ಪರಮಪೂಜ್ಯ 108 ಅಮೋಘ ಕೀರ್ತಿಮುನಿ ಮಹಾರಾಜರ 42ನೇ ಜನ್ಮ ಜಯಂತಿ ಮಹೋತ್ಸವ

ಪರಮಪೂಜ್ಯ 108 ಅಮೋಘ ಕೀರ್ತಿಮುನಿ ಮಹಾರಾಜರ 42ನೇ ಜನ್ಮ ಜಯಂತಿ ಮಹೋತ್ಸವದಲ್ಲಿ ನಮ್ಮ ಜೈನ ಧರ್ಮದ ಅಮೂಲ್ಯ ರತ್ನಗಳಾದ ಹೆಮ್ಮೆಯ ಗಾಯಕರನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿದ ಹೆಗ್ಗಳಿಕೆಗೆ ಪಾತ್ರವಾದ ಅಮೋಘ ಕಾರ್ಯಕ್ರಮದಲ್ಲಿ ಭಾವ ಚಿತ್ರವನ್ನು ಶ್ರೀ ಡಿ. ಸುರೇಂದ್ರ ಕುಮಾರ್ ರವರು ಅನಾವರಣಗೊಳಿಸಿದರು.  ನಂತರ ದೀಪವನ್ನು ಬೆಳಗಿಸಿ ಸ್ವಾಗತ ಭಕ್ತಿಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗನ್ನು ಹೆಚ್ಚಿಸಿದರು. ನಂತೆ ಶ್ರೀಯುತ ಡಿ. ಸುರೇಂದ್ರಕುಮಾರ್ ದಂಪತಿಗಳು ಸೇರಿ ಮುನಿಗಳಿಗೆ ಬೆಳ್ಳಿಯ ಮಂಟಪವನ್ನು ನೀಡಿದರು. ನಂತರ ಜಯಶ್ರೀ ಯವರು ಸುಮಧುರವಾಗಿ ಜನ್ಮ ದಿನದ ಹಾಡನ್ನು ಹಾಡಿದರು. ಚಕ್ರೇಶ್ವರಿ ಮಹಿಳಾ ಸಮಾಜದವರು 42 ದೀಪಗಳನ್ನು ಬೆಳಗುವುದರ ಮೂಲಕ ಮುನಿಗಳಿಗೆ ಹಾರೈಸಿದರು. ಪ್ರಸಿದ್ದ ಸಂಗೀತ ಗಾಯಕರುಗಳು  ಸೇರಿ ಗುಂಪಿನ ಹಾಡನ್ನು ಹಾಡಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು .

ನಂತರ ಪ್ರತಿಯೊಬ್ಬ ಗಾಯಕರು ಸಹ ಗೀತೆಗಳನ್ನು ಹಾಡಿ ಮುನಿಗಳಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿ ಕಾರ್ಯಕ್ರಮವನ್ನು ಸುಂದರವಾಗಿ ಮಾಡಿದರು.