ ಜಪ ತಪ ಜಿನ ಧರ್ಮ ಅನಿಷ್ಟಾನ ಇವುಗಳ ಪಾರಂಪರಿಕ ತಾಣ.
ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮೆಲ್ಲರ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಶ್ವಾಸವಿಲ್ಲದೆ ಜೀವನವಿಲ್ಲ ಅದರಂತೆಯೇ ಧರ್ಮವಿಲ್ಲದ ಜೀವನವು ನಿಜವಾದ ಜೀವನವೇ ಅಲ್ಲಾ ತಂತ್ರಜ್ಞಾನ ಮತ್ತು ಆಧುನಿಕತೆಯ ವ್ಯವಸ್ಥೆಗೆ ಮಾರಿಹೋಗಿರುವ ಈ ಸಮಾಜದಲ್ಲಿ ಸಂಸ್ಕೃತಿ ಸಂಸ್ಕಾರ ಆಧ್ಯಾತ್ಮ ಮತ್ತು ಧರ್ಮವನ್ನು ಉಳಿಸುವುದು ದೊಡ್ಡ ಸಹಾಸವಾಗಿದೆ. ಆದರೆ ಸಮಾಜದಲ್ಲಿ ಒಬ್ಬ ಗೌರವಾನ್ವಿತ ವ್ಯಕ್ತಿಯಾಗಲು ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಮಾತ್ರ ಸಾಧ್ಯ.
ಜೈನ ಧರ್ಮ ಇಡೀ ವಿಶ್ವದಲ್ಲಿ ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸುವ ಏಕ ಮಾತ್ರ ಧರ್ಮವಾಗಿದೆ. ಪ್ರತಿಯೊಂದು ಜೀವಿಗೂ ತನ್ನದೇ ಆಧ ಜೀವನವಿರುತ್ತದೆ. ಜೇವಿಸು ಜೀವಿಸಲು ಬಿಡು ಎಂಬ ಘೋಷ ವಾಕ್ಯ ದೊಂದಿಗೆ ಅಹಿಂಸಾ ತತ್ವವನ್ನು ಪ್ರತಿಪಾದಿಸುವ ನಮ್ಮ ಧರ್ಮದ ಆಚರಣೆಗಳಲ್ಲಿ ಒಂದಾದ ಜೀವಾಶ್ರಮಿಯ ಹೃದಯಪೂರ್ವಕ ಶುಭಾಶಯಗಳು.
ಈ ಸಂಚಿಕೆ ಶರನ್ ನವರಾತ್ರಿಯ ವಿಶೇಷ ಸಂಚಿಕೆಯಾಗಿದೆ. ಇಲ್ಲಿ ಸಂಭ್ರಮಾಚರಣೆಗಳನ್ನು ಮಾತ್ರ ಪ್ರಧಾನವಾಗಿಸಿದೆ, ರಾಜ್ಯದೇಲ್ಲೆಡೆಯ ಜಿನ ಮಂದಿರದ ನವರಾತ್ರಿ ಉತ್ಸವದ ಸಂಭ್ರಮಾಚರಣೆ ನಿಮ್ಮಗಳ ದರ್ಶನ ಭಾಗ್ಯಕ್ಕಾಗಿ ಸಂಯೋಜಿಸಲಾಗಿದೆ, ವೀಕ್ಷಿಸಿ.
ಎಲ್ಲರಿಗೂ ಜೈ ಜಿನೇಂದ್ರ, ನಾನು ನಿಮ್ಮ ಸಂಸ್ಕೃತಿ ಎಂ ಜೈನ್ ಏಳನೀರು, ಮಕ್ಕಳಿಗೆ ಧಾರ್ಮಿಕ ಜ್ಞಾನದ ಅರಿವು ಮೂಡಿಸುವುದು ತುಂಬಾ ಮುಖ್ಯ ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾರ್ಯದಲ್ಲಿ ನಾವು ವಿಪಲರಾಗುತ್ತಾಇದ್ದೀವಿ, ಜ್ವಾಲಮಾಲ ನ್ಯೂಸ್ ಕಡೆಯಿಂದ ಅದೇ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನ ಅದುವೇ ನಮ್ಮ ಧರ್ಮದ ಕುಡಿ ಕಾರ್ಯಕ್ರಮ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.
ವ್ಯವಸ್ಥಾಪಕ ನಿರ್ದೇಶಕರು ಜ್ವಾಲಾಮಾಲಾ ನ್ಯೂಸ್ ಇವರಿಂದ : ಭಗವಾನ್ ಶ್ರೀ ಮಹಾವೀರ ಸ್ವಾಮಿ ನಮಃ ಪರಮಪೂಜ್ಯ ಮುನಿ ವರ್ಗಕ್ಕೆ ಭಕ್ತಿಯಿಂದ ನಮೋಸ್ತುಗಳನ್ನು ಅರ್ಪಿಸುತ್ತಾ ಗುರುಹಿರಿಯರ ಆಶೀರ್ವಾದವಿಲ್ಲದೇ ಯಾವ ಕಾರ್ಯವೂ ಸುಗಮವಾಗಿ ಸಂಪನ್ನವಾಗುವುದಿಲ್ಲ
ಜೈ ಜೀನೇಂದ್ರ ವೀಕ್ಷಕರೇ ಅತ್ಯಂತ ಪ್ರಾಚೀನ ಸಿದ್ದಕ್ಷೇತ್ರ ತೀರ್ಥಕ್ಷೇತ್ರ ಅತಿಶಯಕ್ಷೇತ್ರ ವಿಷ್ಣುನಂದಿ ಮುನಿಗಳ ಕಾಲದಲ್ಲಿ ಹುಲಿ ಮತ್ತು ದನ ಪರಸ್ಪರ ವೈರವನ್ನು ಮರೆತು ಒಂದೇ ಪಾತ್ರೆಯಲ್ಲಿ ನೀರು
ಜೈ ಜಿನೇಂದ್ರ ವೀಕ್ಷಕರೆ, ಈ ವಾರದಲ್ಲಿ ಅನೇಕ ಮುನಿ ಸಂಘದವರು ಚಾರುರ್ಮಾಸವನ್ನು ಮುಗಿಸಿ ವಿಹಾರವನ್ನು ಕೈಗೊಂಡಿದ್ದಾರೆ ಆಚಾರ್ಯಶ್ರೀ ವಿದ್ಯಾಸಾಗರ ಮುನಿಮಹಾರಾಜರ ವಿಹಾರದಲ್ಲಿ ಪಾಲ್ಗೊಂಡಿರುವ ಜನ ಸಾಗರವನ್ನು ಗಮನಿಸಿದಾಗ ನಮ್ಮ ಜೈನ ಮುನಿಗಳ ಶಕ್ತಿ ಹಾಗೂ ಮುನಿ ಭಕ್ತಿ ಅರಿವು ಉಂಟಾಗುತ್ತದೆ
ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಮಕ್ಕಳಲ್ಲಿರುವ ಧಾರ್ಮಿಕ ಆಸಕ್ತಿ ಮತ್ತು ಅವರಲ್ಲಿರುವ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಹಿಸುವ ನಮ್ಮ ಧರ್ಮದ ಕುಡಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.
ಶ್ರೀ ಕೋಟೆ ಶಾಂತಿನಾಥ ಸ್ವಾಮಿ ಬಸದಿ ಮೈಸೂರಿನಲ್ಲಿ ಪದ್ಮಶ್ರೀ ಜೈನ ಮಹಿಳಾ ಸಮಾಜ ಹಾಗೂ ದಿಗಂಬರ ಜೈನ ಸಮಾಜ ಮತ್ತು ಶಾಂತಿನಾಥ ಸೇವಾ ಸಮಿತಿ ಇವರುಗಳ ವತಿಯಿಂದ ಲಕ್ಷದೀಪೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.
ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಮಕ್ಕಳಲ್ಲಿ ಬಾಲ್ಯದಿಂದಲೆ ಧಾರ್ಮಿಕ ಆಸಕ್ತಿ ಮತ್ತು ಅಭಿರುಚಿಯನ್ನು ಬೆಳೆಸುವುದು ಅತಿ ಅವಶ್ಯಕ, ಆ ಪ್ರಯತ್ನದಲ್ಲಿ ಕೈ ಜೋಡಿಸಲು ನಡೆಸಲಾಗುತ್ತಿರುವ ನಮ್ಮ ಧರ್ಮದ ಕುಡಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.
ಜೈ ಜಿನೇಂದ್ರ ವೀಕ್ಷಕರೆ, ಧಾರ್ಮಿಕ ಭೋದನೆಗಳು ಚಿಂತನೆಗಳು ಕಾರ್ಯಕ್ರಮಗಳು ಹಾಗೂ ಇದರ ಮೌಲ್ಯಯುತ ಪ್ರಚಾರ ಇವುಗಳನ್ನ ನೊಳಗೊಂಡ ಧಾರ್ಮಿಕ ಸುದ್ದಿ ಸೌವೋಚ್ಚಯ ವಾರದ ಜೈನ ಸುದ್ದಿ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಸ್ವಾಗತ.
ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಮಕ್ಕಳಲ್ಲಿ ಪ್ರತಿಭೆಗಳು ಹಾಗೂ ಅವರಲ್ಲಿರುವ ಧಾರ್ಮಿಕ ಆಸಕ್ತಿಯನ್ನು ಗುರುತಿಸಿ ಅವರನ್ನು ನಮ್ಮ ಧರ್ಮದ ಕುಡಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.
ಜೈ ಜಿನೇಂದ್ರ ವೀಕ್ಷಕರೆ, ಹೊಸ ವರ್ಷ ಬಂದಿದೆ ಹೊಸ ಹುರುಪಿನೊಂದಿಗೆ ಬರಮಾಡಿಕೊಳ್ಳೊಣ ನಗುವಿನೊಂದಿಗೆ ಮರೆತು ಬಿಡಿ ಹಿಂದಿನ ನೋವುಗಳನ್ನು ನೆನಪಿನಲ್ಲಿಡಿ ಮಧುರ ನೆನಪುಗಳನ್ನು ಆನಂದದಿಂದ ಸ್ವಾಗತಿಸೋಣ ಸುಂದರ ನಾಳೆಗಳನ್ನು ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳೊಂದಿಗೆ ಈ ವಾರದ ಜೈನ ಸುದ್ದಿಗಳಿಗೆ ಸ್ವಾಗತಿಸುತ್ತಿದೇನೆ.
ಸರ್ವೋದಯ ಧರ್ಮ ಚಿಂತನ ಮಂಥನ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಶೀ 720 x 1280
ಸ್ವಸ್ಥಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಗೆ ನಮಸ್ಕರಿಸುತ್ತಾ, ಹಾಗೂ ಎಲ್ಲರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾ ಸರ್ವೋದಯ ಧರ್ಮ ಚಿಂತನ ಮಂಥನ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತಿಸುತ್ತಾ
ಜೈ ಜಿನೇಂದ್ರ . ಪಶ್ಚಿಮ ಕರಾವಳಿ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಲೆನಾಡಿನ ತಪ್ಪಲಿನ ರಮಣೀಯ ಬೆಟ್ಟಗಳ ಸಾಲಿನ ಮಧ್ಯೆ ಕಂಗೊಳಿಸಿರುತ್ತಿರುವುದು ಆತಿಶು ಶ್ರೀ ಕ್ಷೇತ್ರ ಶಿರ್ಲಾಲು. ಶ್ರೀ ಅನಂತನಾಥ ಬಸದಿ . ಶತಮಾನಗಳ ಇತಿಹಾಸವನ್ನು ಹೊಂದಿರುವ ಈ ಬಸದಿ ತನ್ನದೇ ಆದ ಸುಮಾರು 16 ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಇಲ್ಲಿನ ಮೂಲ ದೇವತೆ ಪದ್ಮಾವತಿ ಅಮ್ಮನವರು
ಪರಮಪೂಜ್ಯ ಸ್ವಸ್ಥಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ಪಾವನ ನೇತೃತ್ವದಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಬೆಳಗ್ಗಿನ ನಿತ್ಯ ಪೂಜೆ ಯೊಡನೆ ಕಂಬದ ಮೇಲಿನ 1008 ಶ್ರೀ ಶೀಥಲನಾಥ ತೀರ್ಥಂಕರರಿಗೆ ಹಾಗೂ ಬ್ರಹ್ಮ ದೇವರಿಗೆ 108 ಕಳಸಾಭಿಷೇಕ, ಅಷ್ಟದ್ರವ್ಯ ಅಭಿಷೇಕ , ಶೋಡಶೋಪಚಾರ ಪೂಜೆ ಮತ್ತು ಮಹಾಮಂಗಳಾತಿ ಬಹಳ ಸುಂದರವಾಗಿ ನೆರವೇರಿತು.
ಜೈ ಜಿನೇಂದ್ರ ವೀಕ್ಷಕರೆ, ತುಮಕೂರು ಜಿಲ್ಲೆಯಲ್ಲಿ ಪ್ರಕೃತಿ ನಿರ್ಮಿತವಾದ ಒಂದು ಮನೋಹರ ತಾಣದಲ್ಲಿ ಇರುವಂತಹ ಸುಂದರ ಪ್ರಾವಾಸಿಗರ ಪ್ರೇಕ್ಷಣಿಯ ಸ್ಥಳವಾಗಿ ಮಾರ್ಪಾಡಗಿರುವಂತಹ ಒಂದು ಪುಣ್ಯ ಕ್ಷೇತ್ರವಾಗಿ ಈಗ ಯುಗಳ ಮುನಿಗಳ ವಾಸ್ಥವ್ಯದಿಂದ ಪಾವ ಕ್ಷೇತ್ರವಾಗಿ ಜೀರ್ಣೋದ್ದಾರಗೊಳ್ಳುತ್ತ ಜೈನರನ್ನು ತನ್ನತ್ತ ಆಕರ್ಷಿಸಿಸುತ್ತಿರುವ ಮಂದರ ಗಿರಿ ಹಲವಾರು ಅದ್ಬುತಗಳನ್ನು ಮೂಡಿಸಿಕೊಳ್ಳುತ್ತ ಜಗತ್ತ್ ಪ್ರಸಿದ್ದವಾಗುತ್ತಿದೆ. ದಿನಾಂಕ 17-01-2021ರಂದು ಒಂದು ವೈಭವಯುತ ಕಾರ್ಯಕ್ರಮಕ್ಕೆ ಈ ಕ್ಷೇತ್ರ ಸಾಕ್ಷಿಯಾಯಿತು.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಧಾರ್ಮಿಕವಾಗಿ ಧರ್ಮಾತ್ಮರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಒಡಲಿನಲ್ಲಿರಿಸಿಕೊಂಡಿರುವ ನಾಡು. ಅಲ್ಲಿನ ಕ್ಷೇತ್ರಾಭಿವೃದ್ದಿ ಕಾರ್ಯಕ್ಕೆ ಪ್ರಶಂಸೆ ನೀಡಲು ಪದಗಳು ಸಾಲದು. ಬಣ್ಣಿಸಲು ಆಗದ ಅಲ್ಲಿನ ಧರ್ಮಾಸಕ್ತರುಗಳ ಕಾರ್ಯ ನೀವು ನೋಡುತ್ತಿರುವಂತೆಯೇ ಗೋಚರಿಸುತ್ತದೆ.
ಬೆಳ್ಳೂರಿನಭಗವಾನ್ ಶ್ರೀ ಶ್ರೀ 1008 ವಿಮಲನಾಥ ತೀರ್ಥಂಕರರ 106ನೇ ವರ್ಷದ ವಾರ್ಷಿಕ ಪಂಚ ಕಲ್ಯಾಣ ಮಹೋತ್ಸವವನ್ನು ನೀವೆಲ್ಲರೂ ವೀಕ್ಷಿಸಲಿದ್ದೀರಿ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ಆಶೀರ್ವಾದದ ಮೇರೆಗೆ ಸ್ವಸ್ತಿ ಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಪರಮಪೂಜ್ಯ ಸ್ವಸ್ತಿ ಶ್ರೀ ಶ್ರೀಮದ್ ಅಭಿನವ ಲಕ್ಷ್ಮೀ ಸೇನಾ ಭಟ್ಟಾರಕ ಪಟ್ಟಾಚರ್ಯವರ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ಕೂಡ ಲೋಕಕಲ್ಯಾಣಾರ್ಥವಾಗಿ ದಿನಾಂಕ 14/02/2021 ರಿಂದ 18/02/2021 ರವರೆಗೆ ನಡೆದ ಈ ಕಾರ್ಯಕ್ರಮದ ರಥೋತ್ಸವದ ಭಕ್ತಿ ಪೂರ್ವಕ ಕ್ಷಣಗಳು.
ಜೈನ ತೀರ್ಥಕ್ಷೇತ್ರ ತಾಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮದ ಬೀಡು ಭಗವಾನ್ ಬಾಹುಬಲಿ ಕ್ಷೇತ್ರ ಮುಂಜಾನೆ ಮಂಜಿನಿಂದ ಮಿಂದೆದ್ದ ಗೊಮ್ಮಟನ ಗಿರಿಯಿಂದ ನಮ್ಮ ಕ್ಷೇತ್ರ ಪರಿಚಿತ ಚಿತ್ರೀಕರಣ ಅಂದು ಆರಂಭಗೊಂಡಿತು. ಅದೇ ಮಂಜು ಕವಿದ ಅಂಕು ಡೊಂಕಾದ ಹಾದಿಯನ್ನು ಕ್ರಮಿಸುತ್ತಾ ನಮ್ಮ ತಂಡ ಬಂದು ತಲುಪಿದ್ದು, ಅಳದಂಗಡಿ ಬೆಟ್ಟದ ಬಸದಿಗೆ
ಜೈ ಜಿನೇಂದ್ರ ವೀಕ್ಷಕರೆ, ಇಂದು ಜಿನ ರಾತ್ರಿ ಜೈನರಿಗೆ ಅತಿ ಪವಿತ್ರವಾದ ದಿನ ಶ್ರಮಣ ಪರಂಪರೆಯ ಅರಿಕಾರರು ಪ್ರಥಮ ತೀರ್ಥಂಕರರು ಆದ ಭಗವಾನ್ ವೃಷಭನಾಥ ತೀರ್ಥಂಕರರು ಮೋಕ್ಷವನ್ನು ಪಡೆದ ಪಾವನ ದಿನ
ಜೈ ಜಿನೇಂದ್ರ ವೀಕ್ಷಕರೆ, ಇಂದು ಜಿನ ರಾತ್ರಿ ಜೈನರಿಗೆ ಅತಿ ಪವಿತ್ರವಾದ ದಿನ ಶ್ರಮಣ ಪರಂಪರೆಯ ಅರಿಕಾರರು ಪ್ರಥಮ ತೀರ್ಥಂಕರರು ಆದ ಭಗವಾನ್ ವೃಷಭನಾಥ ತೀರ್ಥಂಕರರು ಮೋಕ್ಷವನ್ನು ಪಡೆದ ಪಾವನ ದಿನ.
ಜೈ ಜಿನೇಂದ್ರ ವೀಕ್ಷಕರೆ, ನಾವು ಇಂದು ನಿಮಗೆ ಗೇರುಸೊಪ್ಪೆ ಕ್ಷೇತ್ರದ ಸಂಕ್ಷೀಪ್ತ ಪರಿಚಯ ಹಾಗೂ ಗೇರುಸೊಪ್ಪೆಯಿಂದ ಸ್ಥಳಾಂತರಗೊಂಡು ಪ್ರತಿಷ್ಠಾಪನೆಯಾದ ಮಾತೆ ಶ್ರೀ ಜ್ವಾಲಮಾಲಿನಿ ದೇವಿಯ ಅತಿಶಯ ಶ್ರೀ ಕ್ಷೇತ್ರ ಸಿಂಹನಗದ್ದೆ ರಥೋತ್ಸವವನ್ನು ಪ್ರಸ್ತುತ ಪಡಿಸುತ್ತಿದೇವೆ.
ಸರ್ವರಿಗೂ ಜೈ ಜಿನೇಂದ್ರ, ಸಂಸ್ಕಾರ ಎನ್ನುವುದು ಮಕ್ಕಳಿಗೆ ಹುಟ್ಟಿನಿಂದ ಬಂದರು ಕೂಡ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸಿ ನಮ್ಮ ಧರ್ಮದ ಹಾದಿಯಲ್ಲಿ ಕೊಂಡೊಯ್ಯವುದರಿಂದ ವೃದ್ಧಿಸುತ್ತದೆ. ಇಂದು ನಮ್ಮ ಧರ್ಮದ ಕುಡಿ ಕಾರ್ಯಕ್ರಮದಲ್ಲಿ ನಮ್ಮ ಜೊತೆ ಕ್ಯಾಲಿಫೋನಿಯಾದ ಅಹನ, ಬೆಂಗಳೂರಿನ ಆರ್ಯ ಹಾಗೂ ಬಾನ್ವಿ ಇದ್ದಾರೆ, ಅಹಾನ ಬಗ್ಗೆ ಒಂದು ಕೀರು ಪರಿಚಯ.
ಕಳೆದ ಬಾರಿ ಕ್ಷೇತ್ರ ಪರಿಚಯದಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತದ ಬಳಿಯಿರುವ ಅತಿಶಯ ಕ್ಷೇತ್ರ ಗೇರುಸೊಪ್ಪೆಯ ಪರಿಚಯ ಮಾಡಿದ್ದೆವು. ಅಲ್ಲಿ ಹತ್ತಿರದಲ್ಲಿ ಸ್ಥಿತವಾಗಿರುವ ಶರಾವತಿ ನದಿ ದಂಡೆಯ ಪ್ರಕೃತಿ ದತ್ತ ರಮಣೀಯ ಕ್ಷೇತ್ರ ಬೀಸುವ ಗಾಳಿಯು ಶುಧ್ಧ ಹಿತಕಾರಿಯಾದ ಕಾಡಿನ ಮಧ್ಯದಲ್ಲಿ ಮನಸ್ಸಿಗೆ ಮುದ ನೀಡುವ ವಾತಾವರಣದಲ್ಲಿ ರುವ ಕ್ಷೇತ್ರ ಮಾತೆ ಪದ್ಮಾವತಿ ಅಮ್ಮನವರು ನೆಲೆ ನಿಂತ ಅತಿಶಯ ಕಾರಿ ಕ್ಷೇತ್ರ . ಶ್ರೀ ಸಿದ್ದ ಗಿರಿ ವಡಲು ಬಯಲು ಕ್ಷೇತ್ರವನ್ನು ಪರಿಚಯಿಸಲಿದ್ದೇವೆ. ದಯವಿಟ್ಟು ನಿಮಗಾಗಿ ದೃಶ್ಯೀಕರಿಸಿದ ಈ ಸುಂದರ ದೃಶ್ಯ ಕಾವ್ಯವನ್ನು ಪ್ರತಿಯೊಬ್ಬರೂ ಕೊನೆಯವರೆಗೂ ವೀಕ್ಷಿಸಿ.
ಜೈ ಜಿನೇಂದ್ರ ವೀಕ್ಷಕರೆ, ಇಂದಿನ ನಮ್ಮ ಕ್ಷೇತ್ರ ಹಾಡುವಳ್ಳಿ ಸಂಗೀತಪುರ, ಹೆಸರೇ ಸೂಚಿಸುತ್ತಿರುವ ಹಾಗೆ ಕಲೆ ವಾಸ್ತು ಶಿಲ್ಪ ಎಲ್ಲದರ ಪ್ರತಿ ಬಿಂಬ ಕಲೆ ಸಂಸ್ಕೃತಿಯ ತವರೂರು. ಸೌಂದರ್ಯ ಮತ್ತು ಕಲೆ ಇವೇರಡು ನಮ್ಮ ಮನಸ್ಸಿನ ಮೂಲಕ ಸೃಷ್ಟಿಯಾಗುತ್ತದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿದರೂರು ಗ್ರಾಮದ ಭಗವಾನ್ 1008 ಶ್ರೀ ವರ್ಧಮಾನ ಸ್ವಾಮಿ ದಿಗಂಬರ ಜೈನ ಬಸದಿಯ ಕ್ಷೇತ್ರ ಪರಿಚಯದೊಂದಿಗೆ, ಬಸದಿಯ ಜೀರ್ಣೋದ್ಧಾರ ಕಾರ್ಯದ ಸಂಕ್ಷಿಪ್ತ ಪರಿಚಯ
ನಿಮ್ಮ ನೆಚ್ಚಿನ ಜ್ವಾಲಮಾಲ.ನ್ಯೂಸ್ ತಂದಿದೆ ಉತ್ತಮ ಸದವಕಾಶ. ಪ್ರತಿದಿನ ಬಸದಿಗಳಿಗೆ ತೆರಳಿ ಅಭಿಷೇಕ ವೀಕ್ಷಿಸಿ ಅಷ್ಟ ವಿದಾರ್ಚನೆ ಹಾಗೂ ನಿತ್ಯ ಪೂಜೆಗಳಲ್ಲಿ ಭಾಗವಹಿಸುವವರಿಗೆ ಅನುಕೂಲವಾಗಲು
ಜೈ ಜಿನೇಂದ್ರ ವೀಕ್ಷಕರೆ ಧರ್ಮದ ಕುಡಿ ಕಾರ್ಯಕ್ರಮದಲ್ಲಿ ಇಗಾಗಲೇ ನೋಡುತ್ತಿದ್ದಿರಾ ಮಕ್ಕಳಲ್ಲಿ ಹುದುಗಿರುವ ಧಾರ್ಮಿಕ ಪ್ರತಿಭೆಯನ್ನು ಅನಾವರಣಗೊಳಿಸುವುದರ ಮೂಲಕ ಧರ್ಮದ ಬೆಳೆ ಬಿತ್ತುವ ಕಾರ್ಯಕ್ರಮ ಇದಾಗಿದೆ.
ಇಂದಿನ ಧರ್ಮದ ಕುಡಿ ಕಾರ್ಯಕ್ರಮಕ್ಕೆ ಸ್ವಾಗತ ಮಾಡುತ್ತಾ ಭಕ್ತಾಂಭರ ಸ್ತೋತ್ರದ 5ನೇ ಶ್ಲೋಕದ ಅರ್ಥ ಜಿನೇಂದ್ರ ಭಗವಂತನ ಸ್ತುತಿ ಮಾಡುವಷ್ಟು ಶಕ್ತಿ ನನ್ನಲ್ಲಿಲ್ಲ ಆದರೂ ಕೂಡ ಜಿನೇಂದ್ರ ಭಗವಂತನ ಮೇಲಿರುವ ಭಕ್ತಿಯ ಕಾರಣ ನಾನು ಪ್ರಯತ್ನಿಸುತ್ತೇನೆ.
ಶ್ರೀ ಅತಿಶಯಕ್ಷೇತ್ರ ಜೈನರ ಗುತ್ತಿಚಾತುರ್ಮಾಸ ಕಳಸ ಸ್ಥಾಪನೆ
ಅತಿಶಯ ಕ್ಷೇತ್ರ ಜೈನರಗುತ್ತಿ, ಅಡಗೂರು. ವೀಕ್ಷಕರೆ ಈ ಕ್ಷೇತ್ರಕ್ಕೆ ನಾವು ಚಾತುರ್ಮಾಸ ಕಳಸ ಸ್ಥಾಪನೆ ಕಾರ್ಯಕ್ರಮಕ್ಕೆ ಎಂದು ಭೇಟಿ ನೀಡಿದಾಗ, 7ನೇ ದಿನದ ಶ್ರೀ 1008 ಸಿದ್ದಚಕ್ರ ಆರಾಧನ ಮಹೋತ್ಸವ ಭಕ್ತಿಪೂರ್ವಕವಾಗಿ ನಡೆಯುತ್ತಿತ್ತು
ಜ್ವಾಲಮಾಲ ಡಾಟ್ ನ್ಯೂಸ್ ನಿಂದ ಪ್ರಾರಂಭವಾಗಿರುವಂತಹ ಜ್ಞಾನ ದೀಪಿಕೆಗಳು ಈ ಒಂದು ಸರಣಿಕಾರ್ಯಕ್ರಮದಲ್ಲಿ ನಾವು ಪರಿಚಯ ಮಾಡಿಕೊಡುತ್ತಿರುವ ಪ್ರಾಚೀನ ಕೃತಿ ಜ್ಞಾನಚಂದ್ರ ಚರಿತೆ ಇದು ಬಹಳ ಪ್ರಮುಖವಾದಂತಹ ಪುಸ್ತಕ
ಸತಿ ಧರ್ಮಸಾರ ಬಂಧುವರ್ಮನ ಜೀವ ಸಂಭೋದನೆ ಹೇಗೋ ಹರಿವಂಶಾಭ್ಯುದಯ ಹೇಗೋ ಹಾಗೇ ಸತಿ ಧರ್ಮಸಾರ ಎನ್ನುವ ಪುಟ್ಟ ಕೃತಿ ಮಹಿಳೆಯರಿಗಾಗಿಯೇ ವಿಶೇಷವಾಗಿ ಬರೆದಂತಹ ಕೃತಿ ಆ ಕಾಲ ಘಟ್ಟದ ಕೃತಿಯನ್ನು ನಾವು ಪ್ರಾಚೀನ ಕೃತಿಯನ್ನಾಗಿ ಪರಿಚಯ ಮಾಡಿಕೊಳ್ಲುತ್ತಿದ್ದೇನೆ
ಪ್ರಥಮಾ ಚಾರ್ಯ ಚಾರಿತ್ರ್ಯ ಚಕ್ರವರ್ತಿ ಶ್ರೀ 108 ಶಾಂತಿಸಾಗರ ಮಹಾರಾಜರ ಹುಟ್ಟೂರು ನಿಪ್ಪಾಣಿ ತಾಲ್ಲೂಕಿನ ಭೋಜ ಗ್ರಾಮದಲ್ಲಿದ್ದು ಇದರ ಸುಂದರ ದೃಶ್ಯಾವಳಿಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.