ಜ್ವಲಮಾಲಾ ನ್ಯೂಸ್

ಪರಮಪೂಜ್ಯ 108 ಅಮೋಘ ಕೀರ್ತಿಮುನಿ ಮಹಾರಾಜರ 42ನೇ ಜನ್ಮ ಜಯಂತಿ ಮಹೋತ್ಸವದಲ್ಲಿ ನಮ್ಮ ಜೈನ ಧರ್ಮದ  ಬಗ್ಗೆ , ಜೈನ ಬಸದಿಗಳಲ್ಲಿ ನಡೆಯುವ ಪೂಜಾ ವಿಧಿವಿಧಾನಗಳು , ಜೈನ ಧರ್ಮ ಎಂದರೆ ಏನು, ಹೇಗೆ ಬಂತು ಯಾವ ರೀತಿ ಶುರು ಮಾಡಬೇಕು, ಮುನಿಗಳು ಎಂದರೆ ಏನು, ತ್ಯಾಗಿಗಳು ಎಂದರೆ ಏನು, ಹರಿಕ ಮಾತಾಜಿ ಎಂದರೆ ಏನು , ಭಗವಾನ್ ಎಂದರೆ ಯಾರು , ಹರಿಹಂತ ಸಿದ್ದ ಎಂದರೆ ಏನು , ಧೈವ ದರ್ಶನ ಎಂದರೆ ಏನು  ಇನ್ನೂ ಹತ್ತು ಹಲವಾರು ಜೈನ ಧರ್ಮದ ವಿಷಯದ ಬಗ್ಗೆ ತಿಳಿಯಬೇಕಾದರೆ 1 ರಿಂದ 8 ಪಾಠಗಳಂತೆ ನಾವು ಕೂಲಂಕುಷವಾಗಿ ತಿಳಿಯಬೇಕು ಎಂಬ  ಮಾಹಿತಿಯನ್ನು  ತಿಳಿಸಿಕೊಟ್ಟರು ಮುನಿಗಳು ತಮ್ಮ ಆಶೀರ್ವಚನದಲ್ಲಿ .

ಇದಲ್ಲದೇ ಕಾಲ ಚಕ್ರ ಎಂದರೆ  ಏನು ಜೈನಧರ್ಮದಲ್ಲಿ ಕರ್ಮ ಫಿಲೋಸಾಫಿ ಎಂದರೆ  ಏನು ಎಂಬ ಬಹಳಷ್ಟು ಮಾತುಗಳು ಇನ್ನೂ ಉಳಿದಿವೆ ಅವುಗಳನ್ನು ನಾವು ಮುಂದಿನ ದಿನಗಳಲ್ಲಿ ತಿಳಿದುಕೊಳ್ಳೋಣ ಎಂದು ತಿಳಿಸಿದರು. ಹಾಗೆಯೇ ಜ್ವಾಲಾಮಾಲಾ ನ್ಯೂಸ್ ಚಾನೆಲ್ ರವರಿಗೂ ನಾನು ತುಂಬಾ ಧನ್ಯವಾದಗಳನ್ನು ಹೇಳುತ್ತೇವೆ ಎಂದು ತಿಳಿಸಿದರು.  ನಮ್ಮ ಧರ್ಮ ಪ್ರಭಾವನೆಗೆ ಇದು ಸಾಧನವಾಗಿದೆ ಎಂದು ತಿಳಿಸುತ್ತೇನೆ. ಇದೇ ರೀತಿ ಇವರ ಕಾರ್ಯಗಳು ಹೀಗೆ ಮುಂದುವರೆಸಿಕೊಂಡು ಹೋಗಬೇಕೆಂದು ಆಶೀರ್ವಾದ ಮಾಡುತ್ತೇನೆ ಎಂದು ತಮ್ಮ ಮಾತುಗಳನ್ನು ಮುಗಿಸಿದರು.