ಅನಂತ ನೋಂಪು

ಜೈ ಜಿನೇಂದ್ರ ವೀಕ್ಷಕರೇ ನಿಮಗೆಲ್ಲಾ ತಿಳಿದಿರುವಂತೆ ಜೈನ ಧರ್ಮದಲ್ಲಿ ಇಂದಿನಿಂದ ಅಂದರೆ ಭಾದ್ರಪದ ಮಾಸದ ಶುದ್ಧ ತ್ರಯೋದಶಿ, ಚತುರ್ದಶಿ ಹಾಗೂ ಪೌರ್ಣಮಿ ಈ ಮೂರು ದಿವಸಗಳವರೆಗೆ 24 ತೀರ್ಥಂಕರರಲ್ಲಿ 4 ತೀರ್ಥಂಕರರಲ್ಲಿ ಅನಂತನಾಥ ತೀರ್ಥಂಕರರ ಅನಂತನೋಂಪಿಯನ್ನು ಜೈನಬಾಂದವರೆಲ್ಲರೂ ಭಕ್ತಿಯಿಂದ ಆಚರಿಸುತ್ತಾರೆ. ಅನಂತ ನೋಂಪಿ ವ್ರತಾಚರಣೆಯು ಪ್ರತಿವರ್ಷ ಭಾದ್ರಪದ ಮಾಸದಲ್ಲಿ ಅನಂತ ಚತುರ್ದಶಿಯ ದಿನ ತ್ರಯೋದಶಿ, ಚತುರ್ದಶಿ ಹಾಗೂ ಪೌರ್ಣಮಿ ಈ ಮೂರು ದಿವಸಗಳಲ್ಲಿ ನೋಂಪಿಯ ವ್ರತಗಳನ್ನು ನಡೆಸಲಾಗುತ್ತದೆ. ಆದಿನಾಥರ ಕಾಲದಲ್ಲಿ ಭರತ ಚಕ್ರವರ್ತಿ ಈ ನೋಂಪಿಯನ್ನು ಆಚರಿಸುತ್ತಿದ್ದರೆನ್ನಲಾಗುತ್ತದೆ. ಹಾಗೂ ಮಹಾವೀರ ಸಮವಸರಣದಲ್ಲಿ ಚೇಳಿನಿ ಮತ್ತು ಶ್ರೇಣಿಕರು ಹಾಗೂ ಗೌತಮ ಗಣಧರರಿಂದ ತಮ್ಮ ಕಷ್ಟನಿವಾರಣೆಗಾಗಿ ನೋಂಪಿಯೊಂದನ್ನು ತಿಳಿದುಕೊಂಡು ಆಚರಿಸದರೆನ್ನಲಾಗುತ್ತದೆ.

ಆನಂತ ನೋಂಪಿಯನ್ನು ಆಚರಿಸಿದರೆ ಈ ಭವದಲ್ಲೂ ಮುಂದಿನ ಭವದಲ್ಲೂ ಅನಂತಸುಖ ಪ್ರಾಪ್ತಿಯಾಗುತ್ತದೆ ಎಂದು ಗೌತಮ ಗಣಧರರಿಂದ ತಿಳಿಸಲ್ಪಟ್ಟಿರುತ್ತದೆ. ಅಂದಿನಿಂದ ಇಂದಿನವರೆಗೆ 14ನೇ ತೀರ್ಥಂಕರರಾದ ಶ್ರೀ ಅನಂತನಾಥ ಸ್ವಾಮಿಗೆ ಅನಂತನೋಂಪಿಯನ್ನು ಆಚರಿಸುತ್ತಾ ಬಂದು ಪ್ರಥಮ ತೀರ್ಥಂಕರರಿಂದ 14 ನೇ ತೀರ್ಥಂಕರರವರೆಗೆ ಅಷ್ಕಕಗಳನ್ನು ಮಾಡಿ 14ನೇ ತೀರ್ಥಂಕರರಾದ ಅನಂತನಾಥ ಸ್ವಾಮಿ ಅಷ್ಟಕ ಬಂದಾಗ 14 ಬಾರಿ ಜಲ, 14 ಗಂಧ, 14 ಅಕ್ಷತಾ, 14 ಹೂವು , 14 ಚೆರು, 14 ದೀಪ , 14 ಧೂಪ, 14 ಫಲ , 14 ಅರ್ಘ್ಯಗಳನ್ನು ಮಾಡಿ 14 ಮಂತ್ರ ಪುಷ್ಪಗಳನ್ನು ಮಾಡಿ ಜಯಮಾಲೆಯನ್ನು ಮಾಡಿ ಪ್ರಭಾವಳಿಯನ್ನು ಮಾಡಿ ಮಂತ್ರವನ್ನು ಉಚ್ಛರಿಸುತ್ತಾ ಪೂಜೆ ಮಾಡುವುದು ಅನಂತನೋಂಪಿಯ ವಿದಿವಿಧಾನಗಳಾಗಿವೆ. ಈ ರೀತಿಯಾಗಿ 14 ವರ್ಷ ಭಕ್ತಿಯಾಗಿ ಭಾವ ಶ್ರದ್ಧೆ ಭಕ್ತಿಯಿಂದ ನೋಂಪಿಯನ್ನು ಮಾಡಿ 14 ಗಂಟುಗಳುಳ್ಳ ದಾರವನ್ನು ಸಮರ್ಪಿಸುವುದು ಉದ್ಯಾಪನೆಯಲ್ಲಿ . ಈ 14 ಗಂಟುಗಳು ಯಾವುದೆಂದರೆ ಮೊದಲನೆಯದಾಗಿ ಮೊದಲನೆಯ  ತೀರ್ಥಂಕರರಿಂದ ಹಿಡಿದು 14 ತೀರ್ಥಂಕರುಗಳವರೆಗೆ ಒಂದೊಂದು ತೀರ್ಥಂಕರರ ಹೆಸರುಗಳನ್ನು ತಿಳಿಸಿ ಈ ಹದಿನಾಲ್ಕು ಗಂಟುಗಳನ್ನು ಹಾಕಲಾಗಿರುತ್ತದೆ. ಎರಡನೆಯದಾಗಿ ಸಿದ್ದ ಪರಮೇಷ್ಟಿಗಳ 14 ಗುಣಗಳಿಗೆ ನಮೋನ್ನಮಃ, ಮೂರನೆಯದಾಗಿ ಮತಿಶೃತ  ಅವಧಿ ಸಂಪನ್ನರಾದ 14 ಮುನಿಗಳಿಗೆ ನಮೋನ್ನಮಃ, ನಾಲ್ಕನೆಯದಾಗಿ ಹರಿಹಂತರಿಗಿರುವ 14 ದೇವಕೃತ ಅತಿಶಯಗಳಿಗೆ ನಮೋನ್ನಮಃ, ಐದನೆಯದಾಗಿ ಉತ್ಪಾದ ಪೂರ್ವಾಧಿ ಚತುರ್ದಶ ಪೂರ್ವಾದಿಗಳಿಗೆ ನಮೋನ್ನಮಃ, ಆರನೆಯದಾಗಿ 14 ಗುಣಸ್ಥಾನಗಲಿಗೆ ನಮೋನ್ನಮಃ , ಏಳನೆಯದಾಗಿ 14 ಮಾರ್ಗಣ  ಸ್ಥಾನಗಳಿಗೆ ನಮೋನ್ನಮಃ, ಎಂಟನೆಯದಾಗಿ 14 ಜೀವ ಸಮಾಸಗಳಿಗೆ ನಮೋನ್ನಮಃ , 14 ನದಿಗಳಿಗೆ ನಮೋನ್ನಮಃ, ಹತ್ತನೆಯದಾಗಿ 14 ಮನುಗಳಿಗೆ ನಮೋನ್ನಮಃ, ಹನ್ನೊಂದನೆಯದಾಗಿ 14 ಚಕ್ರವರ್ತಿಗಳ 14 ರತ್ನಗಳಿಗೆ ನಮೋನ್ನಮಃ, ಹನ್ನೆರಡನೆಯದಾಗಿ 14 ಸ್ವರಗಳಿಗ ನಮೋನ್ನಮಃ, ಹದಿಮೂರನೆಯದಾಗಿ  14 ತಿಥಿಗಳಿಗೆ ನಮೋನ್ನಮಃ , ಹದಿನಾಲ್ಕನೆಯದಾಗಿ 14 ಪರಿಗ್ರಹಗಳನ್ನು ಗೆದ್ದಂತಹ ಮುನಿಗಳಿಗೆ ನಮೋನ್ನಮಃ ಎಂದು ಅನಂತನೋಪಿಯಲ್ಲಿ ತ್ರಯೋದಶಿ ದಿವಸ ಒಂದೊಂದು ಗಂಟನ್ನು ಸ್ಪರ್ಶಿಸಿ ನಮಸ್ಕರಿಸುತ್ತಾರೆ. ಉದ್ಯಾಪನೆಯ ದಿನ 14 ಗಂಟುಗಳಿಗೆ ಪ್ರತಿ ಗಂಟಿಗೆ 14ರಂತೆ 196 ಗಂಟುಗಳಿಗೆ ಅರ್ಘ್ಯವನ್ನು ನೀಡಿ ದಾರ ಸಮರ್ಪಿಸಲಾಗುವುದು. ಹೀಗೆ ಅನಂತನೋಂಪಿ ಉದ್ಯಾಪನೆಯಲ್ಲಿ ಅಷ್ಟಕ ಜಯಮಾಲ ಪೂರ್ಣಾರ್ಘ್ಯಗಳನ್ನು ಪೂಜಿಸುತ್ತಾರೆ. ಜೈನರಾದವರರೆಲ್ಲ ನಾವೆಲ್ಲರೂ ಕೂಡ ಈ ವ್ರತಾಚರಣೆಯಿಂದ ಸಮೃದ್ದಿ ಜೊತೆಗೆ ಎಲ್ಲರಿಗೂ ಭಗವಂತನು ಒಳಿತನ್ನು ಕರುಣಿಸಲಿ ಎಂದು ಧ್ಯಾನಮಾಡುತ್ತಾ ನೋಂಪಿಯ ಪೂಜೆಯನ್ನು ಮಾಡೋಣ