ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ . ನ್ಯೂಸ್ ವೀಕ್ಷಕರಿಗೊಂದು ಸಹಿ ಸುದ್ದಿ ಸೋಶಿಯಲ್ ಮೀಡಿಯಗಳಲ್ಲಿ ನಿಮ್ಮ ಮೊಬೈಲ್ ಪರದೆ ಮೇಲೆ ವೀಕ್ಷಿಸುತ್ತಿದ್ದ ಜ್ವಾಲಮಾಲ ಪ್ರಸ್ತುತಿ ಇನ್ನು ಮುಂದೆ ನಿಮ್ಮ ಟಿ ವಿ ದೊಡ್ಡ ಪರದೆಯಲ್ಲಿ ವೀಕ್ಷಿಸಲಿದ್ದೀರಿ. ಇದೆ ಭಾನುವಾರ ದಿನಾಂಕ 3-12-2023ರಿಂದ ಪ್ರತಿಷ್ಠಿತ ವಾಹಿನಿಯಾದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರತಿ ಭಾನುವಾರ 9:30ಕ್ಕೆ ಸರಿಯಾಗಿ ಜ್ವಾಲಮಾಲ ಧರ್ಮಯಾತ್ರೆ ಹೆಸರಿನಲ್ಲಿ ಸಂಚಿಕೆಗಳು ಮೂಡಿಬರಲಿದೆ. ಕ್ಷೇತ್ರಗಳ ಪರಿಚಯದೊಂದಿಗೆ ಧಾರ್ಮಿಕ ವಿಚಾರಧಾರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಪ್ರಚಾರದ ಮೂಲಕ ಧರ್ಮ ಪ್ರಭಾವನೆಯ ಅವಕಾಶದೊರೆತಿದೆ. ಸಮುದಾಯದ ಹೆಮ್ಮೆಯ ಪ್ರತೀಕ ಪ್ರತಿಷ್ಠಿತ ಚಂದನ ವಾಹಿನಿ ಪ್ರಸ್ತುತಿಯನ್ನು ಪ್ರತಿವಾರವು ತಪ್ಪದೇ ವೀಕ್ಷಿಸಿ ನಮ್ಮ ಈ ಪ್ರಯತ್ನಕ್ಕೆ ಪ್ರೋತ್ಸಾಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಕಾರ್ಯಕ್ರಮದ ಘನತೆ ಹೆಚ್ಚಿಸಿ.
ಪ್ರಥಮ ವಾರದ ಶುಭಾರಂಭವನ್ನು ರಾಜ್ಯದ ಶ್ರೀಮಠಗಳಲ್ಲಿ ನೆಡೆದ ನವರಾತ್ರಿ ವೈಭವವನ್ನು ಸಾಧ್ಯವಾದ ಕಡೆಗಳಲ್ಲಿ ಚಿತ್ರಿಕರಿಸಿ ನಿಮಗಾಗಿ ತಂದಿದ್ದೇವೆ ವೀಕ್ಷಿಸಿ ಕಣ್ಣತುಂಬಿಕೊಳ್ಳಿ. ಮತ್ತೊಂಮ್ಮೆ ಪ್ರತಿ ಭಾನುವಾರ 9:30ಕ್ಕೆ ಸರಿಯಾಗಿ ಜ್ವಾಲಮಾಲ ಧರ್ಮಯಾತ್ರೆ ಮರೆಯದೆ ಪ್ರೋತ್ಸಾಹಿಸಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














