ವೀಕ್ಷಕರೇ ಪ್ರಾಚೀನ ಕಾಲದಿಂದಲೂ ಜೈನರ ಇತಿಹಾಸವನ್ನು ಸಾರುವ ನಾಣ್ಯಗಳನ್ನು ನಾವು ಇಲ್ಲಿ ಕಾಣಬಹುದು. ನಮ್ಮ ಹತ್ತಿರ ಈದಿನ ಇರುವ 5 ರೂಗಳ ನಾಣ್ಯಗಳು ಏನು ಇವೆ ಇವು ಮಹಾವೀರ ಭಗವಂತರ 2006ನೇ ಜನ್ಮ ಕಲ್ಯಾಣೋತ್ಸವದ ಸವಿ ನೆನಪಿಗಾಗಿ ತಯಾರಿಸಲಾದಂತಹ 2001ರಲ್ಲಿ ಬಿಡುಗಡೆಯಾದ ನಾಣ್ಯಗಳು ಇವು. ಭಗವಾನ್ ಮಹಾವೀರರು ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ವೈಶಾಲಿಯ ಕುಂಡಲಪುರ ನಗರದಲ್ಲಿ ಜನಿಸಿ ಅಹಿಂಸಾ ಮಾರ್ಗದಲ್ಲಿ ನಡೆದು ತ್ಯಾಗ ದೀವಿಗೆ ಬೆಳಗಿಸಿ ರಾಜ ವಂಶಸ್ತರಾದರೂ ಸರ್ವ ಸುಖ ಭೋಗಗಳನ್ನು ತ್ಯಜಿಸಿ ದೀಕ್ಷೆ ಹೊಂದಿ ದೀರ್ಘ ಕಾಲ ಕಠಿಣ ತಪಸ್ಸನ್ನು ಆಚರಿಸಿ ಪವಪುಡಿಯಲಿ ಮೋಕ್ಷ ಹೊಂದಿ ಜೈನ ಧರ್ಮದ ನಾಲ್ಕನೇ ತೀರ್ಥಂಕರರಾಗಿ ಜಗತ್ತಿಗೆ ಅಹಿಂಸಾ ತತ್ವದ ಮಹತ್ವವನ್ನು ಸಾರಿದ ಮಹಾತ್ಮರ ಹೆಸರಲ್ಲಿ ತಯಾರಾದ ಈ ನಾಣ್ಯದಲ್ಲಿ ತ್ರಿಲೋಕ ಚಿಹ್ನೆ ಇದ್ದು ಮೇಲೆ ಸಿದ್ದಲೋಕ , ಅದರ ಕೆಳಗೆ ಸಂಯಕ್ ಜ್ನಾನ ಸಂಯಕ್ ದರ್ಶನ ಸಮಯಕ್ ಚಾರಿತ್ರ್ಯ ದ ಪ್ರತೀಕವಾದ ಮೂರು ಬಿಂದುಗಳು ಮಧ್ಯ ಸ್ವಸ್ಥಿಕ ಹಾಗೂ ಕೆಳಗೆ ನೀವು ಗಮನಿಸಬಹುದು ಅಹಿಂಸೆಯನ್ನು ಪ್ರತಿಪಾದಿಸುವ ಹಸ್ತ ಅದರಲ್ಲಿರುವ ಚಕ್ರದಲ್ಲಿ 24 ತೀರ್ಥಂಕರರ ಪ್ರತೀಕವಾಗಿ ವಾಗಿರುವ ಗೆರೆಗಳನ್ನು ನೋಡಬಹುದು. ಚಿಹ್ನೆಯ ಕೆಳಭಾಗದಲ್ಲಿ ಪರಸ್ಪರೋಗ್ರಹಂಜೀವಾಣಂ ಎನ್ನುವ ಘೋಷವಾಕ್ಯ ಇದೆ. ಮತ್ತೆ ನೀವಿಲ್ಲಿ ಗಮನಿಸಬೇಕಾದುದು ಚಿಹ್ನೆಯ ಸುತ್ತ ಭಗವಾನ್ ಮಹಾವೀರರ 2600ರ ಜನ್ಮ ಕಲ್ಯಾಣೋತ್ಸವ 2001 ಎಂದು ಉಲ್ಲೇಖಿಸಲಾಗಿದೆ. ಇದು ನೋಡಲು ಮಾಮೂಲಿಯಾದ 5ರೂ ಚಿಲ್ಲರೆ ನಾಣ್ಯದಂತಿದ್ದರೂ ಇದು 9 ಗ್ರಾಂ ತೂಕ ಹೊಂದಿದ್ದು ಇತ್ತೀಚಿನ ನಾಣ್ಯ ನಿಮಗೆ ಗೊತ್ತಿರಬಹುದು ಸುಮಾಋಉ 6 ಗ್ರಾಮ್ ಇರುತ್ತದೆ. ಆದರೆ ಇದು 9 ಗ್ರಾಂ ತೂಕ ಹೊಂದಿದ್ದು 23.19 ಎಮ್ ಎಮ್ ಡಯಾಮೀಟರ್ ನ ಹಾಗೂ 2.77 ಎಮ್ ಎಮ್ ಗಾತ್ರದ ಕಾಪರ್ ನಿಖಿಲ್ ನಿಂದ ತಯಾರಾದ ನಾಣ್ಯ ಇದು ಬಹಳ ಅಪರೂಪದ ಆಂಟಿಕ್ ಕ್ವಾಲಿಟಿ ಹೊಂದಿದೆ ಇಂಟರ್ನಟ್ ನಲ್ಲಿ ನೀವು ಗಮನಿಸಬಹುದು ಇದರ ರಿಯಲ್ ರೇಟ್ 92.5 . ಇದು ವಿಶ್ವದಲ್ಲಿಯಾದರೇ ನಮ್ಮ ದೇಶದಲ್ಲಿ ಶೇಕಡ 70 ರಷ್ಟಿದೆ. ಆದ್ದರಿಂದ ಇಂತಹ ಅಮೂಲ್ಯ ನಾಣ್ಯ ಪ್ರತಿಯೊಬ್ಬರ ಮನೆಮನೆಯಲ್ಲೂ ನೀವು ಕಾಣಬಹುದು ಇಲ್ಲವಾದಲ್ಲಿ ಖಂಡಿತ ಸಂಗ್ರಹಿಸಿ ಎಂದು ಹೇಳುತ್ತಾ ಇಂತಹ ಅದ್ಬುತವಾದ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ. ಜ್ವಾಲಾಮಾಲಾ ಡಾಟ್ ನ್ಯೂಸ್.
5 ರೂಪಿ ಜೈನ ನಾಣ್ಯ / ಜ್ವಾಲಾಮಲಾನ್ಯೂಸ್ / 2020














